Lakshana Serial: ಅಪ್ಪನ ಪ್ರಾಣ ಕಾಪಾಡಿದ ನಕ್ಷತ್ರಾಗೆ ನೆಮ್ಮದಿ ಇಲ್ಲ! ಹುಡುಕಿ ಬಂದು ಕೊಲ್ತಾನಂತೆ ಮೌರ್ಯ!

ನಕ್ಷತ್ರಾಗೆ ತೊಂದ್ರೆ ಕೊಡ್ತಿರೋ ಮೌರ್ಯ, ಈ ಬಾರಿ ನಿನ್ನ ಹೊತ್ತುಕೊಂಡು ಹೋಗಲ್ಲ. ನೀನು ಎಲ್ಲಿ ಇರ್ತಿಯೋ ಅಲ್ಲಿಗೆ ಬಂದು, ನಿನ್ನ ಕಥೆ ಮುಗಿಸುತ್ತೇನೆ ನೋಡಿಕೋ ಎನ್ನುತ್ತಾನೆ. ನೀನು ಯಾವತ್ತು ತುಂಬಾ ಖುಷಿಯಾಗಿ ಇರ್ತಿಯೋ ಅವತ್ ಬರ್ತಿನಿ ಅಂತ ಮೌರ್ಯ ನಕ್ಷತ್ರಾಗೆ ವಾರ್ನ್ ಮಾಡಿದ್ದಾನೆ.

ನಕ್ಷತ್ರಾ

ನಕ್ಷತ್ರಾ

  • Share this:
    ಲಕ್ಷಣ (Lakshana), ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರತಿ ದಿನ ರಾತ್ರಿ 9.30ಕ್ಕೆ ಪ್ರಸಾರ ಆಗುತ್ತಿರುವ ಧಾರಾವಾಹಿ (Serial). ಕಪ್ಪು-ಬಿಳುಪಿನ ನಡುವೆ ತಾರತಮ್ಯವನ್ನು ಒಳಗೊಂಡ ಕಥೆ. ಬಣ್ಣ ಕಪ್ಪಾಗಿದ್ದರೇನು, ಲಕ್ಷಣ ಮುಖ್ಯ, ಮನಸ್ಸು ಮುಖ್ಯ ಎಂಬುವುದನ್ನು ತೋರಿಸಿ ಕೊಡುವ ಕಥಾಹಂದರ. ಲಕ್ಷಣ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ನಟಿ ನಕ್ಷತ್ರ. ನೋಡಲು ಕಪ್ಪು. ಆದರೆ ತುಂಬಾ ಒಳ್ಳೆ ಹುಡುಗಿ. ಶ್ವೇತಾ ಮದುವೆಯಾಗಬೇಕಿದ್ದ ಭೂಪತಿಯನ್ನು ನಕ್ಷತ್ರ (Nakshatra) ಮದುವೆಯಾಗಿದ್ದಳೆ. ಭೂಪತಿಯನ್ನು ನಕ್ಷತ್ರ ಮದುವೆಯಾಗಿದ್ದು, ಭೂಪತಿ ತಮ್ಮ ಮೌರ್ಯನಿಗೆ ಇಷ್ಟ ಇಲ್ಲ. ಅದಕ್ಕೆ ನಕ್ಷತ್ರಾ ಮತ್ತು ಅವರ ತಂದೆ ಚಂದ್ರಶೇಖರ್ ಗೆ ತೊಂದರೆ ಕೊಡುತ್ತಿದ್ದಾನೆ. ತನ್ನ ಅಮ್ಮ, ಅಣ್ಣನಿಗೆ ಬೆದರಿಸಿ ಸಿಎಸ್, ನಕ್ಷತ್ರಾಳನ್ನು ಮದುವೆ ಮಾಡಿಸಿದ್ದಾರೆ ಎಂದು ಸೇಡು ತೀರಿಸಿಕೊಳ್ಳುತ್ತಿದ್ದಾನೆ.

    ಅಪ್ಪನ ಪ್ರಾಣ ಕಾಪಾಡಿದ ನಕ್ಷತ್ರಾ
    ಮೌರ್ಯ ಚಂದ್ರಶೇಖರ್ ಮನೆಯಲ್ಲಿ ಏನಾಗುತ್ತೆ ಎನ್ನುವುದನ್ನು ಸದಾ ಗಮನಿಸುತ್ತಿರುತ್ತಾನೆ. ಅಂತೆಯೇ, ಚಂದ್ರಶೇಖರ್ ಮನೆಗೆ ಚಿಕ್ಕ ಹುಡುಗನ ಮೂಲಕ ಪತ್ರವೊಂದನ್ನು ಕಳಿಸಿದ್ದಾನೆ. ನಿನಗೆ ನನ್ನನ್ನು ನೋಡುವ ಆಸೆ ಇದ್ರೆ, ನೀನು ನಿಜವಾಗಲೂ ಧೈರ್ಯವಂತನಾಗಿದ್ರೆ, ನಾನು ಹೇಳಿದ ಜಾಗಕ್ಕೆ ಒಬ್ಬನೇ ಬಾ ಎಂದು ಸವಾಲು ಹಾಕಿದ್ದಾನೆ. ಅಲ್ಲಿಗೆ ಹೋದ ಚಂದ್ರಶೇಖರ್ ನ್ನನ್ನು ಮೌರ್ಯ, ನೀರಿಗೆ ತಳ್ಳಿ ಬಿಡುತ್ತಾನೆ. ಆಗ ನಕ್ಷತ್ರ ಅಪ್ಪನ ಪ್ರಾಣ ಕಾಪಾಡ್ತಾಳೆ.

    ಮನೆಗೆ ಬಂದ ನಕ್ಷತ್ರಾಗೆ ಭೂಪತಿ ಪ್ರಶ್ನೆ
    ನಕ್ಷತ್ರಾ ಮನೆಯಲ್ಲಿ ಕಾಣದೇ ಇರುವುದನ್ನು ನೋಡಿ ಭೂಪತಿ ಆತಂಕಗೊಂಡಿರುತ್ತಾನೆ. ಮನೆಗೆ ಬಂದ ನಕ್ಷತ್ರಾಗೆ ಪ್ರಶ್ನೆ ಮೇಲೆ ಪ್ರಶ್ನೆ ಕೇಳುತ್ತಾನೆ. ಎಲ್ಲಿಗೆ ಹೋಗಿದ್ದೇ ಎಂದಿದ್ದಕ್ಕೆ, ಅಪ್ಪನ್ನ ನೋಡೋಕೆ ಅಂತಾಳೆ ನಕ್ಷತ್ರಾ. ನಿಮ್ಮ ಅಪ್ಪ ಕರೆದಾಗ ಎಲ್ಲಾ ಹೋಗುತ್ತಿ ಏಕೆ ಎನ್ನುತ್ತಾನೆ. ಅದಕ್ಕೆ ನಕ್ಷತ್ರಾ ಈ ಬಾರಿ ಕರೆದಿದ್ದು ಅಪ್ಪ ಅಲ್ಲ ಅವನು.

    ಇದನ್ನೂ ಓದಿ: DKD-Jodi No 01: ಡಿಕೆಡಿ-ಜೋಡಿ ನಂಬರ್ 1 ಮಹಾಸಂಗಮ! ಅಭಿಜಿತ್ ಎನರ್ಜಿಗೆ ಶಿವಣ್ಣ ಫಿದಾ

    ನಕ್ಷತ್ರಾಳನ್ನು ಕರೆಸಿಕೊಂಡಿದ್ದ ಮೌರ್ಯ
    ಅವನು ಮತ್ತೆ ಕರೆ ಮಾಡಿದ್ದ, ಅವನು ಮತ್ತೆ ಹಳೇ ಚಾಳಿ ಶುರು ಮಾಡಿದ್ದಾನೆ. ಇಷ್ಟು ದಿನದ ರೀತಿ ಸುಮ್ಮನೇ ಆಟ ಆಡಿ ಹೋಗಿಲ್ಲ. ಪ್ರಾಣ ತೆಗೆಯುವ ಮಟ್ಟಕ್ಕೆ ಇಳಿದಿದ್ದಾನೆ. ಆದ್ರೆ ನನ್ನನ್ನು ಅಲ್ಲ. ಅವನ ಗುರಿ ನಾನು ಆಗಿರಲಿಲ್ಲ. ಈ ಬಾರಿ ಅಪ್ಪನನ್ನು ಟಾರ್ಗೆಟ್ ಮಾಡಿದ್ದ. ನಕ್ಷತ್ರಾ ಏನ್ ಹೇಳ್ತಾ ಇದೀಯಾ? ಅವರನ್ನು ಯಾಕೆ ಟಾರ್ಗೆಟ್ ಮಾಡ್ತಾ ಇದಾನೆ ಅಂತ ಭೂಪತಿ ಕೇಳ್ತಾನೆ. ಇಷ್ಟು ದಿನ ನನ್ನನ್ನು ಕರೆದುಕೊಂಡು ಹೋಗಿ ನಿನಗೆ ಚಾಲೆಂಜ್ ಮಾಡ್ತಾ ಇದ್ದ.

    ಈ ಸಲ ಅಪ್ಪನಿಗೆ ತೊಂದ್ರೆ ಕೊಟ್ಟು ನನ್ನ ಒಬ್ಬಳನ್ನೇ ಕರೆಸಿಕೊಂಡಿದ್ದ. ಇವತ್ತು ಅಪ್ಪ ಜೀವಂತವಾಗಿ ಉಳಿದಿದ್ದೇ ಹೆಚ್ಚು. ನನಗೆ ಯಾಕೆ ಹೇಳಲಿಲ್ಲ ನಕ್ಷತ್ರಾ? ನೀನು ಒಬ್ಬಳೇ ಯಾಕೆ ಹೋಗಬೇಕಿತ್ತು ಎಂದು ಭೂಪತಿ ನಕ್ಷತ್ರಾಳನ್ನು ಕೇಳುತ್ತಾನೆ. ಅದಕ್ಕೆ ಆಕೆ ನಿಮ್ಮ ಅಪ್ಪ ಜೀವಂತವಾಗಿ ಬೇಕು ಎಂದ್ರೆ ಒಬ್ಬಳೇ ಬಾ ಎಂದ. ನನಗೆ ಬೇರೆ ದಾರಿ ಇರಲಿಲ್ಲ ಒಬ್ಬಳೇ ಹೋಗಬೇಕಾಯ್ತು ಎನ್ನುತ್ತಾಳೆ.

    ಇದನ್ನೂ ಓದಿ: Ramachari Serial: ಕೊನೆಗೂ ಜೈಲಿನಿಂದ ಹೊರಬಂದ ರಾಮಾಚಾರಿ, ಅನ್ಯಾಯ ಮಾಡಿದ್ದ ಚಾರು ಕಂಬಿ ಎಣಿಸ್ತಾರಾ?

    ನಕ್ಷತ್ರಾ ಇರೋ ಜಾಗಕ್ಕೆ ಬರ್ತಾನಂತೆ ಮೌರ್ಯ
    ನಕ್ಷತ್ರಾಗೆ ತೊಂದ್ರೆ ಕೊಡ್ತಿರೋ ಮೌರ್ಯ, ಈ ಬಾರಿ ನಿನ್ನ ಹೊತ್ತುಕೊಂಡು ಹೋಗಲ್ಲ. ನೀನು ಎಲ್ಲಿ ಇರ್ತಿಯೋ ಅಲ್ಲಿಗೆ ಬಂದು, ನಿನ್ನ ಕಥೆ ಮುಗಿಸುತ್ತೇನೆ ನೋಡಿಕೋ ಎನ್ನುತ್ತಾನೆ. ನೀನು ಯಾವತ್ತು ತುಂಬಾ ಖುಷಿಯಾಗಿ ಇರ್ತಿಯೋ ಅವತ್ ಬರ್ತಿನಿ. ಅಲ್ಲಿ ಬಂದು ಖುಷಿಯನ್ನೇಲ್ಲಾ ಸಾಯಿಸಿ, ಆ ಜಾಗವನ್ನು ಸ್ಮಶಾನ ಮಾಡ್ತೀನಿ ಅಂತ ಮೌರ್ಯ ನಕ್ಷತ್ರಾಗೆ ವಾರ್ನ್ ಮಾಡಿದ್ದಾನೆ.
    Published by:Savitha Savitha
    First published: