ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ (Serials) ಕನ್ನಡತಿ (Kannadathi) ಸೀರಿಯಲ್ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡ್ತಿದೆ. ಅಮ್ಮಮ್ಮ ರೀತಿ ಅಧಿಕಾರ ನಡೆಸಬೇಕು ಎಂದು ಭುವಿ ಅಂದುಕೊಂಡಿದ್ದಾಳೆ. ಆದ್ರೆ ನೂತನ ಎಂಡಿ (MD) ಆಗಿರುವ ಭುವಿ ಜೀವಕ್ಕ ಆಪತ್ತು (Danger) ಎದುರಾಗಿದೆ.
ಎಂಡಿ-ಸಿಇಓ ಆಗಿರುವ ಭುವಿ-ಹರ್ಷ
ಭುವಿ ಮತ್ತು ಹರ್ಷ ಪ್ರೀತಿಸಿ ಮದುವೆ ಆಗಿದ್ದಾರೆ. ಇಬ್ಬರು ಸುಂದರವಾದ ಸಂಸಾರ ಸಾಗಿಸುತ್ತಿದ್ದಾರೆ. ಮನೆಯಲ್ಲಿ ಮಾತ್ರ ಇವರು ಗಂಡ ಹೆಂಡತಿ, ಕಚೇರಿಯಲ್ಲಿ ಇವರು ಎಂಡಿ ಮತ್ತು ಸಿಇಓ. ಮೊದಲ ದಿನವೇ ಹರ್ಷ ಭುವಿ ಮಿಸ್ಟೇಕ್ ಕಂಡು ಹಿಡಿದಿದ್ದಾನೆ. ಏನದು ಎಂದು ಭುವಿ ಕೇಳಿದ್ದಾಳೆ.
ಭುವಿ ಮೊದಲ ಮಿಸ್ಟೇಕ್ ಏನು?
ನಾನು ಮೇ ಐ ಕಮಿನ್ ಅಂತ ಕೇಳಬೇಕಿತ್ತು, ನೀವು ನನ್ನ ಹಾಗೇ ಒಳಗೆ ಕರೆದ್ರಿ ಎಂದು ಹೇಳಿದ್ದಾನೆ. ಎಂಡಿ ಅಂದ್ಮೇಲೆ ಟೈಂ ಅಂದ್ರೆ ಹಣ, ಯಾರಾದ್ರೂ ಬಂದು ನಿಮ್ಮ ಟೈಮ್ ಹಾಳು ಮಾಡಬಹುದಾ?
ನಿಮ್ಮಂಥಾ ದೊಡ್ಡ ಸ್ಥಾನದಲ್ಲಿ ಇರುವವರು ಮೊದಲು ಮಾಡಬೇಕಾದ ರೂಲ್ ಇದು. ಸಣ್ಣ ವಿಷಯದಲ್ಲಿ ಹಸಿರುಪೇಟೆ ಟೀಚರ್ ತಪ್ಪು ಮಾಡಬಹುದಾ ಎಂದು ಹರ್ಷ ಕೇಳಿದ್ದಾರೆ. ಅದಕ್ಕೆ ಭುವಿ ಮತ್ತೆ ಹರ್ಷನನ್ನು ಹೊರಗೆ ಕಳಿಸಿ ಒಳಗೆ ಬನ್ನಿ ಎಂದಳು.
ಭುವಿ ಪ್ರಾಣಕ್ಕೆ ಆಪತ್ತು
ಭುವಿ ಮೊದಲ ದಿನದ ಕೆಲಸ ಮುಗಿಸಿ ಖುಷಿಯಿಂದ ಮನೆಗೆ ಹೊರಡು ಸಿದ್ಧಳಾಗಿದ್ದಾಳೆ. ಇನ್ನೇನು ಕಾರು ಹತ್ತಿ ಹೋಗಬೇಕಿತ್ತು. ಅಷ್ಟರಲ್ಲಿ ಹರ್ಷನ ಕಾಲ್ ಬರುತ್ತೆ. ಮಾತನಾಡಲು ಸೈಡಿಗೆ ಹೋಗ್ತಾಳೆ. ಖುಷಿ ಖುಷಿಯಿಂದ ಮಾತನಾಡುತ್ತಾ ಇರುತ್ತಾಳೆ. ಆಗ ಯಾರೋ ಒಬ್ಬ ಚಾಕು ಹಿಡಿದು ನಿಂದಿದ್ದಾನೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದಾನೆ.
ಇದನ್ನೂ ಓದಿ: Puttakkana Makkalu: ಪುಟ್ಟಕ್ಕನಿಗೆ ಕಗ್ಗಂಟಾದ ಮಗಳ ಮದುವೆ! ಸಹನಾ ಇಲ್ಲದೇ ಮುರಳಿ ಮೇಷ್ಟ್ರ ಪಾಡು ದೇವರಿಗೇ ಪ್ರೀತಿ!
ನೂತನ ಎಂಡಿಗೆ ಕಂಟಕನಾ?
ಭುವಿಗೆ ಆತ ಹಿಂದಿನಿಂದ ಬಂದು ಚಾಕು ಹಾಕಲು ಹೊಂಚು ಹಾಕುತ್ತಿದ್ದಾನೆ. ಭುವಿ ಅದನ್ನು ಗಮನಿಸಿಲ್ಲ. ತನ್ನ ಪಾಡಿಗೆ ತಾನು ಮಾತನಾಡುತ್ತಾ ನಿಂತಿದ್ದಾಳೆ. ಸುತ್ತ ಮುತ್ತ ಬೇರೆ ಯಾರು ಇಲ್ಲ. ಹಾಗಾದ್ರೆ ಆತ ಚಾಕು ಹಾಕಿ ಬಿಡ್ತಾನಾ? ವೀಕ್ಷಕರಿ ಟೆನ್ಷನ್ ಹೆಚ್ಚಾಗಿದೆ. ಭುವಿ ಹಿಂದೆ ತರುಗಿ ನೋಡಿ ಅಂತ ಅದೆಷ್ಟೋ ಜನ ಅಂದುಕೊಂಡ್ರು.
ಕೊಲ್ಲಲು ಕಳಿಸಿದವರು ಯಾರು?
ಭುವಿ ಎಂಡಿ ಆಗುತ್ತಿದ್ದಂತೆ, ಆಕೆ ಪ್ರಾಣಕ್ಕೆ ಅಪಾಯ ಎದುರಾಗಿದೆ. ಅಲ್ಲದೇ ಎಲ್ಲಾ ಆಸ್ತಿ ಈಕೆಯ ಹೆಸರಿಗೆ ಇದೆ. ಅದನ್ನು 5 ವರ್ಷ ವರ್ಗಾಯಿಸುವಂತಿಲ್ಲ. ಅದಕ್ಕೆ ಭುವಿ ಸತ್ತರೆ ಆಸ್ತಿ ಹಂಚಿಕೆ ಆಗಬಹುದು ಎನ್ನುವ ಕಲ್ಪನೆ ಇರಬಹುದು. ಆದ್ರೆ ಭುವಿ ಕೊಲ್ಲಲು ಕಳಿಸಿದ್ದು ಯಾರು ಎನ್ನುವ ಪ್ರಶ್ನೆಗಳು ಎದ್ದಿವೆ.
ಇದನ್ನೂ ಓದಿ: Bigg Boss Kannada: ಹೇಳಲು ಆಗದಿರುವ ವಿಷಯ ಪತ್ರದಲ್ಲಿ ಬರೆದ್ರು! ಅಷ್ಟಕ್ಕೂ ಬೇಸರಗೊಂಡಿದ್ದೇಕೆ ರೂಪೇಶ್ ಶೆಟ್ಟಿ?
ಭುವಿಗೆ ತೊಂದ್ರೆ ಆಗುತ್ತಾ? ಹರ್ಷ ಹೆಂಡ್ತಿಯನ್ನು ಕಾಪಾಡ್ತಾನಾ? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ