ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ ಧಾರಾವಾಹಿ (Kannadathi serial) ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ (Super Hit) ಆಗಿ ಓಡ್ತಿದೆ. ಧಾರಾವಾಹಿಯಲ್ಲಿ ಅಮ್ಮಮ್ಮನ ಅಧ್ಯಾಯ ಮುಕ್ತಾಯವಾಗ್ತಿದ್ದಂತೆ, ಭುವಿ ಹೆಸರಲ್ಲಿ ಆಸ್ತಿ ಇರೋದು ಮನೆಯವರಿಗೆ ಗೊತ್ತಾಗಿದೆ. ಮೊದಲ ಬಾರಿ ಭುವಿ ಅಮ್ಮಮ್ಮನ ಗತ್ತಿನಲ್ಲಿ ಮಾತನಾಡಿದ್ದಾಳೆ. ಸಾನಿಯಾ (Saniya) ಶೇಕ್ ಆಗಿದ್ದಾಳೆ.
ಹರ್ಷನನ್ನು ಅರೆಸ್ಟ್ ಮಾಡಿಸಿದ ಸಾನಿಯಾ
ಹರ್ಷ-ಭುವಿ ಮತ್ತು ಮನೆಯವರೆಲ್ಲಾ ಅಮ್ಮಮ್ಮನ ಕಾರ್ಯ ಮಾಡಲು ಶ್ರೀರಂಗಪಟ್ಟಣಕ್ಕೆ ಬಂದಿರುತ್ತಾರೆ. ಸಾನಿಯಾ ಇದೇ ಸಮಯವನ್ನು ಬಳಸಿಕೊಂಡಿದ್ದಾಳೆ. ನೋವಿನಲ್ಲಿರೋ ಹರ್ಷನಿಗೆ ಮತ್ತಷ್ಟು ನೋವು ಕೊಡಲು ತೀರ್ಮಾನ ಮಾಡಿ, ಪೊಲೀಸರನ್ನು ಅಲ್ಲಿಗೆ ಕರೆಸಿದ್ದಾಳೆ. ಹರ್ಷ ಅಸ್ಥಿ ಬಿಡುವ ಮೊದಲು ಮನೆಯವರ ಬಳಿ ಮಾತನಾಡಬೇಕು ಎನ್ನುತ್ತಾನೆ. ಅಷ್ಟರಲ್ಲಿ ಪೊಲೀಸರು ಕೈಗೆ ಕೋಳ ಹಾಕಿದ್ದಾರೆ. ಇದನ್ನು ನೋಡಿ ಮನೆಯವರೆಲ್ಲಾ ಗಾಬರಿಯಾಗಿದ್ದಾರೆ.
ಎಂಡಿ ಪಟ್ಟದಿಂದ ತೆಗೆದಿದ್ದಕ್ಕೆ ಸೇಡು
ಹರ್ಷ ಸಾನಿಯಾಳನ್ನು ಎಂಡಿ ಪಟ್ಟದಿಂದ ತೆಗೆದು ಹಾಕಿದ್ದಾನೆ. ಅದಕ್ಕೆ ಸಾನಿಯಾ ಈ ರೀತಿ ಮಾಡ್ತಾ ಇದ್ದಾಳೆ. ಅಲ್ಲದೇ ಈ ಹಿಂದೆ ಹರ್ಷ, ಸಾನಿಯಾಳ ಬಳಿ ಸತ್ಯ ಬಾಯ್ಬಿಡಿಸಲು ತಲೆಗೆ ಗನ್ ಇಟ್ಟಿರುತ್ತಾನೆ. ಅದನ್ನು ಪತ್ರಕರ್ತರೊಬ್ಬರು ವಿಡಿಯೋ ಮಾಡಿರುತ್ತಾರೆ. ಅದನ್ನೇ ಸಾಕ್ಷಿಯಾಗಿಟ್ಟುಕೊಂಡು ಸಾನಿಯಾ ಹರ್ಷನನ್ನು ಅರೆಸ್ಟ್ ಮಾಡಿಸಲು ಪ್ಲ್ಯಾನ್ ಮಾಡಿ, ಅದೇ ರೀತಿ ಮಾಡಿದ್ದಾಳೆ.
ಇದನ್ನೂ ಓದಿ: BBK Rakesh: ವೈಲೆಂಟ್ ಆದ ರಾಕೇಶ್ ಅಡಿಗ, ಏನೂ ಕಿತ್ತುಕೊಳ್ಳಲು ಆಗಲ್ಲ ಎಂದು ಸವಾಲ್!
ಅಮ್ಮಮ್ಮನ ರೀತಿ ಭುವಿ ಗತ್ತು
ಅಮ್ಮಮ್ಮ ತನ್ನ ಜವಾಬ್ದಾರಿಯನ್ನು ಭುವಿ ನಿಭಾಯಿಸಿಕೊಂಡು ಹೋಗುತ್ತಾಳೆ ಎನ್ನುವ ಧೈರ್ಯದಿಂದಲೇ ಆಸ್ತಿಯನ್ನು ಬರೆದಿದ್ದಾರೆ. ಈಗ ಭುವಿ ಒಬ್ಬ ಸೊಸೆಯಾಗಿ ಮಾತ್ರ ಇರದೇ, ಅಮ್ಮಮ್ಮನ ರೀತಿ ಇರಬೇಕಿದೆ. ಅದಕ್ಕೆ ಅಮ್ಮಮ್ಮನ ಗತ್ತಿನಿಂದ ಸಾನಿಯಾ ಮುಂದೆ ಮಾತನಾಡಿದ್ದಾಳೆ.
ಭುವಿ ಬಳಿ ಇದೆ ಸಾನಿಯಾ ವಿರುದ್ಧದ ಅಸ್ತ್ರ
ಅಮ್ಮಮ್ಮನ ಆರೋಗ್ಯ ಹದಗೆಟ್ಟಾಗ, ಆಂಬುಲೆನ್ಸ್ ನಲ್ಲಿ ಕರೆದುಕೊಂಡು ಹೋಗುತ್ತಾ ಇರುತ್ತಾರೆ. ಆಗ ಸಾನಿಯಾ ರತ್ನಮಾಲಾ ಅವರಿಗೆ ಏಕವಚನದಲ್ಲಿ ಬೈದು, ಸಾಯಿಸಲು ಪ್ರಯತ್ನ ಪಟ್ಟಿರುತ್ತಾಳೆ. ಅದರ ವಿಡಿಯೋ ಈಗ ಭುವಿ ಕೈಯಲ್ಲಿದೆ. ಅದನ್ನು ಬಳಸಿ ಸಾನಿಯಾ ಸೊಕ್ಕು ಅಡಗಿಸ್ತಾಳಾ ನೊಡಬೇಕು.
ಕನ್ನಡ ಟೀಚರ್ ಮುಂದೆ ಮಂಡಿಯೂರಿದ ಸಾನಿಯಾ
ಸಾನಿಯಾ ತಾನೇ ಎಲ್ಲ. ತನಗೆ ಬೇಕಾದದ್ದನ್ನು ಪಡೆಯೋ ಹಠಮಾರಿ. ಆದ್ರೆ ಭುವಿ ಬಳಿ ಇರುವ ವಿಡಿಯೋ ನೋಡಿ ಶೇಕ್ ಆಗಿ ಹೋಗಿದ್ದಾಳೆ. ಕನ್ನಡ ಟೀಚರ್ ಮುಂದೆ ತನ್ನ ಆಟ ನಡೆಯಲ್ಲ ಎಂದು ಗೊತ್ತಾಗಿದೆ. ಅದಕ್ಕೆ ಹರ್ಷನನ್ನು ಜೈಲಿನಿಂದ ಬಿಡಿಸಲು ಮುಂದಾಗಿದ್ದಾಳೆ.
ಇದನ್ನೂ ಓದಿ: Bhagya Lakshmi: ಲಕ್ಷ್ಮಿಗೆ ಮದುವೆ ಯೋಗ ಕೂಡಿ ಬಂತಾ, ಹೆಣ್ಣು ಕೇಳೋಕೆ ಹೋಗ್ತಾಳಾ ಕಾವೇರಿ?
ಒಂದು ಕಡೆ ಹರ್ಷ-ಭುವಿ ದೂರ ಮಾಡೋ ಪ್ಲ್ಯಾನ್ ವರ್ಕ್ ಆಗಿಲ್ಲ. ಇನ್ನೊಂದೆಡೆ ಸಾನಿಯಾಗೆ ಶಾಕ್, ಮತ್ತೊಂದೆಡೆ ಸುದರ್ಶನ್ಗೆ ಆಸ್ತಿ ಚಿಂತೆ. ಎಲ್ಲವನ್ನು ಭುವಿ ಹೇಗೆ ನಿಭಾಯಿಸುತ್ತಾಳೆ ಅನ್ನೋದೆ ಕುತೂಹಲ. ಮುಂದೆನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ