Ramachari Serial: ಇನ್ಮೇಲೆ ಕಿತ್ತಾಡೋದು ಬೇಡ ಎಂದು ರಾಮಾಚಾರಿಗೆ ಹೇಳಿದ ಚಾರು! ಇದ್ಯಾವ ಹೊಸ ಪ್ಲಾನ್?

ತಾನು ಅನುಭಿಸಿದ ನೋವು ಸಾಕು ಎಂದು ರಾಮಾಚಾರಿಗೆ ಇನ್ಮೇಲೆ ನನ್ನ ಸುದ್ದಿಗೆ ಬರಬೇಡ. ಇನ್ಮೇಲೆ ಕಿತ್ತಾಡೋದು ಬೇಡ ಎಂದು ಚಾರುಲತಾ ಹೇಳಿದ್ದಾಳೆ. ಸೇಡು ತೀರಿಸಿಕೊಳ್ಳಲು ರಾಮಾಚಾರಿಯನ್ನು ಬಿಟ್ಟು ಹಿಡಿಯುವ ತಂತ್ರಕ್ಕೆ ಮುಂದಾದ್ಲಾ ಚಾರು ಅನ್ನೋ ಅನು ಅನುಮಾನಗಳು ಹೆಚ್ಚಾಗಿವೆ.

ರಾಮಾಚಾರಿ

ರಾಮಾಚಾರಿ

 • Share this:
  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ (Serials) ರಾಮಾಚಾರಿ (Ramachari) ಕೂಡ ಒಂದು. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ರಾತ್ರಿ 9 ಗಂಟೆಗೆ ಪ್ರಸಾರ ಆಗುತ್ತೆ. ಈ ಕಥೆಯ ನಾಯಕ (Hero) ರಾಮಾಚಾರಿ. ಸುಸಂಸ್ಕೃತ ಮನೆ ಹುಡುಗ. ಆಚಾರ, ವಿಚಾರ, ಹಿರಿಯರಿಗೆ ಗೌರವ ಕೊಡುವ ಪಾತ್ರ. ಅಲ್ಲದೇ ಅಪಾರ ಬುದ್ಧಿವಂತ. ಈ ಕಥೆಯ ನಾಯಕಿ ಚಾರುಲತಾ. ಶ್ರೀಮಂತರ ಮನೆ ಹುಡುಗಿ ದುಡ್ಡಿನ ಮದದಿಂದ ಎಲ್ಲರನ್ನೂ ಕೇವಲವಾಗಿ ನೋಡುವ ಪಾತ್ರ. ರಾಮಾಚಾರಿಯಿಂದ ತಾನು ಅನುಭವಿಸಿದ ನೋವು ಸಾಕು ಎಂದು, ರಾಮಾಚಾರಿಗೆ ಇನ್ಮೇಲೆ ನನ್ನ ಸುದ್ದಿಗೆ ಗೆಬರಬೇಡ. ಇನ್ಮೇಲೆ ಕಿತ್ತಾಡೋದು ಬೇಡ ಎಂದು ಚಾರುಲತಾ ಹೇಳಿದ್ದಾಳೆ. ಸೇಡು (Revenge) ತೀರಿಸಿಕೊಳ್ಳಲು, ರಾಮಾಚಾರಿಯನ್ನು ಬಿಟ್ಟು ಹಿಡಿಯುವ ತಂತ್ರಕ್ಕೆ ಮುಂದಾಗಿದ್ದಾಳಾ ಚಾರು ಅನ್ನೋ ಅನುಮಾನಗಳು ಹೆಚ್ಚಾಗಿವೆ.

  ನನ್ನ ಪಾಡಿಗೆ ನನ್ನ ಬಿಟ್ಟು ಬಿಡು ಎಂದ ಚಾರು

  ನನ್ನ ಪಾಡಿಗೆ ನನ್ನ ಬಿಟ್ಟು ಬಿಡು ಎಂದ ಚಾರು ರಾಮಾಚಾರಿ ಬಳಿ ಕೇಳಿದ್ದಾಳೆ. ಅದಕ್ಕೆ ರಾಮಾಚಾರಿ, ನಾನು ನಿಮ್ಮ ಸುದ್ದಿಗೆ ಬಂದಿಲ್ಲ. ನೀವೆ ಬಂದಿದ್ದು, ಅನುಭವಿಸಿದ್ದು ನೀವೇ. ಹೌದು ನಿನ್ನಿಂದ ನಾನು ತುಂಬಾ ಅನುಭವಿಸಿ ಬಿಟ್ಟೆ. ನಿನಗೆ ಯಾವತ್ತೂ ನನ್ನಿಂದ ಕ್ಷಮೆ ಇಲ್ಲ ಎಂದು ಚಾರು ಹೇಳುತ್ತಾಳೆ. ನಿನ್ನ ಪಾಡಿಗೆ ನೀನು ಇರು. ನನ್ನ ಪಾಡಿಗೆ ನಾನು ಇರುತ್ತೇನೆ. ನನ್ನ, ನಿನ್ನ ಮಧ್ಯೆ ಏನೂ ಇಲ್ಲ. ಎಲ್ಲ ಡಿಲೀಟ್ ಆಗೋಯ್ತು ಎಂದಿದ್ದಾಳೆ. ಚಾರು ದಿಢೀರ್ ಬದಲಾವಣೆ ಕಂಡು ರಾಮಾಚಾರಿ ಶಾಕ್ ಆಗಿದ್ದಾನೆ.

  ಚಾರು ಬದಲಾವಣೆ ಹಿಂದೆ ಮಾನ್ಯತಾ ಕೈವಾಡ?

  ಮಾನ್ಯತಾ, ಚಾರುಲತಾ ಅಮ್ಮ. ಹಣದ ಆಸೆಗೆ ಗಂಡನ ಕಂಪನಿಯಲ್ಲಿ ದುಡ್ಡು ಹೊಡೆದು ಸಿಕ್ಕಿಬಿದ್ದಿದ್ದಾಳೆ. ಅಲ್ಲದೇ ಸೈನ್ ಮಾಡುವ ಅಥಾರಿಟಿಯನ್ನು ಕಳೆದುಕೊಂಡಿದ್ದಾಳೆ. ಇದಕ್ಕೆಲ್ಲಾ ರಾಮಾಚಾರಿಯೇ ಕಾರಣ ಎಂದು ತಿಳಿದಿದೆ. ಅದಕ್ಕೆ ಅವನು ಜೀವನದಲ್ಲಿ ಸೋಲು ಕಾಣಬೇಕು. ಜೀವನ ಪೂರ್ತಿ ನರಕ ಅನುಭವಿಸಬೇಕು ಎಂದು ಪ್ಲ್ಯಾನ್ ಮಾಡಿದ್ದಾಳೆ. ಸುಮ್ಮನೇ ರಾಮಾಚಾರಿಯನ್ನು ಕ್ಷಮೆ ಕೇಳುವಂತೆ ನಾಟಕ ಮಾಡು ಎಂದಿದ್ದಾಳೆ. ಅವರ ಅಮ್ಮ ಹೇಳಿದಂತೆ ಚಾರು ಮಾಡಿದ್ದಾಳೆ.

  ಇದನ್ನೂ ಓದಿ: Jote Joteyali: ಆರ್ಯವರ್ಧನ್ ಪಾತ್ರಕ್ಕೆ ಆಫರ್ ಬಂದಿದ್ದು ನಿಜ ಎಂದ ಅನೂಪ್ ಭಂಡಾರಿ, ಒಪ್ತಾರಾ ಸ್ಟಾರ್ ಡೈರೆಕ್ಟರ್? 

  ಅತ್ತಿಗೆಗಾಗಿ ಆಸ್ತಿ ಪತ್ರ ಅಡವಿಡಲು ಬಂದ ರಾಮಾಚಾರಿ!

  ರಾಮಾಚಾರಿ ಅತ್ತಿಗೆ ಅಪರ್ಣಾ ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ಆಪರೇಷನ್‍ಗಾಗಿ ಲಕ್ಷ ಲಕ್ಷ ದುಡ್ಡು ಬೇಕಿದೆ. ಅದಕ್ಕೆ ಮನೆಯವರೆಲ್ಲಾ ಸೇರಿ ಮನೆ ಆಸ್ತಿ ಪತ್ರ ಅಡವಿಟ್ಟು, ದುಡ್ಡು ಪಡೆಯಲು ನಿರ್ಧರಿಸಿದ್ದಾರೆ. ಅಂತೆಯೇ ತನ್ನ ಗೆಳೆಯ ಮುರಾರಿಗೆ ಪರಿಚಯ ಇರುವ ವ್ಯಕ್ತಿ ಬಳಿ ಹೋಗಿದ್ದಾರೆ.

  ಮಾನ್ಯತಾಗೆ ಗೊತ್ತಾದ ವಿಷಯ
  ರಾಮಾಚಾರಿ ಮನೆ ಪತ್ರ ಅಡವಿಟ್ಟು ಸಾಲ ಪಡೆಯುತ್ತಾನೆ ಎಂದು ಮಾನ್ಯತಾಗೆ ಗೊತ್ತಾಗಿದೆ. ಅದಕ್ಕೆ ತಕ್ಷಣ ಅವಳು ದುಡ್ಡು ಕೊಡುವವನಿಗೆ ಕರೆ ಮಾಡಿದ್ದಾಳೆ. ಅವನ ಜೊತೆ ಮಾತನಾಡಿದ್ದಾಳೆ. ಆದ್ರೆ ಏನು ಮಾತನಾಡಿದ್ದಾಳೆ ಎಂದು ಇನ್ನೂ ಗೊತ್ತಾಗಿಲ್ಲ. ಇಲ್ಲಿಯೂ ಮಾನ್ಯತಾ ತನ್ನ ಕುತಂತ್ರ ಬುದ್ಧಿ ತೋರಿಸ್ತಾಳಾ ನೋಡಬೇಕು.

  colors Kannada Serials, Kannada serial, Rama Chari serial, Rama Chari today episode,, ರಾಮಾಚಾರಿ ಧಾರಾವಾಹಿ, ರಾಮಾಚಾರಿ ಅಭಿಮಾನಿಗಳು, ಕಲರ್ಸ್ ಕನ್ನಡ ಧಾರಾವಾಹಿಗಳು, Kannada news, Karnataka news,
  ಮಾನ್ಯತಾ


  ರಾಮಾಚಾರಿಗೆ ಸಾಲ ಸಿಗುತ್ತಾ?
  ರಾಮಾಚಾರಿ ತನ್ನ ಅತ್ತಿಗೆ ಆಪರೇಷನ್‍ಗೆ ಮನೆ ಪತ್ರ ಅಡ ಇಡುತ್ತಿರುವ ವಿಷಯ ಮಾನ್ಯತಾಗೆ ಗೊತ್ತಾಗಿದೆ. ಆದ ಕಾರಣ ಅವಳು ರಾಮಾಚಾರಿಗೆ ಸಾಲ ನೀಡುವಂತೆ ಹೇಳುತ್ತಾಳಾ? ಎನ್ನುವುದು ಗೊತ್ತಿಲ್ಲ.

  ಇದನ್ನೂ ಓದಿ: Kannadathi: ಕಣ್ಮರೆಯಾದ ರತ್ನಮಾಲಾ, ಅಮ್ಮಮ್ಮ ಕಾಣದೇ ಕಂಗಾಲಾದ ಭುವಿ; ಇತ್ತ ಮೊಬೈಲ್​​ಗಾಗಿ ಸಾನಿಯಾ ಹುಡುಕಾಟ

  ರಾಮಾಚಾರಿಗೆ ಸಾಲ ಸಿಗುತ್ತಾ? ಸಾಲ ಸಿಗಲ್ವಾ? ತನ್ನ ಅತ್ತಿಗೆಯ ಆಪರೇಷನ್ ಮಾಡಿಸ್ತಾನಾ. ಎಲ್ಲವನ್ನೂ ನೋಡಲು ರಾಮಾಚಾರಿ ಸಂಚಿಕೆ ನೋಡಬೇಕು.
  Published by:Savitha Savitha
  First published: