ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ (Serials) ಕನ್ನಡತಿ (Kannadathi) ಸೀರಿಯಲ್ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡ್ತಿದೆ. ಅಮ್ಮಮ್ಮ ರೀತಿ ಅಧಿಕಾರ ನಡೆಸಬೇಕು ಎಂದು ಭುವಿ ಅಂದುಕೊಂಡಿದ್ದಾಳೆ. ಕಚೇರಿಯಲ್ಲೇ (Office) ಭುವಿ ಎಚ್ಚರ ತಪ್ಪಿ ಬಿದ್ದಿದ್ದಾಳೆ. ಹರ್ಷ ಗಾಬರಿಕೊಂಡಿದ್ದಾನೆ (Tension).
ಕೊಲ್ಲಲು ಬಂದವನಿಂದ ಕೈಗೆ ಗಾಯ
ಭುವಿ ಎಂಡಿ ಆದ ಮೇಲೆ ಅವಳ ಪ್ರಾಣಕ್ಕೆ ಆಪತ್ತು ಎದುರಾಗಿದೆ. ಯಾರೋ ಆಗಂತುಕ ಭುವಿಯನ್ನು ಕೊಲೆ ಮಾಡುವ ಪ್ರಯತ್ನ ಮಾಡಿದ್ದಾನೆ. ಸ್ವಲ್ಪದರಲ್ಲೇ ಭುವಿ ಪ್ರಾಣ ಉಳಿದಿದೆ. ಆದ್ರೆ ಕೈ ಬೆರಳಿಗೆ ಗಾಯ ಆಗಿಗೆ. ಆ ನೋವಿನಲ್ಲಿ, ಮನೆಯಲ್ಲಿ ಅಡುಗೆ ಕೆಲಸ, ಕಚೇರಿ ಕೆಲಸ ಮಾಡುತ್ತಿದ್ದಾಳೆ.
ಕೈ ನೋವಿನಿಂದ ಭುವಿಗೆ ಜ್ವರ
ಬೆರಳು ಗಾಯ ಆಗಿದ್ದರೂ ಅದೇ ನೋವಿನಲ್ಲಿ ಭುವಿ ಕೆಲಸ ಮಾಡ್ತಾ ಇದ್ದಾಳೆ. ಅದಕ್ಕೆ ಆ ನೋವು ಹೆಚ್ಚಾಗಿ ಜ್ವರ ಬಂದಿದೆ. ಹರ್ಷ ತನ್ನ ಚಿಕ್ಕಮ್ಮನಿಗೆ ಹೇಳಿ ಕಾಳು ಮೆಣಸು ಸಾರು ಮಾಡಿ ತರಿಸಿದ್ದಾನೆ. ಭುವಿಯನ್ನು ಊಟಕ್ಕೆ ಬನ್ನಿ ಎಂದು ಹರ್ಷ ಕರೆಯುತ್ತಿದ್ದಾನೆ. ಆದ್ರೆ ಭುವಿ ಕೆಲಸ ಬಿಟ್ಟು ಬರುತ್ತಿರಲಿಲ್ಲ.
ಇದನ್ನೂ ಓದಿ: Ramachari: ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಚಾರು, ರಾಮಾಚಾರಿ ಮದುವೆ ಆಗಲು ಶೈಲುಗೆ ಆಫರ್!
ಎಚ್ಚರ ತಪ್ಪಿ ಬಿದ್ದ ಭುವಿ
ಭುವಿಯನ್ನ ಮಾತನಾಡಿಸಲು ಹರ್ಷ ಬಂದಿರುತ್ತಾನೆ. ಅವರಿಗೆ ಜ್ವರ ಹೆಚ್ಚು ಹೆಚ್ಚಾಗಿದೆ. ಆ ಜ್ವರದಿಂದ ಎಚ್ಚರ ತಪ್ಪಿ ಬಿದ್ದಿದ್ದಾಳೆ. ಅದನ್ನು ನೋಡಿ ಹರ್ಷ ಆತಂಕಗೊಂಡಿದ್ದಾನೆ. ಆಕೆಯನ್ನು ಎಚ್ಚರಗೊಳಿಸಲು ಪ್ರಯತ್ನ ಪಡ್ತಾ ಇದ್ದಾನೆ. ಆದ್ರೆ ಭುವಿ ಎಚ್ಚರ ಆಗ್ತಾ ಇಲ್ಲ. ಅದಕ್ಕೆ ಆಕೆಯನ್ನು ಆಸ್ಪತ್ರೆಗೆ ಸೇರಿಸೋ ವ್ಯವಸ್ಥೆ ಮಾಡ್ತಾ ಇದ್ದಾನೆ.
ಹರ್ಷನಿಗಾಗಿ ಕಾದಿದ್ದ ವರು
ವರು ಎಲ್ಲರಿಗೂ ತೊಂದ್ರೆ ಕೊಡ್ತಾಳೆ. ಆಕೆಗೆ ನಾವು ತೊಂದ್ರೆ ಕೊಡಬೇಕು ಎಂದು, ಬಿಂದು-ಸುಚಿ ಸೇರಿ ಒಂದು ಪ್ಲ್ಯಾನ್ ಮಾಡ್ತಾರೆ. ಹರ್ಷನ ಮೊಬೈಲ್ ನಿಂದ ನಿಮ್ಮನ್ನು ಭೇಟಿಯಾಗಬೇಕು. ನಾನು ಹೇಳಿದ ಜಾಗಕ್ಕೆ ಬನ್ನಿ ಎಂದು ಮೆಸೇಜ್ ಕಳಿಸುತ್ತಾರೆ. ಅದನ್ನು ಹರ್ಷ ಕಳಿಸಿದ್ದು ಎಂದು ಕೊಂಡು ವರು ತುಂಬಾ ಖುಷಿಯಾಗಿ, ಸೀರೆಯಲ್ಲಿ ಹರ್ಷನನ್ನು ಭೇಟಿಯಾಗಲು ಬಂದಿದ್ದಳು.
ಹರ್ಷ ಬರಲಿಲ್ಲ ಎಂದು ಬೇಸರ
ಬಿಸಿಲಿನಲ್ಲಿ ನಿಂತು ತುಂಬಾ ಹೊತ್ತಿದ್ದ ವರು ಕಾಯ್ತಾ ಇರ್ತಾಳೆ. ಆದ್ರೆ ಹರ್ಷ ಅಲ್ಲಿಗೆ ಬರುವುದಿಲ್ಲ. ಅಲ್ಲದೇ ಅವನಿಗೆ ಕಾಲ್ ಸಹ ಕನೆಕ್ಟ್ ಆಗ್ತಾ ಇರಲಿಲ್ಲ. ಇದರಿಂದ ಆಕೆ ಕಚೇರಿಗೆ ಕಾಲ್ ಮಾಡಿ, ಹರ್ಷನ ಬಗ್ಗೆ ವಿಚಾರಿಸುತ್ತಾಳೆ. ಹರ್ಷ ಅಲ್ಲೇ ಭುವಿ ಜೊತೆ ಇರೋದು ಗೊತ್ತಾಗುತ್ತೆ. ಅದಕ್ಕೆ ಬರು ಬೇಜಾರು ಮಾಡಿಕೊಂಡಿದ್ದಾಳೆ.
ಇದನ್ನೂ ಓದಿ: Actress Rekha: 'ತ್ರಿಪುರ ಸುಂದರಿ'ಯಲ್ಲಿ ಸ್ಪರ್ಶ ರೇಖಾ, ಅಮ್ಮನಾಗಿ ಕಿರುತೆರೆಗೆ ಗ್ರ್ಯಾಂಡ್ ಎಂಟ್ರಿ
ಭುವಿಗೆ ಆಗಿದ್ದೇನು? ಹರ್ಷನಿಗೆ ಹೆಚ್ಚಾದ ಚಿಂತೆ. ವರುಗೆ ಅವಮಾನ!, ಸುಚಿ, ಬಿಂದು ಪ್ಲ್ಯಾನ್ ಗೊತ್ತಾಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ