ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ ಧಾರಾವಾಹಿ (Kannadathi Serial) ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು (Kannada Fans) ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ಧಾರಾವಾಹಿಯಲ್ಲಿ ಅಮ್ಮಮ್ಮನ ಅಧ್ಯಾಯ ಮುಕ್ತಾಯವಾಗ್ತಿದ್ದಂತೆ, ಸೌಪರ್ಣಿಕಾ ಅನ್ನೋ ಹೆಸರು ಓಡಾಡ್ತಾ ಇದೆ. ಭುವಿ-ಹರ್ಷನನ್ನು ದೂರ ಮಾಡಲು ವರು ಪ್ಲ್ಯಾನ್ (Plan) ಮಾಡ್ತಾ ಇದ್ದಾಳೆ.
ಹರ್ಷ-ಭುವಿ ದೂರ ಮಾಡಲು ಪ್ಲ್ಯಾನ್
ಮೊದಲೇ ಭುವಿ ಆಸ್ತಿಯೆಲ್ಲಾ ತನ್ನ ಹೆಸರಿಗೆ ಇದೆ ಎಂದು ಬೇಸರ ಮಾಡಿಕೊಂಡಿದ್ದಾಳೆ. ಇದರ ಮಧ್ಯೆ ವರು ತನ್ನ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾಳೆ. ಇಬ್ಬರನ್ನು ಹೇಗಾದ್ರೂ ದೂರ ಮಾಡಬೇಕು ಎಂದು ಪಣ ತೊಟ್ಟಿದ್ದಾಳೆ. ಅದಕ್ಕೆ ಭುವಿ ಬಳಿ ಏನೇನು ಹೇಳಿ ತಲೆ ಕೆಡಿಸುತ್ತಿದ್ದಾಳೆ.
ವರು ಹೇಳಿದ್ದೇನು?
'ಭುವಿ, ನೀನು ನನ್ನ ಮಾತು ನಂಬಲ್ಲ ಅಂತ ಗೊತ್ತು. ಆದ್ರೂ ಹೇಳ್ತೀನಿ. ನಿನ್ನ ಹೆಸರಲ್ಲಿ ಆಸ್ತಿ ಇದೆ ಎಂದು ಗೊತ್ತಾಗಿಯೇ ಹರ್ಷ ಮದುವೆ ಆಗಿರಬಹುದು. ಅದರಲ್ಲಿ ತಪ್ಪೇನಿದೆ. ಅದು ಸ್ವಾರ್ಥ ತಾನೇ. ಹೆಂಡ್ತಿ ಆಸ್ತಿಯ ಅಧಿಕಾರವನ್ನು ಗಂಡ ನಿಭಾಯಿಸಬಹುದು ಎನ್ನುವ ಉದ್ದೇಶ ಇರಬಹುದು. ಅದಕ್ಕೆ ಮೊನ್ನೆ ನಿನಗೆ ಹೇಳದೇ ಅವರೇ ಎಂಡಿ ಆಗಿದ್ದಾರೆ.ಅವರು ಮದುವೆ ಆಗಿರುವುದೇ ಆಸ್ತಿಗಾಗಿ ಇರಬಹುದು. ಅದರಲ್ಲಿ ತಪ್ಪೇನಿದೆ ಎಂದು ವರು ಹೇಳ್ತಾಳೆ.
ಇದನ್ನೂ ಓದಿ: Agnisakshi Serial: ಹಿಂದಿಗೆ ರಿಮೇಕ್ ಆಗಿದೆ ಕನ್ನಡದ ಅಗ್ನಿಸಾಕ್ಷಿ ಧಾರಾವಾಹಿ!
ತಲೆಕೆಡಿಸಿಕೊಳ್ಳದ ಭುವಿ
ವರು ಏನೇ ಹೇಳಿದ್ರೂ ಭುವಿ ತಲೆಕೆಡಿಸಿಕೊಂಡಿಲ್ಲ. ಅವಳ ಪಾಡಿಗೆ ಅವಳು ಹೋಗಿದ್ದಾಳೆ. ಆಗ ವರು ಕೂಗಿ ಹೇಳಿದ್ದಾಳೆ. ನಿನ್ನ ಹೆಸರಿಗೆ ಆಸ್ತಿ ಬರೆದಿರುವ ವಿಚಾರವನ್ನು ಹರ್ಷನಿಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದನ್ನು ಅವರೇ ಹೇಳಿದ್ದಾರೆ ಎಂದು ಸುಳ್ಳು ಸುಳ್ಳು ಹೇಳಿದ್ದಾಳೆ.
ಇದ್ದಕ್ಕಿದ್ದ ಹಾಗೇ ಭುವಿ ನಾಪತ್ತೆ
ವರು ಜೊತೆ ಮಾತನಾಡುತ್ತಾ ಹೋದ ಭುವಿ, ಇದ್ದಕ್ಕಿದ್ದ ಹಾಗೇ ಕಾಣ್ತ ಇಲ್ಲ. ನಾಪತ್ತೆ ಆಗಿದ್ದಾಳೆ. ಭುವಿ ಎಲ್ಲಿ ಹೋದ್ಲು. ಮತ್ತೆ ಸೌಪರ್ಣಿಕಾ ಅನ್ನುವ ಹೆಸರಿನಿಂದ ಕಷ್ಟ ಶುರುವಾಗಿದೆಯಾ? ಯಾರದ್ರೂ ಕಿಡ್ನ್ಯಾಪ್ ಮಾಡಿದ್ರಾ? ಅಥವಾ ಬೇಸರ ಮಾಡಿಕೊಂಡು ಎಲ್ಲಿಯಾದ್ರೂ ಹೋದ್ಲಾ? ಹರ್ಷ ಆಕೆಯನ್ನು ಎಲ್ಲ ಕಡೆ ಹುಡುಕುತ್ತಿದ್ದಾನೆ.
ಹರ್ಷನನ್ನು ಅರೆಸ್ಟ್ ಮಾಡಿಸಲು ಸಾನಿಯಾ ಪ್ಲ್ಯಾನ್
ಎಂಡಿ ಪೋಸ್ಟ್ ನಿಂದ ತೆಗೆದಿರುವುದರಿಂದ ಸಾನಿಯಾ ಹರ್ಷನ ಮೇಲೆ ಕೋಪ ಮಾಡಿಕೊಂಡಿದ್ದಾಳೆ. ಹರ್ಷನಿಗೆ ಬುದ್ಧಿ ಕಲಿಸಬೇಕು. ಅವನನ್ನು ಅರೆಸ್ಟ್ ಮಾಡಿಸಬೇಕು ಎಂದು ಪ್ಲ್ಯಾನ್ ಮಾಡಿದ್ದಾರೆ. ಹರ್ಷ ಈ ಹಿಂದೆ ಸಾನಿಯಾಳ ತಲೆಗೆ ಗನ್ ಇಟ್ಟು ಸಾಯಿಸುತ್ತೇನೆ ಎಂದಿದ್ದ. ಆ ವಿಡಿಯೋ ಇದೆ. ಅದನ್ನೇ ಮುಂದಿಟ್ಟುಕೊಂಡು ಅರೆಸ್ಟ್ ಮಾಡಿಸುತ್ತಿದ್ದಾಳೆ. ಅಮ್ಮಮ್ಮನ ಕಾರ್ಯ ಮಾಡುವ ಸ್ಥಳಕ್ಕೆ ಪೊಲೀಸರು ಬಂದಿದ್ದಾರೆ.
ಇದನ್ನೂ ಓದಿ: Arjun Kapoor Slams: ನಮ್ಮ ವೈಯಕ್ತಿಕ ಜೀವನದೊಂದಿಗೆ ಆಟವಾಡಬೇಡಿ, ಅರ್ಜುನ್ ಕಪೂರ್ ವಾರ್ನಿಂಗ್ ಕೊಟ್ಟಿದ್ದು ಯಾರಿಗೆ?
ಭುವಿ ಎಲ್ಲಿ ಹೋದ್ಲು? ಹರ್ಷ ಅರೆಸ್ಟ್ ಆಗ್ತಾನಾ? ಸಾನಿಯಾ ಪ್ಲ್ಯಾನ್ ವರ್ಕ್ ಆಗುತ್ತಾ? ವರು ಪ್ಲ್ಯಾನ್ ಸಕ್ಸಸ್ ಆಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ