• Home
 • »
 • News
 • »
 • entertainment
 • »
 • Kannadathi: 5 ವರ್ಷದವರೆಗೆ ಭುವಿ ಆಸ್ತಿ ವರ್ಗಾಯಿಸುವಂತಿಲ್ಲ! ರತ್ನಮಾಲಾ ಪ್ರೀತಿಯ ಹುಡುಗಿಗೆ ಇದೆಂಥಾ ಫಜೀತಿ?

Kannadathi: 5 ವರ್ಷದವರೆಗೆ ಭುವಿ ಆಸ್ತಿ ವರ್ಗಾಯಿಸುವಂತಿಲ್ಲ! ರತ್ನಮಾಲಾ ಪ್ರೀತಿಯ ಹುಡುಗಿಗೆ ಇದೆಂಥಾ ಫಜೀತಿ?

ಭುವಿ ಆಸ್ತಿಯನ್ನು ವರ್ಗಾಯಿಸುವಂತಿಲ್ಲ

ಭುವಿ ಆಸ್ತಿಯನ್ನು ವರ್ಗಾಯಿಸುವಂತಿಲ್ಲ

ಧಾರಾವಾಹಿಯಲ್ಲಿ ಅಮ್ಮಮ್ಮನ ಅಧ್ಯಾಯ ಮುಕ್ತಾಯವಾಗಿದೆ. ಅಮ್ಮಮ್ಮ ತನ್ನ ಹೆಸರಿಗೆ ವಿಲ್ ಬರೆದಿರುವುದು ಭುವಿಗೆ ಗೊತ್ತಾಗಿದೆ. ಅದನ್ನು ವರ್ಗಾಯಿಸಲು ಮುಂದಾಗಿದ್ದಾಳೆ. ಆದ್ರೆ ಅದು ಆಗುತ್ತಿಲ್ಲ! ಮುಂದೇನಾಗುತ್ತೆ?

 • News18 Kannada
 • 3-MIN READ
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ ಧಾರಾವಾಹಿ (Kannadathi Serial) ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ಧಾರಾವಾಹಿಯಲ್ಲಿ ಅಮ್ಮಮ್ಮನ ಅಧ್ಯಾಯ ಮುಕ್ತಾಯವಾಗಿದೆ. ಅಮ್ಮಮ್ಮ ತನ್ನ ಹೆಸರಿಗೆ ವಿಲ್ ಬರೆದಿರುವುದು ಭುವಿಗೆ ಗೊತ್ತಾಗಿದೆ. ಅದನ್ನು ವರ್ಗಾಯಿಸಲು (Transfer) ಮುಂದಾಗಿದ್ದಾಳೆ. ಆದ್ರೆ ಅದು ಆಗುತ್ತಿಲ್ಲ.


  ಹರ್ಷನಿಗೂ ಗೊತ್ತು ಆಸ್ತಿ ಸತ್ಯ
  ಧಾರಾವಾಹಿಯಲ್ಲಿ ರತ್ನಮಾಲಾ ಅಧ್ಯಾಯ ಮುಕ್ತಾಯವಾಗಿದೆ. ಅಮ್ಮಮ್ಮ ತನ್ನೆಲ್ಲಾ ಆಸ್ತಿಯನ್ನು ಭುವಿ ಹೆಸರಿಗೆ ಮಾಡಿ ಹೋಗಿದ್ದಾರೆ. ಈ ಸತ್ಯ ಭುವಿಗೂ ಗೊತ್ತಾಗಿದೆ. ಹರ್ಷನಿಗೂ ಆಸ್ತಿ ಬಗ್ಗೆ ಗೊತ್ತಾಗಿದೆ. ಅದನ್ನು ಭುವಿ ಕೇಳಿದ್ದಾಳೆ. ನಿಮಗೆ ಮೊದಲೇ ವಿಲ್ ಬಗ್ಗೆ ಗೊತ್ತಿತ್ತಾ ಎಂದು. ಅದಕ್ಕೆ ಹರ್ಷ ಹೌದು ಎಂದಿದ್ದಾನೆ. ಅದನ್ನು ಕೇಳಿ ಭುವಿ ಶಾಕ್ ಆಗಿದ್ದಾಳೆ. ಹರ್ಷ ಯಾಕ್ ಈ ವಿಚಾರವನ್ನು ನನ್ನ ಬಳಿ ಹೇಳಿಕೊಂಡಿಲ್ಲ ಎಂದು ಬೇಸರವಾಗಿದ್ದಾಳೆ.


  ಲಾಯರ್ ಭೇಟಿಯಾಗಲು ಬಂದ ಹರ್ಷ
  ಸಾನಿಯಾಳನ್ನು ಎಂಡಿ ಸ್ಥಾನದಿಂದ ತೆಗೆದಿದ್ದಕ್ಕೆ. ಆಕೆ ಪೊಲೀಸರಿಗೆ ದೂರು ನೀಡುತ್ತೇನೆ ಎಂದಿದ್ದಾಳೆ. ಅದಕ್ಕೆ ಹರ್ಷ ಲಾಯರ್ ನನ್ನು ಭೇಟಿಯಾಗಲು ಬಂದಿದ್ದಾನೆ. ಅಲ್ಲದೇ ಭುವಿ ಬಳಿ ಹೇಳಿದ್ದಾನೆ. ನಿನ್ನ ಬಿಟ್ಟು ನಾನು ಯಾವ ನಿರ್ಧಾರವನ್ನು ತೆಗೆದುಕೊಳ್ಳಬಾರದಿತ್ತು ಎಂದು. ಅದನ್ನು ಕೇಳಿ ಮತ್ತೆ, ವಿಲ್ ವಿಚಾರವಾಗಿ ಹೇಳ್ತಾನೆ ಎಂದು ಬೇಸರ ಮಾಡಿಕೊಂಡಿದ್ದಾಳೆ.


  colors kannada serial, kannada serial, kannadathi serial, 5 years bhuvi not transfer any property, harsha know about property, ಕನ್ನಡತಿ ಧಾರಾವಾಹಿ, ಹರ್ಷನ ಮುಂದೆ ವಿಲ್ ಸತ್ಯ ಬಯಲು, 5 ವರ್ಷದ ತನಕ ಭುವಿ ಆಸ್ತಿಯನ್ನು ವರ್ಗಾಯಿಸುವಂತಿಲ್ಲ, ಹರ್ಷನ ಹೆಂಡ್ತಿಗೆ ಹೊಸ ಸಂಕಷ್ಟ!, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ಸಾನಿಯಾ


  ಸೌಪರ್ಣಿಕಾಗೆ ಹೆಚ್ಚು ಭದ್ರತೆ ಬೇಕು
  ಭುವಿ ಹರ್ಷನ ಬಳಿ ಸೌಪರ್ಣಿಕಾ ಬಗ್ಗೆ ಮತ್ತೆ ಕೇಳಿದ್ದಾಳೆ. ಆ ಸೌಪರ್ಣಿಕಾಗೆ ಯಾಕೆ ತೊಂದ್ರೆ ಆಯ್ತು ಅಂತ. ಅದಕ್ಕೆ ಹರ್ಷ ಏನೂ ಉತ್ತರ ಕೊಟ್ಟಿಲ್ಲ. ಆಗ ಭುವಿ ಈ ಸೌಪರ್ಣಿಕಾ ಹೆಚ್ಚು ಬೆಲೆ ಬಾಳ್ತಿದ್ದಾಳೆ. ಈಕೆಗೆ ಹೆಚ್ಚು ಭದ್ರತೆ ಬೇಕು ಎಂದು ಕಾರಿನ ಹಿಂದಿನ ಸೀಟಿನಲ್ಲಿ ಕೂರುತ್ತಾಳೆ. ಅದನ್ನು ನೋಡಿ ಹರ್ಷ ಶಾಕ್ ಆಗಿದ್ದಾನೆ.


  colors kannada serial, kannada serial, kannadathi serial, 5 years bhuvi not transfer any property, harsha know about property, ಕನ್ನಡತಿ ಧಾರಾವಾಹಿ, ಹರ್ಷನ ಮುಂದೆ ವಿಲ್ ಸತ್ಯ ಬಯಲು, 5 ವರ್ಷದ ತನಕ ಭುವಿ ಆಸ್ತಿಯನ್ನು ವರ್ಗಾಯಿಸುವಂತಿಲ್ಲ, ಹರ್ಷನ ಹೆಂಡ್ತಿಗೆ ಹೊಸ ಸಂಕಷ್ಟ!, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ಹರ್ಷ


  ಇದನ್ನೂ ಓದಿ: Lakshana: ಮೌರ್ಯನಿಗೆ ಟಾಂಗ್ ಕೊಡಲು ಮಗಳನ್ನೇ ಕಿಡ್ನ್ಯಾಪ್ ಮಾಡಿದ ಚಂದ್ರಶೇಖರ್!  


  ಲಾಯರ್ ಬಳಿ ಹೋದ ಭುವಿ
  ಭುವಿಗೆ ತನ್ನ ಹೆಸರಿಗೆ ಆಸ್ತಿ ಇದೆ ಎಂದಾಗಿನಿಂದ ಸಂಕಟ ಶುರುವಾಗಿದೆ. ಅದನ್ನು ಮೊದಲು ಹರ್ಷನ ಹೆಸರಿಗೆ ವರ್ಗಾಯಿಸಬೇಕು ಎಂದು ಕೊಂಡಿದ್ದಾಳೆ. ಅದಕ್ಕೆ ಲಾಯರ್ ನನ್ನು ಭೇಟಿಯಾಗಿದ್ದಾಳೆ. ಅವರಿಗೆ ವಿಲ್ ನ್ನು ತೋರಿಸಿದ್ದಾಳೆ. ಇದನ್ನು ನನ್ನ ಪತಿ ಹೆಸರಿಗೆ ವರ್ಗಾಯಿಸಬೇಕು ಎಂದಿದ್ದಾಳೆ.


  5 ವರ್ಷ ಯಾರಿಗೂ ವರ್ಗಾಯಿಸುವಂತಿಲ್ಲ
  ಭುವಿ ಕೊಟ್ಟ ವಿಲ್ ಓದಿ, ಲಾಯರ್, ಭುವಿ ಅವರೇ ನೀವು ಈ ವಿಲ್ ನ್ನು ಸಂಪೂರ್ಣವಾಗಿ ಓದಿದ್ದೀರಾ ಎಂದು ಕೇಳುತ್ತಾರೆ. ಅವಳು ಹೌದು ಎನ್ನುತ್ತಾಳೆ. ಹಾಗಾದ್ರೆ ಕೊನೆ ಸಾಲನ್ನು ಮತ್ತೆ ಓದಿ ಎನ್ನುತ್ತಾರೆ. ಆಗ ಭುವಿ ಓದುತ್ತಾಳೆ. 'ಈ ಎಲ್ಲಾ ಆಸ್ತಿಯು ಸೌಪರ್ಣಿಕಾ ಹೆಸರಿಗೆ ಇರುತ್ತೆ. ಅದನ್ನು 5 ವರ್ಷದ ತನಕ ವರ್ಗಾಯಿಸುವಂತಿಲ್ಲ' ಎಂದು ಬರೆದಿರುತ್ತೆ.


  ಇದನ್ನೂ ಓದಿ: Serial Actress Marriage: ಅಮ್ಮನ ಪಾತ್ರ ಮಾಡ್ತಿದ್ದ ನಟಿ ಇಷ್ಟು ಚಿಕ್ಕವರಾ? ಮದುವೆ ಜೀವನಕ್ಕೆ ಕಾಲಿಟ್ಟ ಸ್ವಾತಿ ಹೆಚ್ ವಿ 


  ಭುವಿಗೆ ಈಗ ಮತ್ತಷ್ಟು ಸಂಕಟ ಶುರುವಾಗಿದೆ. 5 ವರ್ಷದ ತನಕ ಎಲ್ಲಾ ಆಸ್ತಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಆಕೆ ಮೇಲಿದೆ. ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಧಾರಾವಾಹಿ ನೋಡಬೇಕು.

  Published by:Savitha Savitha
  First published: