• Home
  • »
  • News
  • »
  • entertainment
  • »
  • Kannadathi: ವಿಲ್ ವಿಚಾರ ಹರ್ಷನಿಗೆ ಮೊದಲು ಹೇಳೋದು ಯಾರು? ಭುವಿನಾ, ವರುನಾ?

Kannadathi: ವಿಲ್ ವಿಚಾರ ಹರ್ಷನಿಗೆ ಮೊದಲು ಹೇಳೋದು ಯಾರು? ಭುವಿನಾ, ವರುನಾ?

ವಿಲ್ ವಿಚಾರ ಹರ್ಷನಿಗೆ ಮೊದಲು ಹೇಳೋದು ಯಾರು?

ವಿಲ್ ವಿಚಾರ ಹರ್ಷನಿಗೆ ಮೊದಲು ಹೇಳೋದು ಯಾರು?

ವಿಲ್ ವಿಚಾರವನ್ನು ಭುವಿ ಹರ್ಷ ಬಳಿ ಹೇಳಿದ್ರೆ, ಅವನು ಹೇಗೆ ಸ್ವೀಕಾರ ಮಾಡ್ತಾನೋ ಗೊತ್ತಿಲ್ಲ. ಆದ್ರೆ ಇಬ್ಬರು ಕೂತು ಮಾತನಾಡಿದ್ರೆ ಎಲ್ಲಾ ಸರಿ ಹೋಗಬಹುದು. ಹರ್ಷ-ಭುವಿ ವಿಲ್ ವಿಚಾರದಲ್ಲಿ ಒಂದಾದ್ರೆ, ವರು ಕಥೆ ಮುಗಿಯುತ್ತೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ ಧಾರಾವಾಹಿ (Kannadathi Serial) ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಗೆ ದೊಡ್ಡ ಅಭಿಮಾನಿಗಳ (Fans) ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ (Super Hit) ಆಗಿ ಓಡುತ್ತಿದೆ. ಧಾರಾವಾಹಿಯಲ್ಲಿ ಅಮ್ಮಮ್ಮನ ಅಧ್ಯಾಯ ಮುಕ್ತಾಯವಾಗಿದೆ. ಅಮ್ಮಮ್ಮ ತನ್ನ ಹೆಸರಿಗೆ ವಿಲ್ ಬರೆದಿರುವು ಭುವಿಗೆ ಗೊತ್ತಾಗಿದೆ. ಅದನ್ನು ಹರ್ಷನ (Harsh) ಬಳಿ ಹೇಳಲು ಓದ್ದಾಡುತ್ತಿದ್ದಾಳೆ. ವರು ಸಹ ತಾನು ಹೇಳಬೇಕೆಂದುಗೊಂಡಿದ್ದಾಳೆ.


    ವಿಲ್ ಓದಿದ ಭುವಿ
    ರತ್ನಮಾಲಾ ಸಾಯುವ ದಿನ ವರು, ಭುವಿ ಮನೆಗೆ ಹೋಗಿ ಏನೋ ದಾಖಲೆ ಬೇಕೆಂದು ಮನೆಯಲ್ಲಾ ತಡಕಾಡಿ ಬಂದಿರುತ್ತಾಳೆ. ಆಗ ಆಕೆಗೆ ವಿಲ್ ವಿಚಾರ ಗೊತ್ತಾಗಿರುತ್ತೆ. ಆದಾದ ನಂತರ ಭುವಿ ತಂಗಿ ಆ ದಾಖಲೆಯನ್ನು ಅಕ್ಕನ ಕೈಗೆ ತಂದು ಕೊಡುತ್ತಾಳೆ. ಅದು ಭುವಿಗೆ ನನೆಪಾಗಿ, ರತ್ನಮ್ಮ ಕೊಟ್ಟ ದಾಖಲೆ ಓದಿದ್ದಾಳೆ.


    ಅದರಲ್ಲಿ ಈ ರೀತಿ ಇದೆ. 'ಯಾವುದೇ ಬಲವಂತ ಇಲ್ಲದೇ, ಮನಸಾರೆ ಒಪ್ಪಿ, ಈ ಕೆಳಗೆ ಇರುವ ಆಸ್ತಿಯನ್ನು ಸೌಪರ್ಣಿಕಾ ಹೆಸರಿಗೆ ಬರೆಯುತ್ತಿದ್ದೇನೆ' ಎಂದು ಇದೆ. ಇದನ್ನು ಓದಿ ಭುವಿ ಶಾಕ್ ಆಗಿದ್ದಾಳೆ. ಯಾಕಂದ್ರೆ ಆಸ್ತಿ ಇರುವುದೆಲ್ಲಾ ಆಕೆಯ ಹೆಸರಿಗೆ.


    ಇದನ್ನೂ ಓದಿ: Bigg Boss Kannada: ಕಾಡಾದ ಬಿಗ್ ಬಾಸ್ ಮನೆ, ಭರ್ಜರಿಯಾಗಿ ವೈಲ್ಡ್ ಕಾರ್ಡ್ ಎಂಟ್ರಿ! 


    ಹರ್ಷನ ಬಳಿ ವಿಲ್ ವಿಚಾರ ಹೇಳಲು ಒದ್ದಾಟ
    ಭುವಿ, ಹರ್ಷನ ಹೆಸರಿಗೆ ಬಿಟ್ಟು ಆಸ್ತಿಯೆಲ್ಲಾ ನನ್ನ ಹೆಸರಿಗೆ ಏಕೆ ಬರೆದ್ರೂ ಎಂದು ಗೊಂದಲದಲ್ಲಿದ್ದಾಳೆ. ಅದನ್ನು ಮೊದಲು ಹರ್ಷನ ಬಳಿ ಹೇಳಬೇಕು ಎಂದು ಚಡಪಡಿಸುತ್ತಿದ್ದಾಳೆ. ಮಲಗಿದ್ದ ಹರ್ಷನನ್ನು ಎಬ್ಬಿಸಿ ವಿಲ್ ಬಗ್ಗೆ ಹೇಳೋ ಪ್ರಯತ್ನ ಮಾಡ್ತಾಳೆ. ಆದ್ರೆ ವರು ಹರ್ಷನಿಗೆ ಹಾಲಿನಲ್ಲಿ ನಿದ್ರೆ ಮಾತ್ರೆ ಹಾಕಿ ಕೊಟ್ಟಿರುತ್ತಾಳೆ. ಅದಕ್ಕೆ ಅವನು ಎದ್ದೇಳುವುದಿಲ್ಲ.


    colors kannada serial, kannada serial, kannadathi serial, bhuvi try to speak with harsha about property bhuvi, read the property document, harsha mother death, ಕನ್ನಡತಿ ಧಾರಾವಾಹಿ, ತನ್ನ ಹೆಸರಿಗೆ ಪೂರ್ತಿ ಆಸ್ತಿ, ವಿಲ್ ಓದುತ್ತಿರುವ ಭುವಿ, ವಿಲ್ ವಿಚಾರ ಹರ್ಷನಿಗೆ ಮೊದಲು ಹೇಳೋದು ಯಾರು; ಭುವಿನಾ, ವರುನಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ವಿಲ್ ಓದಿದ ಭುವಿ


    ತಾನೇ ವಿಲ್ ವಿಚಾರ ಹೇಳಬೇಕು ಎಂತಿರೋ ವರು
    ಭುವಿಗಿಂತ ಮೊದಲು ವಿಲ್ ವಿಚಾರ ವರುಗೆ ಗೊತ್ತಾಗಿದೆ. ಅದನ್ನು ತಾನೇ ಮೊದಲು ಹರ್ಷನ ಬಳಿ ಹೇಳಬೇಕು ಎಂದುಕೊಂಡಿದ್ದಾಳೆ. ತನಗೆ ಬೇಕಾದ ರೀತಿ ಹೇಳಿ, ಹರ್ಷನ ಮನಸ್ಸು ಹಾಳಾಗುವಂತೆ ಮಾಡಬೇಕು. ಭುವಿ ಮೇಲೆ ಕೋಪ ಬರುವಂತೆ ಮಾಡಬೇಕು ಎಂದುಕೊಂಡಿದ್ದಾಳೆ. ಆದ್ರೆ ಭುವಿ ಹರ್ಷನ ಜೊತೆ ಇರುವುದರಿಂದ ಮಾತನಾಡಲು ಆಗುತ್ತಿಲ್ಲ.


    colors kannada serial, kannada serial, kannadathi serial, bhuvi try to speak with harsha about property bhuvi, read the property document, harsha mother death, ಕನ್ನಡತಿ ಧಾರಾವಾಹಿ, ತನ್ನ ಹೆಸರಿಗೆ ಪೂರ್ತಿ ಆಸ್ತಿ, ವಿಲ್ ಓದುತ್ತಿರುವ ಭುವಿ, ವಿಲ್ ವಿಚಾರ ಹರ್ಷನಿಗೆ ಮೊದಲು ಹೇಳೋದು ಯಾರು; ಭುವಿನಾ, ವರುನಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ವಿಲ್


    ಹರ್ಷ-ಭುವಿ ಒಂದಾದ್ರೆ ವರುಗೆ ಇಲ್ವಾ ಗ್ರಹಚಾರ
    ವಿಲ್ ವಿಚಾರವನ್ನು ಭುವಿ ಹರ್ಷ ಬಳಿ ಹೇಳಿದ್ರೆ, ಅವನು ಹೇಗೆ ಸ್ವೀಕಾರ ಮಾಡ್ತಾನೋ ಗೊತ್ತಿಲ್ಲ. ಆದ್ರೆ ಇಬ್ಬರು ಕೂತು ಮಾತನಾಡಿದ್ರೆ ಎಲ್ಲಾ ಸರಿ ಹೋಗಬಹುದು. ಹರ್ಷ-ಭುವಿ ವಿಲ್ ವಿಚಾರದಲ್ಲಿ ಒಂದಾದ್ರೆ, ವರು ಕಥೆ ಮುಗಿಯುತ್ತೆ. ಆಕೆ ಹೀರೋ ಕನಸು ಬಿಟ್ಟು ಬಿಡಬೇಕು.


    ಇದನ್ನೂ ಓದಿ: Nivedita Gowda: ಸೋಲೋ ಟ್ರಿಪ್ ಹೊರಟ ನಿವಿ, ಚಂದನ್ ಎಲ್ಲಿ ಅಂತಿದ್ದಾರೆ ಅಭಿಮಾನಿಗಳು 


    ವಿಲ್ ವಿಚಾರವಾಗಿ ಚಿಂತೆಯಲ್ಲಿ ಮುಳುಗಿರೋ ಭುವಿ, ಅಮ್ಮಮ್ಮ ಇಲ್ಲದೇ ಒದ್ದಾಡುತ್ತಿರೋ ಹರ್ಷ, ಹರ್ಷ ಬೇಕು ಅಂತ ಪರದಾಡುತ್ತಿರೋ ವರು, ಎಂಡಿ ಪೋಸ್ಟ್ ಗಾಗಿ ಸಾನಿಯಾ ಚಡಪಡಿಕೆ. ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸಿರೀಯಲ್ ನೋಡಬೇಕು.

    Published by:Savitha Savitha
    First published: