Ranjani Raghavan : ಪುಣೆ ಶನಿವಾರ್ ವಾಡದಲ್ಲಿ ರಂಜನಿ ರಾಘವನ್ ಜಾಲಿ ಮೂಡ್!

ರಂಜನಿ ರಾಘವನ್ ಅವರು ಮತ್ತೆ ತಮ್ಮ ಇನ್ಸ್ಟಾಗ್ರಾಂ ಖಾತೆಯಿಂದ ಸುದ್ದಿಯಲ್ಲಿದ್ದಾರೆ. ಹೌದು ರಂಜನಿ ರಾಘವನ್ ಅವರು ಪುಣೆಯಲ್ಲಿರುವ ಶನಿವಾರ್ ವಾಡ ಪ್ರವಾಸಿ ತಾಣದಲ್ಲಿ ಸಮಯ ಕಳೆಯುತ್ತಿರುವ ಒಂದು ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

ರಂಜನಿ ರಾಘವನ್

ರಂಜನಿ ರಾಘವನ್

  • Share this:
    ಕನ್ನಡದ ಹುಡುಗಿ ಭುವನೇಶ್ವರಿ ಅಲಿಯಾಸ್ ರಂಜನಿ ರಾಘವನ್ (Ranjani Raghavan) ಸದಾ ಒಂದಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತಾರೆ. ಬಹುಮುಖ ಪ್ರತಿಭೆ ರಂಜನಿ ರಾಘವನ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ಹಾಡುಗಾರಿಕೆ ಬರವಣಿಗೆ ಇವರು ಹೆಸರುವಾಸಿಯಾಗಿದ್ದಾರೆ. ಇದೀಗ ರಂಜನಿ ರಾಘವನ್ ಅವರು ಮತ್ತೆ ತಮ್ಮ ಇನ್ಸ್ಟಾಗ್ರಾಂ (Instagram) ಖಾತೆಯಿಂದ ಸುದ್ದಿಯಲ್ಲಿದ್ದಾರೆ. ಹೌದು ರಂಜನಿ ರಾಘವನ್ ಅವರು ಪುಣೆಯಲ್ಲಿರುವ (Pune) ಶನಿವಾರ್ ವಾಡ (Shanivarvada) ಪ್ರವಾಸಿ ತಾಣದಲ್ಲಿ ಸಮಯ ಕಳೆಯುತ್ತಿರುವ ಒಂದು ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಅದ್ಭುತ ಮಾತುಗಾರಿಕೆ, ಕಂಠದಿಂದ ಹಾಗೂ ಬರವಣಿಗೆಯ ಪ್ರತಿಭೆಯಿಂದ ಇವರು ಅಭಿಮಾನಿಗಳ ಬಳಗವನ್ನುಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಪೂಣೆಯ ಶನಿವಾರ ವಾಡದಲ್ಲಿ ರಂಜನಿ ರಾಘವನ್

    ಪುಣೆಯ ಶನಿವಾರ್ ವಾಡಾ ಅಂದ್ರೇ ನಂಗೆ ಬಾಜಿರಾವ್ ಮಸ್ತಾನಿ ಸಿನಿಮಾ ನೆನಪಾಗುತ್ತೇ. ನಿಮಗೆ? ಎಂದು ಶನಿವಾರ್ ವಾರದಲ್ಲಿ ತಾವು ಸುತ್ತಾಡುವ ವಿಡಿಯೋ ಹಾಕಿ ಕ್ಯಾಪ್ಷನ್ ಅನ್ನು ಬರೆದಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದು ಕಮೆಂಟ್ ಸೆಕ್ಷನ್ ನಲ್ಲಿ ತಮ್ಮ ನೆಚ್ಚಿನ ನಟಿಯ ವಿಡಿಯೋಗೆ ಒಳ್ಳೆಯ ಪ್ರತಿಕ್ರಿಯೆಯನ್ನು ಕೂಡ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ಇನ್ನು ಕೆಲವರು ಇದು ಕನ್ನಡತಿ ತಂಡದಿಂದಲೇ ಶೂಟಿಂಗ್ ಗೆ ಬಂದಿರುವುದು ಎಂದು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಬಾಜಿರಾವ್ ಮಸ್ತಾನಿಯಲ್ಲಿ ದೀಪಿಕಾ ಪಡುಕೋಣೆ ಅವರು ನೃತ್ಯ ಮಾಡಿದಂತೆ ನೀವು ಎರಡು ಸ್ಟೆಪ್ ಹಾಕಿ ಎಂದು ಕೂಡ ಅಭಿಮಾನಿಗಳು ರಂಜನಿ ರಾಘವನ್ ಅವರಲ್ಲಿ ಕೇಳಿಕೊಂಡಿದ್ದಾರೆ.

    ಇದನ್ನೂ ಓದಿ: Sara Annaiah: ಕನ್ನಡತಿ ವರೂಧಿನಿ ಸೂಪರ್ ಪೋಸ್, ರಿಯಲ್​ ಲೈಫ್​ನಲ್ಲೂ ಸಾರಾ ಅಣ್ಣಯ್ಯ ಸಖತ್ ಸ್ಟೈಲಿಶ್

    ಲಂಗ ದಾವಣಿ ಹಾಕಿ ಡ್ಯಾನ್ಸ್ ಮಾಡಿದ ರಂಜನಿ ರಾಘವನ್

    ಕಳೆದ ಕೆಲ ದಿನಗಳ ಹಿಂದೆ ರಂಜನಿ ರಾಘವನ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಲಂಗ ದಾವಣಿ ಹಾಕಿ ಡ್ಯಾನ್ಸ್ ಮಾಡಿ ಸುದ್ದಿಯಲ್ಲಿದ್ದರು. ಆಣೆ ಮಾಡಿ ಹೇಳುವೆನು ನಾನು ನಿನ್ನವಳು ಎನ್ನುವ ಅದ್ಭುತ ಹಾಡಿಗೆ ಲಂಗ ದಾವಣಿ ಹಾಕಿ ಡ್ಯಾನ್ಸ್ ಮಾಡಿದ್ದರು. ಯಾವ್ದ್ ಯಾವ್ದೋ ಚಾಲೆಂಜ್ ಮಾಡ್ತೀವಂತೆ, ನಮ್ಮ 'ಲಂಗ ದಾವಣಿ' ಚಾಲೆಂಜ್ ತಗೋಳಲ್ವಾ? ಎಂದು ಕ್ಯಾಪ್ಷನ್ ಬರೆದು ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದರು ರಂಜನಿ ರಾಘವನ್.

    ಇದನ್ನೂ ಓದಿ: Bridal Look: ಭುವಿಯ ಬ್ರೈಡಲ್ ಲುಕ್ ವೈರಲ್, ಮದುವೆಗೆ ಹೀಗೆ ಸಿಂಗರಿಸಿಕೊಳ್ಳಿ

    ಸಕಲಕಲಾ ವಲ್ಲಭೆ ಈ ನಟಿ

    ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಿಂದ ಬಿಕಾಂ ಮುಗಿಸಿ ನಂತರ ಎಂಬಿಎ ಮಾಡಿರುವ ರಂಜನಿ , ಸೀರಿಯಲ್ ಮಾತ್ರವಲ್ಲದೇ ರಾಜಹಂಸ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಪುಟ್ಟಗೌರಿ ಸೀರಿಯಲ್ ನಂತರ ಸ್ವತಃ ತಾವೇ ಒಂದು ಸೀರಿಯಲ್ ನ ಕಥೆ ಮತ್ತು ಸ್ಕ್ರಿಪ್ಟ್ ಬರೆದಿದ್ದಾರೆ ಇಷ್ಟದೇವತೆ ಎಂಬ ಈ ಸೀರಿಯಲ್ ನ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೂಡ ಕಾರ್ಯ ನಿರ್ವಹಿಸಿ, ಮನ್ನಣೆಗಳಿಸಿದ್ದಾರೆ.






    ಸೀರಿಯಲ್, ಬರವಣಿಗೆ ಹೀಗೆ ಹಲವು ವಿಚಾರಗಳಿಂದ ಆಗಾಗ ಸದ್ದು ಮಾಡುವ ರಂಜನಿ ರಾಘವನ್ ಒಳ್ಳೊಳ್ಳೆ ಪಾತ್ರಗಳ ಮೂಲಕ ಸಿನಿಮಾಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಮಾಲಾಶ್ರೀ ಅಭಿನಯದ ಚಿತ್ರದಲ್ಲಿ ಸಹ ಕಾಣಿಸಿಕೊಂಡಿದ್ದಾರೆ. ನಟನೆ , ಬರವಣಿಗೆ ಮಾತ್ರವಲ್ಲದೇ ಹಾಡುಗಾರಿಕೆಯಲ್ಲಿ ಸಹ ರಂಜನಿ ಎತ್ತಿದ್ದ ಕೈ ಆಗಿದ್ದು, ಅತ್ಯಂತ ಸುಂದರವಾಗಿ ಹಾಡುತ್ತಾರೆ ಸಹ. ಇವರನ್ನು ಸಕಲಕಲಾ ವಲ್ಲಭೆ ಎಂದರೆ ತಪ್ಪಾಗಲಾರದು. ಇತ್ತೀಚೆಗಷ್ಟೇ ಕನ್ನಡತಿ ಧಾರಾವಾಹಿಯಲ್ಲಿ ಮದುವೆ ಸಂಚಿಕೆಗಳನ್ನು ಮುಗಿಸಿದ ಇವರು ಪುಣೆಯಲ್ಲಿ ಈ ವಿಡಿಯೋ ಹಾಕಿರುವುದು ಅಭಿಮಾನಿಗಳ ಮನದಲ್ಲಿ ಕುತೂಹಲ ಮೂಡಿಸಿದೆ. ಧಾರಾವಾಹಿ ತಂಡದ ಪುಣೆಯಲ್ಲಿ ಸಮಯ ಕಳೆಯುತ್ತಿದ್ದಾರೆ ಎನ್ನುವ ಬಗ್ಗೆ ರಂಜನಿ ರಾಘವನ್ ಅವರೇ ಹೇಳಬೇಕಷ್ಟೆ.
    Published by:Swathi Nayak
    First published: