Ramachari: ರಾಮಾಚಾರಿ ಮೇಲಿನ ಕೋಪಕ್ಕೆ ಚಾರು ಮಾಡಿದ್ದೆಂತಾ ಕೆಲಸ? ಬೇರೆಯವರನ್ನು ಚಚ್ಚಿ ಚಚ್ಚಿ ಹಾಕಿದ ಕೋಪಿಷ್ಠೆ!

ತೀವ್ರ ಕೋಪದಲ್ಲಿರುವ ಚಾರು ಕಚೇರಿಯಲ್ಲಿ ರಾಮಾಚಾರಿಯನ್ನು ಹಿಡಿದು ಚೆನ್ನಾಗಿ ಬಾರಿಸುತ್ತಿದ್ದಾಳೆ. ನನ್ನ ಜೀವನದಲ್ಲಿ ಏಕೆ ಬಂದೆ. ನಮ್ಮ ಮನೆಯ ವಿಷಯದಲ್ಲಿ ತಲೆ ಹಾಕುತ್ತಿಯಾ ಎಂದು ಹೊಡೆಯುತ್ತಿದ್ದಾಳೆ. ಆಫೀಸ್ ನಲ್ಲಿರುವ ಬೇರೆ ಅವರು ನೋಡುತ್ತಾ ನಿಂತಿದ್ದಾರೆ. ರಾಮಾಚಾರಿ ಬೇಡ ಬೇಡ ಅಂದ್ರೂ ಹೊಡೆದ ಚಾರುಲತಾ...

ರಾಮಾಚಾರಿ

ರಾಮಾಚಾರಿ

 • Share this:
  ರಾಮಾಚಾರಿ (Ramachari) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ರಾಮಾಚಾರಿ ಈಗ ದೊಡ್ಡ ಅಭಿಮಾನಿಗಳ (Fans) ಬಳಗವೇ ಇದೆ. ಎಷ್ಟೋ ಜನ ರಾತ್ರಿ 9ಕ್ಕೆ ತಪ್ಪದೇ ಈಗ ಸೀರಿಯಲ್ ನೋಡುತ್ತಾರೆ. ಸುಸಂಸ್ಕøತ ಹುಡುಗನಾಗಿರವ ರಾಮಾಚಾರಿ, ದುರಂಕಾರಿ ಚಾರುಲತಾ ಕೊಬ್ಬು ಇಳಿಸೋದನ್ನು ನೋಡೋದಕ್ಕೆ ಒಂದು ಚೆಂದ. ತನ್ನ ಅಪ್ಪನ ಕಂಪನಿಗೆ ಸಿಇಓ ಆಗಬೇಕು ಎಂದುಕೊಂಡಿರುವ ಚಾರು, ಸದ್ಯ ರಾಮಾಚಾರಿಯ ಕೆಳಗೆ ಬೇರೆ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಳೆ. ಸಿಇಓ ಮಾಡಲು ಅಪ್ಪ ಕೇಳಿದ ಸರ್ಟಿಫಿಕೇಟ್ ಪಡೆಯಲು ರಾಮಾಚಾರಿ ಹೇಳಿದಂತೆ ಕೇಳುತ್ತಿದ್ದಾಳೆ. ಆದ್ರೆ ರಾಮಾಚಾರಿ ಹೇಳಿದ ಮೂರನೇ ಟಾಸ್ಕ್ ಚಾರು ಮಾಡಿಲ್ಲ. ಅದಕ್ಕೆ ಚಾರುಗೆ ರಾಮಾಚಾರಿ ಮೇಲೆ ಕೋಪ ಬಂದಿದೆ.

  ರಾಮಾಚಾರಿಯನ್ನು ಹೊಡೆದ ಚಾರುಲತಾ
  ತೀವ್ರ ಕೋಪದಲ್ಲಿರುವ ಚಾರು ಕಚೇರಿಯಲ್ಲಿ ರಾಮಾಚಾರಿಯನ್ನು ಹಿಡಿದು ಚೆನ್ನಾಗಿ ಬಾರಿಸುತ್ತಿದ್ದಾಳೆ. ನನ್ನ ಜೀವನದಲ್ಲಿ ಏಕೆ ಬಂದೆ. ನಮ್ಮ ಮನೆಯ ವಿಷಯದಲ್ಲಿ ತಲೆ ಹಾಕುತ್ತಿಯಾ ಎಂದು ಹೊಡೆಯುತ್ತಿದ್ದಾಳೆ. ಆಫೀಸ್ ನಲ್ಲಿರುವ ಬೇರೆ ಅವರು ನೋಡುತ್ತಾ ನಿಂತಿದ್ದಾರೆ. ರಾಮಾಚಾರಿ ಬೇಡ ಬೇಡ ಅಂದ್ರೂ ಹೊಡೆದ ಚಾರುಲತಾ.

  ಬಿಡಿಸಲು ಬಂದ ಬಾಸ್‍ಗೆ ಶಾಕ್
  ಆಫೀಸ್ನಲ್ಲಿ ಏನೋ ಗಲಾಟೆಯಾಗುತ್ತೆ ಅಂತ ಬಾಸ್ ಬಂದು ನೋಡುತ್ತಾರೆ. ಬೇರೆಯವರನ್ನು ಕೇಳಿದ್ರೆ ಚಾರು ರಾಮಾಚಾರಿಗೆ ಹೊಡೆಯುತ್ತಾನೆ ಎಂದು ಹೇಳುತ್ತಾರೆ. ಬಿಡಿಸಲು ಯಾರು ಮುಂದೆ ಹೋಗುವುದಿಲ್ಲ. ಅದು ಬೇರೆ ಚಾರು ಬಾಗಿಲು ಹಾಕಿಕೊಂಡು ಹೊಡೆಯುತ್ತಾ ಇರ್ತಾಳೆ.

  ಇದನ್ನೂ ಓದಿ: Thara Anuradha: ಕೇಸರಿ, ಬಿಳಿ, ಹಸಿರು ಉಡುಪಿನಲ್ಲಿ ಮಿಂಚಿದ ತಾರಾ; ಫೋಟೋ ಗ್ಯಾಲರಿ ಇಲ್ಲಿದೆ

  ರಾಮಾಚಾರಿ ನೆನಪಿಕೊಂಡು ಬೇರೆ ಅವನಿಗೆ ಹೊಡೆದ ಚಾರು
  ಚಾರುಗೆ ತುಂಬಾ ಕೋಪ ಇದ್ದ ಕಾರಣ, ರಾಮಾಚಾರಿಗೆ ಹೊಡೆಯಲು ಆಗಲ್ಲ ಎಂದು ಆಫೀಸ್ ನ ಬೇರೆ ಹುಡುಗನನ್ನು ಹಿಡಿದು ಹೊಡೆಯುತ್ತಾಳೆ. ಪಾಪಾದ ಹುಡುಗ ಚಾರು ಕೋಪಕ್ಕೆ ಬಲಿಯಾಗಿ ಹೊಡೆತ ತಿನ್ನುತ್ತಾನೆ. ಚಾರು ಈಗ ನನ್ನ ಕೋಪ ಕಡಿಮೆಯಾಯ್ತು ಎಂದು ಹೇಳುತ್ತಾಳೆ.

  ರಾಮಾಚಾರಿ ಕೊಟ್ಟಿದ್ದ ಮೂರನೇ ಟಾಸ್ಕ್ ಏನು?
  ಚಾರುಗೆ ರಾಮಾಚಾರಿ ಮೂರನೇ ಟಾಸ್ಕ್ ನೀಡಿದ್ದಾನೆ. ಭ್ರಷ್ಟ ಮಂತ್ರಿಯೊಬ್ಬರಿಗೆ ನಿಮ್ಮ ಮನೆಯವರು ಬೆಂಬಲ ನೀಡುತ್ತಿದ್ದಾರೆ. ಎಲ್ಲ ಕುತಂತ್ರ ಮಾಡುತ್ತಿರುವುದು ನಿಮ್ಮ ಅಮ್ಮ. ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದು ನಿಮ್ಮ ಚಿಕ್ಕಮ್ಮ. ಎಲ್ಲವನ್ನೂ ಸರಿ ಮಾಡು. ಭ್ರಷ್ಟರಿಗೆ ಶಿಕ್ಷೆಯಾಗಬೇಕು. ನಿಮ್ಮ ಚಿಕ್ಕಮ್ಮ ನಿಮ್ಮ ಮನೆಯಲ್ಲೇ ಉಳಿಬೇಕು ಎಂದು ಟಾಸ್ಕ್ ನೀಡಿದ್ದ. ಅದನ್ನು ಚಾರು ಮಾಡಿಲ್ಲ. ಅದಕ್ಕೆ ಆಕೆಗೆ ರಾಮಾಚಾರಿ ಸರ್ಟಿಫಿಕೇಟ್ ಕೊಡೋದು ಡೌಟ್.

  ರಾಮಾಚಾರಿಯನ್ನು ಮದುವೆ ಆಗ್ತೀನಿ ಎನ್ನುತ್ತಿರುವ ಚಾರು!
  ಈ ಮಧ್ಯೆ, ಚಾರುಗೆ ತನ್ನ ಅಪ್ಪನ ಕಂಪನಿಯ ಸಿಇಓ ಪಟ್ಟಕ್ಕಾಗಿ ರಾಮಾಚಾರಿ ನೀಡುವ ಸರ್ಟಿಪಿಕೇಟ್ ಬೇಕು. ಆದ್ರೆ ಅದನ್ನು ರಾಮಾಚಾರಿ ನೀಡದೇ ಕೆಲವು ಟಾಸ್ಕ್ ಗಳನ್ನು ನೀಡುತ್ತಿದ್ದನು. ಆದ್ರೆ ರಾಮಾಚಾರಿ ನೀಡಿದ ಮೂರನೇ ಟಾಸ್ಕ್ ಮಾಡಲು ಚಾರುಗೆ ಇಷ್ಟ ಇಲ್ಲ. ಆ ಟಾಸ್ಕ್ ಮಾಡಿಲ್ಲ ಅಂದ್ರೆ ಚಾರುಗೆ ಅಧಿಕಾರ ಸಿಗಲ್ಲ. ಅದೇ ಕೋಪಕ್ಕೆ ರಾಮಾಚಾರಿಯನ್ನು ಜೀವನ ಪೂರ್ತಿ ನರಳುವಂತೆ ಮಾಡಬೇಕು. ಅದಕ್ಕೆ ನಾನು ಅವನನ್ನ ಮದುವೆಯಾಗಬೇಕು ಎನ್ನುತ್ತಿದ್ದಾಳೆ.

  ಇದನ್ನೂ ಓದಿ: Kannadathi: ಮನೆಗೆ ಪೊಲೀಸರನ್ನು ಕರೆಸಿದ್ದಾಳೆ ಅಮ್ಮಮ್ಮ, ಸಾನಿಯಾ ವಿರುದ್ಧ ದೂರು ನೀಡ್ತಾರಾ ರತ್ನಮಾಲಾ?

  ರಾಮಾಚಾರಿಗೆ ನರಕ ತೋರಿಸುತ್ತೇನೆ!
  ನನ್ನ ಜೀವನದಲ್ಲಿ ಈ ರಾಮಾಚಾರಿ ಬಂದು ತೊಂದರೆ ನೀಡುತ್ತಿದ್ದಾನೆ. ಆರಾಮಾಗಿ ಇದ್ದೆ ರಾಮಾಚಾರಿ ಬಂದು ನನ್ನ ಜೀವನದ ನೆಮ್ಮದಿ ಹಾಳು ಮಾಡಿಬಿಟ್ಟ. ರಾಮಾಚಾರಿ ಕೊಡುತ್ತಿರುವ ಕಾಟಕ್ಕೆ, ನನ್ನ ಜೀವನಕ್ಕೆ ಬಂದು ಆಡುತ್ತಿರುವ ಆಟಕ್ಕೆ, ಅವನಿಗೆ ಶಿಕ್ಷೆ ಕೊಡಬೇಕು. ಒಂದು ಸಲ ಅಲ್ಲ ಅವನು ಜೀವನ ಪೂರ್ತಿ ಕೊರಗಬೇಕು, ಅದಕ್ಕೆ ರಾಮಚಾರಿಯನ್ನು ಮದುವೆಯಾಗಬೇಕು ಎನ್ನುತ್ತಿದ್ದಾಳೆ.

  ಇವತ್ತಿನ ಕೋಪದ ಕಾಮಿಡಿ ಸೀನ್ ನೋಡಲು ರಾಮಾಚಾರಿ ಧಾರಾವಾಹಿಯನ್ನು ನೋಡಬೇಕು.
  Published by:Savitha Savitha
  First published: