ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ (Serials) ಕನ್ನಡತಿ (Kannadathi) ಸೀರಿಯಲ್ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡ್ತಿದೆ. ಅಮ್ಮಮ್ಮ ರೀತಿ ಅಧಿಕಾರ ನಡೆಸಬೇಕು ಎಂದು ಭುವಿ ಅಂದುಕೊಂಡಿದ್ದಾಳೆ. ತನಗೆ ಅವಮಾನ ಮಾಡಿದವರಿಗೆ ಭುವಿ ಸೈಲೆಂಟ್ (Silent) ಆಗಿಯೇ ಉತ್ತರ (Answer) ನೀಡಿದ್ದಾಳೆ.
ಪ್ರಿನ್ಸಿಪಾಲ್ ಬಳಿ ಭುವಿ ಮಾತು
ಭುವಿ ಶಾಲೆಗಳ ವಿಸಿಟ್ ಗೆ ಹೋದಾಗ ಶಿಕ್ಷಕರು ಪ್ರತಿಭಟನೆ ಎದುರಾಗಿತ್ತು. ಭುವಿ ಬಳಿ ಪ್ರಿನ್ಸಿಪಾಲ್ ಅವರ ಬೇಡಿಕೆಗಳನ್ನು ಈಡೇರಿಸೋಣ ಮ್ಯಾಮ್. ಒಳ್ಳೆ ಟೀಚರ್ ಗಳು ಸಿಗೋದು ಕಷ್ಟ ಎನ್ನುತ್ತಾರೆ. ಅದಕ್ಕೆ ಭುವಿ ಅದಕ್ಕೆ ಪರೀಕ್ಷೆ ಮಾಡೋಣ. ಪರೀಕ್ಷೆ ಭಯದಿಂದ ಚುರುಕು ಆಗಬಹುದು. ಅಹರ್ತೆ ಇರುವವರೆಗೆ ಸಂಬಳ ಕೊಡೋಣ. ಹೀಗೆ ಬೆದರಿಗೆ ಭಯಪಟ್ಟು ಸಂಬಳ ಕೊಟ್ರೆ, ಕೆಟ್ಟ ಸಂಪ್ರದಾಯಕ್ಕೆ ಮಣೆ ಹಾಕಿದ ಹಾಗೆ ಆಗುತ್ತೆ ಎಂದು ಭುವಿ ಹೇಳಿದ್ದಳು.
ಭುವಿಗೆ ಅವಮಾನ ಮಾಡಿದ್ದ ಪ್ರಿನ್ಸಿಪಾಲ್
ಅಪ್ಪ-ಅಮ್ಮನಿಗೂ ಏನ್ ಬೇಕೋ ಅದು ಅವರಿಷ್ಟ. ಒಂದು ಶಿಕ್ಷಣ ಸಂಸ್ಥೆ ನಡೆಸುವವರಾಗಿ ಸರ್ಕಾರಕ್ಕೆ, ಸಮಾಜಕ್ಕೆ, ಮಕ್ಕಳಿಗೆ ಏನ್ ಕೊಡ್ತೀವಿ ಅನ್ನೋದು ಮುಖ್ಯ. ಕನ್ನಡ ಅಂತ ಅಲ್ಲ, ಯಾವುದೇ ವಿಷಯವನ್ನು ಹೇಳಿ ಕೊಡುವ ಸಮರ್ಥ ಶಿಕ್ಷಕರು ಇದ್ದಾರಾ ಎನ್ನುವುದೇ ನಮ್ಮ ಪ್ರಶ್ನೆ ಎಂದು ಭುವಿ ಹೇಳ್ತಾಳೆ. ಯಾವುದೋ ಹಳ್ಳಿಯಲ್ಲಿ ಕನ್ನಡ ಕಲಿಸೋದಕ್ಕೂ, ಒಂದು ಸಂಸ್ಥೆ ನಡೆಸೋದಕ್ಕೂ ವ್ಯತ್ಯಾಸ ಇದೆ ಮೇಡಂ ಎಂದು ಪ್ರಿನ್ಸಿಪಾಲ್ ಅವಮಾನ ಮಾಡಿರುತ್ತಾರೆ.
ಇದನ್ನೂ ಓದಿ: Hitler Kalyana: ಲೀಲಾ ಪ್ರೀತಿ ತಿರಸ್ಕರಿಸಿದ ಎಜೆ, ತಾಳಿ ಕಿತ್ತುಕೊಂಡು ಅವಮಾನ! ಹೊಸ ತಿರುವಿನಲ್ಲಿ ಹಿಟ್ಲರ್ ಕಲ್ಯಾಣ
ಎಲ್ಲದರ ಹಿಂದೆ ಸಾನಿಯಾ ಕೈವಾಡ
ಎಂಡಿ ಪೋಸ್ಟ್ ನಿಂದ ಸಾನಿಯಾಳನ್ನು ತೆಗೆದು ಹಾಕಿದ್ದರಿಂದ ಆಕೆ ತುಂಬಾ ಕೋಪ ಮಾಡಿಕೊಂಡಿದ್ದಾಳೆ.ಅದಕ್ಕೆ ಭುವಿಗೆ ಕಾಟ ಕೊಡಲು ಸಾನಿಯಾ ಪ್ಲ್ಯಾನ್ ಮಾಡಿ, ಪ್ರಿನ್ಸಿಪಾಲ್ ಜೊತೆ ಶಾಮೀಲು ಆಗಿದ್ದಳು. ಸಾನಿಯಾ ಹೇಳಿದಂತೆ ಪ್ರಿನ್ಸಿಪಾಲ್ ಭುವಿಗೆ ಅವಮಾನ ಮಾಡಿರ್ತಾರೆ. ಇದಲ್ಲೆದರ ಹಿಂದೆ ಸಾನಿಯಾ ಇದ್ದಾಳೆ.
ಮೌನವಾಗಿಯೇ ಕನ್ನಡ ಟೀಚರ್ ಪಾಠ
ಪ್ರಿನ್ಸಿಪಾಲ್ ಕನ್ನಡದ ಬಗ್ಗೆ ಹಗುರವಾಗಿ ಮಾತಾಡಿದ್ದು, ತನಗೆ ಅವಮಾನ ಮಾಡಿದ್ದನ್ನು ಸೈಲೆಂಟ್ ಆಗಿಯೇ ಸಹಿಸಿಕೊಂಡಿದ್ದಳು. ಅಲ್ಲಿ ಅದಕ್ಕೆ ಉತ್ತರ ನೀಡಿರಲಿಲ್ಲ. ಅಮ್ಮಮ್ಮನ ಪೂಜೆಗೆ ಭುವಿ ಪ್ರಿನ್ಸಿಪಾಲರನ್ನು ಮನೆಗೆ ಕರೆದಿದ್ದಾಳೆ. ಊಟ ಎಲ್ಲಾ ಆದ ಮೇಲೆ ಸೀರೆ ಉಡುಗೊರೆಯಾಗಿ ನೀಡಿದ್ದಾರೆ. ಅದರ ಜೊತೆ ಸಸ್ಪೆಂಡ್ ಲೆಟರ್ ಸಹ ಕೊಟ್ಟಿದ್ದಾರೆ.
ಸಸ್ಪೆಂಡ್ ಲೆಟರ್ ನೋಡಿ ಸಾನಿಯಾ, ಪ್ರಿನ್ಸಿಪಾಲ್ ಶಾಕ್
ಪ್ರಿನ್ಸಿಪಾಲ್ ಭುವಿ ಉಡುಗೊರೆ ನೋಡಿ ಶಾಕ್ ಆಗಿದ್ದಾರೆ. ಏನಂದು ಕೇಳಿದ್ದಕ್ಕೆ ವಜಾ ಪತ್ರ. ಇದು ಸಸ್ಪೆಂಡ್ ಲೆಟರ್ ಎಂದು ಭುವಿ ಹೇಳ್ತಾಳೆ. ಅದನ್ನು ನೋಡಿ ಸಾನಿಯಾ. ಪ್ರಿನ್ಸಿಪಾಲ್ ಶಾಕ್ ಆಗಿದ್ದಾರೆ. ಭುವಿ ಎಲ್ಲವನ್ನೂ ಸಹಿಸಿಕೊಂಡಿದ್ದಳು ಎಂದುಕೊಂಡಿದ್ರು. ಆದ್ರೆ ಭುವಿ ಎಲ್ಲದಕ್ಕೂ ತಕ್ಕ ಪಾಠ ಕಲಿಸಿದ್ದಾಳೆ.
ಇದನ್ನೂ ಓದಿ: Kantara-Saptami Gowda: ಕಾಂತಾರದಲ್ಲಿ ಸಪ್ತಮಿಗೆ ಯಾವ ಸೀನ್ ಇಷ್ಟ? 'ಲೀಲಾ' ಹೇಳಿದ 'ಕಾಂತಾರ'ದ ಕಥೆ ಇಲ್ಲಿದೆ
ಭುವಿ ಸ್ಟ್ರಾಂಗ್ ನಿರ್ಧಾರದಿಂದ ಸಾನಿಯಾ ಶಾಕ್, ಧಾರಾವಾಹಿ ಯಾವಾಗ ಮುಗಿಯುತ್ತೆ? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ