Ramachari: ರಾಮಾಚಾರಿಗೆ 1 ಕೋಟಿ ಆಫರ್ ಮಾಡಿದ ಚಾರು, ದುಡ್ಡಿಗಾಗಿ ಚಾರು ಹೇಳಿದ್ದನ್ನು ಮಾಡ್ತಾನಾ?

ಎಷ್ಟೇ ಕಷ್ಟ ಇದ್ರೂ ಸತ್ಯ, ನ್ಯಾಯವೇ ರಾಮಾಚಾರಿ ಮನೆಯವರ ಸಂಸ್ಕಾರ. ಅದನ್ನು ಬಿಟ್ಟು ಅವರು ಬದುಕಲ್ಲ. ಸುಳ್ಳು ಹೇಳಲ್ಲ. ಯಾರಿಗೂ ವಂಚನೆ ಮಾಡಲ್ಲ. ಆದ್ರೆ ರಾಮಾಚಾರಿಗೆ ಈಗ ದುಡ್ಡಿನ ಅವಶ್ಯಕತೆ ಇದ್ದು, ಚಾರು ನೀಡಿದ 1 ಕೋಟಿ ಆಫರ್ ನ್ನು ಒಪ್ಪಿಕೊಂಡು ಅವಳು ಕೇಳಿದ ಸರ್ಟಿಫಿಕೇಟ್ ನೀಡ್ತಾನಾ ನೋಡಬೇಕು.

ರಾಮಾಚಾರಿ ಧಾರಾವಾಹಿ

ರಾಮಾಚಾರಿ ಧಾರಾವಾಹಿ

  • Share this:
    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ (Serials) ರಾಮಾಚಾರಿ (Ramachari) ಕೂಡ ಒಂದು. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ರಾತ್ರಿ 9 ಗಂಟೆಗೆ ಪ್ರಸಾರ ಆಗುತ್ತೆ. ಈ ಕಥೆಯ ನಾಯಕ (Hero) ರಾಮಾಚಾರಿ. ಸುಸಂಸ್ಕತ ಮನೆ ಹುಡುಗ. ಆಚಾರ, ವಿಚಾರ, ಹಿರಿಯರಿಗೆ ಗೌರವ ಕೊಡುವ ಪಾತ್ರ. ಅಲ್ಲದೇ ಅಪಾರ ಬುದ್ಧಿವಂತ. ಎಲ್ಲ ಕೆಲಸಗಳನ್ನು ಚಾಚು ತಪ್ಪದೇ ಮಾಡುವ ನಾಯಕ. ಈ ಕಥೆಯ ನಾಯಕಿ ಚಾರುಲತಾ. ಶ್ರೀಮಂತರ ಮನೆ ಹುಡುಗಿ ದುಡ್ಡಿನ ಮದದಿಂದ ಎಲ್ಲರನ್ನೂ ಕೇವಲವಾಗಿ ನೋಡು ಪಾತ್ರ. ಈಕೆಗೆ ಅಪ್ಪನ ಕಂಪನಿಯಲ್ಲಿ (Company) ಸಿಇಓ ಆಗಿ ಮೆರೆಯಬೇಕು ಅನ್ನೋ ಆಸೆ. ಆದ್ರೆ ಅಪ್ಪ ಸ್ಟ್ರಿಕ್ಟ್, ಬೇರೆ ಕಂಪನಿಯಲ್ಲಿ ಕೆಲಸ ಮಾಡಿ, ಅಲ್ಲಿಂದ ಸರ್ಟಿಫಿಕೇಟ್ (Certificate) ಕೊಟ್ರೆ ಮಾತ್ರ ಸಿಇಓ ಪಟ್ಟ ಎಂದು ಹೇಳಿದ್ದ. ಅದನ್ನು ರಾಮಾಚಾರಿಯೇ ಕೊಡಬೇಕು. ಅದಕ್ಕೆ ಚಾರು ರಾಮಾಚಾರಿಗೆ 1 ಕೋಟಿ ಆಫರ್ ನೀಡಿದ್ದಾಳೆ.

    ಸರ್ಟಿಫಿಕೇಟ್ ಗಾಗಿ ಅಡ್ಡ ದಾರಿ ಹಿಡಿಯುತ್ತಿರುವ ಚಾರು
    ಚಾರುಗೆ ಅಪ್ಪನ ಕಂಪನಿ ಅಧಿಕಾರಕ್ಕಾಗಿ ಸರ್ಟಿಫಿಕೇಟ್ ಬೇಕು. ಅದನ್ನು ರಾಮಾಚಾರಿ ನೀಡಬೇಕು. ಆದ್ರೆ ರಾಮಾಚಾರಿ ಅದನ್ನು ಕೊಡುತ್ತಿಲ್ಲ. ಅದಕ್ಕೆ ಚಾರು ಅಡ್ಡ ದಾರಿ ಹಿಡಿಯುತ್ತಿದ್ದಾಳೆ. ರಾಮಾಚಾರಿ ಮನೆಯವರಿಗೆ ಹೋಗಿ ಸರ್ಟಿಫಿಕೇಟ್ ಕೊಡುವಂತೆ ನಿಮ್ಮ ಮಗನಿಗೆ ಬುದ್ಧಿ ಹೇಳಿ. ಇಲ್ಲ ಅಂದ್ರೆ ನಿಮಗೆಲ್ಲಾ ನರಕ ತೋರಿಸುತ್ತೇನೆ ಎಂದಿರುತ್ತಾಳೆ. ಕೋಪಗೊಂಡ ರಾಮಾಚಾರಿ, ಚಾರು ಮನೆಗೆ ಹೋಗಿ ನಿಮ್ಮ ಮಗಳು ಸರ್ಟಿಫಿಕೇಟ್ ಗಾಗಿ ಅಡ್ಡ ದಾರಿ ಹಿಡಿಯುತ್ತಿದ್ದಾಳೆ. ಅವಳಿಗೆ ಬುದ್ಧಿ ಹೇಳಿ ಎಂದು ಹೇಳಿ ಬಂದಿರುತ್ತಾನೆ.

    ರಾಮಾಚಾರಿಗೆ 1 ಕೋಟಿ ಆಫರ್ ನೀಡಿದ ಚಾರು
    ರಾಮಾಚಾರಿ ಎಷ್ಟೇ ಅವಮಾನ ಮಾಡಿದ್ರೂ ಚಾರು ತಲೆ ಕೆಡಿಸಿಕೊಂಡಿಲ್ಲ. ಆಕೆಗೆ ಬೇಕಾಗಿರೋದು ಸರ್ಟಿಫಿಕೇಟ್. ಅದಕ್ಕಾಗಿ ಅವಳು ಏನು ಬೇಕಾದ್ರೂ ಮಾಡಲು ರೆಡಿ. ಅದಕ್ಕೆ ಇವತ್ತು ರಾಮಾಚಾರಿ ಬಳಿ ಬಂದು, ನಿನ್ನ ಸಂಬಳ ಎಷ್ಟು ಎನ್ನುತ್ತಾಳೆ. ಅದಕ್ಕೆ ಅವನು 60 ಸಾವಿರ ಅನ್ನುತ್ತಾನೆ. ಅದಕ್ಕೆ ಚಾರು, ರಾಮಾಚಾರಿ ನೀನು ನಾನು ಕೇಳಿದ ಸರ್ಟಿಫಿಕೇಟ್ ಕೊಟ್ರೆ, ನಿನಗೆ 1 ಕೋಟಿ ಕ್ಯಾಶ್ ಕೊಡುತ್ತೇನೆ ಎನ್ನುತ್ತಾಳೆ. ರಾಮಾಚಾರಿ ಶಾಕ್ ಆಗಿ ಎದ್ದು ನಿಲ್ಲುತ್ತಾನೆ. ನಿಮ್ಮಂಥಾ ಮಿಡಲ್ ಕ್ಲಾಸ್ ಜನಕ್ಕೆ ದುಡ್ಡಿನ ಅವಶ್ಯಕತೆ ಹೆಚ್ಚಿರುತ್ತೆ. ಅದಕ್ಕೆ ದುಡ್ಡು ತಗೊಂಡು ಸರ್ಟಿಫಿಕೇಟ್ ಕೊಡು ಎಂದು ಕೇಳುತ್ತಾಳೆ.

    ಇದನ್ನೂ ಓದಿ: Kannadathi: ಮನೆಮಂದಿ ಮಲಗಿದ ಮೇಲೆ ಕಳ್ಳಿಯಾದ ಸಾನಿಯಾ! ಅಮ್ಮಮ್ಮನ ಮೇಲೆ ವರೂಧಿನಿ ವಕ್ರ ಕಣ್ಣು!

    ದುಡ್ಡು ಪಡೆದು ಸರ್ಟಿಫಿಕೇಟ್ ನೀಡ್ತಾನಾ ನ್ಯಾಯವಂತ?
    ಎಷ್ಟೇ ಕಷ್ಟ ಇದ್ರೂ ಸತ್ಯ, ನ್ಯಾಯವೇ ರಾಮಾಚಾರಿ ಮನೆಯವರ ಸಂಸ್ಕಾರ. ಅದನ್ನು ಬಿಟ್ಟು ಅವರು ಬದುಕಲ್ಲ. ಸುಳ್ಳು ಹೇಳಲ್ಲ. ಯಾರಿಗೂ ವಂಚನೆ ಮಾಡಲ್ಲ. ಆದ್ರೆ ರಾಮಾಚಾರಿಗೆ ಈಗ ದುಡ್ಡಿನ ಅವಶ್ಯಕತೆ ಇದ್ದು, ಚಾರು ನೀಡಿದ 1 ಕೋಟಿ ಆಫರ್ ನ್ನು ಒಪ್ಪಿಕೊಂಡು ಅವಳು ಕೇಳಿದ ಸರ್ಟಿಫಿಕೇಟ್ ನೀಡ್ತಾನಾ ನೋಡಬೇಕು.

    ಅತ್ತಿಗೆ ಆರೋಗ್ಯಕ್ಕಾಗಿ ನ್ಯಾಯ ಪಕ್ಕಕ್ಕಿಡ್ತಾನಾ ರಾಮಾಚಾರಿ?
    ರಾಮಾಚಾರಿ ಅತ್ತಿಗೆಗೆ ಕ್ಯಾನ್ಸರ್ ಇದೆ. ಆಪರೇಷನ್ ಮಾಡಿಸಲು 60 ಲಕ್ಷ ಬೇಕು. ಅಷ್ಟೊಂದು ಹಣ ರಾಮಾಚಾರಿ ಮನೆಯವರ ಬಳಿ ಇಲ್ಲ. ಅದಕ್ಕೆ ಬರೋ ಸಂಬಳದಲ್ಲೇ ಮನೆ ನಡೆಸಿ, ಕರ್ಚು ಕಡಿಮೆ ಮಾಡಿ, ಅತ್ತಿಗೆ ಆಪರೇಷನ್‍ಗೆ ದುಡ್ಡು ಹೊಂದಿಸುತ್ತಿದ್ದಾರೆ. ಈಗ ದುಡ್ಡಿನ ಅವಶ್ಯಕತೆ ಹೆಚ್ಚಿರುವಾಗ, ಚಾರು ಈ ಆಫರ್ ನೀಡಿದ್ದಾಳೆ. ರಾಮಾಚಾರಿ ಅತ್ತಿಗಾಗಿ, ನ್ಯಾಯ, ನೀತಿ ಸೈಡಿಗಿಟ್ಟು, ಚಾರು ಹೇಳಿದಂತೆ ಕೇಳ್ತಾನಾ ನೋಡಬೇಕು.

    colors Kannada serial, Kannada serial, Rama Chari serial, Rama Chari serial Kannada cast, 1 crore offer to hero, ರಾಮಾಚಾರಿ ಧಾರಾವಾಹಿ, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ರಾಮಾಚಾರಿ ಅತ್ತಿಗೆ


    ಇದನ್ನೂ ಓದಿ: Sathya Serial: ಡಿವೋರ್ಸ್ ಪೇಪರ್ ಗೆ ಇವತ್ತು ಸಹಿ ಮಾಡಲಿರುವ ಸತ್ಯ! ಸುಲಭವಾಗಿ ಸೋಲು ಒಪ್ಪಿಕೊಳ್ತಾಳಾ ಲೇಡಿ ರಾಮಾಚಾರಿ?

    ರಾಮಾಚಾರಿ ಚಾರು ನೀಡಿದ 1 ಕೋಟಿ ಆಫರ್ ಗೆ ಒಪ್ಪಿ, ಅವಳು ಕೇಳಿದ ಸರ್ಟಿಫಿಕೇಟ್ ನೀಡ್ತಾನಾ ಅನ್ನೋ ಕುತೂಹಲ ಹೆಚ್ಚಾಗಿದ್ದು, ಏನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
    Published by:Savitha Savitha
    First published: