Olavina Nildana: ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿರುವ ತಾರಿಣಿ, ಸಿದ್ಧಾಂತ್ ಮನಸ್ಸು ಗೆಲ್ತಾಳಾ?

ತಾರಿಣಿ ಸತ್ಯ ಹೇಳಲು ಹೊರಟಾಗ ಸಿದ್ಧಾಂತ್ ತಂದೆ ಕರೆ ಮಾಡಿ ನಿಲ್ಲಿಸಿದ್ದಾರೆ. ಯಾಕೆ ಆ ರೀತಿ ಮಾಡಿದ್ದಾರೆ ಅಂತ ತಾರಿಣಿಗೆ ಗೊತ್ತಿಲ್ಲ. ಸುಮತಿ ಅಮ್ಮ ಏನ್ ಹೀಗಾಯ್ತು ಅಂತ ಕೇಳಿದ್ರೆ, ತಾರಿಣಿ ನನಗೆ ಏನೂ ಗೊತ್ತಾಗ್ತಿಲ್ಲ. ಅವರು ಫೋನ್ ಮಾಡಿ ಈ ರೀತಿ ಹೇಳ್ತಾರೆ ಅಂತ ಐಡಿಯಾ ಇರಲಿಲ್ಲ. ಎಲ್ಲ ಸಡನ್ ಆಗಿ ಬಿಡ್ತು. ನಾನು ಶಾಕ್‍ನಲ್ಲಿ ಇದ್ದೇನೆ ಎಂದು ಹೇಳಿದ್ದಾಳೆ.

ಒಲವಿನ ನಿಲ್ದಾಣ ಸೀರಿಯಲ್

ಒಲವಿನ ನಿಲ್ದಾಣ ಸೀರಿಯಲ್

  • Share this:
    ಒಲವಿನ ನಿಲ್ದಾಣ (Olavina Nildana), ಧಾರಾವಾಹಿ (Serial) ಎಲ್ಲೂ ಸ್ಟಾಪ್ ಆಗದೇ ಜನರ ಮನಸ್ಸಿನಲ್ಲಿ ಓಡ್ತಾ ಇದೆ. ಕಲರ್ಸ್ ಕನ್ನಡದಲ್ಲಿ (Colors Kannada), ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ನಟ ಸಿದ್ಧಾಂತ್ ಗುರಿ, ಅವನ ಕಾಳಜಿ, ಮನೆಯವರ ಬಗ್ಗೆಯ ಗೌರವ ಎಲ್ಲವೂ ಜನರಿಗೆ ಇಷ್ಟವಾಗಿದೆ. ಇನ್ನು ನಟಿ ತಾರಿಣಿ ಮುಗ್ಧತೆ. ಸಿದ್ಧಾಂತ್ ಮೇಲಿನ ಪ್ರೀತಿ, ತನ್ನ ಕನಸಿನ ಹುಡುಗನ್ನು ಪಡೆಯಲು ಪರದಾಡುತ್ತಿರುವ ಪರಿ ಜನರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ಸಿದ್ಧಾಂತ್‍ಗೆ ತನ್ನ ಮೇಲೆ ಪ್ರೀತಿ ಇಲ್ಲ ಎಂದು ತಾರಿಣಿಗೆ ಗೊತ್ತಾಗಿದೆ. ಅಲ್ಲದೇ ಸಿದ್ಧಾಂತ್ (Siddhant) ಮತ್ತು ತಾರಿಣಿ ಮಧ್ಯೆ ಆಗಿರುವ ಸುಳ್ಳು ನಿಶ್ಚಿತಾರ್ಥದ (Engagement) ಬಗ್ಗೆ ಮನೆಯಲ್ಲಿ ಹೇಳಬೇಕು ಎಂದು ಕೊಂಡಿದ್ದಾಳೆ. ಆದ್ರೆ ಅದನ್ನು ಸಿದ್ಧಾಂತ್ ಅಪ್ಪ ತಡೆದಿದ್ದಾರೆ. ಏಕೆ ಈ ರೀತಿ ಮಾಡಿದ್ರೂ ಅಂತ ತಾರಿಣಿಗೆ ಗೊತ್ತಾಗ್ತಿಲ್ಲ.

    ನಿಜ ಹೇಳಲು ಹೊರಟ ತಾರಿಣಿಯನ್ನು ತಡೆದ ಸಿದ್ಧಾಂತ್ ಅಪ್ಪ
    ತಾರಿಣಿ ತನ್ನ, ಸಿದ್ಧಾಂತ್ ಮಧ್ಯೆ ಪ್ರೀತಿ ಇಲ್ಲ. ಅವತ್ತು ನಡೆದಿದ್ದು ಸುಳ್ಳು ನಿಶ್ಚಿತಾರ್ಥ ಅಂತ ಮನೆಯವರ ಬಳಿ ಹೇಳಲು, ಎಲ್ಲರನ್ನೂ ಒಂದು ಕಡೆ ಸೇರಿಸಿದ್ದಳು. ಇನ್ನೇನೂ ನಿಜ ಹೇಳಬೇಕು ಎನ್ನುವಷ್ಟರಲ್ಲಿ ಸಿದ್ಧಾಂತ್ ಅಪ್ಪ ಕರೆ ಮಾಡುತ್ತಾರೆ. ತಾರಿಣಿ ನಿಮ್ಮ ಬಳಿ ಒಂದು ನಿಜ ಹೇಳಲು ಒದ್ದಾಡುತ್ತಿದ್ದಾಳೆ.

    ಆ ಸತ್ಯವನ್ನು ನಾನೇ ಹೇಳುತ್ತೇನೆ ಎನ್ನುತ್ತಾರೆ. ಅದಕ್ಕೆ ಮನೆಯವರೆಲ್ಲಾ ಏನು ಎಂದು ಕೇಳಿದಾಗ, ತಾರಿಣಿ ಮೊನ್ನೆ ನಡೆದ ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ಫೇಲ್ ಆಗಿದ್ದಾಳೆ. ಅದನ್ನು ಹೇಳಲು ಪರದಾಡುತ್ತಿದ್ದಾಳೆ. ಅದಕ್ಕೆ ನಾನು ಹೇಳಿದೆ ಅಂತಾರೆ. ತಾರಿಣಿ ಸಹ ಹೌದು ಎನ್ನುತ್ತಾಳೆ.

    ಮಾವ ಪಾಲಾಕ್ಷನಿಗೆ ಅನುಮಾನ
    ಆದ್ರೆ ತಾರಿಣಿ ಮತ್ತು ಸಿದ್ಧಾಂತ್ ತಂದೆ ಸುಳ್ಳು ಹೇಳುತ್ತಿದ್ದಾರೆ ಎಂದು ತಾರಿಣಿ ಮಾವ ಪಾಲಾಕ್ಷನಿಗೆ ಅನುಮಾನ ಬಂದಿದೆ. ತಾರಿಣಿಯನ್ನು ಒತ್ತಿ ಒತ್ತಿ ಕೇಳುತ್ತಿದ್ದಾನೆ. ಇದೇ ವಿಷಯನಾ. ಅದ್ಯಾಕೆ ಇದಕ್ಕೆ ಇಷ್ಟು ಕಷ್ಟ ಪಟ್ಟೆ. ಎಲ್ಲರ ಮುಂದೆ ಸತ್ಯ ಹೇಳಬಹುದಿತ್ತು. ಬೇರೆ ಏನಾದ್ರೂ ಇದೆಯಾ ಹೇಳು ಎನ್ನುತ್ತಾನೆ. ತಾರಿಣಿ ಇಲ್ಲ ಇದೇ ಸತ್ಯ ಎಂದು ಹೇಳಿ ಹೋಗುತ್ತಾಳೆ.

    ಇದನ್ನೂ ಓದಿ: Kannadathi: ಹರ್ಷ-ಭುವಿಯ ಮೊದಲ ರಾತ್ರಿ! ಈಳಿಗೆ ಮಣೆ ಹಿಡಿದು ನಿಂತ ವರೂಧಿನಿ

    ಬೀಸೋ ದೊಣ್ಣೆಯಿಂದ ಪಾರಾದ ತಾರಿಣಿ
    ತಾರಿಣಿ ಸತ್ಯ ಹೇಳಿದ್ರೆ ಮನೆಯಲ್ಲಿ ಇನ್ನೇನು ತೊಂದರೆಯಾಗುತಿತ್ತೋ ಗೊತ್ತಿಲ್ಲ. ಸದ್ಯ ಆ ಸಂಕಷ್ಟದಿಂದ ಪಾರಾಗಿದ್ದಾಳೆ. ಸಿದ್ಧಾಂತ್ ಅವರ ಅಪ್ಪ ತಾರಿಣಿಯನ್ನು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾಳೆ. ಆದ್ರೆ ಮುಂದೆ ವಿಷಯ ಗೊತ್ತಾದ್ರೆ ಏನ್ ಆಗುತ್ತೋ ಗೊತ್ತಿಲ್ಲ.

    ಏನೂ ಗೊತ್ತಾಗದೇ ಗೊಂದಲದಲ್ಲಿರುವ ತಾರಿಣಿ
    ತಾರಿಣಿ ಸತ್ಯ ಹೇಳಲು ಹೊರಟಾಗ ಸಿದ್ಧಾಂತ್ ತಂದೆ ಕರೆ ಮಾಡಿ ನಿಲ್ಲಿಸಿದ್ದಾರೆ. ಯಾಕೆ ಆ ರೀತಿ ಮಾಡಿದ್ದಾರೆ ಅಂತ ತಾರಿಣಿಗೆ ಗೊತ್ತಿಲ್ಲ. ಸುಮತಿ ಅಮ್ಮ ಏನ್ ಹೀಗಾಯ್ತು ಅಂತ ಕೇಳಿದ್ರೆ, ತಾರಿಣಿ ನನಗೆ ಏನೂ ಗೊತ್ತಾಗ್ತಿಲ್ಲ. ಅವರು ಫೋನ್ ಮಾಡಿ ಈ ರೀತಿ ಹೇಳ್ತಾರೆ ಅಂತ ಐಡಿಯಾ ಇರಲಿಲ್ಲ. ಎಲ್ಲ ಸಡನ್ ಆಗಿ ಬಿಡ್ತು. ನಾನು ಶಾಕ್‍ನಲ್ಲಿ ಇದ್ದೇನೆ ಎಂದು ಹೇಳಿದ್ದಾಳೆ.

    ಸತ್ಯ ಹೇಳಬೇಡ ಎಂದ ಸಿದ್ಧಾಂತ್
    ಸುಳ್ಳು ನಿಶ್ಚಿತಾರ್ಥದ ಬಗ್ಗೆ ಸಿದ್ಧಾಂತ್ ತಕ್ಷಣ ಮನೆಯಲ್ಲಿ ಹೇಳಬೇಡ ಅಂದಿದ್ದಾನೆ. ಸಿದ್ಧಾಂತ್ ಫೋನ್ ಮಾಡಿ ಸತ್ಯ ಹೇಳಬೇಡ ಅಂದ್ರೆ ಅದು ಖುಷಿಯ ವಿಚಾರ ತಾನೇ ಎಂದು ಸುಮತಿ ಅಮ್ಮ ಹೇಳುತ್ತಾರೆ. ನೀನೇ ಅವರಸವಾಗಿ ಎಲ್ಲ ಹೇಳಿ ಎಡವಟ್ಟು ಮಾಡಿಕೊಂಡು ಬಿಡುತ್ತಿದ್ದೆ. ಅವನು ಈಗ ಸತ್ಯ ಹೇಳಬೇಡ ಅಂದ್ರೆ, ಸಿದ್ಧಾಂತ್‍ಗೆ ನಿನ್ನ ಮೇಲೆ ಪ್ರೀತಿ ಇದೆ ಎಂದು ಅರ್ಥ ಅಲ್ವಾ ಎಂದು ಸುಮತಿ ಕೇಳುತ್ತಾಳೆ.

    ಇದನ್ನೂ ಓದಿ: Ramachari: ದುಡ್ಡಿನ ಆಸೆ ತೋರಿಸಿದ ಚಾರು ಜೈಲು ಸೇರುತ್ತಾಳಾ? ರಾಮಾಚಾರಿ ಕೊಟ್ಟ ಶಾಕ್‍ಗೆ ತತ್ತರ!

    ತಾತಾನ ಆರೋಗ್ಯಕ್ಕೆ ಸತ್ಯ ಹೇಳಬೇಡ ಎಂದ ಸಿದ್ಧಾಂತ್
    ಸಿದ್ಧಾಂತ್‍ಗೆ ನನ್ನ ಮೇಲೆ ಪ್ರೀತಿ ಇಲ್ಲ. ತಾತಾನ ಆರೋಗ್ಯಕ್ಕೆ ತೊಂದರೆ ಆಗುತ್ತೆ ಅಂತ ಸತ್ಯ ಹೇಳಬೇಡ ಅಂದಿದ್ದಾರೆ ಎಂದು ತಾರಿಣಿ ಸುಮತಿ ಬಳಿ ಹೇಳುತ್ತಿದ್ದಾಳೆ. ಸದ್ಯಕ್ಕೆ ಹೇಳಬೇಡ ಅಂದಿದ್ದಾರೆ. ಹೇಳಲೇ ಬೇಡ ಎಂದು ಹೇಳಿಲ್ಲ. ಮುಂದೊಂದು ದಿನ ಎಲ್ಲ ಸತ್ಯ ಹೇಳಲೇ ಬೇಕು. ಏನೋ ಒಂದು ಸದ್ಯಕ್ಕೆ ತಾರಿಣಿ ಬಿಸೋ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದಾಳೆ. ಮುಂdEನಾಗುತ್ತೆ ಅಂತ ನೋಡೋಕೆ ಒಲವಿನ ನಿಲ್ದಾಣ ಸೀರಿಯಲ್ ನೋಡಬೇಕು.
    Published by:Savitha Savitha
    First published: