Lakshana: ನಕ್ಷತ್ರಾಳನ್ನು ಕೊಲ್ಲಲು ಭೂಪತಿ ಮನೆಯಲ್ಲೇ ಮೌರ್ಯನಿಗೆ ಸಹಾಯ! ಕಾಣದ ಕೈ ಯಾರದ್ದು?

ನಕ್ಷತ್ರಾಗೆ ತೊಂದರೆ ಕೊಟ್ರೆ, ಚಂದ್ರಶೇಖರ್​ಗೆ ನೋವಾಗುತ್ತೆ ಎನ್ನುವುದು ಮೌರ್ಯನ ಪ್ಲ್ಯಾನ್. ಅದಕ್ಕೆ ಅವನು ನಕ್ಷತ್ರಾಳನ್ನು ಕಿಡ್ನ್ಯಾಪ್ ಮಾಡಿ ಸಾಯಿಸಲು ನೋಡುತ್ತಾನೆ. ನಕ್ಷತ್ರಾಳನ್ನು ಕಿಡ್ನ್ಯಾಪ್ ಮಾಡಲು ಮನೆಗೆ ಬರಲು, ಭೂಪತಿ ಅಣ್ಣ ಶೌರ್ಯ ಸಹಾಯ ಮಾಡಿದ್ದಾನೆ.

ಮೌರ್ಯ-ನಕ್ಷತ್ರ

ಮೌರ್ಯ-ನಕ್ಷತ್ರ

  • Share this:
    ಲಕ್ಷಣ (Lakshana), ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರತಿ ದಿನ ರಾತ್ರಿ 9.30ಕ್ಕೆ ಪ್ರಸಾರ ಆಗುತ್ತಿರುವ ಧಾರಾವಾಹಿ (Serial). ಕಪ್ಪು-ಬಿಳುಪಿನ ನಡುವೆ ತಾರತಮ್ಯವನ್ನು ಒಳಗೊಂಡ ಕಥೆ. ಬಣ್ಣ ಕಪ್ಪಾಗಿದ್ದರೇನು, ಲಕ್ಷಣ ಮುಖ್ಯ, ಮನಸ್ಸು ಮುಖ್ಯ ಎಂಬುವುದನ್ನು ತೋರಿಸಿ ಕೊಡುವ ಕಥಾಹಂದರ. ಲಕ್ಷಣ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ನಟಿ ನಕ್ಷತ್ರ (Nakshatra). ನೋಡಲು ಕಪ್ಪು. ಆದರೆ ತುಂಬಾ ಒಳ್ಳೆ ಹುಡುಗಿ. ಶ್ವೇತಾ ಮದುವೆಯಾಗಬೇಕಿದ್ದ ಭೂಪತಿಯನ್ನು ನಕ್ಷತ್ರ ಮದುವೆಯಾಗಿದ್ದಳೆ. ಭೂಪತಿಯನ್ನು ನಕ್ಷತ್ರ ಮದುವೆಯಾಗಿದ್ದು, ಭೂಪತಿ (Bhupathi) ತಮ್ಮ ಮೌರ್ಯನಿಗೆ ಇಷ್ಟ ಇಲ್ಲ. ಅದಕ್ಕೆ ನಕ್ಷತ್ರಾ ಮತ್ತು ಅವರ ತಂದೆ ಚಂದ್ರಶೇಖರ್​​ಗೆ ತೊಂದರೆ ಕೊಡುತ್ತಿದ್ದಾನೆ. ತನ್ನ ಅಮ್ಮ, ಅಣ್ಣನಿಗೆ ಬೆದರಿಸಿ ಸಿಎಸ್, ನಕ್ಷತ್ರಾಳನ್ನು ಮದುವೆ ಮಾಡಿಸಿದ್ದಾರೆ ಎಂದು ಸೇಡು ತೀರಿಸಿಕೊಳ್ಳುತ್ತಿದ್ದಾನೆ.

    ಮೌರ್ಯನಿಗೆ ಮನೆಯವರಿಂದಲೇ ಸಾಥ್​

    ಭೂಪತಿಗೆ ಬಲವಂತವಾಗಿ ನಕ್ಷತ್ರಾಳನ್ನು ಮದುವೆ ಮಾಡಿಸಿದ್ದಾರೆ ಎಂದು ಚಂದ್ರಶೇಖರ್ ಮೇಲೆ ಶಕುಂತಲಾ ದೇವಿ ಮನೆಯವರಿಗೆಲ್ಲಾ ಕೋಪ. ನಮ್ಮ ಭೂಪತಿ ಜೀವನ ಹಾಳು ಮಾಡಿ ಬಿಟ್ಟರೂ ಎಂದು ಚಂದ್ರಶೇಖರ್ ಮೇಲೆ ಮೌರ್ಯ ಸೇಡು ತೀರಿಸಿಕೊಳ್ಳುತ್ತಿದ್ದಾನೆ. ಆದ್ರೆ ಮನೆಗೆ ಬಂದು ನಕ್ಷತ್ರಾಳನ್ನೂ ಕಿಡ್ನ್ಯಾಪ್ ಮಾಡ್ತಾನೆ ಅಂದ್ರೆ, ಅವನಿಗೆ ಮನೆಯ ಯಾರೂ ಒಬ್ಬರು ಸಹಾಯ ಮಾಡ್ತಾ ಇದ್ದಾರೆ ಎಂದು ಅರ್ಥ. ಹೌದು ಮೌರ್ಯನಿಗೆ ಅವರ ಮನೆಯ ಸದಸ್ಯರೊಬ್ಬರು ಸಹಾಯ ಮಾಡ್ತಾ ಇದ್ದಾರೆ.

    ಮೌರ್ಯನಿಗೆ ಸಹಾಯ ಮಾಡ್ತಾ ಇರೋ ಶೌರ್ಯ

    ನಕ್ಷತ್ರಾಗೆ ತೊಂದರೆ ಕೊಟ್ರೆ, ಚಂದ್ರಶೇಖರ್ ಗೆ ನೋವಾಗುತ್ತೆ ಎನ್ನುವುದು ಮೌರ್ಯನ ಪ್ಲ್ಯಾನ್. ಅದಕ್ಕೆ ಅವನು ನಕ್ಷತ್ರಾಳನ್ನು ಕಿಡ್ನ್ಯಾಪ್ ಮಾಡಿ ಸಾಯಿಸಲು ನೋಡುತ್ತಾನೆ. ನಕ್ಷತ್ರಾಳನ್ನು ಕಿಡ್ನ್ಯಾಪ್ ಮಾಡಲು ಮನೆಗೆ ಬರಲು, ಭೂಪತಿ ಅಣ್ಣ ಶೌರ್ಯ ಸಹಾಯ ಮಾಡಿದ್ದಾನೆ. ಮನೆಯಲ್ಲಿದ್ದುಕೊಂಡೆ ಯಾರಿಗೂ ಗೊತ್ತಾಗದಂತೆ, ಮೌರ್ಯನಿಗೆ ಸಹಾಯ ಮಾಡುತ್ತಿದ್ದಾನೆ.

    ಇದನ್ನೂ ಓದಿ: Kendasampige: ಸುಮನಾ ಕುಟುಂಬಕ್ಕೆ ಮತ್ತೊಂದು ಆಘಾತ, ಮೂವರು ಮಕ್ಕಳ ತಂದೆ ಮೃತರಾದರಾ?

    ಕದ್ದು ಮಾತನಾಡುತ್ತಿದ್ದ ಶೌರ್ಯ-ಮೌರ್ಯನನ್ನು ನೋಡಿದ ಭೂಪತಿ

    ಮನೆ ಮುಂದೆ ಪೊಲೀಸರು ಕಾವಲು ಕಾಯುತ್ತಿದ್ದರೂ, ಮೌರ್ಯ ಹಿಂದಿನ ಡೋರ್‍ನಿಂದ ಶೌರ್ಯನನ್ನು ಭೇಟಿ ಮಾಡಲು ಬಂದಿದ್ದಾನೆ. ಅವನ ಬಳಿ ಮಾತನಾಡಿ, ಇನ್ನೇನೂ ಹೊರಡಬೇಕು. ಅಷ್ಟರಲ್ಲಿ ಅವರಿಬ್ಬರ ಮುಂದೆ ಭೂಪತಿ ಬಂದು ನಿಂತಿದ್ದಾನೆ. ಭೂಪತಿಯನ್ನು ನೋಡಿ ಶೌರ್ಯ-ಮೌರ್ಯ ಶಾಕ್ ಆಗಿದ್ದಾರೆ.

    Colors Kannada serial, Kannada serial, Lakshana Serial, serial today episode, Another Kidnap plan in episode, ಲಕ್ಷಣ ಧಾರಾವಾಹಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಮೌರ್ಯ


    ಭೂಪತಿಗೆ ಸತ್ಯ ಗೊತ್ತಾಗುತ್ತಾ?
    ಅಣ್ಣ-ತಮ್ಮ ಕದ್ದು ಮುಚ್ಚಿ ಮಾತನಾಡುವುದನ್ನು ನೋಡಿ ಭೂಪತಿಗೆ ಅನುಮಾನ ಬಂದಂತೆ ಕಾಣುತ್ತೆ. ಮೌರ್ಯ ಮನೆಗೆ ಬಂದ್ರೂ, ಮನೆಯವರನ್ನು ಭೇಟಿಯಾಗದೇ, ಹೋಗುತ್ತಿದ್ದಾನೆ. ಏಕೆ ಈ ರೀತಿ ಮಾಡುತ್ತಿದ್ದಾನೆ ಎಂದು ಆತಂಕಗೊಂಡಿದ್ದಾನೆ. ಹಾಗಾದ್ರೆ ಭೂಪತಿಗೆ ಎಲ್ಲಾ ಸತ್ಯ ಗೊತ್ತಾಯ್ತಾ ಅನ್ನೋದೇ ಕುತೂಹಲ.

    Colors Kannada serial, Kannada serial, Lakshana Serial, serial today episode, Another Kidnap plan in episode, ಲಕ್ಷಣ ಧಾರಾವಾಹಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಶೌರ್ಯ


    ಮೌರ್ಯನನ್ನು ನೋಡ್ತಾಳಾ ನಕ್ಷತ್ರಾ?

    ಇನ್ನೂ ಮನೆಗೆ ಬಂದಿರುವ ಮೌರ್ಯನನ್ನು ನಕ್ಷತ್ರಾ ನೋಡ್ತಾಳಾ ಅನ್ನೋ ಅನುಮಾನಗಳು ಹೆಚ್ಚಾಗಿವೆ. ಒಂದು ವೇಳೆ ನಕ್ಷತ್ರಾ, ಮೌರ್ಯನನ್ನು ನೋಡಿದ್ರೆ ಏನ್ ಕಥೆ, ಅವನೇ ತನಗೆ ಕಾಟ ಕೊಡುವವನು ಅಂತ ಭೂಪತಿ, ತನ್ನ ಅಪ್ಪ ಚಂದ್ರಶೇಖರ್ ಗೆ ಹೇಳಿ ಬಿಡ್ತಾಳಾ? ಎಲ್ಲವನ್ನೂ ನೋಡಲು ಲಕ್ಷಣ ಧಾರಾವಾಹಿ ನೋಡಬೇಕು.

    ಇದನ್ನೂ ಓದಿ: Dance Karnataka Dance: ಅಬ್ಬಬ್ಬಾ ಏನ್ ಗುರು ಶಿವಣ್ಣನ ಡ್ಯಾನ್ಸ್! ಜೋಗಿ ಕುಣಿದ್ರೆ ಅಲ್ಲಿ ಸೃಷ್ಟಿಯಾಗೋದು ಜಾತ್ರೆನೆ ಅಲ್ವಾ?

    ಇತ್ತ ಕಂಡ ಕಂಡವರ ಮೇಲೆ ಭೂಪತಿಗೆ ಅನುಮಾನ

    ಇನ್ನು ಮೌರ್ಯ, ನಕ್ಷತ್ರಾಗೆ ಕಾಟ ಕೊಡುತ್ತಿದ್ದಾನೆ. ತೊಂದ್ರೆ ಕೊಡ್ತಿರೋರು ಯಾರು ಎಂದು ತಿಳಿದುಕೊಳ್ಳೋ ತವಕದಲ್ಲಿ ಭೂಪತಿ ಇದ್ದಾನೆ. ಆದ ಕಾರಣ ಕಂಡ ಕಂಡವರ ಮೇಲೆ ಅನುಮಾನ ಪಡುತ್ತಿದ್ದಾರೆ
    Published by:Savitha Savitha
    First published: