Ramachari: ರಾಮಾಚಾರಿ ಮನೆಯಲ್ಲಿ ಡ್ರಗ್ಸ್ ಇರಿಸಿ, ಪೊಲೀಸರಿಂದ ರೇಡ್ ಮಾಡಿಸಿದ ಚಾರು ಅಮ್ಮ! ಸಂಕಷ್ಟದಲ್ಲಿ ಕುಟುಂಬ

ರಾಮಾಚಾರಿ ಮನೆಯವರೆಲ್ಲಾ ದುಡ್ಡು ಸಿಕ್ಕ ಖುಷಿಯಲ್ಲಿದ್ದಾಗ, ಪೊಲೀಸರು ಮನೆಗೆ ಎಂಟ್ರಿ ಕೊಡುತ್ತಾರೆ. ಮನೆಯವರೆಲ್ಲಾ ಗಾಬರಿ ಆಗುತ್ತಾರೆ. ಏಕೆ ಬಂದಿದ್ದೀರಿ ಅಂತ ಕೇಳ್ತಾರೆ. ಅದಕ್ಕೆ ಇನ್ಸ್‍ಪೆಕ್ಟರ್, ನಿಮ್ಮ ಮನೆಯಿಂದ ಡ್ರಗ್ಸ್ ಸಪ್ಲೈ ಆಗುತ್ತಿದೆ ಎನ್ನುವ ಖಚಿತ ಮಾಹಿತಿ ಬಂದಿದೆ ಅದಕ್ಕೆ ಬಂದಿದ್ದೇವೆ ಎನ್ನುತ್ತಾರೆ.

ರಾಮಾಚಾರಿ

ರಾಮಾಚಾರಿ

  • Share this:
    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ (Serials) ರಾಮಾಚಾರಿ (Ramachari) ಕೂಡ ಒಂದು. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ರಾತ್ರಿ 9 ಗಂಟೆಗೆ ಪ್ರಸಾರ ಆಗುತ್ತೆ. ಈ ಕಥೆಯ ನಾಯಕ ರಾಮಾಚಾರಿ. ಸುಸಂಸ್ಕೃತ ಮನೆ ಹುಡುಗ. ಆಚಾರ, ವಿಚಾರ, ಹಿರಿಯರಿಗೆ ಗೌರವ ಕೊಡುವ ಪಾತ್ರ. ಅಲ್ಲದೇ ಅಪಾರ ಬುದ್ಧಿವಂತ. ಈ ಕಥೆಯ ನಾಯಕಿ ಚಾರುಲತಾ. ಶ್ರೀಮಂತರ ಮನೆ ಹುಡುಗಿ ದುಡ್ಡಿನ ಮದದಿಂದ ಎಲ್ಲರನ್ನೂ ಕೇವಲವಾಗಿ ನೋಡುವ ಪಾತ್ರ. ರಾಮಾಚಾರಿ ಮಾಡಿದ ಅವಮಾನದಿಂದ ಚಾರುಲತಾ ಬೇಸತ್ತಿದ್ದಾಳೆ. ಹೇಗಾದ್ರೂ ಅವನಿಗೆ ತೊಂದರೆ ಕೊಡಬೇಕು ಎಂದು ಕಾಯುತ್ತಿದ್ದಾಳೆ. ಅದಕ್ಕೆ ಚಾರು ಅಮ್ಮ ಮಾನ್ಯತಾ, ರಾಮಾಚಾರಿಯನ್ನು ಡ್ರಗ್ಸ್ (Drugs) ಎಂಬ ಸುಳಿಯಲ್ಲಿ ಸಿಲುಕಿಸಿದ್ದಾಳೆ. ಅವರ ಮರ್ಯಾದೆ ತೆಗೆಯುವ ಪ್ಲ್ಯಾನ್ (Plan) ಮಾಡಿದ್ದಾಳೆ.

    ರಾಮಾಚಾರಿಗೆ ಮನೆ ಪತ್ರ ಅಡ ಇಡದೇ ದುಡ್ಡು ಕೊಡಿಸಿದ ಮಾನ್ಯತಾ

    ರಾಮಾಚಾರಿ ಅತ್ತಿಗೆ ಅಪರ್ಣಾ ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ಆಪರೇಷನ್‍ಗಾಗಿ ಲಕ್ಷ ಲಕ್ಷ ದುಡ್ಡು ಬೇಕಿದೆ. ಅದಕ್ಕೆ ಮನೆಯವರೆಲ್ಲಾ ಸೇರಿ ಮನೆ ಆಸ್ತಿ ಪತ್ರ ಅಡವಿಟ್ಟು, ದುಡ್ಡು ಪಡೆಯಲು ನಿರ್ಧರಿಸಿದ್ದಾರೆ. ರಾಮಾಚಾರಿ ಮನೆ ಪತ್ರ ಅಡವಿಟ್ಟು ಸಾಲ ಪಡೆಯುತ್ತಾನೆ ಎಂದು ಮಾನ್ಯತಾಗೆ ಗೊತ್ತಾಗಿದೆ. ಅದಕ್ಕೆ ತಕ್ಷಣ ಅವಳು ದುಡ್ಡು ಕೊಡುವವನಿಗೆ ಕರೆ ಮಾಡಿದ್ದಾಳೆ. ರಾಮಾಚಾರಿ ಬಳಿ ಯಾವುದೇ ಆಸ್ತಿ ಪತ್ರ ಪಡೆಯದೇ ಅವನು ಕೇಳಿದಷ್ಟು ದುಡ್ಡು ಕೊಡು ಎನ್ನುತ್ತಾಳೆ. ಅವರು ಸಾಲ ಕೊಡುತ್ತಾರೆ.

    ಮನೆ ಮಂದಿಯೆಲ್ಲಾ ಖುಷಿಯಲ್ಲಿದ್ದಾರೆ
    ಅಪರ್ಣಾ ಆಪರೇಷನ್‍ಗೆ ದುಡ್ಡು ಸಿಕ್ಕಿದ ಹಿನ್ನೆಲೆ ಮನೆಯವರೆಲ್ಲಾ ಖುಷಿಯಾಗಿದ್ದಾರೆ. ಇನ್ನೇನು ನಮ್ಮ ಕಷ್ಟ ಕಳೆಯಿತು. ಅಪರ್ಣಾ ಗುಣವಾಗುತ್ತಾಳೆ. ಲಕ್ಷ್ಮಿ ದೇವಿ ಮನೆಗೆ ಬಂದಳು ಎಂದು ಸಂತಸಗೊಂಡಿದ್ದಾರೆ. ಆಗಲೇ ಆಘಾತವೊಂದು ಕಾದಿದೆ.

    ಇದನ್ನೂ ಓದಿ: Kendasampige: ಕಾಲೋನಿ ನೀರಿಗಾಗಿ ಕಾರ್ಪೊರೇಟರ್ ಮನೆ ಬಾಗಿಲಿಗೆ ಕೊಡ ಹಿಡಿದು ಬಂದ ಸುಮನಾ?

    ರಾಮಾಚಾರಿ ಮನಗೆ ಡ್ರಗ್ಸ್ ಕಳಿಸಿದ ಮಾನ್ಯತಾ
    ಮಾನ್ಯತಾ ಬರೀ ದುಡ್ಡು ಕೊಡಿಸಿ ಸುಮ್ಮನಾಗಿಲ್ಲ. ಕೋರಿಯರ್ ಹುಡುಗನ ಮೂಲಕ ರಾಮಾಚಾರಿ ಮನೆಗೆ ಡ್ರಗ್ಸ್ ಕಳಿಸಿದ್ದಾಳೆ. ಕೋರಿಯರ್ ಹುಡುಗ ನೀರು ಕುಡಿಯುವ ನೆಪ ಹೇಳಿ. ರಾಮಾಚಾರಿ ಮನೆ ಒಳಗೆ ಡ್ರಗ್ಸ್ ಇದ್ದ ಬ್ಯಾಗ್ ಇಟ್ಟಿದ್ದಾನೆ. ಬ್ಯಾಗ್ ನಲ್ಲಿ ಏನಿದೆ ಎಂದು ನೋಡದ ಚಾರಿ ಮನೆಯವರು, ಬ್ಯಾಗ್‍ನ್ನು ಒಳಗೆ ಜೋಪಾನವಾಗಿ ಎತ್ತಿಟ್ಟಿದ್ದಾರೆ.

    colors Kannada Serials, Kannada serial, Ramachari serial, Ramachari today episode, police enter hero home in episode, ರಾಮಾಚಾರಿ ಧಾರಾವಾಹಿ, ರಾಮಾಚಾರಿ ಅಭಿಮಾನಿಗಳು, Kannada news, Karnataka news,
    ಮಾನ್ಯತಾ


    ರಾಮಾಚಾರಿ ಮನೆಗೆ ಬಂದ ಪೊಲೀಸರು
    ರಾಮಾಚಾರಿ ಮನೆಯವರೆಲ್ಲಾ ದುಡ್ಡು ಸಿಕ್ಕ ಖುಷಿಯಲ್ಲಿದ್ದಾಗ, ಪೊಲೀಸರು ಮನೆಗೆ ಎಂಟ್ರಿ ಕೊಡುತ್ತಾರೆ. ಮನೆಯವರೆಲ್ಲಾ ಗಾಬರಿ ಆಗುತ್ತಾರೆ. ಏಕೆ ಬಂದಿದ್ದೀರಿ ಅಂತ ಕೇಳ್ತಾರೆ. ಅದಕ್ಕೆ ಇನ್ಸ್‍ಪೆಕ್ಟರ್, ನಿಮ್ಮ ಮನೆಯಿಂದ ಡ್ರಗ್ಸ್ ಸಪ್ಲೈ ಆಗುತ್ತಿದೆ ಎನ್ನುವ ಖಚಿತ ಮಾಹಿತಿ ಬಂದಿದೆ ಅದಕ್ಕೆ ಬಂದಿದ್ದೇವೆ ಎನ್ನುತ್ತಾರೆ. ಅದಕ್ಕೆ ರಾಮಾಚಾರಿ ನಿಮಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ ಎನ್ನುತ್ತಾನೆ. ಅದಕ್ಕೆ ಮನೆ ಹುಡುಕಿದ್ರೆ ಗೊತ್ತಾಗುತ್ತೆ ಬಿಡಿ ಎನ್ನುತ್ತಾರೆ.

    ಮನೆಯನ್ನು ಹುಡುಕುತ್ತಿರುವ ಪೊಲೀಸರು
    ಡ್ರಗ್ಸ್ ಇದೆ ಎಂದು ಪೊಲೀಸರು ರಾಮಾಚಾರಿಯ ಮನೆಯನ್ನೆಲ್ಲಾ ಹುಡುಕುತ್ತಿದ್ದಾರೆ. ಮನೆಯ ಪ್ರತಿಯೊಂದು ಮೂಲೆ, ಮೂಲೆಯನ್ನು ಸರ್ಚ್ ಮಾಡುತ್ತಿದ್ದಾರೆ. ಎಲ್ಲ ವಸ್ತುಗಳನ್ನು ಕಿತ್ತು ಹಾಕುತ್ತಿದ್ದಾರೆ. ಇದನ್ನು ನೋಡಿ ಮನೆಯವರೆಲ್ಲಾ ಆತಂಕಗೊಂಡಿದ್ದಾರೆ.

    ಇದನ್ನೂ ಓದಿ: Actress Sara Annaiah: ಸಿಂಪಲ್ ಸೀರೆಯಲ್ಲೂ ಸೂಪರ್ ಆಗಿ ಕಾಣ್ತಾರೆ ಸಾರಾ ಅಣ್ಣಯ್ಯ, ಇಲ್ನೋಡಿ ಫೋಟೋಸ್

    ಮಾನ್ಯತಾ ಅದಕ್ಕೆ ಯಾವುದೇ ಆಧಾರವಿಲ್ಲದೇ ದುಡ್ಡು ಕೊಡಿಸಿದ್ದು. ಸದ್ಯ ರಾಮಾಚಾರಿ ಮನೆಯಲ್ಲಿ 40 ಲಕ್ಷ ಹಣ ಇದೆ. ಅದು ಎಲ್ಲಿದ ಬಂತು ಎಂದು ಹೇಳಲು ಯಾವುದೇ ದಾಖಲೆ ಇಲ್ಲ. ಇನ್ನು ಡ್ರಗ್ಸ್ ಬೇರೆ ಇಟ್ಟಿದ್ದಾರೆ. ಇದರಿಂದ ರಾಮಾಚಾರಿ ಕುಟುಂಬ ಸಂಕಷ್ಟದಲ್ಲಿ ಸಿಲುಕಿದೆ. ಈಗ ರಾಮಾಚಾರಿ ಮತ್ತು ಅವರ ಮನೆಯವರನ್ನು ಪೊಲೀಸರು ಅರೆಸ್ಟ್ ಮಾಡ್ತಾರಾ ನೋಡಬೇಕು. ಎಲ್ಲವನ್ನೂ ನೋಡಲು ರಾಮಾಚಾರಿ ಸಂಚಿಕೆ ವೀಕ್ಷಿಸಬೇಕು.
    Published by:Savitha Savitha
    First published: