ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಸೀರಿಯಲ್ (Serial) ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡ್ತಿದೆ. ಫೈಲ್ (File) ಕದ್ದು ಭುವಿ ಕೈಗೆ ಸಾನಿಯಾ ಸಿಕ್ಕಿ ಹಾಕಿಕೊಂಡಿದ್ದಾಳೆ. ಇನ್ನೊಂದೆಡೆ ವರು ಲಾಯರ್ ನ (Lawyer) ಮದುವೆ ಆಗ್ತೀನಿ ಅಂತಿದ್ದಾಳೆ.
ಮುಂದುವರಿದ ಸಾನಿಯಾ ಕಿತಾಪತಿ
ಸಾನಿಯಾಗೆ ಭುವಿ ಎಷ್ಟೋ ಬಾರಿ ಬುದ್ಧಿ ಹೇಳಿದ್ದಾಳೆ. ಬದಲಾಗಿ ಎಂದು ತಿಳಿಸಿದ್ದಾಳೆ. ಆದ್ರೂ ಸಾನಿಯಾ ಬದಲಾಗುವ ಮಾತೇ ಇಲ್ಲ. ಭುವಿ ಆದಿ ಕೈಗೆ ಒಂದು ಫೈಲ್ ಕೊಟ್ಟಿರುತ್ತಾಳೆ. ಅದನ್ನು ಆದಿ ರೂಮ್ ನಲ್ಲಿ ಇಟ್ಟು ಆಚೆ ಹೋಗಿರುತ್ತಾನೆ. ಆ ಫೈಲ್ ಕದ್ದು ಸಾನಿಯಾ ಹರಿದು ಹಾಕಿರುತ್ತಾಳೆ. ತನ್ನ ಗಂಡನೇ ಬೈಸಿಕೊಳ್ತಾನೆ ಅಂದ್ರೂ ಆಕೆಗೆ ಚಿಂತೆ ಇಲ್ಲ. ಭುವಿ ಕೆಲಸ ಹಾಳಾಗಬೇಕು ಅಷ್ಟೆ.
ಸಾನಿಯಾ ಮೇಲೆ ರೇಗಾಡಿದ ಆದಿ
ಭುವಿಗೆ ಆ ಫೈಲ್ ಕೊಡೋಣ ಅಂತ ಆದಿ ತೆಗೆದುಕೊಂಡು ಹೋಗಿರುತ್ತಾನೆ. ಭುವಿ ಅದರೊಳಗೆ ನೋಡಿದ್ರೆ ಮುಖ್ಯವಾದ ಹಾಳೆಯೇ ಇರುವುದಿಲ್ಲ. ಅದಕ್ಕೆ ಆದಿಗೆ ಸಾನಿಯಾ ಮೇಲೆ ಅನುಮಾನ ಬಂದು ಆಕೆ ಮೇಲೆ ರೇಗಾಡಿದ್ದಾನೆ. ನೀನೇ ತಾನೇ ಇದೆಲ್ಲಾ ಮಾಡಿರೋದು ಎಂದು. ಅದಕ್ಕೆ ಸಾನಿಯಾ ನಾನಲ್ಲ ಎನ್ನುತ್ತಿದ್ದಾಳೆ.
ಇದನ್ನೂ ಓದಿ: Hitler Kalyana: ಮನೆ ಬಿಟ್ಟು ಬಂದ ಲೀಲಾ, ಮಗಳಿಗಾಗಿ ಹುಡುಕಾಟ ನಡೆಸುತ್ತಿರುವ ಚಂದ್ರಶೇಖರ್!
ಫೈಲ್ ಗೆ ಹಂಟಿದ್ದ ನೇಲ್ ಪಾಲಿಶ್
ಸಾನಿಯಾ ಎಷ್ಟೇ ನಾನು ಕದ್ದಿಲ್ಲ, ನಾನು ಏನೂ ಮಾಡಿಯೇ ಇಲ್ಲ ಅಂದ್ರೂ ಸಾಕ್ಷಿ ಸಿಕ್ಕಿದೆ. ಭುವಿ ಅದನ್ನು ಹೇಳಿ ಸಾನಿಯಾಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ. ಈ ಫೈಲ್ ಗೆ ನಿಮ್ಮ ಉಗುರಿನ ಬಣ್ಣ ತಗುಲಿದೆ. ನೀವು ಹಾಕಿರೋದು ಸಹ ಅದೇ ಬಣ್ಣ ತಾನೇ ಎಂದು ಹೇಳ್ತಾಳೆ. ಅದಕ್ಕೆ ಸಾನಿಯಾ ಕಕ್ಕಾಬಿಕ್ಕಿಯಾಗಿದ್ದಾಳೆ. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದ್ರೆ ಬೇರೆಯವರಿಗೆ ಗೊತ್ತಾಗಲ್ವಾ ಅನ್ನೋ ರೀತಿ ಆಗಿದೆ ಸಾನಿಯಾ ಕಳ್ಳಾಟ.
ಲಾಯರ್ ನ ಮದುವೆ ಆಗ್ತೀನಿ ಎಂದ ವರು
ವರು, ಭುವಿ ಮತ್ತು ಹರ್ಷನಿಗೆ ಡಿವೋರ್ಸ್ ಕೊಡಿಸಲು ಹೆಸರಾಂತ ಲಾಯರ್ ಹರ್ಷಿತ್ ಜೊತೆ ಓಡಾಡುತ್ತಿದ್ದಾಳೆ. ಅದನ್ನು ಹರ್ಷ ನೋಡಿದ್ದ. ಏನ್ ವರು ಇವರ ಜೊತೆ ಎಂದು ಕೇಳಿದ್ದಕ್ಕೆ. ನಾನು ಇವರನ್ನೇ ಮದುವೆ ಆಗ್ತಾ ಇರೋದು. ಮದುವೆ ಆಗ್ತೀನಿ ಅಂತ ಭುವಿಗೆ ಮಾತು ಕೊಟ್ಟಿದ್ದೇ ಅದಕ್ಕೆ ಈ ಲಾಯರ್ ನ ಮದುವೆ ಆಗೋಣ ಅಂತಿದೀನಿ ಎಂದು ಹೇಳಿದ್ದಾಳೆ.
ಹರ್ಷನ ಕಣ್ಣಲ್ಲಿ ಒಳ್ಳೆಯವಳಾಗಲು ವರು ನಾಟಕ
ವರು ಲಾಯರ್ ಬಳಿ ಡಿವೋರ್ಸ್ ಕೊಡಿಸಲು ಹೋಗಿದ್ದು. ಆದ್ರೆ ಹರ್ಷ ನೋಡಿ ಬಿಟ್ಟ ಅನ್ನೋ ಕಾರಣಕ್ಕೆ ಅವರನ್ನು ಮದುವೆ ಆಗ್ತೀನಿ ಎಂದು ಸುಳ್ಳು ಹೇಳಿದ್ದಾಳೆ. ಹರ್ಷ ನಮಗೂ ಭೇಟಿ ಮಾಡಿಸು ಎನ್ನುತ್ತಾನೆ. ಆಗ ವರು ಆತಂಕಕ್ಕೆ ಒಳಾಗಾಗ್ತಾಳೆ. ಆಗ ಭುವಿ ಬೇಡ ಬಿಡು, ಮುಂದಿನ ಬಾರಿ ಪರಿಚಯ ಮಾಡಿಸು ಎಂದು ಹೇಳಿ ಹೋಗ್ತಾರೆ.
ಸಾನಿಯಾ ಆಟ ಭುವಿ ಮುಂದೆ ನಡೆಯಲ್ವಾ? ವರು ನಾಟಕ ಮಾಡಿದಂತೆ ಲಾಯರ್ ನ ಮದುವೆ ಆಗೋ ಪರಿಸ್ಥಿತಿ ಬರುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ