Olavina Nildana: ತಾರಿಣಿಯ ಸುಳ್ಳು ಪ್ರೀತಿ ಸುದ್ದಿ ಕೇಳಿ ತಾತನಿಗೆ ಹೃದಯಾಘಾತ! ಮನೆ ಮಂದಿಗೆಲ್ಲಾ ಆಘಾತ!

ತಾರಿಣಿ ಸುಳ್ಳು ಹೇಳಿದ್ದಾಳೆ. ತನ್ನ ಮೊಮ್ಮಗಳಿಗೆ ಇನ್ಯಾವ ಗಂಡು ಸಿಗುತ್ತೆ, ಅವಳಿಗೆ ಜನ್ಮದಲ್ಲಿ ಮದುವೆಯಾಗಲ್ವಾ ಎಂದುಕೊಂಡ ತಾತಾನಿಗೆ ಆಘಾತವಾಗಿದೆ. ಆ ವಿಷಯದಿಂದಲೇ ಎದೆ ನೋವು ಕಾಣಿಸಿಕೊಂಡು ಒದ್ದಾಡುತ್ತಿದ್ದಾರೆ. ತಾತಾನನ್ನು ಆ ಸ್ಥಿತಿಯಲ್ಲಿ ನೋಡಿ ಮನೆಯವರೆಲ್ಲಾ ಗಾಬರಿಯಾಗಿದ್ದಾರೆ.

ಒಲವಿನ ನಿಲ್ದಾಣ

ಒಲವಿನ ನಿಲ್ದಾಣ

  • Share this:
    ಸದ್ದಿಲ್ಲದೇ ಕನ್ನಡಿಗರ ಮನದಲ್ಲಿ ಜಾಗ ಮಾಡಿಕೊಳ್ತಿದೆ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ (Serial). ಕಳೆದ ತಿಂಗಳಷ್ಟೇ ತನ್ನ ಪ್ರಯಾಣ ಶುರು ಮಾಡಿರುವ ಒಲವಿನ ನಿಲ್ದಾಣ ಧಾರಾವಾಹಿ ಅಭಿಮಾನಿಗಳ ಮನದಲ್ಲಿ ಎಲ್ಲೂ ಸ್ಟಾಪ್ ಆಗದೇ ಓಡ್ತಾ ಇದೆ. ಈ ಧಾರಾವಾಹಿಯು ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ, ಶುಕ್ರವಾರದವರೆಗೆ ಸಂಜೆ 6 ಗಂಟೆವರೆಗೆ ಪ್ರಸಾರ ಆಗುತ್ತಿದೆ. ತಾರಿಣಿಗೆ ಮನೆಯವರು ನಿಶ್ಚಿತಾರ್ಥವೊಂದನ್ನು (Engagement) ಏರ್ಪಡಿಸಿರುತ್ತಾರೆ. ಅದು ತಾರಿಣಿಗೆ ಇಷ್ಟ ಇರಲ್ಲ. ಅದೇ ಸಮಯಕ್ಕೆ ತನ್ನ ಕಾಲೀಜಿನ ಗೆಳೆಯ (Friend) ಸಿದ್ಧಾಂತ್ ಬಂದು ಅದನ್ನು ತಡೆದು, ತಾನು ತಾರಿಣಿ ಪ್ರೀತಿಸುವುದಾಗಿ ಸುಳ್ಳು ಹೇಳಿ, ನಿಶ್ಚಿತಾರ್ಥ ಮಾಡಿಕೊಂಡಿರುತ್ತಾನೆ. ಆ ಸುಳ್ಳು ನಿಶ್ಚಿತಾರ್ಥದಿಂದ ಸಿದ್ಧಾಂತ್‍ಗೆ ತೊಂದರೆಯಾಗುತ್ತಿದ್ದು, ಸತ್ಯ ಹೇಳಲು ತಾರಿಣಿ ಮನೆಗೆ ಬಂದಿದ್ದಾಳೆ. ಆದ್ರೆ ಆಗಿದ್ದೇ ಬೇರೆ, ಮುಂದೆ ಓದಿ,

    ತಾರಿಣಿ ಮಾತಿಗೆ ತಾತಾನಿಗೆ ಹೃದಯಾಘಾತ
    ನನಗೆ ಇಷ್ಟ ಇಲ್ಲದೇ ಇರೋ ಹುಡುಗನ ಜೊತೆ ಎಂಗೇಜ್‍ಮೆಂಟ್ ಆಗ್ತಿರೋದನ್ನು ನೋಡಿ, ಸಿದ್ಧಾಂತ್ ಆ ಕ್ಷಣಕ್ಕೆ ಸುಳ್ಳು ಹೇಳಿದ್ರು. ಅದರಿಂದ ನಮ್ಮ ಎಂಗೇಜ್‍ಮೆಂಟ್ ಕೂಡ ಆಯ್ತು. ಸಿದ್ಧಾಂತ್ ಪಾಲಿಗೆ ಇದೊಂದು ನಾಟಕ ಅಷ್ಟೆ. ದಯವಿಟ್ಟು ನನ್ನ ಕ್ಷಮಿಸಿ ಎಂದು ತಾರಿಣಿ ತನ್ನ ಮನೆಯವರನ್ನು ಕೇಳುತ್ತಿದ್ದಾಳೆ. ಈ ವಿಷಯ ಕೇಳಿ ತಾತಾನಿಗೆ ಎದೆ ನೋವು ಕಾಣಿಸಿಕೊಂಡಿದೆ.

    Colors Kannada serial, Olavina nildana serial, Kannada Serial, serial today episode, Heart attack seen, ಒಲವಿನ ನಿಲ್ದಾಣ ಧಾರಾವಾಹಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ತಾರಿಣಿ ತಾತಾ ಪಾತ್ರ ನಿರ್ವಹಿಸುತ್ತಿರುವ ನಟ ಅಶೋಕ್


    ತಾರಿಣಿ ಕೆನ್ನೆಗೆ ಹೊಡೆದು ಬುದ್ದಿ ಹೇಳಿದ ತಾಯಿ
    ಏನ್ ಅಂದುಕೊಂಡಿದ್ದೀಯಾ, ನಿಶ್ಚಿತಾರ್ಥ, ಮದುವೆ ಅಂದ್ರೆ ಮಕ್ಕಳ ಆಟ ಎಂದು ಕೊಂಡಿದ್ದೀಯಾ. ಮಾನ, ಮರ್ಯಾದೆ ಇದೆಯಾ ನಿನಗೆ? ಬೆಂಗಳೂರಲ್ಲಿ ಓದುತ್ತಿದ್ದೀಯ ಅಂತ ಮನಸ್ಸಿಗೆ ಬಂದಂತೆ ಮಾಡುಬಹುದು?ನಾವು ಈಗ ತಲೆ ಎತ್ತಿಕೊಂಡು ಓಡಾಡೋದ ಬಿಡು, ಜನ ಉಗಿಯುತ್ತಾರೆ, ಏನ್ ಮಾಡಬೇಕು ನಾವು ಎಂದು ತಾರಿಗೆ ಆಕೆಯ ಅಮ್ಮ ಪ್ರಶ್ನೆ ಮಾಡುತ್ತಿದ್ದಾಳೆ. ಜನ್ಮದಲ್ಲಿ ಇನ್ನೊಂದು ಸಂಬಂಧ ಸಿಗುತ್ತಾ ನಿನಗೆ? ಮದುವೆಯಾಗುತ್ತಾ, ಮರ್ಯಾದೆ ಇದ್ರೆ ತಾನೇ ಮದುವೆ ಎಂದು ಬೈಯುತ್ತಿದ್ದಾಳೆ.

    ಇದನ್ನೂ ಓದಿ: Shivamogga Subbanna: ಕನ್ನಡಕ್ಕೆ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟ ಸುಬ್ಬಣ್ಣ! ಖ್ಯಾತ ಗಾಯಕನ ಜನಪ್ರಿಯ ಗೀತೆಗಳ ಬಗ್ಗೆ ಇಲ್ಲಿದೆ ವಿವರ

    ಎದೆ ನೋವಿನಿಂದ ಒದ್ದಾಡಿದ ತಾತಾ
    ತಾರಿಣಿ ಸುಳ್ಳು ಹೇಳಿದ್ದಾಳೆ. ತನ್ನ ಮೊಮ್ಮಗಳಿಗೆ ಇನ್ಯಾವ ಗಂಡು ಸಿಗುತ್ತೆ, ಅವಳಿಗೆ ಜನ್ಮದಲ್ಲಿ ಮದುವೆಯಾಗಲ್ವಾ ಎಂದುಕೊಂಡ ತಾತಾನಿಗೆ ಆಘಾತವಾಗಿದೆ. ಆ ವಿಷಯದಿಂದಲೇ ಎದೆ ನೋವು ಕಾಣಿಸಿಕೊಂಡು ಒದ್ದಾಡುತ್ತಿದ್ದಾರೆ. ತಾತಾನನ್ನು ಆ ಸ್ಥಿತಿಯಲ್ಲಿ ನೋಡಿ ಮನೆಯವರೆಲ್ಲಾ ಗಾಬರಿಯಾಗಿದ್ದಾರೆ. ಏನ್ ಆಯ್ತೋ ಅಂತ ಕಣ್ಣೀರು ಹಾಕುತ್ತಿದ್ದಾರೆ.

    ಸುಳ್ಳಿನ ನಿಶ್ಚಿತಾರ್ಥದಿಂದ ಸಿದ್ಧಾಂತ್‍ಗೆ ತೊಂದರೆ
    ಸಿದ್ಧಾಂತ್ ತಾರಿಣಿ ಜೀವನ ಸರಿ ಮಾಡಲು ತನ್ನ ಬಗ್ಗೆ ಏನೂ ಯೋಚನೆ ಮಾಡದೇ, ಸುಳ್ಳಿನ ನಿಶ್ಚಿತಾರ್ಥ ಆಗಿದ್ದ. ಅದು ಸಿದ್ಧಾಂತ್ ಮನೆಯಲ್ಲೂ ಕೂಡ ಗೊತ್ತಿಲ್ಲ. ಎಂಗೇಜ್‍ಮೆಂಟ್ ಆಗಿದ್ದೇ ತಡ, ತಾರಿಣಿ ಮನೆಯವರು ಪದೇ ಪದೇ ಸಿದ್ಧಾಂತ್‍ಗೆ ಕರೆ ಮಾಡುತ್ತಿದ್ದಾರೆ. ಅದು ಸಿದ್ಧಾಂತ್ ಮನೆಯಲ್ಲಿ ಇದ್ದಾಗಲೇ, ಮದುವೆ ಯಾವಾಗ ಮಾಡೋಣ, ಲಗ್ನ ಪತ್ರಿಕೆ ಮಾಡಿಸಬೇಕು ಎಂದು ಕೇಳುತ್ತಾರೆ. ಅದಕ್ಕೆ ಸಿದ್ಧಾಂತ್‍ಗೆ ತೊಂದರೆ ಆಗುತ್ತಿದೆ.

    ತಾರಿಣಿ ಬಳಿ ಜಗಳವಾಡಿದ್ಧ ಸಿದ್ಧಾಂತ್
    ತಾರಿಣಿ ಮನೆಯವರಿಂದ ಪದೇ ಪದೇ ತೊಂದರೆ ಆಗುತ್ತಿರುವುದರಿಂದ, ಸಿದ್ಧಾಂತ್ ತಾರಿಣಿ ಬಳಿ ಜಗಳವಾಡುತ್ತಾನೆ. ಸುಳ್ಳು ನಿಶ್ಚಿತಾರ್ಥದ ಬಗ್ಗೆ ಮನೆಯಲ್ಲಿ ಹೇಳು. ನನಗೆ ನೆಮ್ಮದಿ ಹಾಳಾಗಿದೆ ಎಂದು ಕೇಳಿಕೊಳ್ಳುತ್ತಾನೆ. ಅದಕ್ಕೆ ತಾರಿಣಿ ಎಲ್ಲಾ ಸತ್ಯ ಹೇಳುವುದಾಗಿ ಊರಿಗೆ ಹೋಗಿ, ಸತ್ಯ ಹೇಳಿದ್ದಾಳೆ.

    ಇದನ್ನೂ ಓದಿ: Serial Shooting: ಮಳೆಯಿಂದಾಗಿ ಧಾರಾವಾಹಿ ಶೂಟಿಂಗ್​ಗೆ ತೊಂದರೆ, ಚಿತ್ರೀಕರಣದ ಮೇಲೆ ಪ್ರಭಾವ ಬೀರಿದ ವರುಣ

    ತಾರಿಣಿ ತಾತಾನಿಗೆ ಏನಾದ್ರೂ ಹೆಚ್ಚು, ಕಮ್ಮಿ ಆಗುತ್ತಾ? ತಾರಿಣಿ ಈಗ ಏನ್ ಮಾಡ್ತಾಳೆ? ಎಲ್ಲವನ್ನೂ ನೋಡಲು ಒಲವಿನ ನಿಲ್ದಾಣ ಸಂಚಿಕೆ ನೋಡಬೇಕು.
    Published by:Savitha Savitha
    First published: