Olavina Nildana: ಇಷ್ಟು ದಿನ ಮುಚ್ಚಿಟ್ಟ ಸತ್ಯ ಮನೆಯಲ್ಲಿ ಹೇಳ್ತಾಳಾ ತಾರಿಣಿ? ಪ್ರೀತಿಯ ನಿಲ್ದಾಣ ಸ್ಟಾಪ್ ಆಗುತ್ತಾ?

ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ತಾರಿಣಿಯ ಪ್ರೀತಿ ಸ್ಟಾಪ್ ಆಗೋ ಸಮಯ ಬಂದಿದೆ. ದಿನ ಒಂದೊಂದು ರೋಚಕ ತಿರುವುಗಳನ್ನು ಪಡೆಯುತ್ತಿದ್ದು, ತೀವ್ರ ಕುತೂಹಲ ಮೂಡಿಸುತ್ತಿದೆ. ಎಲ್ಲಾ ಕುತೂಹಲಕ್ಕೂ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.

ಒಲವಿನ ನಿಲ್ದಾಣ

ಒಲವಿನ ನಿಲ್ದಾಣ

  • Share this:
    ಸದ್ದಿಲ್ಲದೇ ಕನ್ನಡಿಗರ ಮನದಲ್ಲಿ ಜಾಗ ಮಾಡಿಕೊಳ್ತಿದೆ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ. ಕಳೆದ ತಿಂಗಳಷ್ಟೇ ತನ್ನ ಪ್ರಯಾಣ ಶುರು ಮಾಡಿರುವ ಒಲವಿನ ನಿಲ್ದಾಣ ಧಾರಾವಾಹಿ ಅಭಿಮಾನಿಗಳ ಮನದಲ್ಲಿ ಎಲ್ಲೂ ಸ್ಟಾಪ್  ಆಗದೇ ಓಡ್ತಾ ಇದೆ. ಈ ಧಾರಾವಾಹಿಯು ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ, ಶುಕ್ರವಾರದವರೆಗೆ ಸಂಜೆ 6 ಗಂಟೆವರೆಗೆ ಪ್ರಸಾರ ಆಗುತ್ತಿದೆ. ಈ ಧಾರಾವಾಹಿಯ ನಟ ಸಿದ್ಧಾಂತ್ (Siddhant) ಸಾವಿರಾರು ಕನಸು, ಗುರಿ ಹೊಂದಿರುವ ಹುಡುಗು. ತಾರಿಣಿ ಈ ಧಾರಾವಾಹಿಯ ನಟಿ. ಸಿದ್ಧಾಂತ್ ಅಂದ್ರೆ ಇವಳಿಗೆ ತುಂಬಾ ಇಷ್ಟ. ಆದ್ರೆ ಸಿದ್ಧಾಂತ್‍ಗೆ ಪ್ರೀತಿ ಬಗ್ಗೆ ಆಸಕ್ತಿ ಇಲ್ಲ. ತಾರಿಣಿಗೆ ಬೇರೆ ಹುಡುಗನ ಜೊತೆ ನಿಶ್ಚಿತಾರ್ಥ (Engagement) ಆಗುತ್ತಾ ಇರುತ್ತೆ. ಅದು ಆಕೆಗೆ ಇಷ್ಟ ಇರಲ್ಲ. ಅದನ್ನು ತಪ್ಪಿಸಲು ಸಿದ್ಧಾಂತ್, ತಾರಿಣಿಯನ್ನು ತಾನು ಪ್ರೀತಿಸುತ್ತಿದ್ದೇನೆ ಎಂದು ಹೇಳಿ ಸುಳ್ಳು ನಿಶ್ಚಿತಾರ್ಥ ಮಾಡಿಕೊಂಡಿರುತ್ತಾನೆ.

    ಸುಳ್ಳಿನ ನಿಶ್ಚಿತಾರ್ಥದಿಂದ ಸಿದ್ಧಾಂತ್‍ಗೆ ತೊಂದರೆ
    ಸಿದ್ಧಾಂತ್ ತಾರಿಣಿ ಜೀವನ ಸರಿ ಮಾಡಲು ತನ್ನ ಬಗ್ಗೆ ಏನೂ ಯೋಚನೆ ಮಾಡದೇ, ಸುಳ್ಳಿನ ನಿಶ್ಚಿತಾರ್ಥ ಆಗಿದ್ದ. ಅದು ಸಿದ್ಧಾಂತ್ ಮನೆಯಲ್ಲೂ ಕೂಡ ಗೊತ್ತಿಲ್ಲ. ಎಂಗೇಜ್‍ಮೆಂಟ್ ಆಗಿದ್ದೇ ತಡ, ತಾರಿಣಿ ಮನೆಯವರು ಪದೇ ಪದೇ ಸಿದ್ಧಾಂತ್‍ಗೆ ಕರೆ ಮಾಡುತ್ತಿದ್ದಾರೆ. ಅದು ಸಿದ್ಧಾಂತ್ ಮನೆಯಲ್ಲಿ ಇದ್ದಾಗಲೇ, ಮದುವೆ ಯಾವಾಗ ಮಾಡೋಣ, ಲಗ್ನ ಪತ್ರಿಕೆ ಮಾಡಿಸಬೇಕು ಎಂದು ಕೇಳುತ್ತಾರೆ. ಅದಕ್ಕೆ ಸಿದ್ಧಾಂತ್‍ಗೆ ತೊಂದರೆ ಆಗುತ್ತಿದೆ.

    ತಾರಿಣಿ ಬಳಿ ಜಗಳವಾಡಿದ ಸಿದ್ಧಾಂತ್
    ತಾರಿಣಿ ಮನೆಯವರಿಂದ ಪದೇ ಪದೇ ತೊಂದರೆ ಆಗುತ್ತಿರುವುದರಿಂದ, ಸಿದ್ಧಾಂತ್ ತಾರಿಣಿ ಬಳಿ ಜಗಳವಾಡುತ್ತಾನೆ. ಸುಳ್ಳು ನಿಶ್ಚಿತಾರ್ಥದ ಬಗ್ಗೆ ಮನೆಯಲ್ಲಿ ಹೇಳು. ನನಗೆ ನೆಮ್ಮದಿ ಹಾಳಾಗಿದೆ ಎಂದು ಕೇಳಿಕೊಳ್ಳುತ್ತಾನೆ. ಅದಕ್ಕೆ ತಾರಿಣಿ ಎಲ್ಲಾ ಸತ್ಯ ಹೇಳುವುದಾಗಿ ಊರಿಗೆ ಹೋಗಿದ್ದಾಳೆ.

    ಇದನ್ನೂ ಓದಿ: Kannadathi: ಪೂಜೆ ತಯಾರಿ ಮಾಡ್ತಿರೋ ಭುವಿ ಮೇಲೆ ಸುದರ್ಶನ್ ಹಲ್ಲೆ, ಶುಭದಿನದಲ್ಲಿ ಇದೆಂಥಾ ಅನಾಹುತ! 

    ಇವತ್ತು ಮನೆಯವರ ಬಳಿ ಸತ್ಯ ಹೇಳಲು ಹೊರಟ ತಾರಿಣಿ?
    ಸತ್ಯ ಹೇಳಲು ಮನೆಗೆ ಬಂದಿರುವ ತಾರಿಣಿ, ಏನೂ ಹೇಳದೇ ಸುಮ್ಮನೇ ಕೂತಿದ್ದಾಳೆ. ಇನ್ನೂ ತಾರಿಣಿ ಮಾವ ಪಾಲಾಕ್ಷನಿಗೆ ಸಿದ್ಧಾಂತ್ ಇಷ್ಟ ಇಲ್ಲ. ತಾರಿಣಿ ಬಳಿ ಸತ್ಯ ಬಾಯ್ಬಿಡಿಸಲು ಏನಾಗಿದೆ ಹೇಳು, ಸಿದ್ಧಾಂತ್ ಜೊತೆ ಜಗಳವಾಯ್ತಾ? ಎಲ್ಲವನ್ನೂ ಕೇಳುತ್ತಿದ್ದಾನೆ. ಅದಕ್ಕೆ ತಾರಿಣಿ, ನನ್ನಿಂದ ಒಂದು ತಪ್ಪಾಗಿದೆ. ಅದು ಬೇಕು ಅಂತ ಮಾಡಿದ ತಪ್ಪು ಅಲ್ಲ. ಅದು ಗೊತ್ತಾದ ಮೇಲೂ ಸರಿ ಪಡಿಸಿಕೊಂಡಿಲ್ಲ ಅಂದ್ರೆ ತಪ್ಪಾಗುತ್ತೆ. ಮನೆ ಅವರ ಮುಂದೆ ಸತ್ಯ ಹೇಗೆ ಹೇಳೋದು ಎಂದು ಗೊತ್ತಾಗುತ್ತಿಲ್ಲ ಎನ್ನುತ್ತಾಳೆ. ಅದಕ್ಕೆ ನಾನು ಇದ್ದೇನೆ ಏನೂ ಆಗಲ್ಲ ಹೇಳು ಎನ್ನುತ್ತಾನೆ.

    Colors Kannada serial, Olavina nildana serial, Kannada Serial, serial today episode, ಒಲವಿನ ನಿಲ್ದಾಣ ಧಾರಾವಾಹಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಪಾಲಾಕ್ಷ


    ಸುಳ್ಳಿನ ನಿಶಿತಾರ್ಥದ ಬಗ್ಗೆ ಮನೆಯವರಿಗೆ ಗೊತ್ತಾದ್ರೆ ಏನ್ ಕಥೆ?
    ತಾರಿಣಿ ಮನೆಯವರಿಗೆಲ್ಲಾ ತಾರಿಣಿಯನ್ನು ಕಂಡ್ರೆ ತುಂಬಾ ಇಷ್ಟ. ಮದುವೆ ವಯಸ್ಸಿಗೆ ಬಂದ್ರೂ ಪ್ರೀತಿಯಿಂದ ಪಾಪು ಎಂದು ಕರೆಯುತ್ತಾರೆ. ಆಕೆಯ ಮದುವೆ ಬಗ್ಗೆ ತುಂಬಾ ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಇರೋ ಒಬ್ಬ ಮಗಳನ್ನು ಚೆನ್ನಾಗಿರೋ ಮನೆಗೆ ಕೊಡಬೇಕು. ಮದುವೆ ಗ್ರ್ಯಾಂಡ್ ಆಗಿ ಮಾಡಬೇಕು ಎಂದು ಕೊಂಡಿದ್ದಾರೆ. ಈಗ ತಾರಿಣಿ ಸತ್ಯ ಹೇಳಿದ್ರೆ, ಮನೆಯವರಿಗೆ ಆಘಾತ ಆಗೋದು ಗ್ಯಾರಂಟಿ. ಇದನ್ನೆಲ್ಲಾ ಅವರು ಹೇಗೆ ತಡೆದುಕೊಳ್ಳುತ್ತಾರೋ ಗೊತ್ತಿಲ್ಲ.

    ಇದನ್ನೂ ಓದಿ: Ramachari: ರಾಮಾಚಾರಿ ಹಾಕಿದ ಮೂರನೇ ಸವಾಲಿಗೆ ತಬ್ಬಿಬ್ಬಾದ ಚಾರು! CEO ಪಟ್ಟಕ್ಕಾಗಿ ಈ ಕೆಲಸ ಮಾಡ್ತಾಳಾ? 

    ಒಲವಿನ ನಿಲ್ದಾಣ ಧಾರಾವಾಹಿಯಲ್ಲಿ ತಾರಿಣಿಯ ಪ್ರೀತಿ ಸ್ಟಾಪ್ ಆಗೋ ಸಮಯ ಬಂದಿದೆ. ದಿನ ಒಂದೊಂದು ರೋಚಕ ತಿರುವುಗಳನ್ನು ಪಡೆಯುತ್ತಿದ್ದು, ತೀವ್ರ ಕುತೂಹಲ ಮೂಡಿಸುತ್ತಿದೆ. ಎಲ್ಲಾ ಕುತೂಹಲಕ್ಕೂ ಒಲವಿನ ನಿಲ್ದಾಣ ಧಾರಾವಾಹಿ ನೋಡಬೇಕು.
    Published by:Savitha Savitha
    First published: