ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ ಧಾರಾವಾಹಿ (Kannadathi Serial) ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು (Fans)ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ (Super Hit) ಆಗಿ ಓಡ್ತಿದೆ. ಧಾರಾವಾಹಿಯಲ್ಲಿ ಅಮ್ಮಮ್ಮನ ಅಧ್ಯಾಯ ಮುಕ್ತಾಯವಾಗ್ತಿದ್ದಂತೆ, ಸೌಪರ್ಣಿಕಾ ಅನ್ನೋ ಹೆಸರು ಓಡಾಡ್ತಾ ಇದೆ. ಭುವಿ ಮನೆಯವರ ಮುಂದೆ ವಿಲ್ ಓದಿದ್ದಾಳೆ.
ಹರ್ಷನನ್ನು ಅರೆಸ್ಟ್ ಮಾಡಿಸಿದ ಸಾನಿಯಾ
ಹರ್ಷ-ಭುವಿ ಮತ್ತು ಮನೆಯವರೆಲ್ಲಾ ಅಮ್ಮಮ್ಮನ ಕಾರ್ಯ ಮಾಡಲು ಶ್ರೀರಂಗಪಟ್ಟಣಕ್ಕೆ ಬಂದಿರುತ್ತಾರೆ. ಸಾನಿಯಾ ಇದೇ ಸಮಯವನ್ನು ಬಳಸಿಕೊಂಡಿದ್ದಾಳೆ. ನೋವಿನಲ್ಲಿರೋ ಹರ್ಷನಿಗೆ ಮತ್ತಷ್ಟು ನೋವು ಕೊಡಲು ತೀರ್ಮಾನ ಮಾಡಿ, ಪೊಲೀಸರನ್ನು ಅಲ್ಲಿಗೆ ಕರೆಸಿದ್ದಾಳೆ.
ಹರ್ಷ ಅಸ್ಥಿ ಬಿಡುವ ಮೊದಲು ಮನೆಯವರ ಬಳಿ ಮಾತನಾಡಬೇಕು ಎನ್ನುತ್ತಾನೆ. ಅಷ್ಟರಲ್ಲಿ ಪೊಲೀಸರು ಕೈಗೆ ಕೋಳ ಹಾಕಿದ್ದಾರೆ. ಇದನ್ನು ನೋಡಿ ಮನೆಯವರೆಲ್ಲಾ ಗಾಬರಿಯಾಗಿದ್ದಾರೆ.
ಎಂಡಿ ಪಟ್ಟದಿಂದ ತೆಗೆದಿದ್ದಕ್ಕೆ ಸೇಡು
ಹರ್ಷ ಸಾನಿಯಾಳನ್ನು ಎಂಡಿ ಪಟ್ಟದಿಂದ ತೆಗೆದು ಹಾಕಿದ್ದಾನೆ. ಅದಕ್ಕೆ ಸಾನಿಯಾ ಈ ರೀತಿ ಮಾಡ್ತಾ ಇದ್ದಾಳೆ. ಅಲ್ಲದೇ ಈ ಹಿಂದೆ ಹರ್ಷ, ಸಾನಿಯಾಳ ಬಳಿ ಸತ್ಯ ಬಾಯ್ಬಿಡಿಸಲು ತಲೆಗೆ ಗನ್ ಇಟ್ಟಿರುತ್ತಾನೆ. ಅದನ್ನು ಪತ್ರಕರ್ತರೊಬ್ಬರು ವಿಡಿಯೋ ಮಾಡಿರುತ್ತಾರೆ. ಅದನ್ನೇ ಸಾಕ್ಷಿಯಾಗಿಟ್ಟುಕೊಂಡು ಸಾನಿಯಾ ಹರ್ಷನನ್ನು ಅರೆಸ್ಟ್ ಮಾಡಿಸಲು ಪ್ಲ್ಯಾನ್ ಮಾಡಿ, ಅದೇ ರೀತಿ ಮಾಡಿದ್ದಾಳೆ.
ಇದನ್ನೂ ಓದಿ: Kannada Serials: 2022ರಲ್ಲಿ ಮುಕ್ತಾಯವಾದ ಹೆಸರಾಂತ ಧಾರಾವಾಹಿಗಳು ಇವು!
ಮನೆಯವರಿಗೆಲ್ಲಾ ಸತ್ಯ ಹೇಳಬೇಕು
ಹರ್ಷನಿಗೆ ಪೊಲೀಸರು ಕೋಳ ಹಾಕಿದ ಮೇಲೆ, ಪೊಲೀಸರ ಬಳಿ ಅವನು ಮನವಿ ಮಾಡಿಕೊತ್ತಾನೆ. 10 ನಿಮಿಷ ಟೈಂ ಕೊಡಿ ಸರ್ 2 ಮುಖ್ಯವಾದ ಕೆಲಸ ಇವೆ. ಮಾಡಿ ಮುಗಿಸುತ್ತೇನೆ ಎಂದು ಕೇಳ್ತಾನೆ. ಆಗ ಸಾನಿಯಾ ಟೈಂ ಕೊಡಬೇಡಿ ಅರೆಸ್ಟ್ ಮಾಡಿ ಅಂತಾಳೆ. ಆದ್ರೆ, ಪೊಲೀಸರು ಟೈಂ ಕೊಡ್ತಾರೆ. ಹರ್ಷ ಭುವಿಗೆ ವಿಲ್ ತರಲು ಹೇಳ್ತಾನೆ.
ವಿಲ್ ಓದಿದ ಭುವಿ
ಶ್ರೀರಂಗಪಟ್ಟಣದಲ್ಲೇ ಪೊಲೀಸರ ಮುಂದೆಯೇ, ಹರ್ಷ ವಿಲ್ ಓದಲು ಹೇಳ್ತಾನೆ. ಭುವಿ ಅದನ್ನು ಓದುತ್ತಾಳೆ. 'ನನ್ನದೇ ಸ್ವಂತ ದುಡಿಮೆಯಿಂದ ಕಂಪನಿಗಳನ್ನು ಸ್ಥಾಪಿಸಿ ದುಡಿದು ಅರ್ಜಿಸಿದ್ದು, ಇದೆಲ್ಲಾ ನನ್ನ ಸಂಪಾದನೆಯಾಗಿರುತ್ತದೆ. ಸದರಿ ಕೆಳಗೆ ನಮೂದಿಸಿದ ಆಸ್ತಿಗಳು ಸದ್ಯಕ್ಕೆ ನನ್ನದಾಗಿದ್ದು, ನನ್ನ ತರುವಾಯ ಸೌಪರ್ಣಿಕಾ ನಂಜುಂಡ ಇವಳ ಹಕ್ಕಾಗಿರುತ್ತದೆ' ಎಂದು ಭುವಿ ಓದಿದ್ದಾಳೆ.
ಇದನ್ನೂ ಓದಿ: Sa Ri Ga Ma Pa: ಅಮ್ಮನಿಗೆ ಹಸಿರು ಗಾಜಿನ ಬಳೆ ಕೊಟ್ಟ ಗುರುಪ್ರಸಾದ್, ಸರಿಗಮಪ ವೇದಿಕೆಯಲ್ಲಿ ಭಾವುಕ ಕ್ಷಣ!
ಸುದರ್ಶನ್-ಸಾನಿಯಾ ಕೆಂಡಾಮಂಡಲ!
ಭುವಿ ವಿಲ್ ಓದಿದ್ದನ್ನು ಕೇಳಿ, ಸುದರ್ಶನ್, ಸಾನಿಯಾ ಕೋಪಗೊಂಡಿದ್ದಾರೆ. ಅಮ್ಮಮ್ಮ ಇರುವಾಗ್ಲೂ ನಮಗೆ ಏನು ಸಿಗಲಿಲ್ಲ. ಅವರು ಹೋದ ಮೇಲೂ ಎಲ್ಲವನ್ನೂ ಸೌಪರ್ಣಿಕಾ ಹೆಸರಿಗೆ ಮಾಡಿ ಹೋಗಿದ್ದಾರೆ ಎಂದು ಸಿಡುಕಿಕೊಂಡಿದ್ದಾರೆ. ವಿಲ್ ಓದಿಸಿ, ಹರ್ಷ ನನ್ನದು ಏನೂ ಇಲ್ಲ ಎಂದು ಹೇಳಿದ್ದಾನೆ.
ಭುವಿಯ ಮುಂದಿನ ನಡೆ ಏನು? ಸುದರ್ಶನ್, ಸಾನಿಯಾ ಮತ್ತೆ ಜಗಳ ತೆಗೆಯುತ್ತಾರಾ? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ