Ramachari: ದುಡ್ಡಿನ ಆಸೆ ತೋರಿಸಿದ ಚಾರು ಜೈಲು ಸೇರುತ್ತಾಳಾ? ರಾಮಾಚಾರಿ ಕೊಟ್ಟ ಶಾಕ್‍ಗೆ ತತ್ತರ!

ಚಾರು ಕೋಪಿಸಿಕೊಂಡು ತನ್ನ ದುಡ್ಡು ಕೊಡು ಎನ್ನುತ್ತಾಳೆ. ಅದಕ್ಕೆ ರಾಮಾಚಾರಿ ಕಳ್ಳರು ಜೈಲು ಸೇರಬೇಕು. ದುಡ್ಡು ಸರ್ಕಾರಕ್ಕೆ ಸೇರಬೇಕು ಎನ್ನುತ್ತಾನೆ. ಅದಕ್ಕೆ ಚಾರು ನೀನು ಈಗ ಪೊಲೀಸರಿಗೆ ಕರೆ ಮಾಡುತ್ತೀಯಾ ಅಂತಾಳೆ. ಅಷ್ಟರಲ್ಲೇ ಪೊಲೀಸರು ಎಂಟ್ರಿ ಕೊಟ್ಟು ನಾವ್ ಬಂದಿದ್ದೇವೆ ಮೇಡಂ ಎನ್ನುತ್ತಾರೆ. ಪೊಲೀಸರನ್ನು ನೋಡಿ ಚಾರು ಶಾಕ್ ಆಗಿದ್ದಾಳೆ.

ರಾಮಾಚಾರಿ-ಚಾರು

ರಾಮಾಚಾರಿ-ಚಾರು

 • Share this:
  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ ರಾಮಾಚಾರಿ (Ramachari) ಕೂಡ ಒಂದು. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ರಾತ್ರಿ 9 ಗಂಟೆಗೆ ಪ್ರಸಾರ ಆಗುತ್ತೆ. ಈ ಕಥೆಯ ನಾಯಕ ರಾಮಾಚಾರಿ. ತುಂಬಾ ನ್ಯಾಯವಂತ. ಸತ್ಯವಂತ. ಸುಳ್ಳಿನ ಆಟ ಇವನ ಮುಂದೆ ನಡೆಯುವುದಿಲ್ಲ. ನಾಯಕಿ ಚಾರುಲತಾ. ಹಣದ ಮದದಿಂದ ಮೆರೆಯುತ್ತಿರುವ ಅಹಂಕಾರದ ಹೆಣ್ಣು. ಈಕೆಗೆ ತನ್ನ ಅಪ್ಪನ ಕಂಪನಿ (Company) ಅಧಿಕಾರ ಹಿಡಿಯಲು ಆಸೆ. ಅದಕ್ಕೆ ಅಡ್ಡ ದಾರಿ ಹಿಡಿದಿದ್ದಾಳೆ. ಸಿಇಓ (CEO) ಪಟ್ಟಕ್ಕೇರಲು ಅಪ್ಪ ಕೇಳಿದ ಸರ್ಟಿಫಿಕೇಟ್ ನ್ನು ರಾಮಾಚಾರಿಯಿಂದ ಪಡೆಯಲು 1 ಕೋಟಿ (1 crore) ಆಫರ್ (Offer)  ನೀಡಿದ್ದಳು. ಆದ್ರೆ ಆ ದುಡ್ಡನ್ನು ಕೊಡಲು ಹೋದಾಗ, ರಾಮಾಚಾರಿ ಕೊಟ್ಟ ಶಾಕ್‍ಗೆ ಚಾರು ತತ್ತರಿಸಿ ಹೋಗಿದ್ದಾಳೆ.

  ರಾಮಾಚಾರಿಗೆ 1 ಕೋಟಿ ಆಫರ್ ನೀಡಿದ್ದ ಚಾರು
  ರಾಮಾಚಾರಿ ಎಷ್ಟೇ ಅವಮಾನ ಮಾಡಿದ್ರೂ ಚಾರು ತಲೆ ಕೆಡಿಸಿಕೊಂಡಿಲ್ಲ. ಆಕೆಗೆ ಬೇಕಾಗಿರೋದು ಸರ್ಟಿಫಿಕೇಟ್. ಅದಕ್ಕಾಗಿ ಅವಳು ಏನು ಬೇಕಾದ್ರೂ ಮಾಡಲು ರೆಡಿ. ರಾಮಾಚಾರಿ ನೀನು ನಾನು ಕೇಳಿದ ಸರ್ಟಿಫಿಕೇಟ್ ಕೊಟ್ರೆ, ನಿನಗೆ 1 ಕೋಟಿ ಕ್ಯಾಶ್ ಕೊಡುತ್ತೇನೆ ಎನ್ನುತ್ತಾಳೆ. ಅಂತೆಯೇ ಸಂಜೆ ಒಳಗೆ 1 ಕೋಟಿ ಕ್ಯಾಶ್ ತಂದು ರಾಮಾಚಾರಿ ಮುಂದೆ ಇಡುತ್ತಾಳೆ. ರಾಮಾಚಾರಿ ಶಾಕ್ ಆಗುತ್ತಾನೆ.

  ದುಡ್ಡು ಕೊಟ್ಟು ರಾಮಾಚಾರಿಗೆ ಬೈದ ಚಾರು
  1 ಕೋಟಿ ಕ್ಯಾಶ್‍ನ್ನು ರಾಮಾಚಾರಿ ತನ್ನ ಸ್ನೇಹಿತನ ಗೋಡೌನ್‍ಗೆ ತರಲು ಹೇಳಿರುತ್ತಾನೆ. ಅಂತೆಯೇ ಅಲ್ಲಿಗೆ ಚಾರು ಬರುತ್ತಾಳೆ. 1 ಕೋಟಿ ಮುಂದೆ ಇಡುತ್ತಾಳೆ. ಮೇಡಂ ಇಷ್ಟು ದೊಡ್ಡ ಮೊತ್ತದ ಹಣ ಇಷ್ಟು ಬೇಗ ಹೇಗೆ ರೆಡಿ ಮಾಡಿದ್ರಿ ಅಂತ ಕೇಳ್ತಾನೆ. ಅದಕ್ಕೆ ಚಾರು, ದುಡ್ಡಿನಲ್ಲಿ 2 ವಿಧ ಒಂದು ಬ್ಲ್ಯಾಕ್ ಮನಿ, ಇನ್ನೊಂದು ವೈಟ್. ಇದು ಬ್ಲ್ಯಾಕ್ ಮನಿ, ಟ್ಯಾಕ್ಸ್ ಕಟ್ಟದೇ ಉಳಿಸಿಕೊಂಡಿರೋ ಹಣ. ಬೇಕಾದ್ರೆ ಎಣಿಸಿಕೋ ಅಂತಾಳೆ. ಅಲ್ಲದೇ ಸರ್ಟಿಫಿಕೇಟ್ ನ್ನು ರಾಮಾಚಾರಿಯಿಂದ ಪಡೆದು, ನಿನ್ನ ಜನ್ಮಕ್ಕಿಷ್ಟು ಎಂದು ಬೈದು ಹೊರಡುತ್ತಾಳೆ.

  ಇದನ್ನೂ ಓದಿ: Jote Joteyali: ವಿಷ್ಣುವರ್ಧನ್ ಅಳಿಯ ಅನಿರುದ್ಧ್‌ಗೆ ಕನ್ನಡ ಕಿರುತೆರೆಯಿಂದ ಬಹಿಷ್ಕಾರ? ಜೊತೆ ಜೊತೆಯಲಿ ಏನಾಯ್ತು?

  ಸರ್ಟಿಫಿಕೇಟ್ ಸರಿ ಇದೆಯೇ ನೋಡಿಕೊಳ್ಳಿ ಎಂದ ರಾಮಾಚಾರಿ
  ಚಾರು ರಾಮಾಚಾರಿಗೆ ಬೈದು ಇನ್ನೇನು ಹೊರಡಬೇಕು, ಅಷ್ಟರಲ್ಲಿ ರಾಮಾಚಾರಿ, ಚಾರುಗೆ ಸರ್ಟಿಫಿಕೇಟ್ ಸರಿ ಇದೆಯೇ ನೋಡಿಕೊಳ್ಳಿ ಎನ್ನುತ್ತಾನೆ. ತೆಗೆದು ನೋಡಿದ ಚಾರುಗೆ ಕೋಪ ಬರುತ್ತೆ. ಅದರಲ್ಲಿ ರಾಮಾಚಾರಿಯನ್ನು ದುಡ್ಡಿನಿಂದ ಕೊಳ್ಳಲು ಸಾಧ್ಯವಿಲ್ಲ ಎಂದು ಬರೆದಿರುತ್ತೆ. ಆಗ ರಾಮಾಚಾರಿ ನಗುತ್ತಾನೆ.

  ಜೈಲು ಸೇರ್ತಾಳಾ ಸೊಕ್ಕಿನ ರಾಣಿ
  ಚಾರು ಕೋಪಿಸಿಕೊಂಡು ತನ್ನ ದುಡ್ಡು ಕೊಡು ಎನ್ನುತ್ತಾಳೆ. ಅದಕ್ಕೆ ರಾಮಾಚಾರಿ ಕಳ್ಳರು ಜೈಲು ಸೇರಬೇಕು. ದುಡ್ಡು ಸರ್ಕಾರಕ್ಕೆ ಸೇರಬೇಕು ಎನ್ನುತ್ತಾನೆ. ಅದಕ್ಕೆ ಚಾರು ನೀನು ಈಗ ಪೊಲೀಸರಿಗೆ ಕರೆ ಮಾಡುತ್ತೀಯಾ ಅಂತಾಳೆ. ಅಷ್ಟರಲ್ಲೇ ಪೊಲೀಸರು ಎಂಟ್ರಿ ಕೊಟ್ಟು ನಾವ್ ಬಂದಿದ್ದೇವೆ ಮೇಡಂ ಎನ್ನುತ್ತಾರೆ. ಪೊಲೀಸರನ್ನು ನೋಡಿ ಚಾರು ಶಾಕ್ ಆಗಿದ್ದಾಳೆ.

  ಇದನ್ನೂ ಓದಿ: Jote Joteyali: ಅನು ಅಮ್ಮನಾಗ್ತಿರೋ ವಿಷಯ ಆರ್ಯವರ್ಧನ್‍ಗೆ ಗೊತ್ತಾಯ್ತು! ಆಸ್ಪತ್ರೆಗೆ ಓಡೋಡಿ ಬಂದ ಆರ್ಯ

  ದುಡ್ಡಿಗೆ ರಾಮಾಚಾರಿ ಸೇಲ್ ಆದ. ಇನ್ನು ಮುಂದೆ ನನ್ನ ಮುಂದೆ ತಲೆ ಬಗ್ಗಿಸಿ ನಿಲ್ಲಬೇಕು. ಹಣದ ಮುಂದೆ ಏನೂ ಇಲ್ಲ. ಹಣಕ್ಕೆ ನಿಯತ್ತನ್ನೇ ಮಾರಿಕೊಂಡ ಎಂದು ಮೆರೆಯುತ್ತಿದ್ದ ಚಾರುಗೆ ಸರಿಯಾಗಿ ಚಳ್ಳೇ ಹಣ್ಣು ತಿನ್ನಿಸಿದ್ದಾನೆ ರಾಮಾಚಾರಿ. ಚಾರುಗೆ ಪೊಲೀಸರನ್ನು ನೋಡಿ ಭಯ ಶುರುವಾಗಿದೆ. ಎಲ್ಲಿ ತನ್ನನ್ನು ಅರೆಸ್ಟ್ ಮಾಡ್ತಾರೋ ಅಂತ ಗಾಬರಿಯಾಗಿದ್ದಾಳೆ. ಇವತ್ತು ಸೊಕ್ಕಿನ ರಾಣಿ ಜೈಲು ಸೇರ್ತಾಳ ನೋಡಬೇಕು. ಎಲ್ಲವನ್ನೂ ನೋಡಲು ರಾಮಾಚಾರಿ ಸಂಚಿಕೆ ನೋಡಬೇಕು.
  Published by:Savitha Savitha
  First published: