• Home
  • »
  • News
  • »
  • entertainment
  • »
  • Lakshana: ಶ್ವೇತಾಳನ್ನು ಕಿಡ್ನ್ಯಾಪ್ ಮಾಡಿಸಲು ಹೋಗಿ ನಕ್ಷತ್ರಾ ಟ್ರ್ಯಾಪ್ ಆದ್ಲಾ? ಮಿಲ್ಲಿ ಕುತಂತ್ರ ಬಯಲು!

Lakshana: ಶ್ವೇತಾಳನ್ನು ಕಿಡ್ನ್ಯಾಪ್ ಮಾಡಿಸಲು ಹೋಗಿ ನಕ್ಷತ್ರಾ ಟ್ರ್ಯಾಪ್ ಆದ್ಲಾ? ಮಿಲ್ಲಿ ಕುತಂತ್ರ ಬಯಲು!

 ಲಕ್ಷಣ

ಲಕ್ಷಣ

ಶ್ವೇತಾಳನ್ನು ಕಿಡ್ನ್ಯಾಪ್ ಮಾಡುವಂತೆ ನಕ್ಷತ್ರ ಮಿಲ್ಲಿಗೆ ಹೇಳಿದ್ದಳು. ಮಿಲ್ಲಿಯೂ ನಕ್ಷತ್ರ ಹೇಳಿದಂತೆ ಮಾಡಿದ್ದಾಳೆ. ಆದ್ರೆ ಇದರ ಹಿಂದೆ ಮಿಲ್ಲಿಯ ದುರುದ್ದೇಶವೂ ಇದೆ. ಶ್ವೇತಾ ಜೊತೆ ನಕ್ಷತ್ರಾಳನ್ನು ಕಿಡ್ನ್ಯಾಪ್ ಮಾಡೋದು ಮಿಲ್ಲಿ ಪ್ಲ್ಯಾನ್ ಆಗಿದೆ. ಇದು ಗೊತ್ತಿಲ್ಲದೇ ನಕ್ಷತ್ರ ಮಿಲ್ಲಿ ಹೇಳಿದ ಜಾಗಕ್ಕೆ ಬಂದಿದ್ದಾಳೆ.

ಮುಂದೆ ಓದಿ ...
  • Share this:

    ಲಕ್ಷಣ(Lakshana), ಕಲರ್ಸ್ ಕನ್ನಡ  (Colors Kannada)ವಾಹಿನಿಯಲ್ಲಿ ಪ್ರತಿ ದಿನ ರಾತ್ರಿ 9.30ಕ್ಕೆ ಪ್ರಸಾರ ಆಗುತ್ತಿರುವ ಧಾರಾವಾಹಿ(Serial). ಕಪ್ಪು-ಬಿಳುಪಿನ ನಡುವೆ ತಾರತಮ್ಯವನ್ನು ಒಳಗೊಂಡ ಕಥೆ. ಬಣ್ಣ ಕಪ್ಪಾಗಿದ್ದರೇನು, ಲಕ್ಷಣ ಮುಖ್ಯ, ಮನಸ್ಸು ಮುಖ್ಯ ಎಂಬುವುದನ್ನು ತೋರಿಸಿ ಕೊಡುವ ಕಥಾಹಂದರ. ಲಕ್ಷಣ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ನಟಿ ನಕ್ಷತ್ರ (Nakshatra). ನೋಡಲು ಕಪ್ಪು. ಅಲ್ಲದೇ ಶ್ವೇತಾ ಮದುವೆಯಾಗಬೇಕಿದ್ದ ಭೂಪತಿಯನ್ನು ನಕ್ಷತ್ರ ಮದುವೆಯಾಗಿದ್ದಾಳೆ. ಅದಕ್ಕೆ ಹೇಗಾದ್ರೂ ಭೂಪತಿ ಅಮ್ಮ ಶಕುಂತಲಾ ಮನೆ ಸೊಸೆಯಾಗಬೇಕು ಎಂದು ಹಠ ಹಿಡಿದಿದ್ದಾಳೆ. ನಕ್ಷತ್ರಾ ಮತ್ತು ಆಕೆಯ ತಂದೆ ಚಂದ್ರಶೇಖರ್ ಮೇಲೆ, ಭೂಪತಿ ತಮ್ಮ ಮೌರ್ಯ ಸೇಡು ತೀರಿಸಿಕೊಳ್ಳಲು ತೊಂದರೆ ಕೊಡುತ್ತಿದ್ದಾನೆ. ತಮಗೆ ತೊಂದರೆ ಕೊಡುವವರ ಜೊತೆ ಶ್ವೇತಾ ಇದ್ದಾಳೆ ಎಂದು ನಕ್ಷತ್ರ ಅವಳನ್ನು ಕಿಡ್ನ್ಯಾಪ್ (Kidnap)ಮಾಡಿಸಿದ್ದಾಳೆ.


    ಮಿಲ್ಲಿ ಸಹಾಯದಿಂದ ಶ್ವೇತಾ ಕಿಡ್ಯ್ನಾಪ್!
    ನಕ್ಷತ್ರಾಳಿಗೆ ಯಾರೂ ಪದೇ ಪದೇ ತೊಂದರೆ ಕೊಡುತ್ತಿದ್ದಾರೆ. ಅದು ಮೌರ್ಯನೇ ಅಂತಾ ನಕ್ಷತ್ರಾಗೆ ಗೊತ್ತಿಲ್ಲ. ಆದ್ರೆ ಮೌರ್ಯನ ಪೋಟೋ ತಮ್ಮ ಮನೆಯಲ್ಲಿ ನೋಡಿ ಶಾಕ್ ಆಗಿದ್ದಳು. ಅದನ್ನು ಭೂಪತಿಗೆ ಹೇಳಿ ನಮಗೆ ತೊಂದರೆ ಕೊಡುತ್ತಿರುವವನ ಪೋಟೋ ನಮ್ಮ ಮನೆಯಲ್ಲೇ ಇದೆ. ಎಂದು ಪೋಟೋ ತೋರಿಸಲು ಇಟ್ಟಿರುತ್ತಾಳೆ. ಅದನ್ನು ಶ್ವೇತಾ ಕದಿದ್ದಾಳೆ. ಅದಕ್ಕೆ ನಕ್ಷತ್ರಾಗೆ ಅನುಮಾನ ಬಂದಿದೆ. ನನಗೆ ತೊಂದರೆ ಕೊಡುವವರಿಗೂ, ಶ್ವೇತಾಗೂ ಏನೋ ಸಂಬಂಧ ಇದೆ. ಇದನ್ನು ಅವಳ ದಾರಿಯಲ್ಲೇ ಹೋಗಿ ಬಾಯ್ಬಿಡಸಬೇಕು ಎಂದು ಮಿಲ್ಲಿ ಸಹಾಯದಿಂದ ಕಿಡ್ನ್ಯಾಪ್ ಮಾಡಿಸಿದ್ದಾಳೆ.


    ನಕ್ಷತ್ರಾನೇ ಕಿಡ್ನ್ಯಾಪ್ ಮಾಡಿಸಿದ್ದು ಎಂದು ಶ್ವೇತಾಗೆ ಗೊತ್ತಾಯ್ತು
    ಮಿಲ್ಲಿ ಶಾಪಿಂಗ್ ನೆಪ ಹೇಳಿ ಶ್ವೇತಾಳನ್ನು ಕಿಡ್ನ್ಯಾಪ್ ಮಾಡಿಸಿ, ಕಟ್ಟಿ ಹಾಕಿದ್ದಾಳೆ. ಆದ್ರೆ ಶ್ವೇತಾ ಮಿಲ್ಲಿ ಮೇಲೆ ಕೋಪಗೊಂಡಿದ್ದಾಳೆ. ಏಕೆ ಕಿಡ್ನ್ಯಾಪ್ ಮಾಡಿಸಿದ್ದೇ ಎಂದು ಕೇಳುತ್ತಿರುವಾಗಲೇ, ನಕ್ಷತ್ರ ಎಂಟ್ರಿ ಕೊಡುತ್ತಾಳೆ. ನಾನೇ ಕಿಡ್ಯ್ನಾಪ್ ಮಾಡಿಸಿದ್ದು. ಎನ್ನುತ್ತಾಳೆ. ಅದಕ್ಕೆ ಶ್ವೇತಾ ನಗುತ್ತಾಳೆ.


    ಇದನ್ನೂ ಓದಿ: Kannadathi: ಮನೆಗೆ ಪೊಲೀಸರನ್ನು ಕರೆಸಿದ್ದಾಳೆ ಅಮ್ಮಮ್ಮ, ಸಾನಿಯಾ ವಿರುದ್ಧ ದೂರು ನೀಡ್ತಾರಾ ರತ್ನಮಾಲಾ?


    ಕಿಡ್ನ್ಯಾಪ್ ಅಥವಾ ಕಾಮಿಡಿನಾ ಎಂದ ಶ್ವೇತಾ
    ಶ್ವೇತಾಗೆ ನಕ್ಷತ್ರ ಕಿಡ್ನ್ಯಾಪ್ ಮಾಡಿಸಿದ್ದು ಎಂದು ಗೊತ್ತಾದ ತಕ್ಷಣ ನಗುತ್ತಿದ್ದಾಳೆ. ಇದೇನ್ ಕಿಡ್ನ್ಯಾಪ್ ಅಥವ ಕಾಮಿಡಿನಾ ಎಂದು ಕೇಳುತ್ತಿದ್ದಾಳೆ. ಹೋಗಿ ಹೋಗಿ ದಿ ಗ್ರೇಟ್ ನಕ್ಷತ್ರಾ ಈ ರೀತಿ ಕೆಲಸ ಮಾಡೋದಾ, ನೀನು ಕಿಡ್ನ್ಯಾಪ್ ಮಾಡೋದಾ? ನಾವೆಲ್ಲಾ ಹಾಳಾಗಿದ್ದು ಸಾಕು ಅಂತ ನೀನು ಹಾಳಾಗ್ತೀಯಾ? ಅದು ನಿನ್ನ ಕೈಯಲ್ಲಿ ಸಾಧ್ಯನಾ? ಮನೆಯಲ್ಲಿ ತಿಂಡಿ, ಟೀ ಮಾಡಿಕೊಂಡು ಸುಮ್ಮನೇ ಇರೋದನ್ನು ಬಿಟ್ಟು ಈ ಕೆಲಸ ಮಾಡ್ತಾ ಇದ್ದೀಯಾ ಅಂತ ನಕ್ಷತ್ರಾಗೆ ಕೇಳಿದ್ದಾಳೆ.


    ಕಿಡ್ನಾಪ್ ಮಾಡೋದು ಅಂದ್ರೆ ಅಡುಗೆಗೆ ಒಗ್ಗರಣೆ ಹಾಕಿದಂತೆ ಅಂತ ಅಂದುಕೊಂಡಿದ್ದೀಯಾ? ಇಷ್ಟೊತ್ತು ಮಿಲ್ಲಿ ಕಿಡ್ನ್ಯಾಪ್ ಮಾಡಿದ್ದು ಅಂತ ಸಿಟ್ಟು ಬರ್ತಿತ್ತು. ನನಗೆ ನರಕ ತೋರಿಸ್ತಿಯಾ. ಅದೇನ್ ಮಾಡ್ತೀಯಾ ಅಂತ ತೋರಿಸು ಎಂದು ಶ್ವೇತಾ ನಕ್ಷತ್ರಾಗೆ ಸವಾಲ್ ಹಾಕಿದ್ದಾಳೆ.


    ನಕ್ಷತ್ರಾಳನ್ನು ಟ್ಯಾಪ್ ಮಾಡಿದ್ಲಾ ಮಿಲ್ಲಿ
    ಶ್ವೇತಾಳನ್ನು ಕಿಡ್ನ್ಯಾಪ್ ಮಾಡುವಂತೆ ನಕ್ಷತ್ರ ಮಿಲ್ಲಿಗೆ ಹೇಳಿದ್ದಳು. ಮಿಲ್ಲಿಯೂ ನಕ್ಷತ್ರ ಹೇಳಿದಂತೆ ಮಾಡಿದ್ದಾಳೆ. ಆದ್ರೆ ಇದರ ಹಿಂದೆ ಮಿಲ್ಲಿಯ ದುರುದ್ದೇಶವೂ ಇದೆ. ಶ್ವೇತಾ ಜೊತೆ ನಕ್ಷತ್ರಾಳನ್ನು ಕಿಡ್ನ್ಯಾಪ್ ಮಾಡೋದು ಮಿಲ್ಲಿ ಪ್ಲ್ಯಾನ್ ಆಗಿದೆ. ಇದು ಗೊತ್ತಿಲ್ಲದೇ ನಕ್ಷತ್ರ ಮಿಲ್ಲಿ ಹೇಳಿದ ಜಾಗಕ್ಕೆ ಬಂದಿದ್ದಾಳೆ.


    ಇದನ್ನೂ ಓದಿ: Thara Anuradha: ಕೇಸರಿ, ಬಿಳಿ, ಹಸಿರು ಉಡುಪಿನಲ್ಲಿ ಮಿಂಚಿದ ತಾರಾ; ಫೋಟೋ ಗ್ಯಾಲರಿ ಇಲ್ಲಿದೆ


    ಏನಾಗುತ್ತೆ ಅಂತ ನೋಡೋದಕ್ಕೆ ಇವತ್ತಿನ ನಕ್ಷತ್ರಾ ಸಂಚಿಕೆ ನೋಡಬೇಕು.

    Published by:Savitha Savitha
    First published: