ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಸೀರಿಯಲ್ (Serial) ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡ್ತಿದೆ. ಅಮ್ಮಮ್ಮ ರೀತಿ ಅಧಿಕಾರ ನಡೆಸಬೇಕು ಎಂದು ಭುವಿ ಅಂದುಕೊಂಡಿದ್ದಾಳೆ. ಅಧಿಕಾರ ಸ್ವೀಕಾರ ಮಾಡಿರೋ ಭುವಿಗೆ ಕಷ್ಟದ ಮೇಲೆ ಕಷ್ಟ ಎದುರಾಗ್ತಿದೆ. ಈಗ ಹರ್ಷನಿಗೆ (Harsh) ಆಪತ್ತು (Danger) ಎದುರಾಗಿದೆ.
ಭುವಿ ಮೇಲೆ ಅಟ್ಯಾಕ್
ಭುವಿ ಅಧಿಕಾರ ಸ್ವೀಕಾರ ಮಾಡಿದ ದಿನವೇ ಭುವಿ ಮೇಲೆ ಅಟ್ಯಾಕ್ ಆಗಿತ್ತು. ಆಗ ಹರ್ಷ ಕಾಪಾಡಿದ್ದ. ನಂತರ ಭುವಿಯ ಅವರನ್ನು ಹುಡುಕಿಕೊಂಡು ಹೋಗಿದ್ದಳು. ನನ್ನ ಕೊಲ್ಲಲು ಹೇಳಿದ್ದು ಯಾರು ಅಂತ. ಆಗ ಮತ್ತೊಮ್ಮೆ ಅಟ್ಯಾಕ್ ಆಗಿತ್ತು. ಆಗಲೂ ಹರ್ಷ ಮತ್ತು ನಿತೇಶ್ ಎಂಬ ಹುಡುಗ ಕಾಪಾಡಿದ್ದರು. ಅಟ್ಯಾಕ್ ಮೇಲೆ ಅಟ್ಯಾಕ್ ಆಗ್ತಾ ಇದೆ.
ಶಿಕ್ಷಕರ ಪ್ರತಿಭಟನೆ ನಾಟಕ
ಶಾಲೆ ವಿಸಿಟ್ಗೆಂದು ಭುವಿ ಬಂದಿದ್ದಾಳೆ. ಅದೇ ಸಮಯಕ್ಕೆ ಶಿಕ್ಷಕರೆಲ್ಲಾ ಪ್ರತಿಭಟನೆ ಮಾಡ್ತಾ ಇದ್ದಾರೆ. ನಮ್ಮ ಸಂಬಳ ಹೆಚ್ಚು ಮಾಡಿ. ಇಲ್ಲ ನಾವು ಕೆಲಸ ಮಾಡಲ್ಲ ಎನ್ನುತ್ತಿದ್ದಾರೆ. ಇದು ಶಿಕ್ಷಕರಾಗಿಯೇ ಮಾಡುತ್ತಿರುವುದಲ್ಲ. ಬದಲಿಗೆ ಪ್ರಿನ್ಸಿಪಾಲ್ ಹೇಳಿ ಮಾಡಿಸುತ್ತಿರುವುದು. ಆಕೆಯ ಶಿಕ್ಷಕರಿಗೆ ಹೇಳಿಕೊಟ್ಟು, ಭುವಿ ವಿರುದ್ಧ ಎತ್ತಿ ಕಟ್ಟಿದ್ದಳು.
ಇದನ್ನೂ ಓದಿ: Shubha Poonja: 'ಶುಭ' ವಿವಾಹ ವಾರ್ಷಿಕೋತ್ಸವ! ಪತಿಗೆ ಪೂಂಜಾ ಸ್ಪೆಷಲ್ ವಿಶ್
ಗಲಾಟೆ ಮಾಡಲು ಹೊರಗೆ ಹುಡುಗರು
ಅಷ್ಟೇ ಅಲ್ಲದೇ ಕಾಲೇಜು ಒಳಗೆ ಏನಾದ್ರೂ ಗಲಾಟೆ ಆದ್ರೆ, ಕಾಲು, ದೊಣ್ಣೆ ಬೀಸುವಂತೆ ಹುಡುಗರನ್ನು ರೆಡಿ ಮಾಡಿದ್ರು ಪ್ರಿನ್ಸಿಪಾಲ್. ಆದ್ರೆ ಹರ್ಷ ಅಲ್ಲಿಗೆ ಬಂದಿದ್ದಾನೆ. ಹುಡುಗರ ಪರಿಚಯ ಮಾಡಿಕೊಂಡಿದ್ದಾನೆ. ನನ್ನನ್ನು ನಿಮ್ಮ ಮೇಡಂ ಬರೋಕೆ ಹೇಳಿದ್ದರು ಎಂದು ಹೇಳಿದ್ದಾನೆ. ಅವರು ನಂಬಿದ್ದಾರೆ.
ಶಿಕ್ಷಕರ ಮನವೊಲಿಸಿದ ಭುವಿ
ಅಲ್ಲಿ ಗಲಾಟೆ ಆಗಬಹುದು ಎಂದು ಎಲ್ಲರೂ ಅಂದುಕೊಂಡಿದ್ರು. ಆದ್ರೆ ಆ ರೀತಿ ಆಗಿಲ್ಲ. ಭುವಿ ನಾನು ನಿಮ್ಮ ಎಲ್ಲಾ ಸಮಸ್ಯೆ ಬಗೆಹರಿಸುತ್ತೇನೆ. ಅದಕ್ಕೆ ಬಂದಿದ್ದೇನೆ. ಈಗ ಪ್ರಿನ್ಸಿಪಾಲ್ ಪಾಠ ಮಾಡುವುದನ್ನು ನೋಡಣ ಬನ್ನಿ ಎನ್ನುತ್ತಾಳೆ. ಆದ್ರೆ ಅವರಿಗೆ ಹಳೆಗನ್ನಡ ಓದಲು ಬರುವುದಿಲ್ಲ. ಅದಕ್ಕೆ ಭುವಿಯೇ ಪಾಠ ಮಾಡುತ್ತಾಳೆ.
ಹರ್ಷನಿಗೆ ಅಪಾಯ
ಭುವಿ ಪ್ರಾಣಕ್ಕೆ ಅಪಾಯ ಇದೆ ಎಂದು ಹರ್ಷನಿಗೆ ಗೊತ್ತಾಗಿ ಆಕೆಗೆ ಗೊತ್ತಿಲ್ಲದಂತೆ ಆಕೆಯ ಹಿಂದೆ ಬಂದಿದ್ದಾನೆ. ಭುವಿ ಪಾಠ ಮಾಡುವುದನ್ನು ಹರ್ಷ ನೋಡುತ್ತಾ ನಿಂತಿದ್ದ. ಅಷ್ಟರಲ್ಲಿ ಆ ಹುಡುಗರಿಗೆ ಇವರು ಎಂಡಿ ಮೇಡಂ ಗಂಡ ಎಂದು ಗೊತ್ತಾಗುತ್ತೆ. ಅದಕ್ಕೆ ಹುಡುಗರು ರಾಡ್ ತೆಗೆದುಕೊಂಡು ಹರ್ಷನಿಗೆ ಹೊಡೆಯಲು ರೆಡಿಯಾಗಿ ನಿಂತಿದ್ದಾರೆ.
ಇದನ್ನೂ ಓದಿ: Super Queen Remo: ಭಸ್ಮಾಸುರನ ಲುಕ್ ನಲ್ಲಿ ರೆಮೋ, ಅಬ್ಬಾ ಎಂದ್ರು ಜನ!
ಭುವಿ ಪ್ರಾಣ ಕಾಪಾಡಲು ಬಂದ ಹರ್ಷ ಪ್ರಾಣ ಅಪಾಯದಲ್ಲಿದೆ. ಭುವಿ ಇದನ್ನು ತಡೆಯುತ್ತಾಳಾ? ಇದೆಲ್ಲದರ ಹಿಂದೆ ಇರುವುದು ಯಾರು? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ