Ramachari: ರಾಮಾಚಾರಿ ಮನೆಗೆ ಬಂದು ಸವಾಲ್ ಹಾಕಿದ ಚಾರು! ದುರಂಹಕಾರಕ್ಕೆ ಫುಲ್​ಸ್ಟಾಪ್ ಯಾವಾಗ?

ಚಾರುಲತಾ ಮನೆಗೆ ಬಂದು ಅಷ್ಟೆಲ್ಲಾ ಮಾತನಾಡಿ ಹೋದ ಮೇಲೆ ರಾಮಾಚಾರಿ ಸುಮ್ಮನೆ ಇರ್ತಾನಾ? ರಾತ್ರೋ ರಾತ್ರಿಯೇ ರಾಮಾಚಾರಿ ಚಾರುಲತಾ ಮನೆಗೆ ಬಂದಿದ್ದಾನೆ. ಕೈಯಲ್ಲಿ ಬೇರೆ ಏನೂ ಹಿಡಿದುಕೊಂಡು ಬಂದಿದ್ದಾನೆ. ರಾಮಾಚಾರಿಯನ್ನು ಅಷ್ಟೋತ್ತಲ್ಲಿ ನೋಡಿ ಚಾರು ತಂದೆಗೂ ಶಾಕ್ ಆಗಿದೆ.

ಚಾರು-ರಾಮಾಚಾರಿ

ಚಾರು-ರಾಮಾಚಾರಿ

 • Share this:
  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ (Serials) ರಾಮಾಚಾರಿ (Ramachari) ಕೂಡ ಒಂದು. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ರಾತ್ರಿ 9 ಗಂಟೆಗೆ ಪ್ರಸಾರ ಆಗುತ್ತೆ. ಈ ಕಥೆಯ ನಾಯಕ ರಾಮಾಚಾರಿ. ಸುಸಂಸ್ಕೃತ ಮನೆ ಹುಡುಗ. ಆಚಾರ, ವಿಚಾರ, ಹಿರಿಯರಿಗೆ ಗೌರವ (Respect) ಕೊಡುವ ಪಾತ್ರ. ಅಲ್ಲದೇ ಅಪಾರ ಬುದ್ಧಿವಂತ. ಎಲ್ಲ ಕೆಲಸಗಳನ್ನು ಚಾಚು ತಪ್ಪದೇ ಮಾಡುವ ನಾಯಕ. ಈ ಕಥೆಯ ನಾಯಕಿ ಚಾರುಲತಾ. ಶ್ರೀಮಂತರ ಮನೆ ಹುಡುಗಿ ದುಡ್ಡಿನ ಮದದಿಂದ ಎಲ್ಲರನ್ನೂ ಕೇವಲವಾಗಿ ನೋಡು ದುರಂಹಕಾರಿ ಪಾತ್ರ. ಈಕೆಗೆ ಅಪ್ಪನ ಕಂಪನಿಯಲ್ಲಿ ಸಿಇಓ ಆಗೆ ಮೆರೆಯಬೇಕು ಅನ್ನೋ ಆಸೆ. ಆದ್ರೆ ಅಪ್ಪ ಸ್ಟ್ರಿಕ್ಟ್, ಬೇರೆ ಕಂಪನಿಯಲ್ಲಿ ಕೆಲಸ ಮಾಡಿ, ಅಲ್ಲಿಂದ ಸರ್ಟಿಫಿಕೇಟ್ (Certificate) ಕೊಟ್ರೆ ಮಾತ್ರ ಸಿಇಓ (CEO) ಪಟ್ಟ ಎಂದು ಹೇಳಿದ್ದ. ಅದನ್ನು ರಾಮಾಚಾರಿಯೇ ಕೊಡಬೇಕು.

  ಚಾರು-ಚಾರಿ ಎಲ್ಲಿ ಹೋದ್ರೂ ಕಿರಿ ಕಿರಿ
  ಚಾರುಲತಾ ಬೇರೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಳೆ. ಅಲ್ಲಿ ಅವಳಿಗೆ ಮೇಲಾಧಿಕಾರಿ ರಾಮಾಚಾರಿ. ಆಕೆಗೆ ಅಪ್ಪನ ಕಚೇರಿ ಅಧಿಕಾರ ಸಿಗಬೇಕು ಅಂದ್ರೆ ರಾಮಾಚಾರಿ ನೀಡೋ ಸರ್ಟಿಫಿಕೇಟ್ ಬೇಕು. ಆದ್ರೆ ಅದನ್ನು ರಾಮಾಚಾರಿ ನೀಡುತ್ತಿಲ್ಲ. ಕೋಪಗೊಂಡ ಚಾರು ಪದೇ ಪದೇ ರಾಮಾಚಾರಿ ಬಳಿ ಕಿರಿಕ್ ತೆಗೆಯುತ್ತಿದ್ದಾಳೆ. ನನಗೆ ಸರ್ಟಿಫಿಕೇಟ್ ಕೊಡು ನಿನ್ನ ಸುದ್ದಿಗೆ ಬರಲ್ಲ ಎಂದು ಬೇರೆ ಹೇಳುತ್ತಿದ್ದಾಳೆ. ಆದ್ರೆ ರಾಮಾಚಾರಿ ಕೊಡುತ್ತಿಲ್ಲ.

  ರಾಮಾಚಾರಿ ಮನೆಗೆ ಹೋದ ಚಾರು
  ರಾಮಾಚಾರಿ ಎಷ್ಟೇ ಕೇಳಿದ್ರೂ ಸರ್ಟಿಫಿಕೇಟ್ ಕೊಡಲ್ಲ ಎಂದು ಚಾರುಗೆ ಗೊತ್ತಾಗಿದೆ. ಅದಕ್ಕೆ ಅವರ ಮನೆಯವರ ಹತ್ತಿರ ಹೇಳಿ ಈ ಕೆಲಸ ಮಾಡಿಸಬೇಕು ಎಂದು, ರಾಮಾಚಾರಿ ಮನೆಗೆ ಹೋಗಿದ್ದಾಳೆ. ರಾಮಾಚಾರಿಗೆ ಒಳ್ಳೆಯ ಮಾತಿನಿಂದ ಹೇಳಿ ನನಗೆ ಬೇಕಾದದ್ದನ್ನು ಕೊಡಿಸಿ. ಇಲ್ಲ ಪರಿಣಾಮ ನೆಟ್ಟಗಿರಲ್ಲ.

  ನಾನು ರಾಮಾಚಾರಿಯನ್ನು ಬುಟ್ಟಿಗೆ ಹಾಕಿಕೊಂಡು, ಈ ಮನೆಯ ಸೊಸೆಯಾಗಿ ಬರಬೇಕಾಗುತ್ತೆ. ಈ ಮನೆಗೆ ನರಕ ತೋರಿಸುತ್ತೇನೆ. ಸುಸಂಸ್ಕೃತ ಮನೆಯನ್ನು ಹಾಳು ಮಾಡುತ್ತೇನೆ. ಮರ್ಯಾದೆಯಿಂದ ರಾಮಾಚಾರಿಗೆ ಸರ್ಟಿಫಿಕೇಟ್ ಕೊಡಲು ಹೇಳಿ ಎಂದು ಹೋಗುತ್ತಾಳೆ.

  ಇದನ್ನೂ ಓದಿ: Jothe Jotheyali: ಅನು ಮುಂದೆ ಎಲ್ಲಾ ಸತ್ಯ ಬಾಯಿ ಬಿಡ್ತಾನಾ ಆರ್ಯವರ್ಧನ್?

  ಚಾರುಳನ್ನು ತನ್ನ ಮನೆ ಬಳಿ ಕಂಡು ರಾಮಾಚಾರಿಗೆ ಶಾಕ್
  ರಾಮಾಚಾರಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ಬಂದು, ಚಾರು ಈ ರೀತಿ ಹೇಳಿ ಹೋಗುತ್ತಾ ಇರುತ್ತಾಳೆ. ಆಗ ರಾಮಾಚಾರಿ ಮನೆಗೆ ಬರುತ್ತಾನೆ. ತನ್ನ ಮನೆ ಹೊರಗೆ ಸಿಕ್ಕ ಚಾರುಳನ್ನು, ಏನ್ ಮೇಡಂ ನೀವು ನಮ್ಮ ಮನೆಗೆ ಬಂದಿದೀರಾ ಎಂದು ಕೇಳಿದ್ದಕ್ಕೆ. ಒಳಗೆ ಹೋಗು ನಿನಗೆ ಎಲ್ಲಾ ಗೊತ್ತಾಗುತ್ತೆ ಅಂತಾಳೆ. ರಾಮಾಚಾರಿ ಗಾಬರಿಯಿಂದ ಮನೆ ಒಳಗೆ ಹೋಗುತ್ತಾನೆ. ಆಗ ರಾಮಾಚಾರಿ, ಅಜ್ಜಿ, ತಂಗಿ ಚಾರು ಹೇಳಿದ್ದನ್ನು ಹೇಳುತ್ತಾರೆ.

  ರಾತ್ರೋ ರಾತ್ರಿ ಚಾರು ಮನೆಗೆ ಹೋದ ರಾಮಾಚಾರಿ
  ಚಾರುಲತಾ ಮನೆಗೆ ಬಂದು ಅಷ್ಟೆಲ್ಲಾ ಮಾತನಾಡಿ ಹೋದ ಮೇಲೆ ರಾಮಾಚಾರಿ ಸುಮ್ಮನೆ ಇರ್ತಾನಾ? ರಾತ್ರೋ ರಾತ್ರಿಯೇ ರಾಮಾಚಾರಿ ಚಾರುಲತಾ ಮನೆಗೆ ಬಂದಿದ್ದಾನೆ. ಕೈಯಲ್ಲಿ ಬೇರೆ ಏನೂ ಹಿಡಿದುಕೊಂಡು ಬಂದಿದ್ದಾನೆ.

  ರಾಮಾಚಾರಿಯನ್ನು  ಆ ಸಮಯದಲ್ಲಿ ನೋಡಿ ಚಾರು ತಂದೆಗೂ ಶಾಕ್ ಆಗಿದೆ. ಚಾರುಲತಾ ಖುಷಿಯಲ್ಲಿದ್ದಾಳೆ. ಇಷ್ಟು ದಿನದ ಕಷ್ಟ ಮುಗಿಯಿತು. ರಾಮಾಚಾರಿ ಸರ್ಟಿಫಿಕೇಟ್ ಕೊಡಲು ಬಂದಿದ್ದಾನೆ ಎಂದು ಖುಷಿಯಲ್ಲಿದ್ದಾಳೆ. ನಿಜವಾಗ್ಲೂ ರಾಮಾಚಾರಿ ಸರ್ಟಿಫಿಕೇಟ್ ಕೊಡಲು ಬಂದಿದ್ದಾನಾ ಗೊತ್ತಿಲ್ಲ.

  ಇದನ್ನೂ ಓದಿ: Kannadathi: ಮನೆಗೆ ಪೊಲೀಸರನ್ನು ಕರೆಸಿದ್ದಾಳೆ ಅಮ್ಮಮ್ಮ, ಸಾನಿಯಾ ವಿರುದ್ಧ ದೂರು ನೀಡ್ತಾರಾ ರತ್ನಮಾಲಾ?

  ಹಾಗಾದ್ರೆ ರಾಮಾಚಾರಿ ಚಾರುಗೆ ಸರ್ಟಿಫಿಕೇಟ್ ಕೊಡಲು ಮನೆಗೆ ಬಂದಿದ್ದಾನಾ? ಅವನು ಹೇಳಿದ ಟಾಸ್ಕ್ ಮಾಡದಿದ್ರೂ ಅವಳಿಗೆ ಬೇಕಾದ ಪಟ್ಟ ಸಿಗುತ್ತಾ? ಎಲ್ಲವನ್ನೂ ನೋಡಲು ರಾಮಾಚಾರಿ ಸಂಚಿಕೆ ನೋಡಬೇಕು.
  Published by:Savitha Savitha
  First published: