ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ (Serials) ಕನ್ನಡತಿ (Kannadathi) ಸೀರಿಯಲ್ ಹೆಚ್ಚು ಜನಪ್ರಿಯತೆ ಪಡೆದುಕೊಂಡಿತ್ತು. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗ್ತಿದ್ದ ಈ ಸೀರಿಯಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತತಿದ್ದರು. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ (Fans) ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾ ಇದ್ರು. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡ್ತಿದ್ರು. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡ್ತಿತ್ತು. ಧಾರಾವಾಹಿ ಮುಕ್ತಾಯವಾಗಿದೆ (End). ಸುಖಾಂತ್ಯವಾಗಿದೆ.
ನಿನ್ನೆ ಸಂಚಿಕೆಯಲ್ಲಿ ಏನಿತ್ತು?
ಶುಕ್ರವಾರ ಕನ್ನಡತಿ ಧಾರಾವಾಹಿಯ ಕೊನೆ ಸಂಚಿಕೆ ಪ್ರಸಾರವಾಗಿದೆ. ಕೊನೆ ಕ್ಷಣದವರೆಗೂ ಧಾರಾವಾಹಿ ಅದೇ ಕುತೂಹಲ ಉಳಿಸಿಕೊಂಡಿದ್ದು ನಿಜ. ಮುಂದೇನಾಗುತ್ತೆ ಅಂತ ಕಾತುರದಿಂದ ನೋಡಿದ್ದಾರೆ ಅಭಿಮಾನಿಗಳು. ಕಾಫಿ ಶಾಪ್ ಒಪೆನ್ ಸಂಭ್ರಮದಲ್ಲಿ ಹರ್ಷ-ಭುವಿ ಮತ್ತು ಮನೆಯವರು ಇರುತ್ತಾರೆ. ಆಗ ವೇದಿಕೆ ಮೇಲೆ ವರು ಬರುತ್ತಾಳೆ.
ವರು ಹೇಳಿದ್ದೇನು?
ನಾನು ನಿಮಗೆ ಒಂದು ವಿಷ್ಯ ಹೇಳಬೇಕು. ಆಮೇಲೆ ನೀವು ನನಗೆ ಬೈದ್ರೂ ಪರವಾಗಿಲ್ಲ ಎನ್ನುತ್ತಾ, ಮಾತು ಶುರು ಮಾಡುತ್ತಾಳೆ. ಭುವಿ ನಾನು ಮೊದಲ ದಿನವೇ ನಾನು ಪ್ರೀತಿ ಮಾಡುವ ಹುಡುಗನ ಬಗ್ಗೆ ಹೇಳಿದ್ದೆ. ನಿನಗೂ ಆ ವಿಷ್ಯ ಗೊತ್ತಿತ್ತು. ಆದ್ರೆ ಇವತ್ತು ನಾನು ಇರಬೇಕಾದ ಜಾಗದಲ್ಲಿ ನೀನು ಇದ್ದೀಯಾ ಎನ್ನುತ್ತಾಳೆ. ಅಲ್ಲದೇ ಸೌಪರ್ಣಿಕ ವಿಚಾರವಾಗಿ ನಿಮ್ಮಿಬ್ಬರ ನಡುವೆ ಮನಸ್ತಾಪ ತಂದಿದ್ದು ನಾನೇ ಎನ್ನುತ್ತಾಳೆ.
ಭುವಿ ಹೇಳಿದ್ದೇನು?
ನೋಡೋ ವರು ಅನುಮಾನ ಅನ್ನುವುದು ಎಲ್ಲರ ಬಾಳಿನಲ್ಲೂ ಸಹಜ. ಅನುಮಾನ ಬಂದ ತಕ್ಷಣ ಯಾವ ಜೋಡಿನೂ ಬೇರೆ ಆಗಲ್ಲ. ಆ ರೀತಿ ಆಗುವುದಾದ್ರೆ, ಯಾರು ಜೊತೆಗೆ ಇರ್ತಾ ಇರಲಿಲ್ಲ. ಅನುಮಾನ ಮುಗಿದ ಮೇಲೆ ಇಬ್ಬರ ಸಂಬಂಧ ಇನ್ನೂ ಗಟ್ಟಿ ಆಗುತ್ತೆ ಬಾಳು ಸುಂದರವಾಗುತ್ತೆ. ಒಮ್ಮೆ ಯೋಚನೆ ಮಾಡು ಎಂದು ಭುವಿ ವರುಗೆ ಸಲಹೆ ನೀಡ್ತಾರೆ.
ಮಂತ್ರ ಮಾಂಗಲ್ಯ
ವರು ಸ್ವಲ್ಪ ಸಮಯ ಬೇಕು ನನಗೆ ಎಂದು, ಸೀರೆ ಉಟ್ಟುಕೊಂಡು ಬಂದು, ನನ್ನನ್ನು ಮದುವೆ ಆಗ್ತೀರಾ ಎಂದು ಲಾಯರ್‍ನನ್ನು ಕೇಳ್ತಾಳೆ. ಅದಕ್ಕೆ ಅವರು ಓಕೆ ಎನ್ನುತ್ತಾರೆ. ಸಿಂಪಲ್ ಆಗಿ, ಎಲ್ಲರ ಮುಂದೆ ಮಂತ್ರ ಮಾಂಗಲ್ಯ ಕಾರ್ಯಕ್ರಮ ನಡೆಯುತ್ತೆ. ಇಲ್ಲೂ ಕನ್ನಡತಿ ಧಾರಾವಾಹಿ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿ ಆಗಿದೆ. ಸೂಪರ್ ಎಂದಿದ್ದಾರೆ.
ಹರ್ಷ-ಭುವಿ ಜೊತೆ ಕಾಫಿ ಕುಡಿದ ಅಮ್ಮಮ್ಮ
ಕೊನೆಯಲ್ಲಿ ವರು ಡ್ರಾಮಾ ಎಲ್ಲಾ ಮುಗಿದ ಮೇಲೆ ಹರ್ಷ ಮತ್ತು ಭುವಿ ಬಂದು ಕಾಫಿ ಕುಡಿಯುತ್ತಾ ಇರುತ್ತಾರೆ. ಆಗ ಹರ್ಷ ಅಮ್ಮಮ್ಮ ಇದಿದ್ರೆ ಏನ್ ಹೇಳ್ತಾ ಇದ್ರು ಎಂದು ಕೇಳ್ತಾನೆ.
View this post on Instagram
ಅದಕ್ಕೆ ಅಮ್ಮಮ್ಮ ಇವರ ಜೊತೆ ಬಂದು ಕಾಫಿ ಕುಡಿಯುತ್ತಾಳೆ. ಆಗಿದ್ದು ಮರೆತು ಮುಂದೆ ಆಗುವುದರ ಕಡೆ ಗಮನ ಕೊಡಿ ಅಂತಾರೆ ಎಂದು ಭುವಿ ಹೇಳ್ತಾಳೆ. ಮೂವುರು ಖುಷಿಯಿಂದ ಕಾಫಿ ಕುಡಿಯುತ್ತಾ, ಧಾರಾವಾಹಿ ಮುಕ್ತಾಯವಾಗಿದೆ.
ಇದನ್ನೂ ಓದಿ: Actress Niveditha Gowda: ನಿವೇದಿತಾ ಗೌಡ 'ಅವತಾರ್' , ಇದೇನಪ್ಪಾ ಹೊಸ, ಹೊಸ ವೇಷ!
ಎಲ್ಲಾ ಕಲಾವಿದರು ಬೇಸರಕೊಂಡಿದ್ರು. ಮತ್ತೆ ಸಿಗೋಣ ಎಂದು ಹೇಳಿದ್ರು. ಇಷ್ಟು ದಿನ ನಮ್ಮನ್ನು ಮನರಂಜಿಸಿದ ಧಾರಾವಾಹಿ ಚೆಂದವಾಗಿ ಮುಕ್ತಾಯವಾಗಿದೆ. ಎಲ್ಲರೂ ಕನ್ನಡತಿ ಸೀರಿಯಲ್ ಬೆಸ್ಟ್ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ