ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ (Serials) ಕನ್ನಡತಿ (Kannadathi) ಸೀರಿಯಲ್ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ, ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ (Super Hit) ಆಗಿ ಓಡ್ತಿದೆ. ವರು ಹರ್ಷನನ್ನೇ ಮದುವೆ (Marriage) ಆಗ್ತಾಳಂತೆ. ಅದನ್ನೆ ಅವನ ಮುಂದೆ ಹೇಳಿದ್ದಾಳೆ. ಅದಕ್ಕೆ ಹರ್ಷ ಕೋಪಗೊಂಡಿದ್ದಾನೆ.
ಹಿರೋ ಅಂದ್ರೆ ಪ್ರಾಣ
ಧಾರಾವಾಹಿ ಶುರುವಾದಾಗಿನಿಂದ ವರುಗೆ ಹೀರೋ ಅಂದ್ರೇ ಹರ್ಷ ಅಂತೆ. ಅವನನ್ನು ಹುಚ್ಚಿ ತರ ಪ್ರೀತಿ ಮಾಡ್ತಾ ಇದ್ಲು. ಅವನನ್ನೇ ಮದುವೆ ಆಗಬೇಕು ಎಂದುಕೊಂಡಿದ್ಲು. ಆದ್ರೆ ಹರ್ಷ ಭುವಿಯನ್ನು ಪ್ರೀತಿಸಿ ಮದುವೆ ಆಗ್ತಾನೆ ಅದಕ್ಕೆ ವರುಗೆ ವಿಪರೀತ ಕೋಪ, ಅಸಹನೆ ಎಲ್ಲವೂ ಇದೆ. ಹೀರೋ ನನಗೆ ಬೇಕು ಅಂತಿದ್ದಾಳೆ.
ಡಿವೋರ್ಸ್ ಪ್ಲ್ಯಾನ್ ಮಾಡಿರುವ ವರು
ವರುಧಿನಿ, ಹರ್ಷ ಮತ್ತು ಭುವಿಯನ್ನು ದೂರ ಮಾಡಲು ಡಿವೋರ್ಸ್ ಪ್ಲ್ಯಾನ್ ಮಾಡಿದ್ದಾಳೆ. ಭುವಿಯಿಂದ ಉಪಾಯದಿಂದ ಸಹಿ ತೆಗೆದುಕೊಂಡು, ಹರ್ಷನಿಗೆ ಕಳಿಸಿದ್ದಾಳೆ. ಮೊದಲು ಹರ್ಷ ಆತಂಕವಾಗಿದ್ದ, ನಂತರ ಇದು ವರು ಪ್ಲ್ಯಾನ್ ಎಂದು ಗೊತ್ತಾಯ್ತು. ಅದಕ್ಕೆ ವರುಗೆ ಬುದ್ಧಿ ಕಲಿಸಬೇಕು ಎಂದುಕೊಂಡಿದ್ದ.
ನಿಮ್ಮನ್ನೇ ಮದುವೆ ಆಗ್ತೀನಿ
ಹರ್ಷ ಹೊಸ ಪ್ರಾಜೆಕ್ಟ್ ನಲ್ಲಿ ಬ್ಯುಸಿ ಆಗಿದ್ದಾನೆ. ಅದರ ಸಲುವಾಗಿ ಮನೆಗೂ ಬರದೇ ಅದರ ಬಗ್ಗೆ ತಲೆಕೆಡಿಸಿಕೊಂಡಿದ್ದಾನೆ. ಅಲ್ಲಿಗೆ ಬಂದ ವರು. ಹರ್ಷ ನೀವು ಅಂದ್ರೆ ನನಗೆ ತುಂಬಾ ಇಷ್ಟ. ನಿಮ್ಮನ್ನೇ ನಾನು ಮದುವೆ ಆಗ್ತೀನಿ. ನಾನು ಹುಟ್ಟಿರುವುದೇ ನಿಮಗಾಗಿ. ನನಗೆ ನಿಮ್ಮನ್ನು ಬಿಟ್ಟು ಬದುಕುವ ಶಕ್ತಿ ಇಲ್ಲ. ನನ್ನ ಮದುವೆ ಆಗ್ತೀರಾ ಎಂದು ಕೇಳಿದ್ದಾಳೆ.
ವರು ಹೊಡೆಯಲು ಹೋದ ಹರ್ಷ!
ಹರ್ಷನಿಗೆ ವರು ಮಾತು ಕೇಳಿ ತುಂಬಾ ಕೋಪ ಬಂದಿದೆ. ಅದಕ್ಕೆ ವರು ಹೊಡೆಯಲು ಹೋಗಿದ್ದಾನೆ. ವರು ಮತ್ತು ಹರ್ಷ ಮೊದಲು ಒಳ್ಳೆಯ ಸ್ನೇಹಿತರು. ಇಬ್ಬರು ಜೊತೆಗೆ ಓಡಾಡುತ್ತಿದ್ದರು. ಹರ್ಷನಿಗೆ ವರು ಮೇಲೆ ಯಾವತ್ತೂ ಪ್ರೀತಿ ಹುಟ್ಟಿಲ್ಲ. ಅದನ್ನು ಅವನು ಹಲವು ಬಾರಿ ಹೇಳಿದ್ದಾನೆ. ಆದ್ರೂ ವರು ಈ ರೀತಿ ಮಾಡಿದ್ದಾಳೆ ಎಂದು ಕೋಪಗೊಂಡಿದ್ದಾನೆ.
ಲಾಯರ್ ಹರ್ಷಿತ್ ಹೊಸ ಪಾತ್ರ
ಕೆಲವೇ ದಿನಗಳಲ್ಲಿ ಕನ್ನಡತಿ ಸೀರಿಯಲ್ ಮುಕ್ತಾಯಗೊಳ್ಳಲಿದೆ. ಅದಕ್ಕೆ ವರು ಪಾತ್ರಕ್ಕೆ ಹ್ಯಾಪಿ ಎಂಡಿಂಗ್ ಕೊಡಲು ಲಾಯರ್ ಹರ್ಷಿತ್ ಅನ್ನೋ ಹೊಸ ಪಾತ್ರ ತರಲಾಗಿದೆ. ಲಾಯರ್ ಹರ್ಷಿತ್‍ಗೆ ವರು ಇಷ್ಟ ಆಗಿದ್ದಾಳೆ. ಆದ್ರೂ ವರು ಹರ್ಷನೇ ಬೇಕು ಅಂತ ಹಿಂದೆ ಬಿದ್ದಿದ್ದಾಳೆ. ಅದಕ್ಕೆ ಹರ್ಷನಿಗೆ ಕೋಪ ಹೆಚ್ಚಾಗಿದೆ.
ಹರ್ಷ ವರು ವಿರುದ್ಧ ಏನಾದ್ರೂ ಕ್ರಮ ಕೈಗೊಳ್ತಾನಾ? ವರು ಲಾಯರ್ ಜೊತೆ ಮದುವೆ ಆಗ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ