ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ (Serials) ಕನ್ನಡತಿ (Kannadathi) ಸೀರಿಯಲ್ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್ಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡ್ತಿದೆ. ಹರ್ಷ ಅತ್ತಿಗೆ ತಾಪ್ಸಿಗಾಗಿ ಆಸ್ಪತ್ರೆ (Hospital) ಕಟ್ಟಿಸುತ್ತಿದ್ದಾನೆ. ಅದನ್ನು ನೋಡಲು ಬಂದ ತಾಪ್ಸಿ ಪ್ರಾಣಕ್ಕೆ ಅಪಾಯ (Danger) ಎದುರಾಗಿದೆ.
ದೇವ್ ಹೆಂಡ್ತಿ ತಾಪ್ಸಿ
ಕನ್ನಡತಿ ಧಾರಾವಾಹಿಯಲ್ಲಿ ಸುದರ್ಶನ್ ಅವರ ಮಗ ದೇವ್. ದೇವ್ ಹೆಂಡ್ತಿ ತಾಪ್ಸಿ. ಇಬ್ಬರು ಡಾಕ್ಟರ್. ತಾಪ್ಸಿ ಗರ್ಭಿಣಿ ಆಗಿರುವುದರಿಂದ ಕೆಲಸಕ್ಕೆ ಹೋಗುತ್ತಿಲ್ಲ. ಅಲ್ಲದೇ ರತ್ನಮಾಲಾ ಅವರು ಇದ್ದಾಗ ತಾಪ್ಸಿಗೆ ಆಸ್ಪತ್ರೆ ಕಟ್ಟಿಸಿಕೊಡುವುದಾಗಿ ಹೇಳಿದ್ರು. ಆ ಕನಸನ್ನು ಹರ್ಷ ಪೂರ್ಣಗೊಳಿಸುತ್ತಿದ್ದಾನೆ. ಅತ್ತಿಗೆಗಾಗಿ ಆಸ್ಪತ್ರೆ ಕಟ್ಟಿಸುತ್ತಿದ್ದಾನೆ.
ಖುಷಿಯಲ್ಲಿ ತಾಪ್ಸಿ
ಭುವಿ ಇದು ನಮ್ಮ ಆಸ್ಪತ್ರೆ ಜಾಗ. ಆಗಲೇ ಕೆಲಸ ಶುರು ಮಾಡಿದ್ದಾರೆ. ಹರ್ಷ ಶುರು ಮಾಡಿರೋದು. ಹರ್ಷ ನನ್ನ ಹತ್ತಿರ ಕೆಲಸ ಶುರು ಮಾಡಿರೋದು ಹೇಳಿಯೇ ಇರಲಿಲ್ಲ. ದೇವ್ಗೆ ಗೊತ್ತಿತ್ತು. ರತ್ನಮಾಲಾ ಅತ್ತೆ ಇರಬೇಕಿತ್ತು. ನನ್ನ ಮಗುಗಿಂತ ಮೊದಲು ಈ ಆಸ್ಪತ್ರೆ ಹುಟ್ಟುತ್ತೆ. ನನ್ನ ಮಗು ಇಲ್ಲೇ ಹುಟ್ಟಿದ್ರೂ ಆಶ್ಚರ್ಯ ಇಲ್ಲ ಎಂದು ತಾಪ್ಸಿ ಹೇಳಿದ್ದಾಳೆ.
ಮಗುಗೆ ರತ್ನಮಾಲಾ ಹೆಸರು
ದೊಡ್ಡತ್ತೆ ನಮಗೆ ತುಂಬಾ ಮಾಡಿದ್ದಾರೆ. ಚೆನ್ನಾಗಿ ನೋಡಿಕೊಂಡಿದ್ದಾರೆ. ಆಸ್ಪತ್ರೆ ಮೊದಲು ಆದ್ರೆ ಅದಕ್ಕೆ ರತ್ನಮಾಲಾ ಎಂದು ಹೆಸರಿಡುತ್ತೇವೆ. ಹೆಣ್ಣು ಮಗು ಹುಟ್ಟಿದ್ರೆ ಅದಕ್ಕೂ ರತ್ನಮಾಲಾ ಎಂದು ಇಡುತ್ತೇವೆ ಎಂದು ತಾಪ್ಸಿ-ದೇವ್ ಹೇಳಿದ್ದಾರೆ. ಅದನ್ನು ಕೇಳಿ ಎಲ್ಲರೂ ಖುಷಿ ಆಗಿದ್ದಾರೆ.
ಮ್ಯೂಸಿಕ್ ಕೇಳ್ತಿದ್ದ ತಾಪ್ಸಿ
ತಾಪ್ಸಿ ಖುಷಿಯಿಂದ ಕಟ್ಟುತ್ತಿರುವ ಬಿಲ್ಡಿಂಗ್ ನಲ್ಲಿ ಕೂತಿದ್ದಾಳೆ. ಇನ್ನೊಂದೆಡೆ ಬಿಲ್ಡಿಂಗ್ ಕಟ್ಟುತ್ತಿದ್ದಾರೆ. ಕಾರ್ಮಿಕರು ತಮ್ಮ ಕೆಲಸದಲ್ಲಿ ಮಗ್ನರಾಗಿದ್ದಾರೆ. ಕೆಳಗೆ ಕೂತಿರುವ ತಾಪ್ಸಿಯನ್ನು ನೋಡಿಲ್ಲ. ಆಸ್ಪತ್ರೆ ಆಗುತ್ತಿರುವುದನ್ನು ನೋಡಿ ತಾಪ್ಸಿ ಸಂತೋಷವಾಗಿದ್ದಾಳೆ. ಸುತ್ತ ಮುತ್ತ ಏನು ನಡೆಯುತ್ತಿದೆ ಎಂದು ಗೊತ್ತಾಗಿಲ್ಲ.
ತಾಪ್ಸಿ ಸಾಯುತ್ತಾಳಾ?
ಕಾರ್ಮಿಕರು ಕಟ್ಟುತ್ತಿರುವ ಇಟ್ಟಿಗೆ ತಾಪ್ಸಿ ಮೇಲೆ ಬೀಳುವ ರೀತಿ ಆಗಿದೆ. ಹಾಗಾದ್ರೆ ತಾಪ್ಸಿ ಪ್ರಾಣಕ್ಕೆ ಅಪಾಯ ಆಗುತ್ತಾ? ಗರ್ಭಿಣಿ ಆಗಿರುವ ತಾಪ್ಸಿ ಜೀವಕ್ಕೆ ಅಪಾಯ ಆಗುತ್ತಾ? ಕನ್ನಡತಿ ಧಾರಾವಾಹಿ ಶೀಘ್ರದಲ್ಲಿ ಮುಕ್ತಾಯವಾಗಲಿದೆ. ಆದ್ರೆ ಈಗ ಯಾಕೆ ಈ ಸೀನ್ ಅಂತಿದ್ದಾರೆ ಜನಗಳು.
ಶೀಘ್ರದಲ್ಲೇ ಧಾರಾವಾಹಿ ಮುಕ್ತಾಯ
ಶೀಘ್ರದಲ್ಲೇ ಕನ್ನಡತಿ ಧಾರಾವಾಹಿ ಮುಕ್ತಾಯವಾಗಲಿದೆ. ಕೊನೆ ದಿನದ ಶೂಟಿಂಗ್ ಮುಗಿದಿದೆ. ಕಲಾವಿದರೆಲ್ಲಾ ಕಣ್ಣೀರು ಇಟ್ಟಿದ್ದಾರೆ. ಆದ್ರೆ ಏಕೆ ಸೀರಿಯಲ್ ಮುಗಿಸುತ್ತಾರೆ ಅಂತ ಗೊತ್ತಾಗಿಲ್ಲ.
ಇದನ್ನೂ ಓದಿ: Olavina Nildana: ಸಿದ್ಧಾಂತ್ ಮನೆ ಹರಾಜಿಗೆ, ಕುಸಿದು ಬಿದ್ದ ನಿರುಪಮಾ!
ತಾಪ್ಸಿ ಸಾಯುತ್ತಾಳಾ? ಯಾರಾದ್ರೂ ಆಕೆ ಪ್ರಾಣ ಕಾಪಾಡ್ತಾರಾ? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ