ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ (Serials) ಕನ್ನಡತಿ (Kannadathi) ಧಾರಾವಾಹಿ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ವರು ಪಾತ್ರ ಮಾಡುತ್ತಿರುವ ಸಾರಾ ಅಣ್ಣಯ್ಯ (Sara Annaiah) ಅವರು ಗೊಂಬೆ ಹಾಡಿಗೆ ಡ್ಯಾನ್ಸ್ (Dance) ಮಾಡಿದ್ದಾರೆ. ಲಡಾಖೀ ಗೊಂಬೆ ಎಂದು ಅವರೇ ಕರೆದುಕೊಂಡಿದ್ದಾರೆ.
ದೇಶ ಸುತ್ತೋದು ಇಷ್ಟ
ಕನ್ನಡತಿ ಸೀರಿಯಲ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುವ ಸಾರಾ ಅಣ್ಣಯ್ಯ, ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಗೆ ಬೇಕಾದ್ದನ್ನು ಪಡೆದೇ ತೀರುತ್ತಾರೆ. ಸಾರಾ ಅಣ್ಣಯ್ಯ ಅವರು ಧಾರಾವಾಹಿ ಕೆಲಸದಿಂದ ಬ್ರೇಕ್ ತೆಗೆದುಕೊಂಡು ಆಗಾಗ ಸುತ್ತಾಟ ನಡೆಸುತ್ತಾರೆ. ದೇಶ ಸುತ್ತುತ್ತಾರೆ.
ತಮಗೆ ಇಷ್ಟವಾದ ಸ್ಥಳಗಳನ್ನು ನೋಡಲು ಹೋಗುತ್ತಾರೆ. ಸಾರಾ ಅಣ್ಣಯ್ಯ ಅವರು ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಮ್ಮ ಅಭಿಮಾನಿಗಳಿಗೋಸ್ಕರ ಅವರು ಹಲವು ಫೋಟೋ ಹಂಚಿಕೊಳ್ಳುತ್ತಾರೆ.
ಲಡಾಖೀ ಗೊಂಬೆ ಸಾರಾ
ಸಾರಾ ಅಣ್ಣಯ್ಯ ಆಗಾಗ ರೀಲ್ಸ್ ಮಾಡುತ್ತಿರುತ್ತಾರೆ. ಆ ರೀಲ್ಸ್ ಗಳನ್ನು ನೋಡಿ ಅಭಿಮಾನಿಗಳು ಇಷ್ಟ ಪಡ್ತಾರೆ. ಈ ಬಾರಿ ಗೊಂಬೆ ಗೊಂಬೆ ಹಾಡಿಗೆ ರೀಲ್ಸ್ ಮಾಡಿದ್ದಾರೆ. ಅದು ಸೂಪರ್ ಆಗಿ ಕಾಣ್ತಾ ಇದೆ. ಅವರೇ ಆ ಪೋಸ್ಟ್ ಗೆ ಲಡಾಖೀ ಗೊಂಬೆ ಎಂದು ಕರೆದುಕೊಂಡಿದ್ದಾರೆ. ಗೊಂಬೆ ರೀತಿಯೇ ಸಾರಾ ಕಾಣ್ತಾ ಇದ್ದಾರೆ.
View this post on Instagram
ಕಳೆದ ಬಾರಿ ಸೊಂಟದ ವಿಷ್ಯ ಡ್ಯಾನ್ಸ್
ಕಳೆದ ಬಾರಿ ಸಾರಾ ಅವರು ಸೊಂಟದ ವಿಷ್ಯ ಬೇಡವೋ ಶಿಷ್ಯ ಎಂದು ಡ್ಯಾನ್ಸ್ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಸುದೀಪ್ ಅವರ ಚೆಂದು ಚಿತ್ರದ ಹಾಡು ರೀಲ್ಸ್ ನಲ್ಲಿ ಎಲ್ಲಾ ಕಡೆ ಸದ್ದು ಮಾಡ್ತಿದೆ. ಆ ಹಾಡಿನ ರೀಲ್ಸ್ಗೆ ಸಾರಾ ಸೊಂಟ ಬಳುಕಿಸಿದ್ದರು. ಬ್ಲ್ಯಾಕ್ ಸೀರೆಯಲ್ಲಿ ಡ್ಯಾನ್ಸ್ ಸೂಪರ್ ಎಂದು ಹಲವು ಜನ ಕಾಮೆಂಟ್ ಹಾಕಿದ್ದರು.
ಇದನ್ನೂ ಓದಿ: Olavina Nildana: ಸಿದ್ಧಾಂತ್ ಮನೆಯಲ್ಲಿ ಅಣ್ಣ-ತಮ್ಮನ ನಡುವೆ ಗಲಾಟೆ! ಎಲ್ಲಾ ಶುರುವಾಗಿದ್ದು ತಾರಿಣಿಯಿಂದನಾ?
ಭುವಿ-ಹರ್ಷನಿಗೆ ಡಿವೋರ್ಸ್ ಕೊಡಿಸಲು ಪ್ಲ್ಯಾನ್
ಕನ್ನಡತಿ ಧಾರಾವಾಹಿಯಲ್ಲಿ ವರು ಭುವಿ-ಹರ್ಷ ಮದುವೆ ರಿಜಿಸ್ಟ್ರೇಶನ್ ನೆಪದಲ್ಲಿ, ಭುವಿ ಬಳಿ ಡಿವೋರ್ಸ್ ಪೇಪರ್ಗೆ ಸಹಿ ಹಾಕಿಸಿಕೊಂಡಿದ್ದಾಳೆ. ಇಬ್ಬರನ್ನು ಹೇಗಾದ್ರೂ ದೂರ ಮಾಡಬೇಕು ಎಂದು ಪ್ಲ್ಯಾನ್ ಮಾಡಿದ್ದಾಳೆ. ಆದ್ರೆ ವಿಷಯ ಹರ್ಷನಿಗೆ ಗೊತ್ತಾಗಿದೆ. ಅದಕ್ಕೆ ವರುಗೆ ಬುದ್ಧಿ ಕಲಿಸಲು ಮುಂದಾಗಿದ್ದಾನೆ.
ಧಾರಾವಾಹಿಯಲ್ಲಿ ಭುವಿ ಮತ್ತು ವರೂಧಿನಿ ಬೆಸ್ಟ್ ಫ್ರೆಂಡ್. ಯಾವಾಗಲೂ ಒಬ್ಬರಿಗೊಬ್ಬರು ಕೇರ್ ಮಾಡಿಕೊಳ್ತಾರೆ. ವರೂಧಿನಿ ಬಗ್ಗೆ ಯಾವಾಗಲೂ ಭುವಿ ಚಿಂತೆ ಮಾಡ್ತಾ ಇರ್ತಾಳೆ.
ಇದನ್ನೂ ಓದಿ: Punyavathi: ಪದ್ಮಿನಿ ಅಮ್ಮಾಜಿಗೆ ಇಷ್ಟ ಆದ್ಲಾ? ನಂದನ್ ಕಾರಿಗೆ ಕಲ್ಲೇಟಿನ ಸ್ವಾಗತ
ಆದ್ರೆ ವರು ಈಗ ಹರ್ಷ-ಭುವಿಯನ್ನೇ ದೂರ ಮಾಡುವ ಪ್ಲ್ಯಾನ್ ಮಾಡಿದ್ದಾಳೆ. ಧಾರಾವಾಹಿಯಲ್ಲಿ ಮೊದಲಿನಿಂದಲೂ ವರುಗೆ ಹರ್ಷ ಎಂದ್ರೆ ಪ್ರಾಣ. ಹೀರೋ ಹೀರೋ ಎಂದು ಹಿಂದೆ ಬಿದ್ದಿದ್ಲು. ಆದ್ರೆ ಹರ್ಷ ವರು ಜೀವದ ಗೆಳತಿ ಭುವಿಯನ್ನು ಮದುವೆ ಆಗ್ತಾನೆ. ಅದಕ್ಕೆ ಇಬ್ಬರನ್ನೂ ದೂರ ಮಾಡಲು ಪ್ಲ್ಯಾನ್ ಮಾಡಿದ್ದಾಳೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ