• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Kannadathi: ಕನ್ನಡದಲ್ಲೇ ಕಾಫಿ ಅಂಗಡಿ ಓಪನ್ ಆಯ್ತು! ಹಣ ತೆಗೆದುಕೊಂಡು ಸಾನಿಯಾ ಹೋಗಿದ್ದೆಲ್ಲಿಗೆ?

Kannadathi: ಕನ್ನಡದಲ್ಲೇ ಕಾಫಿ ಅಂಗಡಿ ಓಪನ್ ಆಯ್ತು! ಹಣ ತೆಗೆದುಕೊಂಡು ಸಾನಿಯಾ ಹೋಗಿದ್ದೆಲ್ಲಿಗೆ?

ಕನ್ನಡತಿ ಸೀರಿಯಲ್

ಕನ್ನಡತಿ ಸೀರಿಯಲ್

ಎಲ್ಲವೂ ಅಮ್ಮಮ್ಮನ ಆಸೆಯಂತೆ ನಡೆಯಬೇಕು ಎಂದು ಹರ್ಷನಿಗೆ ಭುವಿ ಹೇಳಿದ್ಲು. ಈ ವಿಚಾರವಾಗಿ ಹರ್ಷ ಮತ್ತು ಭುವಿ ಮಧ್ಯೆ ಮನಸ್ತಾಪ ಉಂಟಾಗಿತ್ತು. ಆದ್ರೂ ಹರ್ಷ ಅಮ್ಮ ಮತ್ತು ಹೆಂಡ್ತಿ ಆಸೆಯಂತೆ ಕನ್ನಡದಲ್ಲೇ ಕಾಫಿ ಅಂಗಡಿ ತೆರೆದಿದ್ದಾನೆ.

 • News18 Kannada
 • 5-MIN READ
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ (Serials) ಕನ್ನಡತಿ (Kannadathi)  ಸೀರಿಯಲ್ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಅಭಿಮಾನಿಗಳು ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡ್ತಿದೆ. ಆದ್ರೆ ಸೀರಿಯಲ್ ಮುಗಿಯುವ (End) ಸಮಯ ಹತ್ತಿರ ಬಂದಿದೆ. ಇಂದಿನಿಂದ ಕನ್ನಡತಿ ಧಾರಾವಾಹಿಯ ಅಂತಿಮ ಅಧ್ಯಾಯ ಶುರುವಾಗಲಿದೆ. ಕೊನೆಯ ವಾರದಲ್ಲಿ (Last Week) ಕನ್ನಡತಿ ಸೀರಿಯಲ್ ಓಡುತ್ತಿದೆ.


  ಕನ್ನಡದಲ್ಲೇ ಕಾಫಿ ಅಂಗಡಿ
  ಕಾಫಿ ಶಾಪ್‍ನ್ನು ಕನ್ನಡದಲ್ಲಿ ತೆರೆಯಬೇಕು ಎಂಬುದು ಭುವಿ ಮತ್ತು ಅಮ್ಮಮ್ಮನ ಆಸೆಯಾಗಿತ್ತು. ಆದ್ರೆ ಹರ್ಷನಿಗೆ ಇಷ್ಟ ಇರಲಿಲ್ಲ. ಅಧಿಕಾರ ಭುವಿ ಕೈಗೆ ಬಂದ ಮೇಲೆ. ಎಲ್ಲವೂ ಅಮ್ಮಮ್ಮನ ಆಸೆಯಂತೆ ನಡೆಯಬೇಕು ಎಂದು ಹರ್ಷನಿಗೆ ಭುವಿ ಹೇಳಿದ್ಲು. ಈ ವಿಚಾರವಾಗಿ ಹರ್ಷ ಮತ್ತು ಭುವಿ ಮಧ್ಯೆ ಮನಸ್ತಾಪ ಉಂಟಾಗಿತ್ತು. ಆದ್ರೂ ಹರ್ಷ ಅಮ್ಮ ಮತ್ತು ಹೆಂಡ್ತಿ ಆಸೆಯಂತೆ ಕನ್ನಡದಲ್ಲೇ ಕಾಫಿ ಅಂಗಡಿ ತೆರೆದಿದ್ದಾನೆ.


  ಕೋಟಿ ಕೋಟಿ ತೆಗೆದುಕೊಂಡು ಹೊರಟ ಸಾನಿಯಾ
  ಕಾಫಿ ಶಾಪ್ ತೆರೆಯಲು ತೆರೆಯಲು ಹಣ ಬೇಕಿದೆ. ಆದ್ರೆ ಅದು ಕ್ಯಾಶ್‍ನಲ್ಲಿ ಬೇಕು ಎಂದು ಹೇಳಿದ್ದಾರೆ. ಅದಕ್ಕೆ ಸಾನಿಯಾ ಹಣವನ್ನು ಬ್ಯಾಗ್‍ಗೆ ತುಂಬಿಕೊಂಡು ಹೊರಟಿದ್ದಾಳೆ. ಸುಚಿ ಕೇಳಿದ್ರೆ, ಈ ವಿಷ್ಯ ಭುವಿಗೆ ಹೇಳ್ತೇನೆ. ನೀನು ತಲೆಕೆಡಿಸಿಕೊಳ್ಳಬೇಡ ಎಂದಿದ್ದಾಳೆ. ಸಾನಿಯಾ ನಿಜವಾಗ್ಲೂ ಬದಲಾದ್ಲಾ? ಇಲ್ಲ ಹಣ ತೆಗೆದುಕೊಂಡು ಎಸ್ಕೇಪ್ ಆಗ್ತಾಳಾ ಎಂದು ಅಭಿಮಾನಿಗಳು ಧಾರಾವಾಹಿ ನೋಡೋಕೆ ಕಾತುರರಾಗಿದ್ದಾರೆ.
  ವರುಗೆ ಬೈದ ಹರ್ಷ
  ಇವೆಲ್ಲದರ ಮಧ್ಯೆ ವರು, ನನಗೆ ಹರ್ಷ ನೀವು ಬೇಕೇ ಬೇಕು. ನಾನು ನಿಮ್ಮನ್ನೇ ಮದುವೆ ಆಗ್ತೇನೆ ಎಂದು ಹಠ ಹಿಡಿದಿದ್ದಳು. ಅದಕ್ಕೆ ಹರ್ಷ ವರೂಧಿನಿಗೆ ಕ್ಲಾಸ್ ತೆಗೆದುಕೊಂಡಿದ್ದಾನೆ. ನಾನು ಡಿವೋರ್ಸ್ ಕೊಟ್ರೂ ಭುವಿಯನ್ನೇ ಪ್ರೀತಿ ಮಾಡೋವುದು. ನಾನು ನಿಮಗೆ ಯಾವತ್ತೂ ಸಿಗಲ್ಲ. ಸಿಕ್ರೆ ನನ್ನ ದೇಹ ಸಿಗಬಹುದು, ನನ್ನ ಮನಸ್ಸು ಸಿಗಲ್ಲ ಎಂದು ಹರ್ಷ ಹೇಳಿದ್ದಾನೆ. ಅದಕ್ಕೆ ವರು ಕಣ್ಣೀರಿಡುತ್ತಾ, ಬೇಸರ ಮಾಡಿಕೊಂಡಿದ್ದಾಳೆ.


  colors kannada serial, kannada serial, kannadathi serial, coffee shop open in kannada language, serial end in one week, ಕನ್ನಡತಿ ಧಾರಾವಾಹಿ, ಕನ್ನಡದಲ್ಲೇ ಕಾಫಿ ಅಂಗಡಿ ಓಪೆನ್ ಆಯ್ತು!, ಹಣ ತೆಗೆದುಕೊಂಡು ಸಾನಿಯಾ ಹೋಗಿದ್ದೇಲ್ಲಿಗೆ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ಹರ್ಷ,ವರು,ಭುವಿ


  ಇಂದಿನಿಂದ ಒಂದು ವಾರ ಮಾತ್ರ ಧಾರಾವಾಹಿ
  ಇಂದಿನಿಂದ ಕನ್ನಡತಿ ಧಾರಾವಾಹಿಯ ಅಂತಿಮ ಅಧ್ಯಾಯ ಶುರುವಾಗಲಿದೆ. ಧಾರಾವಾಹಿಯಲ್ಲಿ ಎಲ್ಲವೂ ಒಂದು ಹಂತಕ್ಕೆ ಬಂದಿದೆ. ಹೀರೋ ಹರ್ಷ ಮೊದಲಿನಂತೆ ಇಲ್ಲ. ಅಮ್ಮಮ್ಮ ಸತ್ತ ಮೇಲೆ ಜಗಳ ಮಾಡುವುದನ್ನು ಬಿಟ್ಟಿದ್ದಾನೆ. ಎಲ್ಲರ ಜೊತೆ ತಾಳ್ಮೆಯಿಂದ ಮಾತನಾಡುತ್ತಿದ್ದಾನೆ.


  ಅಮ್ಮಮ್ಮನ ರೀತಿ ಭುವಿ ಅಧಿಕಾರ
  ಭುವಿ ಅಮ್ಮಮ್ಮನ ಮಾತಿನಂತೆ ಎಲ್ಲರನ್ನೂ, ಎಲ್ಲಾ ಕೆಲಸವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದಾಳೆ. ವರು ಮದುವೆ ಆಗಲು ಲಾಯರ್ ಬಂದಿದ್ದಾರೆ.ವಿಲನ್ ಆಗಿದ್ದ ಸಾನಿಯಾ ಬದಲಾಗಿದ್ದಾಳೆ. ದುಡ್ಡು, ಅಧಿಕಾರಕ್ಕಿಂತ ಸಂಬಂಧ ದೊಡ್ಡದು ಎಂದು ಕಲಿತಿದ್ದಾಳೆ. ಎಲ್ಲರೊಡನೆ ಖುಷಿಯಾಗಿದ್ದಾಳೆ. ಇನ್ನು ತಾಪ್ಸಿ, ದೇವ್‍ಗೆ ಆಸ್ಪತ್ರೆ ರೆಡಿಯಾಗುತ್ತಿದೆ. ಎಲ್ಲವೂ ಹ್ಯಾಪಿ ಎಂಡಿಂಗ್ ಆಗ್ತಾ ಇದೆ.


  colors kannada serial, kannada serial, kannadathi serial, coffee shop open in kannada language, serial end in one week, ಕನ್ನಡತಿ ಧಾರಾವಾಹಿ, ಕನ್ನಡದಲ್ಲೇ ಕಾಫಿ ಅಂಗಡಿ ಓಪೆನ್ ಆಯ್ತು!, ಹಣ ತೆಗೆದುಕೊಂಡು ಸಾನಿಯಾ ಹೋಗಿದ್ದೇಲ್ಲಿಗೆ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ಸಾನಿಯಾ


  ಇದನ್ನೂ ಓದಿ: Actress Sitara Thara: 3 ತಿಂಗಳ ಮಗು ಇದ್ದಾಗಲೇ ಅಪ್ಪ-ಅಮ್ಮನನ್ನು ಕಳೆದುಕೊಂಡೆ, ವೇದಿಕೆ ಮೇಲೆ ಸಿತಾರ ಕಣ್ಣೀರು! 


  ಇನ್ನೊಂದು ವಾರ ಕನ್ನಡತಿ ಧಾರಾವಾಹಿಯನ್ನು ಮಿಸ್ ಮಾಡ್ದೇ ನೋಡಿ. ಕೊನೆಯಲ್ಲಿ ಏನಾಗುತ್ತೆ? ಯಾವರ ರೀತಿ ಕಥೆ ಏನಾದ್ರೂ ಬದಲಾಗುತ್ತಾ ಅಂತ ಕಾಯಬಹುದು.

  Published by:Savitha Savitha
  First published: