Ramachari Marriage: ಚಾರುಗೆ ರಾಮಾಚಾರಿಯನ್ನು ಮದುವೆಯಾಗೋ ಆಸೆ! ದಿಢೀರ್ ಬದಲಾವಣೆ ಹೇಗೆ?

ರಾಮಾಚಾರಿ ನೀಡಿದ ಮೂರನೇ ಟಾಸ್ಕ್ ಮಾಡಲು ಚಾರುಗೆ ಇಷ್ಟ ಇಲ್ಲ. ಆ ಟಾಸ್ಕ್ ಮಾಡಿಲ್ಲ ಅಂದ್ರೆ ಚಾರುಗೆ ಅಧಿಕಾರ ಸಿಗಲ್ಲ. ಅದೇ ಕೋಪಕ್ಕೆ ರಾಮಾಚಾರಿಯನ್ನು ಜೀವನ ಪೂರ್ತಿ ನರಳುವಂತೆ ಮಾಡಬೇಕು. ಅದಕ್ಕೆ ನಾನು ಅವನನ್ನ ಮದುವೆಯಾಗಬೇಕು ಎನ್ನುತ್ತಿದ್ದಾಳೆ.

ರಾಮಾಚಾರಿ

ರಾಮಾಚಾರಿ

  • Share this:
    ರಾಮಾಚಾರಿ (Ramcharai), ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ ಬರುತ್ತಿದೆ. ತೀವ್ರ ಕುತೂಹಲ ಮೂಡಿಸುತ್ತಿರುವ ಸೀರಿಯಲ್ ಅಭಿಮಾನಿಗಳನ್ನು (Fans) ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ರಾಮಾಚಾರಿ ಧಾರಾವಾಹಿಯಲ್ಲಿ ನಟ ರಾಮಾಚಾರಿ, ನಟಿ ಚಾರುಲತಾ. ಇಬ್ಬರಿಗೂ ಒಬ್ಬರನ್ನು ಕಂಡ್ರೆ ಒಬ್ಬರಿಗೆ ಆಗಲ್ಲ. ಯಾವಾಗಲೂ ಯಾವುದಾದರೂ ಒಂದು ವಿಷಯಕ್ಕೆ ಜಗಳ ಆಗ್ತಾನೇ ಇರುತ್ತೆ. ಆದ್ರೆ ಇವರಿಬ್ಬರು ಒಂದಾಗಬೇಕು ಅನ್ನುವುದು ದೇವರ ಇಚ್ಛೆ ಅನ್ನಿಸುತ್ತೆ. ಎಲ್ಲಿ ಹೋದ್ರೂ ಇವರು ಮದುವೆ ಮಾತೇ ಬರುತ್ತಿದೆ. ರಾಮಾಚಾರಿ ಅಪ್ಪನಿಗೂ ಮುಂಜಾವಿನ ವೇಳೆ ರಾಮಾಚಾರಿ, ಚಾರುಲತಾ ಮದುವೆಯಾಗುವ ಕನಸು ಬಿದ್ದಿತ್ತು. ಬೇರೆ ಅವರ ವಿಷಯ ಬಿಡಿ, ಈಗ ಚಾರು, ನನಗೆ ರಾಮಾಚಾರಿಯನ್ನು ಮದುವೆ  (Marriage)ಆಗಬೇಕು ಅನ್ನಿಸುತ್ತಿದೆ ಎನ್ನುತ್ತಿದ್ದಾಳೆ.

    ರಾಮಾಚಾರಿಯನ್ನು ಮದುವೆ ಆಗ್ತೀನಿ ಎಂದ ಚಾರು!
    ಚಾರುಗೆ ತನ್ನ ಅಪ್ಪನ ಕಂಪನಿಯ ಸಿಇಓ ಪಟ್ಟಕ್ಕಾಗಿ ರಾಮಾಚಾರಿ ನೀಡುವ ಸರ್ಟಿಪಿಕೇಟ್ ಬೇಕು. ಆದ್ರೆ ಅದನ್ನು ರಾಮಾಚಾರಿ ನೀಡದೇ ಕೆಲವು ಟಾಸ್ಕ್ ಗಳನ್ನು ನೀಡುತ್ತಿದ್ದನು. ಆದ್ರೆ ರಾಮಾಚಾರಿ ನೀಡಿದ ಮೂರನೇ ಟಾಸ್ಕ್ ಮಾಡಲು ಚಾರುಗೆ ಇಷ್ಟ ಇಲ್ಲ. ಆ ಟಾಸ್ಕ್ ಮಾಡಿಲ್ಲ ಅಂದ್ರೆ ಚಾರುಗೆ ಅಧಿಕಾರ ಸಿಗಲ್ಲ. ಅದೇ ಕೋಪಕ್ಕೆ ರಾಮಾಚಾರಿಯನ್ನು ಜೀವನ ಪೂರ್ತಿ ನರಳುವಂತೆ ಮಾಡಬೇಕು. ಅದಕ್ಕೆ ನಾನು ಅವನನ್ನ ಮದುವೆಯಾಗಬೇಕು ಎನ್ನುತ್ತಿದ್ದಾಳೆ.

    ರಾಮಾಚಾರಿಗೆ ನರಕ ತೋರಿಸುತ್ತೇನೆ!
    ನನ್ನ ಜೀವನದಲ್ಲಿ ಈ ರಾಮಾಚಾರಿ ಬಂದು ತೊಂದರೆ ನೀಡುತ್ತಿದ್ದಾನೆ. ಆರಾಮಾಗಿ ಇದ್ದೆ ರಾಮಾಚಾರಿ ಬಂದು ನನ್ನ ಜೀವನದ ನೆಮ್ಮದಿ ಹಾಳು ಮಾಡಿಬಿಟ್ಟ. ರಾಮಾಚಾರಿ ಕೊಡುತ್ತಿರುವ ಕಾಟಕ್ಕೆ, ನನ್ನ ಜೀವನಕ್ಕೆ ಬಂದು ಆಡುತ್ತಿರುವ ಆಟಕ್ಕೆ, ಅವನಿಗೆ ಶಿಕ್ಷೆ ಕೊಡಬೇಕು. ಒಂದು ಸಲ ಅಲ್ಲ ಅವನು ಜೀವನ ಪೂರ್ತಿ ಕೊರಗಬೇಕು, ಅದಕ್ಕೆ ರಾಮಚಾರಿಯನ್ನು ಮದುವೆಯಾಗಬೇಕು.

    ಇದನ್ನೂ ಓದಿ: Olavina Nildana: ತಾರಿಣಿಯ ಸುಳ್ಳು ಪ್ರೀತಿ ಸುದ್ದಿ ಕೇಳಿ ತಾತನಿಗೆ ಹೃದಯಾಘಾತ! ಮನೆ ಮಂದಿಗೆಲ್ಲಾ ಆಘಾತ!

    ಆಗ ಅವನು ನನ್ನ ಗಂಡನಿಗೆ ಈಡೀ ಜೀವನ ನರಕ ನೋಡಬೇಕು. ತಪ್ಪಿಸಿಕೊಳ್ಳುವ ಆಗಿಲ್ಲ. ಓಡಿ ಹೋಗುವ ಆಗಿಲ್ಲ. ಅದಕ್ಕೆ ಅವನನ್ನು ಮದುವೆ ಆಗ್ತೀನಿ ಅನ್ನುತ್ತಿದ್ದಾಳೆ ಚಾರು. ಗಂಡ ಮಾತ್ರ ತಾನೇ, ಜೀವನ ಪೂರ್ತಿ ಒಟ್ಟಿಗೆ ಇರೋದು. ಹೆಂಡತಿ ತಾನೇ ಗಂಡನನ್ನು ಹೇಗೆ ಬೇಕಾದ್ರೂ ಆಟ ಆಡಿಸಬಹುದು. ಕಾಟ ಕೊಡಲು ಅವನ್ನೇ ಮದುವೆ ಆಗುತ್ತೀನಿ ಅಂತಿದ್ದಾಳೆ ಚಾರು.

    ರಾಮಾಚಾರಿ ಅತ್ತಿಗೆ ಹೇಳುತ್ತಿರುವುದು ಏನು?
    ಅಪ್ಪ ಕೊಟ್ಟ ಮಾತು ಉಳಿಸಲು ರಾಮಾಚಾರಿ ಮಾವನ ಮಗಳನ್ನು ಮದುವೆ ಆಗಲು ರೆಡಿಯಾಗಿದ್ದಾನೆ. ಆದ್ರೆ ಅವರ ಅತ್ತಿಗೆ ಅದು ನೀನು ಮಾವನಿಗೆ ಕೊಟ್ಟ ಮಾತು. ಆದ್ರೆ ರಾಮಾಚಾರಿ ಅಪ್ಪನಿಗೆ ಮುಂಜಾನೆ ಕನಸಿನಲ್ಲಿ ರಾಮಾಚಾರಿ, ಚಾರು ಮದುವೆಯಾದಂತೆ ಕಂಡಿತ್ತು. ಅವರು ಹೇಳೋ ಭವಿಷ್ಯ ನಿಜ ಆಗುತ್ತೆ. ನೀನು ದೀಪಾಳನ್ನು ಮದುವೆ ಆಗ್ತೀನಿ ಅಂತ ಮಾತು ಕೊಟ್ಟಿದ್ರೂ, ತಾಳಿ ಕಟ್ಟೋದು ಚಾರು ಲತಾಗೆ ಎಂದು ಅತ್ತಿಗೆ ಹೇಳುತ್ತಿದ್ದಾಳೆ.

    ಮೂರನೇ ಟಾಸ್ಕ್  ಏನು?
    ಚಾರುಗೆ ರಾಮಾಚಾರಿ ಮೂರನೇ ಟಾಸ್ಕ್ ನೀಡಿದ್ದಾನೆ. ಭ್ರಷ್ಟ ಮಂತ್ರಿಯೊಬ್ಬರಿಗೆ ನಿಮ್ಮ ಮನೆಯವರು ಬೆಂಬಲ ನೀಡುತ್ತಿದ್ದಾರೆ. ಎಲ್ಲ ಕುತಂತ್ರ ಮಾಡುತ್ತಿರುವುದು ನಿಮ್ಮ ಅಮ್ಮ. ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದು ನಿಮ್ಮ ಚಿಕ್ಕಮ್ಮ. ಎಲ್ಲವನ್ನೂ ಸರಿ ಮಾಡು. ಭ್ರಷ್ಟರಿಗೆ ಶಿಕ್ಷೆಯಾಗಬೇಕು. ನಿಮ್ಮ ಚಿಕ್ಕಮ್ಮ ನಿಮ್ಮ ಮನೆಯಲ್ಲೇ ಉಳಿಬೇಕು ಎಂದು ಟಾಸ್ಕ್ ನೀಡಿದ್ದಾನೆ.

    ಇದನ್ನೂ ಓದಿ: Shivamogga Subbanna: ಕನ್ನಡಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಸುಬ್ಬಣ್ಣ! ಖ್ಯಾತ ಗಾಯಕನ ಜನಪ್ರಿಯ ಗೀತೆಗಳ ಬಗ್ಗೆ ಇಲ್ಲಿದೆ ವಿವರ

    ಹಾಗಾದ್ರೆ ಸೇಡು ತೀರಿಸಿಕೊಳ್ಳಲು ಚಾರು, ರಾಮಾಚಾರಿಯನ್ನು ಮದುವೆ ಆಗ್ತಾಳಾ, ಸುಮ್ಮನೆ ಕೋಪಕ್ಕೆ ಆ ರೀತಿ ಹೇಳ್ತಾ ಇದ್ದಾಳಾ? ಎಲ್ಲವನ್ನೂ ನೋಡಲು ರಾಮಾಚಾರಿ ಸಂಚಿಕೆಯನ್ನು ನೋಡಬೇಕು.
    Published by:Savitha Savitha
    First published: