Kannadathi: ಕಣ್ಮರೆಯಾದ ರತ್ನಮಾಲಾ, ಅಮ್ಮಮ್ಮ ಕಾಣದೇ ಕಂಗಾಲಾದ ಭುವಿ; ಇತ್ತ ಮೊಬೈಲ್​​ಗಾಗಿ ಸಾನಿಯಾ ಹುಡುಕಾಟ

ಮನೆ ಸೊಸೆಯಾಗಿ ಬಂದಿರುವ ಕನ್ನಡ ಟೀಚರ್ ಮನೆಯ ಜವಾಬ್ದಾರಿ ಹೊತ್ತಿದ್ದಾರೆ. ಆದ್ರೆ ಇದ್ದಕ್ಕಿದ್ದ ಹಾಗೇ ಮನೆಯ ಒಡತಿ ರತ್ನಮಾಲಾ ಅಂದ್ರೆ ಅಮ್ಮಮ್ಮ ಕಣ್ಮರೆಯಾಗಿದ್ದಾರೆ. ಮನೆಯಲ್ಲೂ ಎಲ್ಲೂ ಅಮ್ಮಮ್ಮ ಕಾಣುತ್ತಿಲ್ಲ. ಗಾಬರಿಗೊಂಡ ಭುವಿ ಅಮ್ಮಮ್ಮನನ್ನು ಹುಡುಕಲು ಹೊರಟಿದ್ದಾಳೆ. ಹಾಗಾದ್ರೆ ಎಲ್ಲಿ ಹೋದ್ರು ರತ್ನಮಾಲಾ ಅನ್ನೋದೇ ಎಲ್ಲರ ಪ್ರಶ್ನೆ?

ಕನ್ನಡತಿ ಸೀರಿಯಲ್

ಕನ್ನಡತಿ ಸೀರಿಯಲ್

 • Share this:
  ಕನ್ನಡತಿ (Kannadathi), ಸೀರಿಯಲ್ (Serial) ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಕನ್ನಡತಿಗೆ ಅದೆಷ್ಟೋ ಅಭಿಮಾನಿಗಳ (Fans) ಬಳಗವೇ ಇದೆ. ಅದ್ರಲ್ಲೂ ಹೀರೋ ಹರ್ಷ. ಹಿರೋಹಿನ್ ಭುವಿ ಜೋಡಿ ನೋಡೋಕೆ ಕಾಯ್ತಾ ಇರ್ತಾರೆ. ಹಾಗೇ ವಿಲನ್ ಸಾನಿಯಾ ಭುವಿಗೆ ಇನ್ನೇನು ಕಷ್ಟ ಕೊಡ್ತಾಳಪ್ಪಾ ಅಂತ ಮಿಸ್ ಮಾಡ್ದೇ ಧಾರಾವಾಹಿ ನೋಡ್ತಾರೆ. ಮನೆ ಸೊಸೆಯಾಗಿ ಬಂದಿರುವ ಕನ್ನಡ ಟೀಚರ್ ಮನೆಯ ಜವಾಬ್ದಾರಿ ಹೊತ್ತಿದ್ದಾರೆ. ಆದ್ರೆ ಇದ್ದಕ್ಕಿದ್ದ ಹಾಗೇ ಮನೆಯ ಒಡತಿ ರತ್ನಮಾಲಾ ಅಂದ್ರೆ ಅಮ್ಮಮ್ಮ ಕಣ್ಮರೆಯಾಗಿದ್ದಾರೆ (Missing). ಮನೆಯಲ್ಲೂ ಎಲ್ಲೂ ಅಮ್ಮಮ್ಮ ಕಾಣುತ್ತಿಲ್ಲ. ಗಾಬರಿಗೊಂಡ ಭುವಿ ಅಮ್ಮಮ್ಮನನ್ನು ಹುಡುಕಲು ಹೊರಟಿದ್ದಾಳೆ. ಹಾಗಾದ್ರೆ ಎಲ್ಲಿ ಹೋದ್ರು ರತ್ನಮಾಲಾ ಅನ್ನೋದೇ ಎಲ್ಲರ ಪ್ರಶ್ನೆ?

  ಬದಲಾಗಿದೆ ಅಮ್ಮಮ್ಮನ ನಡವಳಿಕೆ
  ರತ್ನಮಾಲಾ ಅವರಿಗೆ ಆರೋಗ್ಯ ಸರಿ ಇರಲಿಲ್ಲ. ಆಗ ವಿದೇಶದಲ್ಲಿ ಹೆಚ್ಚಿನ ಚಿಕಿತ್ಸೆ ಕೊಡಿಸಿದ ಮೇಲೆ ಆರೋಗ್ಯ ಸರಿ ಹೋಗಿದೆ. ಆದ್ರೆ ವಿದೇಶದಿಂದ ವಾಪಸ್ ಬಂದ ಮೇಲೆ ಅಮ್ಮಮ್ಮ ನಡವಳಿಕೆಯಲ್ಲಿ ತುಂಬಾ ಬದಲಾಗಿದೆ.

  ರಾತ್ರಿ ಎಷ್ಟೋ ಹೊತ್ತು ಆದ್ರು ಮಲಗುವುದಿಲ್ಲ. ಮಧ್ಯರಾತ್ರಿಯಲ್ಲಿ ಟಿವಿ ನೋಡ್ತಾರೆ. ಹಸಿವು, ಹಸಿವು ಎನ್ನುತ್ತಾರೆ. ಮೊಬೈಲನ್ನು ಯಾವಾಗಲು ಎದೆಗವಚಿಕೊಂಡೇ ಇರುತ್ತಾರೆ. ಇದನ್ನೆಲ್ಲಾ ನೋಡಿದ ಭುವಿ ಗಾಬರಿಕೊಂಡಿದ್ದಾಳೆ.

  ಮನೆಯಿಂದ ಅಮ್ಮಮ್ಮ ನಾಪತ್ತೆ!
  ಇದ್ದಕ್ಕಿದ್ದ ಹಾಗೇ ಮನೆಯಿಂದ ರತ್ನಮಾಲಾ ಕಣ್ಮರೆಯಾಗಿದ್ದಾರೆ. ಮನೆಯಲ್ಲೂ ಎಲ್ಲೂ ಅಮ್ಮಮ್ಮ ಕಾಣುತ್ತಿಲ್ಲ. ಗಾಬರಿಗೊಂಡ ಭುವಿ ಅಮ್ಮಮ್ಮನನ್ನು ಹುಡುಕಲು ಹೊರಟಿದ್ದಾಳೆ. ಮೊದಲು ಅವರು ಮಲಗುವ ಕೋಣೆ, ಬಾತ್ ರೂಂ ಎಲ್ಲವನ್ನೂ ಹುಡುಕುತ್ತಾಳೆ. ಅಲ್ಲಿ ಕಾಣುವುದಿಲ್ಲ. ಡ್ರೈವರ್ ಜೊತೆ ಕಾರಿನಲ್ಲಿ ಅಮ್ಮಮ್ಮನನ್ನು ಎಲ್ಲ ಕಡೆ ಹುಡುಕುತ್ತಿದ್ದಾಳೆ.

  ಇದನ್ನೂ ಓದಿ: Ramachari: ಚಾರು ವರ್ತನೆಯಲ್ಲಿ ಇದ್ದಕ್ಕಿದ್ದಂತೆ ಬದಲಾವಣೆ! ರಾಮಾಚಾರಿ ಮಾತಿನಿಂದ ಬದಲಾದ್ಲಾ?

  ದೇವಸ್ಥಾನದ ತುಂಬೆಲ್ಲಾ ಹುಡುಕಾಟ
  ರತ್ನಮ್ಮ ದೇವಸ್ಥಾನಕ್ಕೆ ಹೋಗಿರಬೇಕು ಎಂದುಕೊಂಡ ಭುವಿ, ಅಲ್ಲಿಗೆ ಹೋಗಿ ಹುಡುಕುತ್ತಿದ್ದಾಳೆ. ದೇವಸ್ಥಾನದ ಎಲ್ಲ ಕಡೆ ಹುಡುಕಿದ್ದಾಳೆ. ಅಲ್ಲದೇ ಅರ್ಚಕರನ್ನು, ರತ್ನಮ್ಮ ಬಂದಿದ್ರಾ ಎಂದು ಕೇಳಿದ್ದಾಳೆ.

  ಅದಕ್ಕೆ ಇಲ್ಲ ನಾನು ಅವರನ್ನು ನೋಡಿಲ್ಲ ಎನ್ನುತ್ತಾರೆ. ಭುವಿಗೆ ಮತ್ತಷ್ಟು ಆತಂಕ ಹೆಚ್ಚಾಗಿದೆ. ಡ್ರೈವರ್ ಪೊಲೀಸರಿಗೆ ದೂರು ನೀಡೋಣ ಎನ್ನುತ್ತಾನೆ. ಅದಕ್ಕೆ ಭುವಿ ಬೇಡ, ಮೊದಲು ನಾವೇ ಹುಡುಕೋಣ ಎಂದು ಹೇಳುತ್ತಾಳೆ.

  ಹಾಗಾದ್ರೆ ಎಲ್ಲಿ ಹೋದ್ರು ಅಮ್ಮಮ್ಮ?
  ಅಮ್ಮಮ್ಮ ಮನೆಯಲ್ಲೂ ಇಲ್ಲ. ದೇವಸ್ಥಾನದಲ್ಲೂ ಇಲ್ಲ. ಹಾಗಾದ್ರೆ ಎಲ್ಲಿ ಹೋದ್ರು ಅನ್ನೋ ಪ್ರಶ್ನೆಗಳು ಕಾಡ್ತಿವೆ. ಅವರೇನಾದ್ರೂ ತನ್ನ ಸ್ನೇಹಿತಿ ವರಲಕ್ಷ್ಮಿ ಮನೆಗೇನಾದ್ರೂ ಹೋಗಿದ್ದಾರಾ ನೋಡಬೇಕು.

  ಒಟ್ನಲ್ಲಿ ಅಮ್ಮಮ್ಮ ಕಾಣದೇ ಭುವಿ ಅತಂಕಗೊಂಡಿದ್ದಾಳೆ. ಎಲ್ಲಿ ಹೋದ್ರೂ ಅಂತ ಗಾಬರಿಯಿಂದ ಹುಡುಕಾಟ ನಡೆಸುತ್ತಿದ್ದಾಳೆ. ಏನಾಯ್ತು, ಎಲ್ಲಿ ಹೋದ್ರೂ, ಅಂತ ನೋಡೋಕೆ ಕನ್ನಡತಿ ಸಂಚಿಕೆ ನೋಡಬೇಕು.

  ಇದನ್ನೂ ಓದಿ: Paaru: ಅಖಿಲಾಂಡೇಶ್ವರಿಗೆ ಅತ್ತೆ ಎಂದ ಪಾರು! ಸರಿ ಹೋಗುತ್ತಾ ಅತ್ತೆ-ಸೊಸೆ ಸಂಬಂಧ?

  ಮೊಬೈಲ್ ಸಿಗದೇ ಪೇಚಿಗೆ ಸಿಲುಕಿರುವ ಸಾನಿಯಾ
  ಇನ್ನು ಅಮ್ಮಮ್ಮನಿಗೆ, ಸಾನಿಯಾ ಬೈದು, ಧಮ್ಕಿ ಹಾಕಿದ ವಿಡಿಯೋ ರತ್ನಮಾಲಾ ಮೊಬೈಲ್‍ನಲ್ಲಿ ಇದೆ. ಮೊಬೈಲ್ ತಗೊಂಡು ಹೇಗಾದ್ರೂ ಮೆಮೋರಿ ಹಾಳು ಮಾಡಬೇಕು ಎಂದು ಸಾನಿಯಾ ಕಾಯುತ್ತಿದ್ದಾಳೆ.

  colors Kannada Serials, Kannada serial, Kannadathi serial cast, Kannadathi today episode, ಕನ್ನಡತಿ ಧಾರಾವಾಹಿ, ಕನ್ನಡತಿ ಅಭಿಮಾನಿಗಳು, Kannada news, Karnataka news,
  ಭುವಿ, ಸಾನಿಯಾ, ವರೂಧಿನಿ


  ಆದ್ರೆ ಆಗುತ್ತಿಲ್ಲ. ಹೀಗಾಗಲೇ ಒಮ್ಮೆ ಮೊಬೈಲ್ ಕದಿಯಲು ಹೋಗಿ, ಅವಳ ಪ್ರಯತ್ನ ಸಕ್ಸಸ್ ಆಗಿಲ್ಲ. ಹೇಗಾದ್ರೂ ಮೊಬೈಲ್ ಕದಿಯಬೇಕು ಎಂದು ಸಂಚು ಹೂಡುತ್ತಿದ್ದಾಳೆ. ಅದಕ್ಕೆ ಅಮ್ಮಮ್ಮ ಮೊಬೈಲ್‍ನ್ನು ಯಾವಾಗಲು ಹತ್ತಿರದಲ್ಲೇ ಇಟ್ಟುಕೊಂಡು ಇರುತ್ತಾರೆ. ಸಾನಿಯಾ ಎಲ್ಲಿ ವಿಡಿಯೋ ಡಿಲಿಟ್ ಮಾಡಿ ಬಿಡ್ತಾಳೋ ಅಂತ ಮೊಬೈಲ್ ಜೋಪಾನ ಮಾಡುತ್ತಿದ್ದಾರೆ.
  Published by:Savitha Savitha
  First published: