• Home
  • »
  • News
  • »
  • entertainment
  • »
  • Kannadathi: ಅಮ್ಮಮ್ಮ ಬರೆದ ವಿಲ್ ಓದುವ ಸಮಯ ಬಂದೇ ಬಿಡ್ತು; ವರು, ಸಾನಿಯಾ ಮುಂದೇನು ಮಾಡ್ತಾರೆ?

Kannadathi: ಅಮ್ಮಮ್ಮ ಬರೆದ ವಿಲ್ ಓದುವ ಸಮಯ ಬಂದೇ ಬಿಡ್ತು; ವರು, ಸಾನಿಯಾ ಮುಂದೇನು ಮಾಡ್ತಾರೆ?

ತನ್ನ ಹೆಸರಿಗೆ ಪೂರ್ತಿ ಆಸ್ತಿ, ವಿಲ್ ಓದುತ್ತಿರುವ ಭುವಿ!

ತನ್ನ ಹೆಸರಿಗೆ ಪೂರ್ತಿ ಆಸ್ತಿ, ವಿಲ್ ಓದುತ್ತಿರುವ ಭುವಿ!

'ಯಾವುದೇ ಬಲವಂತ ಇಲ್ಲದೇ, ಮನಸಾರೆ ಒಪ್ಪಿ, ಈ ಕೆಳಗೆ ಇರುವ ಆಸ್ತಿಯನ್ನು ಸೌಪರ್ಣಿಕಾ ಹೆಸರಿಗೆ ಬರೆಯುತ್ತಿದ್ದೇನೆ' ಎಂದು ಇದೆ. ಇದನ್ನು ಓದಿ ಭುವಿ ಶಾಕ್ ಆಗಿದ್ದಾಳೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ ಧಾರಾವಾಹಿ (Kannadathi Serial) ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ (Super Hit) ಆಗಿ ಓಡುತ್ತಿದೆ. ಧಾರಾವಾಹಿಯಲ್ಲಿ ಅಮ್ಮಮ್ಮನ ಅಧ್ಯಾಯ ಮುಕ್ತಾಯವಾಗಿದೆ. ಅಮ್ಮಮ್ಮ ತನ್ನ ಹೆಸರಿಗೆ ಆಸ್ತಿ (Property) ಬರೆದಿರುವು ಭುವಿಗೆ ಗೊತ್ತಾಗಿದೆ. ವಿಲ್ ಓದುತ್ತಿದ್ದಾಳೆ.


    ಸೌಪರ್ಣಿಕಾ ಹೆಸರಿಗೆ ಇರುವ ಆಸ್ತಿ
    ರತ್ನಮಾಲಾಗೆ ಯಾವಾಗ ಭುವಿ ಪರಿಚಯ ಆಯ್ತೋ, ಅವತ್ತಿನಿಂದ ಅವಳೆಂದ್ರೆ ತುಂಬಾ ಇಷ್ಟ ಆಗಿತ್ತು. ಈಕೆಯೇ ನಮ್ಮ ಮನೆಗೆ ತಕ್ಕ ಸೊಸೆ ಎಂದು ಆಸ್ತಿಯನ್ನು ಭುವಿ ಹೆಸರಿಗೆ ಬರೆದಿರುತ್ತಾಳೆ. ಆದ್ರೆ ಭುವಿಯ ನಿಜವಾದ ಹೆಸರು ಸೌಪರ್ಣಿಕಾ. ಅದು ಎಲ್ಲರಿಗೂ ಗೊತ್ತಿಲ್ಲ. ಈಗ ವರುಗೆ ಆಸ್ತಿ ಬಗ್ಗೆ ಗೊತ್ತಾಗಿದೆ. ತನ್ನ ಗೆಳತಿ ಭುವಿಯೇ ಸೌಪರ್ಣಿಕಾ. ಅವಳ ಹೆಸರಿಗೆ ಆಸ್ತಿ ಇದೆ ಎಂದು ವರು ಏನೇನೋ ಪ್ಲ್ಯಾನ್ ಮಾಡ್ತಾ ಇದ್ದಾಳೆ.


    ದಾಖಲೆ ಕೊಟ್ಟಿದ್ದ ರತ್ನಮಾಲಾ
    ಭುವಿ ಮದುವೆ ಆಗುವ ಮೊದಲೇ ರತ್ನಮಾಲಾ ಭುವಿಯನ್ನು ಮನೆಗೆ ಕರೆಸಿ, ಅವಳಿಗೆ ಎಲ್ಲಾ ಉಪಚಾರ ಮಾಡಿ, ಮನೆಗೆ ಹೋಗುವಾಗ ಸೀರೆ ಜೊತೆ ಒಂದು ದಾಖಲೆ ಕೊಟ್ಟಿರುತ್ತಾಳೆ. ಕೊಡುವಾಗ ಇದನ್ನು ನಿನಗೆ ತುಂಬಾ ಕಷ್ಟ ಬಂದ್ರೆ ಅಥವಾ ನಾನು ಸತ್ತು ಹೋದಾಗ ಮಾತ್ರ ಇದನ್ನು ಓಪನ್ ಮಾಡಬೇಕು ಎಂದಿರುತ್ತಾಳೆ. ಭುವಿ ಈಗ ಅದನ್ನು ಓದುವ ಸಮಯ ಬಂದಿದೆ.


    ಇದನ್ನೂ ಓದಿ: Megastar Chiranjeevi: 'ಭಾರತೀಯ ಚಲನಚಿತ್ರ ವರ್ಷದ ವ್ಯಕ್ತಿ-2022 ಪ್ರಶಸ್ತಿ' ಮುಡಿಗೇರಿಸಿಕೊಂಡ ಮೆಗಾ ಸ್ಟಾರ್ ಚಿರಂಜೀವಿ 


    ವರುಗೆ ಪ್ರಶ್ನೆ ಮಾಡಿದ ಭುವಿ
    ಭುವಿ ಮತ್ತು ಹರ್ಷ ಅಮ್ಮಮ್ಮನ ಕಾರ್ಯ ಮಾಡಲು ಹೋಗಿರುತ್ತಾರೆ. ಅಲ್ಲಿಗೆ ವರು ಸಹ ಬಂದಿರುತ್ತಾಳೆ. ಆಗ ಭುವಿ ವರುಳನ್ನು ಪ್ರಶ್ನೆ ಮಾಡ್ತಾಳೆ. ನಮ್ಮ ಮನೆಗೆ ಯಾಕೆ ಬಂದಿದ್ದೆ? ಏನು ಹುಡುಕಲು ನಮ್ಮ ಮನೆಗೆ ಬಂದಿದ್ದೆ ಎಂದು ಪ್ರಶ್ನೆ ಮಾಡ್ತಾಳೆ. ವರು ಅದಕ್ಕೆ ನಕ್ಕು ಏನೂ ಹೇಳದೇ ಹೋಗುತ್ತಾಳೆ.


    colors kannada serial, kannada serial, kannadathi serial, bhuvi read the property document, harsha mother death, ಕನ್ನಡತಿ ಧಾರಾವಾಹಿ, ತನ್ನ ಹೆಸರಿಗೆ ಪೂರ್ತಿ ಆಸ್ತಿ, ವಿಲ್ ಓದುತ್ತಿರುವ ಭುವಿ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ವರು


    ವಿಲ್ ಓದುತ್ತಿರುವ ಭುವಿ
    ಭುವಿಗೆ ರತ್ನಮ್ಮ ಕೊಟ್ಟ ದಾಖಲೆ ಬಗ್ಗೆ ನೆನಪಾಗಿ, ಅದನ್ನು ಓದುತ್ತಿದ್ದಾಳೆ. ಅದರಲ್ಲಿ ಈ ರೀತಿ ಇದೆ. 'ಯಾವುದೇ ಬಲವಂತ ಇಲ್ಲದೇ, ಮನಸಾರೆ ಒಪ್ಪಿ, ಈ ಕೆಳಗೆ ಇರುವ ಆಸ್ತಿಯನ್ನು ಸೌಪರ್ಣಿಕಾ ಹೆಸರಿಗೆ ಬರೆಯುತ್ತಿದ್ದೇನೆ' ಎಂದು ಇದೆ. ಇದನ್ನು ಓದಿ ಭುವಿ ಶಾಕ್ ಆಗಿದ್ದಾಳೆ. ಯಾಕಂದ್ರೆ ಆಸ್ತಿ ಇರುವುದೆಲ್ಲಾ ಆಕೆಯ ಹೆಸರಿಗೆ.


    ಇದನ್ನೂ ಓದಿ: Bigg Boss Kannada: ಜಂಟಲ್ ಮ್ಯಾನ್ ಅಲ್ಲ, 'ಗಂಟಲ್ ಮ್ಯಾನ್'! ಈ ನಿಕ್‌ ನೇಮ್ ಯಾರಿಗೆ ಕೊಟ್ರು ಸುದೀಪ್? 


    ಮನೆಯಲ್ಲಿ ರಾಮಾಯಣ ಆಗೋದು ಪಕ್ಕಾನಾ?
    ಆಸ್ತಿ ಭುವಿ ಹೆಸರಿಗೆ ಇರುವುದು ಗೊತ್ತಾದ್ರೆ, ಮನೆಯಲ್ಲಿ ಗಲಾಟೆ ಆಗೋದು ಗ್ಯಾರಂಟಿ. ಅಲ್ಲದೇ ಹರ್ಷನೇ ತನ್ನ ಅಮ್ಮ ಆಸ್ತಿಯನ್ನು ಹೆಂಡ್ತಿ ಹೆಸರಿಗೆ ಮಾಡಿರೋದು ಗೊತ್ತಾದ್ರೆ, ಹೇಗೆ ಸ್ವೀಕರಿಸುತ್ತಾನೆ ಅನ್ನೋದು ಗೊತ್ತಿಲ್ಲ. ಅಲ್ಲದೇ ಚಿಕ್ಕಪ್ಪ ಸುದರ್ಶನ್ ಬೇರೆ ಆಸ್ತಿ ವಿಚಾರವಾಗಿ ಗಲಾಟೆ ತೆಗೆದಿದ್ದಾನೆ. ಸಾನಿಯಾ ಬೇರೆ ಎಂಡಿ ಪಟ್ಟ ಬೇಕೇ ಬೇಕು ಎಂದು ಪಟ್ಟು ಹಿಡಿದಿದ್ದಾಳೆ.


    colors kannada serial, kannada serial, kannadathi serial, bhuvi read the property document, harsha mother death, ಕನ್ನಡತಿ ಧಾರಾವಾಹಿ, ತನ್ನ ಹೆಸರಿಗೆ ಪೂರ್ತಿ ಆಸ್ತಿ, ವಿಲ್ ಓದುತ್ತಿರುವ ಭುವಿ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಹರ್ಷ


    ಭುವಿ ಈಗ ಏನ್ ಮಾಡ್ತಾಳೆ? ಇದೆನ್ನೆಲ್ಲಾ ಹೇಗೆ ನಿಭಾಯಿಸುತ್ತಾಳೆ. ಮುಂದೇನಾಗುತ್ತೆ ಅಂತ ಗೊತ್ತಾಗೋಕೆ ಕನ್ನಡತಿ ಸೀರಿಯಲ್ ನೋಡಬೇಕು.

    Published by:Savitha Savitha
    First published: