ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ (Serials) ಕನ್ನಡತಿ (Kannadathi) ಸೀರಿಯಲ್ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ (Super Hit) ಆಗಿ ಓಡ್ತಿದೆ. ಅಮ್ಮಮ್ಮ ರೀತಿ ಅಧಿಕಾರ ನಡೆಸಬೇಕು ಎಂದು ಭುವಿ ಅಂದುಕೊಂಡಿದ್ದಾಳೆ. ಅಧಿಕಾರ ಸ್ವೀಕಾರ ಮಾಡಿರೋ ಭುವಿಗೆ ಕಷ್ಟದ ಮೇಲೆ ಕಷ್ಟ ಎದುರಾಗ್ತಿದೆ. ಅಲ್ಲದೇ ಶಾಲೆಯಲ್ಲಿ (School) ಅವಮಾನ ಆಗಿದೆ.
ಎಕ್ಸಾಂ ಮೂಲಕ ಸಂಬಳ ಹೆಚ್ಚಳ
ಭುವಿ ಶಾಲೆಗಳ ವಿಸಿಟ್ ಗೆ ಹೋದಾಗ ಶಿಕ್ಷಕರು ಪ್ರತಿಭಟನೆ ಮಾಡ್ತಾ ಇದ್ದರು. ಅದಕ್ಕೆ ಭುವಿ ನಿಮ್ಮ ಸಂಬಳವನ್ನು ಹೆಚ್ಚು ಮಾಡ್ತೇನೆ. ಅದಕ್ಕೆ ಬಂದಿದ್ದೇನೆ. ಆದ್ರೆ ನೀವೆಲ್ಲಾ ಒಂದು ಪರೀಕ್ಷೆಯನ್ನು ಪಾಸ್ ಮಾಡಬೇಕು. ಇಲ್ಲಿಂದ ಒಂದು ತಿಂಗಳಿಗೆ ಪರೀಕ್ಷೆ. ಆ ಪರೀಕ್ಷೆ ಪಾಸ್ ಮಾಡಿದವರಿಗೆ ಖಂಡಿತವಾಗಿಯೂ ಸಂಬಳ ಹೆಚ್ಚು ಮಾಡ್ತೀನಿ ಎಂದಿದ್ದಾರೆ.
ಪ್ರಿನ್ಸಿಪಾಲ್ ಬಳಿ ಭುವಿ ಮಾತು
ಭುವಿ ಬಳಿ ಪ್ರಿನ್ಸಿಪಾಲ್ ಅವರ ಬೇಡಿಕೆಗಳನ್ನು ಈಡೇರಿಸೋಣ ಮ್ಯಾಮ್. ಒಳ್ಳೆ ಟೀಚರ್ ಗಳು ಸಿಗೋದು ಕಷ್ಟ ಎನ್ನುತ್ತಾರೆ. ಅದಕ್ಕೆ ಭುವಿ ಅದಕ್ಕೆ ಪರೀಕ್ಷೆ ಮಾಡೋಣ. ಪರೀಕ್ಷೆ ಭಯದಿಂದ ಚುರುಕು ಆಗಬಹುದು. ಅಹರ್ತೆ ಇರುವವರೆಗೆ ಸಂಬಳ ಕೊಡೋಣ. ಹೀಗೆ ಬೆದರಿಗೆ ಭಯಪಟ್ಟು ಸಂಬಳ ಕೊಟ್ರೆ, ಕೆಟ್ಟ ಸಂಪ್ರದಾಯಕ್ಕೆ ಮಣೆ ಹಾಕಿದ ಹಾಗೆ ಆಗುತ್ತೆ ಎಂದು ಭುವಿ ಹೇಳ್ತಾಳೆ.
ಇದನ್ನೂ ಓದಿ: Geetha Bhat: ಯಕ್ಷಗಾನದಲ್ಲಿ ವಿಷ್ಣು ಅವತಾರ, ಗೀತಾ ಭಟ್ ನಟನೆ ಅದ್ಭುತ!
ಕನ್ನಡದ ಬಗ್ಗೆ ಕೇವಲವದ ಮಾತು
ನೀವು ಕನ್ನಡ ಟೀಚರ್ ಆಗಿದ್ರಿ ಅಂತ ಗೊತ್ತು. ಆದ್ರೆ ಇಲ್ಲಿರುವ ಮಕ್ಕಳ ಪೋಷಕರಿಗೆ ಕನ್ನಡ ಬೇಕಾಗಿಲ್ಲ. ಪಂಪ, ರನ್ನ ಓದಿ ತಮ್ಮ ಮಕ್ಕಳು ಕುವೆಂಪು, ಕಾಳಿದಾಸ ಆಗಬೇಕು ಅಂತ ಯಾವ ಅಪ್ಪ-ಅಮ್ಮನಿಗೂ ಇಲ್ಲ. ಮಕ್ಕಳು ಒಳ್ಳೆ ಸ್ಕೋರ್ ತೆಗೆದುಕೊಳ್ಳಬೇಕು. ಒಳ್ಳೆ ಜಾಬ್ ತೆಗೆದುಕೊಳ್ಳಬೇಕು. ವಿದೇಶಕ್ಕೆ ಹೋಗಬೇಕು ಇಷ್ಟೇ ಅಪ್ಪ-ಅಮ್ಮನಿಗೆ ಬೇಕೆರೋದು ಎಂದು ಪ್ರಿನ್ಸಿಪಾಲ್ ಹೇಳ್ತಾರೆ.
ಭುವಿಗೆ ಅವಮಾನ
ಅಪ್ಪ-ಅಮ್ಮನಿಗೂ ಏನ್ ಬೇಕೋ ಅದು ಅವರಿಷ್ಟ. ಒಂದು ಶಿಕ್ಷಣ ಸಂಸ್ಥೆ ನಡೆಸುವವರಾಗಿ ಸರ್ಕಾರಕ್ಕೆ, ಸಮಾಜಕ್ಕೆ, ಮಕ್ಕಳಿಗೆ ಏನ್ ಕೊಡ್ತೀವಿ ಅನ್ನೋದು ಮುಖ್ಯ. ಕನ್ನಡ ಅಂತ ಅಲ್ಲ, ಯಾವುದೇ ವಿಷಯವನ್ನು ಹೇಳಿ ಕೊಡುವ ಸಮರ್ಥ ಶಿಕ್ಷಕರು ಇದ್ದಾರಾ ಎನ್ನುವುದೇ ನಮ್ಮ ಪ್ರಶ್ನೆ ಎಂದು ಭುವಿ ಹೇಳ್ತಾಳೆ. ಯಾವುದೋ ಹಳ್ಳಿಯಲ್ಲಿ ಕನ್ನಡ ಕಲಿಸೋದಕ್ಕೂ, ಒಂದು ಸಂಸ್ಥೆ ನಡೆಸೋದಕ್ಕೂ ವ್ಯತ್ಯಾಸ ಇದೆ ಮೇಡಂ ಎಂದು ಪ್ರಿನ್ಸಿಪಾಲ್ ಅವಮಾನ ಮಾಡ್ತಾರೆ.
ನನ್ನ ಹೆಂಡ್ತಿ ಸುದ್ದಿಗೆ ಬಂದ್ರೆ ಸುಮ್ನೆ ಇರಲ್ಲ
ಅಲ್ಲದೇ ಶಾಲೆ ಬಳಿ ಗಲಾಟೆ ಮಾಡಲು ಪ್ರಿನ್ಸಿಪಾಲ್ ಹುಡುಗರನ್ನು ಕರೆಸಿರುತ್ತಾರೆ. ಅವರನ್ನು ಹರ್ಷ ತಡೆಯುತ್ತಾನೆ. ಹರ್ಷ ಭುವಿ ಗಂಡ ಎಂದು ಗೊತ್ತಾಗೆ ಅವನನ್ನೇ ಹೊಡೆಯಲು ಹೋಗ್ತಾರೆ.
ಆಗ ಹರ್ಷ ಅವರಿಗೆ ಬುದ್ಧಿ ಹೇಳ್ತಾನೆ. ಆ ಹುಡುಗರು ಸುಮ್ನೆ ಹೋಗಿ ಸರ್ ನಾವು ಕೆಟ್ಟವರು ಎನ್ನುತ್ತಾರೆ. ಅದಕ್ಕೆ ಭುವಿ ಎಂಡಿ ಮಾತ್ರ ಅಲ್ಲ. ನನ್ನ ಹೆಂಡ್ತಿ. ಅವಳ ಸುದ್ದಿಗೆ ಬಂದ್ರೆ ಯಾರನ್ನೂ ಸುಮ್ನೆ ಬಿಡಲ್ಲ ಎಂದು ಹರ್ಷ ವಾರ್ನ್ ಮಾಡಿ ಕಳಿಸುತ್ತಾನೆ.
ಇದನ್ನೂ ಓದಿ: Kantara: 'ಓ' ಎನ್ನುವ ದೈವದ ಕೂಗು ಬಂದಿದ್ದು ಎಲ್ಲಿಂದ? 'ಕಾಂತಾರ' ಸೀಕ್ರೆಟ್ ಹೇಳಿದ ಅಜನೀಶ್
ಭುವಿ ವಿರುದ್ಧ ಸಂಚು ಮಾಡುತ್ತಿರುವವರು ಯಾರು? ಸಾನಿಯಾ ಏನಾದ್ರೂ ಪ್ಲ್ಯಾನ್ ಮಾಡಿದ್ದಾಳಾ? ವರು ಏನಾದ್ರೂ ಸ್ಕೆಚ್ ಹಾಕಿದ್ದಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ