• Home
 • »
 • News
 • »
 • entertainment
 • »
 • Kannadathi: ಸಂಭ್ರಮದಲ್ಲಿದ್ದ ಹರ್ಷನ ಕೈಯಲ್ಲಿ ಡಿವೋರ್ಸ್ ಪೇಪರ್, ಮುಂದಿದೆಯಾ ಬಿಗ್ ಟ್ವಿಸ್ಟ್?

Kannadathi: ಸಂಭ್ರಮದಲ್ಲಿದ್ದ ಹರ್ಷನ ಕೈಯಲ್ಲಿ ಡಿವೋರ್ಸ್ ಪೇಪರ್, ಮುಂದಿದೆಯಾ ಬಿಗ್ ಟ್ವಿಸ್ಟ್?

ಸಂಭ್ರಮದಲ್ಲಿದ್ದ ಹರ್ಷನ ಕೈಯಲ್ಲಿ ಡಿವೋರ್ಸ್ ಪೇಪರ್

ಸಂಭ್ರಮದಲ್ಲಿದ್ದ ಹರ್ಷನ ಕೈಯಲ್ಲಿ ಡಿವೋರ್ಸ್ ಪೇಪರ್

ಹರ್ಷ, ಭುವಿ ಅಧಿಕಾರ ವಹಿಸಿಕೊಳ್ಳೋ ಖುಷಿಯಲ್ಲಿ ಇರುತ್ತಾನೆ. ಆಗಲೇ ಹರ್ಷನ ಕೈಗೆ ಡಿವೋರ್ಸ್ ಪೇಪರ್ ಸೇರಿದೆ. ಅದನ್ನು ನೋಡಿ ಹರ್ಷ ಶಾಕ್ ಆಗಿದ್ದಾನೆ.

 • News18 Kannada
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ  (Kannadathi) ಧಾರಾವಾಹಿ (Serial) ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡ್ತಿದೆ. ಧಾರಾವಾಹಿಯಲ್ಲಿ ಅಮ್ಮಮ್ಮನ ಅಧ್ಯಾಯ ಮುಕ್ತಾಯವಾಗ್ತಿದ್ದಂತೆ, ಭುವಿ ಹೆಸರಲ್ಲಿ ಆಸ್ತಿ ಇರೋದು ಮನೆಯವರಿಗೆ ಗೊತ್ತಾಗಿದೆ. ಅಧಿಕಾರವಹಿಸಿಕೊಳ್ತಿರೋ ಭುವಿಗಾಗಿ ಅದ್ಧೂರಿ ಕಾರ್ಯಕ್ರಮ (Program) ಮಾಡುತ್ತಿದ್ದಾರೆ. ಆಗ ಹರ್ಷನ ಕೈಯಲ್ಲಿ ಡಿವೋರ್ಸ್ (Divorce) ಪೇಪರ್ ಸೇರಿದೆ.


  ಅಧಿಕಾರ ವಹಿಸಿಕೊಳ್ತೀರೋ ಭುವಿ
  ರತ್ನಮಾಲಾ ಅವರು ಸಾಯುವುದಕ್ಕೂ ಮುಂಚೆಯೇ ಎಲ್ಲಾ ಆಸ್ತಿಯನ್ನು ಭುವಿ ಹೆಸರಿಗೆ ಮಾಡಿದ್ದಾರೆ. ಭುವಿ ಎಲ್ಲಾ ಅಧಿಕಾರ ಸ್ವೀಕಾರ ಮಾಡಲು ರೆಡಿಯಾಗಿದ್ದಾಳೆ. ಅದಕ್ಕೆ ಹರ್ಷನೇ ಮುಂದೆ ನಿಂತು ದೊಡ್ಡ ಕಾರ್ಯಕ್ರಮ ಮಾಡುತ್ತಿದ್ದಾನೆ. ಭುವಿ ಈ ದಿನ ಯಾವಾಗಲೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಎಲ್ಲಾ ತಯಾರಿ ನಡೆಸಿದ್ದಾನೆ.


  ಸಂಭ್ರಮದಲ್ಲಿದ್ದ ಹರ್ಷನಿಗೆ ಶಾಕ್
  ಹರ್ಷ, ಭುವಿ ಅಧಿಕಾರ ವಹಿಸಿಕೊಳ್ಳೋ ಖುಷಿಯಲ್ಲಿ ಇರುತ್ತಾನೆ. ಆಗಲೇ ಹರ್ಷನ ಕೈಗೆ ಡಿವೋರ್ಸ್ ಪೇಪರ್ ಸೇರಿದೆ. ಅದನ್ನು ನೋಡಿ ಹರ್ಷ ಶಾಕ್ ಆಗಿದ್ದಾನೆ. ಭುವಿ ನನಗೆ ಡಿವೋರ್ಸ್ ಪೇಪರ್ ಕಳಿಸಲು ಸಾಧ್ಯವೇ ಇಲ್ಲ. ಇದನ್ನು ಸಾನಿಯಾ ಏನಾದ್ರೂ ಪ್ಲ್ಯಾನ್ ಮಾಡಿ ಕಳಿಸಿದ್ದಾಳಾ ಎಂದು ಯೋಚನೆ ಮಾಡುತ್ತಾ, ಕಾರ್ಯಕ್ರಮಕ್ಕೆ ಬಂದವರ ಮುಂದೇಯೇ ನೋ ಎಂದು ಜೋರಾಗಿ ಕೂಗಿಕೊಂಡಿದ್ದಾನೆ.


  ಇದನ್ನೂ ಓದಿ: Bigg Boss Kannada: ಅಮೂಲ್ಯಳನ್ನು ಕೆಣಕಿದ ಗುರೂಜಿ, ನಿಮ್ಮ ಹುಟ್ಟುಗುಣ ಎಂದು ಟೀಕೆ 


  ವರು ಪ್ಲ್ಯಾನ್!
  ಧಾರಾವಾಹಿ ಶುರುವಾದಗಿನಿಂದ ವರೂಧಿನಿಗೆ ಹರ್ಷನ ಮೇಲೆ ಪ್ರೀತಿ ಇದೆ. ಹೇಗಾದ್ರೂ ಹೀರೋನನ್ನು ಮದುವೆ ಆಗಬೇಕು ಎಂದು ಕೊಂಡಿದ್ದಳು. ಆದ್ರೆ ಹರ್ಷ ಭುವಿಯನ್ನು ಪ್ರೀತಿ ಮಾಡಿ ಮದುವೆ ಆಗಿದ್ದಾನೆ. ಇಬ್ಬರನ್ನು ಹೇಗಾದ್ರೂ ದೂರ ಮಾಡಿ, ತಾನು ಮದುವೆ ಆಗಬೇಕು ಎಂದು, ಹರ್ಷ-ಭುವಿ ಮದುವೆ ರಿಜಿಸ್ಟ್ರೇಷನ್ ಸಮಯದಲ್ಲಿ ಡಿವೋರ್ಸ್ ಪೇಪರ್ ಗೆ ಸೈನ್ ಹಾಕಿಸಿಕೊಂಡಿದ್ದಾಳೆ.


  ವರು


  ಸಾನಿಯಾಗೆ ಖುಷಿಯೋ ಖುಷಿ
  ಹರ್ಷ ಸಾನಿಯಾಳನ್ನು ಎಂಡಿ ಪಟ್ಟದಿಂದ ತೆಗೆದಿದ್ದ. ಅದಕ್ಕೆ ಸಾನಿಯಾ ಕೋರ್ಟ್ ನಿಂದ ಸ್ಟೇ ಆರ್ಡರ್ ತಂದಿದ್ದಾಳೆ . ಅಲ್ಲದೇ ವರು ಸಾನಿಯಾ ಬಳಿ, ಡಿವೋರ್ಸ್ ಪೇಪರ್ ಬಗ್ಗೆ ಹೇಳಿದ್ದಾಳೆ. ಅದನ್ನು ಕೇಳಿ ಸಾನಿಯಾ ಖುಷಿ ಆಗಿದ್ದಾಳೆ. ಡಿವೋರ್ಸ್ ಪೇಪರ್ ನಿಂದ ಇಬ್ಬರ ಮನಸ್ಸು ಹಾಳಾಗಿ, ದೂರ ಆಗಲಿ ಎಂದುಕೊಳ್ತಿದ್ದಾಳೆ.


  ಸಾನಿಯಾಗೆ ಖುಷಿ


  ಭುವಿ ಮೇಲೆ ತಪ್ಪು ತಿಳಿದುಕೊಳ್ತಾನಾ?
  ಹರ್ಷನಿಗೆ ಭುವಿ ಮೇಲೆ ತುಂಬಾ ಪ್ರೀತಿ ಇದೆ. ಭುವಿಗೂ ಹರ್ಷನಾ ಮೇಲೆ ತುಂಬಾ ಪ್ರೀತಿ ಇದೆ. ಆದ್ರೂ ಈ ಡಿವೋರ್ಸ್ ಪೇಪರ್ ಇಬ್ಬರ ಮಧ್ಯೆಯ ಪ್ರೀತಿ ಕಮ್ಮಿ ಮಾಡುತ್ತಾ? ಹರ್ಷ ಏನಾದ್ರೂ ಭುವಿ ಮೇಲೆ ತಪ್ಪು ತಿಳಿದುಕೊಳ್ತಾನಾ? ಭುವಿ ಡಿವೋರ್ಸ್ ಕೊಡುವ ತಪ್ಪು ನಾನೇನು ಮಾಡಿದೆ ಎಂದು ಕೊಳ್ತಾನಾ ನೋಡಬೇಕು.


  ಭುವಿ


  ಇದನ್ನೂ ಓದಿ: Sanjana Galrani: ನಿಕ್ಕಿ ಗಲ್ರಾನಿ ಮದುವೆಗೆ ಸಂಜನಾ ಹೋಗಿರಲಿಲ್ವಂತೆ, ತಂಗಿ ಮೇಲೆ ಮುನಿಸಿತ್ತಾ? 


  ವರು ಪ್ಲ್ಯಾನ್ ಸಕ್ಸಸ್ ಆಗುತ್ತಾ? ಭುವಿ-ಹರ್ಷ ದೂರ ಆಗ್ತಾರಾ? ಸಾನಿಯಾ ಖುಷಿ ಹಾಗೇ ಉಳಿಯುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಧಾರಾವಾಹಿ ನೋಡಬೇಕು.

  Published by:Savitha Savitha
  First published: