ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ (Serials) ಕನ್ನಡತಿ (Kannadathi) ಸೀರಿಯಲ್ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು (Fans) ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡ್ತಿದೆ. ಅಮ್ಮಮ್ಮ ರೀತಿ ಅಧಿಕಾರ ನಡೆಸಬೇಕು ಎಂದು ಭುವಿ ಅಂದುಕೊಂಡಿದ್ದಾಳೆ. ಅಧಿಕಾರ ಸ್ವೀಕಾರ ಮಾಡಿರೋ ಭುವಿಗೆ ಕಷ್ಟದ (Problem) ಮೇಲೆ ಕಷ್ಟ ಎದುರಾಗ್ತಿದೆ.
ಮೊದಲು ಕೊಲ್ಲಲು ಬಂದಿದ್ದರು
ಭುವಿ ಅಧಿಕಾರ ಸ್ವೀಕಾರ ಮಾಡಿದ ದಿನವೇ ಭುವಿ ಮೇಲೆ ಅಟ್ಯಾಕ್ ಆಗಿತ್ತು. ಆಗ ಹರ್ಷ ಕಾಪಾಡಿದ್ದ. ನಂತರ ಭುವಿಯ ಅವರನ್ನು ಹುಡುಕಿಕೊಂಡು ಹೋಗಿದ್ದಳು. ನನ್ನ ಕೊಲ್ಲಲು ಹೇಳಿದ್ದು ಯಾರು ಅಂತ. ಆಗ ಮತ್ತೊಮ್ಮೆ ಅಟ್ಯಾಕ್ ಆಗಿತ್ತು. ಆಗಲೂ ಹರ್ಷ ಮತ್ತು ನಿತೇಶ್ ಎಂಬ ಹುಡುಗ ಕಾಪಾಡಿದ್ದರು. ಅಟ್ಯಾಕ್ ಮೇಲೆ ಅಟ್ಯಾಕ್ ಆಗ್ತಾ ಇದೆ.
ಹರ್ಷನಿಗೆ ಬೇಸರ
ಕಚೇರಿ ವಿಚಾರವಾಗಿ ಹರ್ಷ ಮತ್ತು ಭುವಿ ಮಧ್ಯೆ ಸಣ್ಣ ಮನಸ್ತಾಪ ಉಂಟಾಗಿರುತ್ತೆ. ಇಬ್ಬರು ಬೇಸರ ಮಾಡಿಕೊಂಡಿರುತ್ತಾರೆ. ಅಲ್ಲದೇ ಭುವಿ ತನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಲ್ಲ. ಜ್ವರ ಬಂದರೂ ಕೆಲಸ ಮಾಡ್ತಾಳೆ. ನನ್ನ ಮಾತು ಕೇಳಲ್ಲ. ಸೆಕ್ಯೂರಿಟಿ ಬಿಟ್ಟು ಓಡಾಡುತ್ತಾಳೆ ಎಂದು ಹರ್ಷನಿಗೆ ಬೇಸರವಾಗಿತ್ತು.
ಇದನ್ನೂ ಓದಿ: Daali Dhananjay: ಡಾಲಿ ನಟನೆಗೆ ದಶಕದ ಸಂಭ್ರಮ, ನಟ ರಾಕ್ಷಸನಿಗೆ ಸ್ಪೆಷಲ್ ಟ್ರಿಬ್ಯೂಟ್!
ಕೆಲಸ ಹಂಚಿಕೊಂಡ ಹರ್ಷ-ಭುವಿ
ಭುವಿ ಮತ್ತು ಹರ್ಷ ಇಬ್ಬರು ಅಮ್ಮಮ್ಮನನ್ನು ನೆನೆಸಿಕೊಂಡಿದ್ದಾರೆ. ಈ ಹಿಂದೆ ಅಮ್ಮಮ್ಮ ಹೇಳಿದ ಮಾತುಗಳು ನೆನಪಿಗೆ ಬರುತ್ತೆ. ಹರ್ಷ ಭುವಿಯನ್ನು ನೀನು ಕಾಪಾಡಬೇಕು. ಅವಳಿಗೆ ಬೆಂಬಲವಾಗಿರ ಬೇಕು ಎಂದು ಹರ್ಷನಿಗೆ ಹೇಳಿರುತ್ತಾಳೆ. ನನ್ನ ಮಗ ಕೋಪ ಮಾಡಿಕೊಳ್ಳುತ್ತಾನೆ. ನೀನೇ ತಾಳ್ಮೆಯಿಂದ ಸಹಿಸಿಕೋ ಎಂದು ಅಮ್ಮಮ್ಮ ಭುವಿಗೆ ಹೇಳಿರುತ್ತಾಳೆ.
ಅದಕ್ಕೆ ಇಬ್ಬರು ಅದರ ಬಗ್ಗೆ ಯೋಚನೆ ಮಾಡಿ, ಕೆಲಸವನ್ನು ಹಂಚಿಕೊಂಡಿದ್ದಾರೆ. ಶಾಲೆ ಸಂಬಂಧಿಸಿದ್ದು ನಾನು ನೋಡಿಕೊಳ್ತೇನೆ. ಕಾಫಿ ಶಾಪ್ ಗೆ ಸಂಬಂಧಿಸಿದ ಕೆಲಸ ನೀವು ನೋಡಿಕೊಳ್ಳಿ ಎಂದು ಭುವಿ ಹರ್ಷನಿಗೆ ಹೇಳ್ತಾಳೆ.
ಶಾಲೆ ಎದುರು ಶಿಕ್ಷಕರ ಪ್ರತಿಭಟನೆ
ಶಾಲೆ ವಿಸಿಟ್ಗೆಂದು ಭುವಿ ಬಂದಿದ್ದಾಳೆ. ಅದೇ ಸಮಯಕ್ಕೆ ಶಿಕ್ಷಕರೆಲ್ಲಾ ಪ್ರತಿಭಟನೆ ಮಾಡ್ತಾ ಇದ್ದಾರೆ. ನಮ್ಮ ಸಂಬಳ ಹೆಚ್ಚು ಮಾಡಿ. ಇಲ್ಲ ನಾವು ಕೆಲಸ ಮಾಡಲ್ಲ ಎನ್ನುತ್ತಿದ್ದಾರೆ. ಅದಕ್ಕೆ ಭುವಿಗೆ ಮತ್ತೊಂದು ಕಷ್ಟ ಎದುರಾಗಿದೆ. ಇದನ್ನೆಲ್ಲಾ ಯಾರೂ ಹೇಳಿ ಮಾಡಿಸುತ್ತಿದ್ದಾರೆ ಎಂಬ ಅನುಮಾನಗಳು ಶುರುವಾಗಿವೆ.
ಇದನ್ನೂ ಓದಿ: Hithesh Kumar: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಿತೇಶ್ ಕುಮಾರ್
ಸಾನಿಯಾ ಕೈವಾಡ ಇದೆಯಾ?
ಭುವಿ ಅಧಿಕಾರ ವಹಿಸಿಕೊಂಡಿರುವುದ ಸಾನಿಯಾಗೆ ಇಷ್ಟ ಇಲ್ಲ. ಅವಳೇ ಏನಾದ್ರೂ ರೌಡಿಗಳನ್ನು ಬಿಟ್ಟು ಅಟ್ಯಾಕ್ ಮಾಡಿಸಿದ್ಲಾ? ಶಿಕ್ಷಕರ ಪ್ರತಿಭಟನೆ ಹಿಂದೆಯೂ ಆಕೆಯ ಕೈವಾಡ ಇದೆಯಾ? ಅಧಿಕಾರ ಇಲ್ಲ ಅಂದ್ರೆ ಸಾನಿಯಾ ಕೆಟ್ಟವಳಾಗ್ತಾಳೆ. ಏನ್ ಬೇಕಾದ್ರೂ ಮಾಡಬಹುದು.
ಈ ಹೊಸ ಸಮಸ್ಯೆಯನ್ನು ಭುವಿ ಹೇಗೆ ನಿಭಾಯಿಸುತ್ತಾಳೆ. ಇದರ ಹಿಂದೆ ಇರುವವರು ಯಾರು? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ