ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಸೀರಿಯಲ್ (Serial) ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು (Fans) ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ (Super Hit) ಆಗಿ ಓಡ್ತಿದೆ.
ಅಮ್ಮಮ್ಮ ರೀತಿ ಅಧಿಕಾರ ನಡೆಸಬೇಕು ಎಂದು ಭುವಿ ಅಂದುಕೊಂಡಿದ್ದಾಳೆ. ತನಗೆ ಅವಮಾನ ಮಾಡಿದವರಿಗೆ ಭುವಿ ಸೈಲೆಂಟ್ ಆಗಿಯೇ ಉತ್ತರ ನೀಡಿದ್ದಾಳೆ. ಸಾನಿಯಾ ಲಗಾಮು ಈಗ ಭುವಿ ಕೈಯಲ್ಲಿದೆ.
ಸಾನಿಯಾಗೆ ಆತಂಕತದ ಮೇಲೆ ಆತಂಕ
ಹರ್ಷ ಮನೆಯಲ್ಲಿ ಅಮ್ಮಮ್ಮನ ಕಾರ್ಯ ನಡೆಯುತ್ತಿದೆ. ಭುವಿ ಸಾನಿಯಾ ಬಳಿ ಮಾತನಾಡಬೇಕು ಎಂದುಕೊಂಡಿದ್ದಾಳೆ. ಏನು ಮಾತು ಎಂದು ಸಾನಿಯಾ ತಲೆ ಕಡೆಸಿಕೊಂಡು ಟೆನ್ಶನ್ ಆಗಿದ್ದಾಳೆ. ಭುವಿ ಯಾಕ್ ರೀತಿ ಮಾಡ್ತಾ ಇದೀಯಾ ಏನ್ ವಿಷ್ಯ ಎಂದು ಚಡಪಡಿಸುತ್ತಿದ್ದಾಳೆ.
ಸಹ್ಯಾದ್ರಿ ಬೆಟ್ಟದಿಂದ ಭುವಿ ತಳ್ಳಿದ್ದ ಆರೋಪಿ ಯಾರು?
ಭುವಿ ಮತ್ತು ಹರ್ಷನ ನಿಶ್ಚಿತಾರ್ಥದ ದಿನ ಸಾನಿಯಾ ಭುವಿಯನ್ನು ಕೊಲ್ಲುವ ಪ್ಲ್ಯಾನ್ ಮಾಡಿರುತ್ತಾಳೆ. ಅದಕ್ಕೆ ವರೂಧಿನಿ ಸಹಾಯ ಪಡೆದಿರುತ್ತಾಳೆ. ನಿಶ್ಚಿತಾರ್ಥವಾದ ಮರುದಿನ ಎಲ್ಲರನ್ನೂ ಸಹ್ಯಾದ್ರಿ ಬೆಟ್ಟಕ್ಕೆ ಕರೆದುಕೊಂಡು ಹೋಗು ಎಂದು ಹೇಳಿರುತ್ತಾಳೆ. ವರು ಹಠ ಮಾಡಿ ಭುವಿ ಮನೆಯವರನ್ನೆಲ್ಲಾ ಬೆಟ್ಟಕ್ಕೆ ಕರೆದುಕೊಂಡು ಹೋಗಿರುತ್ತಾಳೆ.
ಇದನ್ನೂ ಓದಿ: Prashanth Sambargi: ಸೋತವರು ಚೆಂದದ ಪಾಠ ಕಲಿಸುತ್ತಾರೆ, ಪ್ರಶಾಂತ್ ಸಂಬರ್ಗಿ ಹೇಳಿದ್ದು ಯಾರಿಗೆ?
ಭುವಿಯನ್ನು ಮೇಲಿಂದ ತಳ್ಳಿದ್ದ ಆರೋಪಿ
ಭುವಿ ಮತ್ತು ವರು ಬೆಟ್ಟದ ಮೇಲೆ ಹತ್ತಿದಾಗ ಇಬ್ಬರು ಮಾತನಾಡುತ್ತಾ ಇರುತ್ತಾರೆ. ವರು ನೀರು ತರಲು ಹೋಗುತ್ತಾಳೆ. ಆಗ ಆರೋಪಿ ಭುವಿಯನ್ನು ಮೇಲಿಂದ ತಳ್ಳಿ ಬಿಡುತ್ತಾಳೆ. ವರು ಬಂದು ಆಕೆಯನ್ನು ಹಿಡಿದುಕೊಂಡಿರುತ್ತಾಳೆ. ಹರ್ಷ ಬಂದು ಕಾಪಾಡಿ, ಆಸ್ಪತ್ರೆಗೆ ಸೇರಿಸಿರುತ್ತಾರೆ. ಆದ್ರೆ ಆರೋಪಿ ಯಾರ ಕಡೆವನು ಎಂದು ಗೊತ್ತಿರಲ್ಲ.
ಸಾನಿಯಾಗೆ ವಿಡಿಯೋ ತೋರಿಸಿದ ಭುವಿ
ಸಾನಿಯಾಗೆ ಭುವಿ ನನ್ನ ಅವತ್ತು ಬೆಟ್ಟದ ಮೇಲಿಂದ ತಳ್ಳಿದ್ದ ಆರೋಪಿ ನಿಮಗೆ ಗೊತ್ತಾ ಎಂದು ಕೇಳುತ್ತಾಳೆ. ಸಾನಿಯಾ ಇಲ್ಲ ಎನ್ನುತ್ತಾಳೆ. ನಿಮಗೆ ಪರಿಚರ ಇಲ್ವಾ ಎನ್ನುತ್ತಾಳೆ. ಸಾನಿಯಾ ಇಲ್ಲ ಎನ್ನುತ್ತಾಳೆ. ಆಗ ಭುವಿ ಒಂದು ವಿಡಿಯೋ ತೋರಿಸುತ್ತಾಳೆ. ಆ ಆರೋಪಿ ಸಾನಿಯಾ ಜೊತೆ ಮಾತನಾಡುತ್ತಿರುವ ವಿಡಿಯೋ.
ಸಾಕ್ಷಿ ಸಮೇತ ಪೊಲೀಸರ ಬಳಿ ಹೋಗ್ತೇನೆ
ಆ ವಿಡಿಯೋ ನೋಡಿ ಸಾನಿಯಾ ಶಾಕ್ ಆಗಿದ್ದಾಳೆ. ಇದು ಸುಚಿ ತೆಗೆದಿರುವುದು. ನಮ್ಮ ಮನೆಯನ್ನು ವಿಡಿಯೋ ಮಾಡುವಾಗು, ಇದು ಸೆರೆಗೆ ಸಿಕ್ಕಿದೆ ಎಂದು ಹೇಳಿದ್ದಾಳೆ. ಪೊಲೀಸರಿಗೆ, ಕಾನೂನಿಗೆ ಏನೇ ದೂರು ನೀಡಿದ್ರೂ ಸಾಕ್ಷಿ ಕೇಳ್ತಾರೆ. ಅದಕ್ಕೆ ಎಲ್ಲವನ್ನೂ ಕಲೆ ಹಾಕುತ್ತಿದ್ದೇನೆ. ಮನಸಾಕ್ಷಿಗೆ ಭಯಪಡದವರಿಗೆ ಇದೇ ಕೊನೆ ಉತ್ತರ ಎಂದು ಭುವಿ ಸಾನಿಯಾಗೆ ಎಚ್ಚರಿಕೆ ನೀಡಿದ್ದಾಳೆ.
ಇದನ್ನೂ ಓದಿ: Chandan Shetty: ಅಯ್ಯೋ ನಾನು ಅಪ್ಪ ಆಗ್ತಿಲ್ಲ, ಅದು ತಮಾಷೆಗೆ ಮಾಡಿದ ರೀಲ್ಸ್ ಎಂದ ಚಂದನ್ ಶೆಟ್ಟಿ!
ಭುವಿ ಸಾನಿಯಾ ವಿರುದ್ಧ ದೂರು ನೀಡ್ತಾಳಾ? ಸಾನಿಯಾ ಜೈಲು ಸೇರೋದು ಪಕ್ಕನಾ? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ