ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ (Serials) ಕನ್ನಡತಿ (Kannadathi) ಸೀರಿಯಲ್ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು (Fans) ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡ್ತಿದೆ. ಭುವಿ ಮತ್ತು ಹರ್ಷನಿಗೆ ಡಿವೋರ್ಸ್ (Divorce) ಕೊಡಿಸಬೇಕು ಎಂದು ವರಊ ಓಡಾಡ್ತಾ ಇದ್ದಳು. ಹರ್ಷನು ಕೋಪ ಮಾಡಿಕೊಂಡು ಡಿವೋರ್ಸ್ ಪೇಪರ್ ಗೆ ಸೈನ್ ಹಾಕಿದ್ದ.
ಹೀರೋ ಬೇಕೇ ಬೇಕು ಎನ್ನುತ್ತಿರುವ ವರು
ಧಾರಾವಾಹಿ ಶುರುವಾದಾಗಿನಿಂದ ವರೂಗೆ ಹೀರೋ ಅಂದ್ರೇ ಹರ್ಷ ಅಂತ. ಅವನನ್ನು ಹುಚ್ಚಿ ತರ ಪ್ರೀತಿ ಮಾಡ್ತಾ ಇದ್ಲು. ಅವನನ್ನೇ ಮದುವೆ ಆಗಬೇಕು ಎಂದುಕೊಂಡಿದ್ಲು. ಆದ್ರೆ ಹರ್ಷ ಭುವಿಯನ್ನು ಪ್ರೀತಿಸಿ ಮದುವೆ ಆಗ್ತಾನೆ ಅದಕ್ಕೆ ವರೂಗೆ ವಿಪರೀತ ಕೋಪ, ಅಸಹನೆ ಎಲ್ಲವೂ ಇದೆ. ಹೀರೋ ನನಗೆ ಬೇಕು ಅಂತಿದ್ದಾಳೆ.
ಭುವಿ ಕೈ ಸೇರಿದ ಹರ್ಷನ ಡಿವೋರ್ಸ್ ಪತ್ರ
ಕಾಫಿ ಶಾಪ್ ಒಪನ್ ಸಂಭ್ರಮದಲ್ಲಿ ಹರ್ಷ-ಭುವಿ ಮತ್ತು ಮನೆಯವರು ಇದ್ದಾರೆ. ಆಗ ಭುವಿ ಹರ್ಷನಿಗೆ ಪತ್ರ ಕೊಟ್ಟು ಇದಕ್ಕೆ ಉತ್ತರ ಬೇಕು ಎಂದಿದ್ದಾಳೆ. ಅದು ಹರ್ಷ ಕಳಿಸಿರುವ ಡಿವೋರ್ಸ್ ಪತ್ರ. ಹರ್ಷನಿಗೆ ಸತ್ಯ ಗೊತ್ತಿರುವ ಕಾರಣ ಶಾಕ್ ಆಗದೇ, ನೀವು ಕಳಿಸಿರದ ಡಿವೋರ್ಸ್ ಪೇಪರ್ ಹೇಗೆ ನನ್ನ ಕೈಯಲ್ಲಿ ಇದೆಯೋ, ಹಾಗೇ ನಾನು ಕಳಿಸದ ಡಿವೋರ್ಸ್ ಪತ್ರ ನಿಮಗೆ ತಲುಪಿದೆ ಎನ್ನುತ್ತಾನೆ. ಅದನ್ನು ಕೇಳಿ ಭುವಿ ಶಾಕ್ ಆಗಿದ್ದಾಳೆ.
ವೇದಿಕೆಗೆ ಬಂದ ವರೂ
ಭುವಿ ಮತ್ತು ಹರ್ಷ ನಿಂತಿದ್ದ ವೇದಿಕೆಗೆ ವರೂ ಬರುತ್ತಾಳೆ. ಎಲ್ಲರನ್ನೂ ಕರೆದು ನಾನು ನಿಮಗೆ ಒಂದು ವಿಷ್ಯ ಹೇಳಬೇಕು. ಆಮೇಲೆ ನೀವು ನನಗೆ ಬೈದ್ರೂ ಪರವಾಗಿಲ್ಲ ಎನ್ನುತ್ತಾ, ಮಾತು ಶುರು ಮಾಡುತ್ತಾಳೆ. ಭುವಿ ನಾನು ಮೊದಲ ದಿನವೇ ನಾನು ಪ್ರೀತಿ ಮಾಡುವ ಹುಡುಗನ ಬಗ್ಗೆ ಹೇಳಿದ್ದೆ. ನಿನಗೂ ಆ ವಿಷ್ಯ ಗೊತ್ತಿತ್ತು. ಆದ್ರೆ ಇವತ್ತು ನಾನು ಇರಬೇಕಾದ ಜಾಗದಲ್ಲಿ ನೀನು ಇದ್ದೀಯಾ ಎನ್ನುತ್ತಾಳೆ.
ಹರ್ಷನನ್ನು ಮದುವೆ ಆಗ್ತೀನಿ
ವರೂ 2 ಹೂವಿನ ಹಾರಗಳನ್ನು ತರಿಸುತ್ತಾಳೆ. ನನಗೆ ಹರ್ಷ ಬೇಕೇ ಬೇಕು. ಬೇಕಾದ್ದನ್ನು ಪಡೆಯುವ ಹಠ ನನ್ನದು. ಅದು ಬೇರೆಯವರ ಪಾಲಾಗಲು ಬಿಡಲ್ಲ ಎನ್ನುತ್ತಾಳೆ. ಅಲ್ಲದೇ ಹರ್ಷ ನನ್ನನ್ನು ಮದುವೆ ಆಗಲು ಒಪ್ಪಿದ್ದಾರೆ. ಅದಕ್ಕೆ ವಿಡಿಯೋ ಸಾಕ್ಷಿ ಇದೆ ನನ್ನ ಬಳಿ ಎನ್ನುತ್ತಾಳೆ. ಎಲ್ಲರೂ ಶಾಕ್ ಆಗ್ತಾರೆ ಆದ್ರೆ ಭುವಿ ಮಾತ್ರ ಒಪ್ಪಲ್ಲ.
ಲಾಯರ್ ಜೊತೆ ವರು ಮದುವೆ?
ಕನ್ನಡತಿ ಸೀರಿಯಲ್ ಈ ವಾರಕ್ಕೆ ಮುಕ್ತಾಯವಾಗಲಿದೆ. ಎಲ್ಲದನ್ನೂ ಹ್ಯಾಪಿ ಎಂಡಿಂಗ್ ಮಾಡಲು ವರೂಗಾಗಿ ಲಾಯರ್ ಹರ್ಷಿತ್ ಬಂದಿದ್ದಾರೆ. ಅವರು ವರೂಳನ್ನು ಇಷ್ಟ ಪಡ್ತಾ ಇದ್ದಾರೆ. ಅವಳು ವರೂಗೆ ಮದುವೆ ಆಗಿ ಎಂದು ಕೇಳಿದ್ದಾರೆ. ಮೂಲಗಳ ಪ್ರಕಾರ ವರೂ ಲಾಯರ್ ರನ್ನು ಮದುವೆ ಆಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Kendasampige: ಪತಿಗಾಗಿ ರಾಜಕೀಯ ಸೇರಿದ ಸುಮನಾ? ನಿತ್ಯಾ ಮೋಹದಲ್ಲಿ ಸಿಲುಕ್ತಾನಾ ತೀರ್ಥಂಕರ್!
ಹರ್ಷ ವರೂನ ಮದುವೆ ಆಗ್ತಾನಾ? ವರೂ ಲಾಯರ್‍ರನ್ನು ಒಪ್ಕೊತಾಳಾ? ಮುಂದೇನಾಗುತ್ತೆ ಅಂತ ನೋಡಡೋಕೆ ಈ ವಾರವೇ ಮುಕ್ತಾಯವಾಗಲಿರುವ ಕನ್ನಡತಿ ಸೀರಿಯಲ್ ನೋಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ