Har Ghar Tiranga: ಹರ್ ಘರ್ ತಿರಂಗಾ ಅಭಿಯಾನಕ್ಕೆ ಕಲರ್ಸ್ ಕನ್ನಡ ಸಾಥ್, ಧಾರಾವಾಹಿಗಳಲ್ಲಿ ರಾಷ್ಟ್ರಭಕ್ತಿ ಸಂದೇಶ

ಭಾರತ ಈ ಹೆಸರಲ್ಲೇ ಒಂದು ಶಕ್ತಿ ಇದೆ. ಒಂದು ಸೆಳೆತ ಇದೆ. ಕೋಟ್ಯಂತರ ಜನರ ಹೃದಯ ಬಡಿತವೊಂದೆ ಅದು ಭಾರತ, ನಮ್ಮ ಸ್ವಾತಂತ್ರ್ಯ ದಿನಕ್ಕೆ 75ರ ಸಂಭ್ರಮ. ಇದು ನಮಗೆ ಸುಲಭವಾಗಿ ಸಿಕ್ಕಿದ್ದಲ್ಲ. ಇದರ ಹಿಂದೆ ಲಕ್ಷಾಂತರ ಜನರ ಪರಿಶ್ರಮ ಇದೆ. ನಮ್ಮೆಲ್ಲರ ಮನೆ, ಮನಗಳಲ್ಲಿ ನಮ್ಮ ಹೆಮ್ಮೆಯ ತ್ರಿವರ್ಣ ಧ್ವಜ ಹಾರಾಡಲಿ. ಮನೆ ಮನೆಯಲ್ಲೂ ತ್ರಿವರ್ಣ ಅಭಿಯಾನಕ್ಕೆ ನಾವೆಲ್ಲರೂ ಜೊತೆಯಾಗೋಣ .

ಹರ್ ಘರ್ ತಿರಂಗಾ

ಹರ್ ಘರ್ ತಿರಂಗಾ

 • Share this:
  ಸ್ವಾತಂತ್ರ್ಯೋತ್ಸವದ  (75th Independence day) ಸಂಭ್ರಮ ಮನೆ ಮಾಡಿದೆ. ಅಮೃತ ಮಹೋತ್ಸವದ ಅಂಗವಾಗಿ ಮನೆ ಮನೆಯಲ್ಲೂ ತ್ರಿವರ್ಣ ಧ್ವಜ  (Flag) ಹಾರಿಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಕರೆ ನೀಡಿದ್ದರು.  ಹರ್ ಘರ್ ತಿರಂಗಾ (Har Ghar Tiranga) ಅಭಿಯಾನ ಆರಂಭವಾಗಿದೆ. ಪ್ರತಿಯೊಬ್ಬರು ಈಗಾಗಲೇ ಧ್ವಜವನ್ನು ಅವರವರ ಮನೆಗಳ (Home) ಮೇಲೆ ಹಾರಿಸಿದ್ದಾರೆ. 15 ಆಗಸ್ಟ್  (August 15th) 2022 ಭಾರತ ಮತ್ತು ಅದರ ಜನತೆಗೆ ಒಂದು ಮಹತ್ವದ ಸಂದರ್ಭವಾಗಿದೆ. 1858 ರಿಂದ 1947 ರವರೆಗೆ ನಮ್ಮನ್ನು ಆಳಿದ ಬ್ರಿಟಿಷರಿಂದ ಮುಕ್ತವಾದ ಭಾರತವು ಸ್ವತಂತ್ರ ದೇಶವಾಯಿತು. ಭಾರತವು 1858 ರಿಂದ 1947 ರವರೆಗೆ ಬ್ರಿಟಿಷರ ಆಳ್ವಿಕೆಯಲ್ಲಿತ್ತು, ಇದಕ್ಕೂ ಮೊದಲು ನಾವು 1757 ರಿಂದ 1857 ರವರೆಗೆ ಈಸ್ಟ್ ಇಂಡಿಯನ್ ಕಂಪನಿಯಿಂದ ಆಳಲ್ಪಟ್ಟಿದ್ದೇವೆ.

  ಹರ್ ಘರ್ ತಿರಂಗ ಅಭಿಯಾನಕ್ಕೆ ಸಾಥ್
  ಸಿಪಾಯಿ ದಂಗೆ ಅಥವಾ 1857 ರ ಭಾರತೀಯ ಬಂಡಾಯವು ನಮ್ಮ ಸ್ವಾತಂತ್ರ್ಯಕ್ಕಾಗಿ ಮೊದಲ ಹೋರಾಟವಾಗಿದೆ. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರು ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಮತ್ತು ಅಂತಿಮವಾಗಿ ನಮ್ಮ ದೇಶವನ್ನು ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಗೊಳಿಸಿದರು. 75 ವರ್ಷದ ಸಂಭ್ರದಲ್ಲಿದ್ದು, ಕಲರ್ಸ್ ಕನ್ನಡ ವಾಹಿನಿಯೂ ಸಹ ಹರ್ ಘರ್ ತಿರಂಗ ಅಭಿಯಾನಕ್ಕೆ ಸಾಥ್ ನೀಡಿದೆ. ಧಾರಾವಾಹಿ ನಟ ನಟಿಯರು ಹರ್ ಘರ್ ತಿರಂಗ ಅಭಿಯಾನಕ್ಕೆ ಸಾಥ್ ನೀಡುವಂತೆ ಹೇಳಿದ್ದಾರೆ.

  ಕನ್ನಡತಿ ಧಾರಾವಾಹಿಯ ಹರ್ಷ-ಭುವಿ ಅಭಿಯಾನ
  ಭಾರತ ಈ ಹೆಸರಲ್ಲೇ ಒಂದು ಶಕ್ತಿ ಇದೆ. ಒಂದು ಸೆಳೆತ ಇದೆ. ಕೋಟ್ಯಂತರ ಜನರ ಹೃದಯ ಬಡಿತವೊಂದೆ ಅದು ಭಾರತ, ನಮ್ಮ ಸ್ವಾತಂತ್ರ್ಯ ದಿನಕ್ಕೆ 75ರ ಸಂಭ್ರಮ. ಇದು ನಮಗೆ ಸುಲಭವಾಗಿ ಸಿಕ್ಕಿದ್ದಲ್ಲ. ಇದರ ಹಿಂದೆ ಲಕ್ಷಾಂತರ ಜನರ ಪರಿಶ್ರಮ ಇದೆ. ತ್ಯಾಗ ಇದೆ. ಸಾವಿರಾರು ಜನರ ಬಲಿದಾನ ಇದೆ. ಅದನ್ನು ನಾವು ಮರೆಯಬಾರದು. ನೆನಪಿಸಿಕೊಳ್ಳಲೇ ಬೇಕು.


  ಅವತ್ತು ಅಡಿಯಾಳು ಆಗಿದ್ದವರು ಇವತ್ತು ವಿಶ್ವಕ್ಕೆ ಮುಂದಾಗಿದ್ದೇವೆ. ಮಾದರಿಯಾಗಿದ್ದೇವೆ. ಸ್ವತಂತ್ರವಾಗಿದ್ದೇವೆ. ಈ ಸಂಭ್ರಮದ ದಿನ ನಮ್ಮೆಲ್ಲರ ಮನೆ, ಮನಗಳಲ್ಲಿ ನಮ್ಮ ಹೆಮ್ಮೆಯ ತ್ರಿವರ್ಣ ಧ್ವಜ ಹಾರಾಡಲಿ. ಮನೆ ಮನೆಯಲ್ಲೂ ತ್ರಿವರ್ಣ ಅಭಿಯಾನಕ್ಕೆ ನಾವೆಲ್ಲರೂ ಜೊತೆಯಾಗೋಣ ಎಂದು ಕನ್ನಡತಿ ಧಾರಾವಾಹಿಯ ಹರ್ಷ-ಭುವಿ ಹೇಳಿದ್ದಾರೆ.

  ಇದನ್ನೂ ಓದಿ: Kannadathi: ಅಮ್ಮಮ್ಮ ತೋರಿಸಿದ ವಿಡಿಯೋ ನೋಡಿ ಸಾನಿಯಾ ಶಾಕ್! ಬದುಕಿ ಬಂದ ರತ್ನಮಾಲಾರಿಂದ ಟಾಂಗ್

  ಕನ್ಯಾಕುಮಾರಿ ಧಾರಾವಾಹಿಯ ಅಭಿಯಾನ
  ನಮ್ಮ ದೇಶದ ತ್ರಿವರ್ಣ ಧ್ವಜ ಎತ್ತರದಲ್ಲಿ ಹಾರಾಡಬೇಕಾದ್ರೆ ನಮ್ಮ ಎದೆ ಹುಬ್ಬುತ್ತೆ. ಸಂತೋಷ ಹರಡುತ್ತೆ. ಮುಖದಲ್ಲಿ ಸ್ವಾಭಿಮಾನ ಎದ್ದು ಕಾಣುತ್ತೆ. ಇಂತಹ ಸ್ವಾಭಿಮಾನದ ಬದುಕು ಸಿಕ್ಕು 75 ವರ್ಷ ಆಯ್ತು. ಇದು ಆಚರಣೆ ಅಲ್ಲ. ಹಬ್ಬ. ನಮ್ಮ ದೇಶದ ಹಬ್ಬ. ನಾವೆಲ್ಲರೂ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸೋಣ.

  ನಮ್ಮ ಹೆಮ್ಮೆಯ ಧ್ವಜ ಮನೆ ಮನೆಯಲ್ಲೂ ಹಾರಾಡಲಿ. ತ್ರಿವರ್ಣ ಧ್ವಜ ಹಾರಾಡುವುದನ್ನು ತಲೆ ಎತ್ತಿ ನೋಡೋಣ ಈಡೀ ವಿಶ್ವಕ್ಕೆ ಕೇಳುವಂತೆ ಹೇಳೋಣ. ಭಾರತ್ ಮಾತಾ ಕೀ ಜೈ ಎಂದು ಕನ್ಯಾಕುಮಾರಿ ಧಾರಾವಾಹಿ ಕನ್ನಿಕಾ, ಚರಣ ಹೇಳಿದ್ದಾರೆ.

  ದೇಶದ ಬಗ್ಗೆ ನಿಮಗೆ ಗೊತ್ತಿರದ ಕೆಲವು ಸಂಗತಿಗಳು
  ಸ್ವಾತಂತ್ರ್ಯದ ಸಮಯದಲ್ಲಿ ಭಾರತವು ರಾಷ್ಟ್ರಗೀತೆಯನ್ನು ಹೊಂದಿರಲಿಲ್ಲ. ರವೀಂದ್ರನಾಥ ಟ್ಯಾಗೋರ್ ಅವರು 1911 ರಲ್ಲಿ ಜನ ಗನ ಮನ ಸಿದ್ಧಪಡಿಸಿದ್ದರು. ಅದನ್ನು ರಾಷ್ಟ್ರಗೀತೆಯನ್ನಾಗಿ 1950, ಜನವರಿ 25ರಂದು ಭಾರತದ ರಾಷ್ಟ್ರಗೀತೆಯಾಗಿ ಅಧಿಕೃತವಾಗಿ ಘೋಷಿಸಲಾಯ್ತು.

  ಇದನ್ನೂ ಓದಿ: Sathya: ಕಾರ್ತಿಕ್‍ಗೆ ಡಿವೋರ್ಸ್ ಕೊಡಲು ಒಂದೇ ಒಂದು ದಿನ ಮಾತ್ರ ಸತ್ಯಾಗೆ ಟೈಂ! ಏನ್ ಮಾಡ್ತಾಳೆ ಲೇಡಿ ರಾಮಾಚಾರಿ?

  ಜೂನ್ 30, 1948 ರೊಳಗೆ ಅಧಿಕಾರವನ್ನು ವರ್ಗಾಯಿಸಲು ಲಾರ್ಡ್ ಮೌಂಟ್ ಬ್ಯಾಟನ್ ಅವರಿಗೆ ಬ್ರಿಟಿಷ್ ಸಂಸತ್ತು ಆದೇಶ ನೀಡಿತ್ತು.1949 ರ ಸೆಪ್ಟೆಂಬರ್ 14 ರಂದು ಹಿಂದಿಯನ್ನು ಒಕ್ಕೂಟದ ಅಧಿಕೃತ ಭಾಷೆಯಾಗಿ ಸ್ವೀಕರಿಸಲಾಯಿತು.ಸ್ವಾತಂತ್ರ್ಯ ಮಸೂದೆಯು ಆಗಸ್ಟ್ 15 ಅನ್ನು ಭಾರತ ಮತ್ತು ಪಾಕಿಸ್ತಾನಕ್ಕೆ ಸ್ವಾತಂತ್ರ್ಯದ ದಿನಾಂಕವಾಗಿ ನೀಡಿತು.ಭಾರತದ ಮೊದಲ ಅನಧಿಕೃತ ಧ್ವಜವನ್ನು ಆಗಸ್ಟ್ 7 ರಂದು ಹಾರಿಸಲಾಯಿತು.
  Published by:Savitha Savitha
  First published: