ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಸೀರಿಯಲ್ (Serial) ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್ ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡ್ತಿದೆ. ಭುವಿ-ಹರ್ಷನ ಮಧ್ಯೆ ಬರ್ತಿರೋ ವರುಗೆ ಒಬ್ಬ ಹೀರೋ ಎಂಟ್ರಿ ಆಗಿದೆ. ಇನ್ನೊಂದೆಡೆ ಭುವಿ ಕೊಲ್ಲಲು (Murder) ರೌಡಿಗಳು ಬಂದಿದ್ದಾರೆ. ಹರ್ಷನಿಗೆ (Harsha) ಟೆನ್ಶನ್ ಹೆಚ್ಚಾಗಿದೆ.
ಭುವಿ ಪ್ರಾಣ ಅಪಾಯದಲ್ಲಿ
ಭುವಿ ಎಂಡಿ ಆಗುತ್ತಿದ್ದಂತೆ, ಆಕೆ ಪ್ರಾಣಕ್ಕೆ ಅಪಾಯ ಎದುರಾಗಿದೆ. ಅಲ್ಲದೇ ಎಲ್ಲಾ ಆಸ್ತಿ ಈಕೆಯ ಹೆಸರಿಗೆ ಇದೆ. ಅದನ್ನು 5 ವರ್ಷ ವರ್ಗಾಯಿಸುವಂತಿಲ್ಲ. ಅದಕ್ಕೆ ಭುವಿ ಸತ್ತರೆ ಆಸ್ತಿ ಹಂಚಿಕೆ ಆಗಬಹುದು ಎನ್ನುವ ಕಲ್ಪನೆ ಇರಬಹುದು. ಅದಕ್ಕೆ ಭುವಿ ಹಿಂದೆ ರೌಡಿಗಳು ಬಿದ್ದಿದ್ದಾರೆ. ಈಗ ಒಂದು ಬಾರಿ ಹರ್ಷ ಕಾಪಾಡಿದ್ದಾನೆ. ಮತ್ತೆ ಭುವಿ ಪ್ರಾಣ ಅಪಾಯದಲ್ಲಿದೆ.
ವರು ಜೊತೆ ಆಟೋದಲ್ಲಿ ಹೋದ ಭುವಿ
ಭುವಿ ಪ್ರಾಣ ಅಪಾಯದಲ್ಲಿ ಇದೆ ಅಂತ ಗೊತ್ತಾಗಿ ಹರ್ಷ ಸೆಕ್ಯೂರಿಟಿ ನೀಡಿದ್ದಾನೆ. ಆದ್ರೆ ಅವೆಲ್ಲಾ ಬಿಟ್ಟು ಭುವಿ ವರು ಜೊತೆ ಆಟೋದಲ್ಲಿ ಹೋಗಿದ್ದಾಳೆ. ವರು ಬಳಿ ಪ್ರಶ್ನೆ ಮಾಡ್ತಾ ಇದ್ದಾಳೆ. ನೀನು ಹರ್ಷನನ್ನು ಮರೆತಿಲ್ವಾ. ಅವರನ್ನೇ ಇನ್ನೂ ಹೀರೋ ಅಂತಿದೀಯಾ ಎಂದು ಕೇಳ್ತಾಳೆ. ವರು ಇಲ್ಲ ಭುವಿ ಮರೆತಿದ್ದೇನೆ ಎಂದು ನಾಟಕ ಮಾಡ್ತಾಳೆ.
ಇದನ್ನೂ ಓದಿ: BBK Rupesh Shetty Winner: ಕರುನಾಡ ಮನಸ್ಸು ಗೆದ್ದ ಕರಾವಳಿಯ ಹುಡುಗ; ರೂಪೇಶ್ ಶೆಟ್ಟಿ ಹೇಳಿದ್ದೇನು?
ಮತ್ತೆ ಭುವಿ ಹಿಂದೆ ಬಿದ್ದ ರೌಡಿಗಳು
ವರು ಆಟೋದಿಂದ ಇಳಿದ ಮೇಲೆ ಭುವಿಯನ್ನು ರೌಡಿಗಳು ಹಿಂಬಾಲಿಸಿದ್ದಾರೆ. ಆಕೆ ಆಟೋ ತಡೆದು ನಿಲ್ಲಿಸಿದ್ದಾರೆ. ಭುವಿಗೆ ಆತಂಕ ಹೆಚ್ಚಾಗಿದೆ. ಆಕೆಯನ್ನು ಕೊಲ್ಲಲು ಬಂದಿದ್ದಾರೆ. ಭುವಿ ಅವರ ಜೊತೆ ಸಮಾಧಾನವಾಗಿ ಮಾತನಾಡುತ್ತಾ, ನಿಮ್ಮನ್ನು ಕಳಿಸಿದ್ದು ಯಾರು ಹೇಳಿ ಎಂದು ಕೇಳ್ತಾ ಇದ್ದಾಳೆ.
ಭುವಿಗೆ ಚಾಕು ಹಾಕ್ತಾರಾ?
ಭುವಿ ಕೊಲ್ಲಲು ಇಬ್ಬರು ಬಂದಿದ್ದು, ಮುಖಕ್ಕೆ ಮಂಕಿ ಕ್ಯಾಪ್ ಹಾಕಿಕೊಂಡಿದ್ದಾರೆ. ಚಾಕು ಕೈನಲ್ಲಿ ಹಿಡಿದಿದ್ದಾರೆ. ಭುವಿ ಅವರ ಮುಂದೆ ನಿಂತಿದ್ದಾಳೆ. ಭುವಿ ತನ್ನ ಪ್ರಾಣ ಕಾಪಾಡಿಕೊಳ್ಳುವುದನ್ನು ಬಿಟ್ಟು, ಅವರಿಗೆ ಬುದ್ಧಿ ಮಾತು ಹೇಳುತ್ತಿದ್ದಾಳೆ. ಅವರು ಭುವಿಯನ್ನು ಟಾರ್ಗೆಟ್ ಮಾಡಿದ್ದಾರೆ. ಭುವಿಗೆ ಚಾಕು ಹಾಕ್ತಾರಾ ನೋಡಬೇಕು. ಭುವಿ ಪ್ರಾಣ ಅಪಾಯದಲ್ಲಿದೆ.
ಹರ್ಷನಿಗೆ ಹೆಚ್ಚಾದ ಟೆನ್ಶನ್
ಹರ್ಷ ಭುವಿ ಒಬ್ಬಳೆ ಹೋಗಿರುವುದು ಗೊತ್ತಾಗಿ ಗಾಬರಿ ಆಗಿದ್ದಾನೆ. ವರುಗೆ ಕಾಲ್ ಮಾಡಿ ಕೇಳಿದ್ದಾನೆ. ಎಲ್ಲಿ ಭುವಿ ಎಂದು ಕೇಳಿದ್ದಾನೆ. ಅದಕ್ಕೆ ವರು ತನಗೆ ಗೊತ್ತಿಲ್ಲ. ಅವಳು ಆಗಲೇ ಹೋದಳು ಎಂದು ಹೇಳಿದ್ದಾಳೆ. ಹರ್ಷನ ಟೆನ್ಶನ್ ಹೆಚ್ಚಾಗಿದೆ. ಎಲ್ಲಾ ಕಡೆ ಭುವಿಯನ್ನು ಹುಡುಕುತ್ತಿದ್ದಾನೆ. ಪೊಲೀಸರಿಗೆ ತಿಳಿಸವ ಪ್ರಯತ್ನದಲ್ಲಿ ಇದ್ದಾನೆ.
ಇದನ್ನೂ ಓದಿ: BBK Grand Finale: ರೂಪೇಶ್ ರಾಜಣ್ಣ ತುಂಬಾ ಅಮಾಯಕರಂತೆ, ಶಾಕ್ ಆದ ಕಿಚ್ಚ ಸುದೀಪ್!
ಭುವಿ ಪ್ರಾಣ ಅಪಾಯದಲ್ಲಿ ಇದೆ. ಹರ್ಷ ಭುವಿಯನ್ನು ಕಾಪಾಡ್ತಾನಾ? ಭುವಿಯೇ ತನ್ನನ್ನು ತಾನು ಕಾಪಾಡಿಕೊಳ್ತಾಳಾ? ಭುವಿಯನ್ನು ಕೊಲ್ಲಲ್ಲು ಕಳಿಸಿದ್ದು ಯಾರು? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ