Lakshana: ಸಾವು-ಬದುಕಿನ ನಡುವೆ ಹೋರಾಡುತ್ತಿರುವ ನಕ್ಷತ್ರ, ಪತ್ನಿ ಪ್ರಾಣ ಉಳಿಸಿಕೊಳ್ತಾನಾ ಭೂಪತಿ?

ನಕ್ಷತ್ರಾಗೆ ಮೌರ್ಯ ವಿಷ ಅನಿಲ ಹಾಕಿದ್ದರಿಂದ, ಅವಳು ಎಚ್ಚರ ತಪ್ಪಿದ್ದಾಳೆ. ಎಷ್ಟೇ ಮಾತನಾಡಿಸಿದ್ರೂ ಕಣ್ಣು ಬಿಡುತ್ತಿಲ್ಲ. ಚಂದ್ರಶೇಖರ್, ಭೂಪತಿ ಇಬ್ಬರೂ ಗಾಬರಿಯಾಗಿದ್ದಾರೆ. ಸಾವು-ಬದುಕಿನ ನಡುವೆ ಹೋರಾಡುತ್ತಿರುವ ನಕ್ಷತ್ರಾಳನ್ನು ಇಬ್ಬರೂ ಕಾಪಾಡಿಕೊಳ್ತಾರಾ ನೋಡಬೇಕು.

ಲಕ್ಷಣ ಧಾರವಾಹಿ

ಲಕ್ಷಣ ಧಾರವಾಹಿ

  • Share this:
    ಲಕ್ಷಣ (Lakshana), ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರತಿ ದಿನ ರಾತ್ರಿ 9.30ಕ್ಕೆ ಪ್ರಸಾರ ಆಗುತ್ತಿರುವ ಧಾರಾವಾಹಿ (Serial) . ಕಪ್ಪು-ಬಿಳುಪಿನ ನಡುವೆ ತಾರತಮ್ಯವನ್ನು ಒಳಗೊಂಡ ಕಥೆ. ಬಣ್ಣ ಕಪ್ಪಾಗಿದ್ದರೇನು, ಲಕ್ಷಣ ಮುಖ್ಯ, ಮನಸ್ಸು ಮುಖ್ಯ ಎಂಬುವುದನ್ನು ತೋರಿಸಿ ಕೊಡುವ ಕಥಾಹಂದರ. ಲಕ್ಷಣ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ನಟಿ ನಕ್ಷತ್ರ (Nakshatra) . ನೋಡಲು ಕಪ್ಪು. ಆದರೆ ತುಂಬಾ ಒಳ್ಳೆ ಹುಡಗಿ. ಶ್ವೇತಾ ಮದುವೆಯಾಗಬೇಕಿದ್ದ ಭೂಪತಿಯನ್ನು ನಕ್ಷತ್ರ ಮದುವೆಯಾಗಿದ್ದಳೆ. ಭೂಪತಿಯನ್ನು ನಕ್ಷತ್ರ ಮದುವೆಯಾಗಿದ್ದು, ಭೂಪತಿ ತಮ್ಮ ಮೌರ್ಯನಿಗೆ ಇಷ್ಟ ಇಲ್ಲ. ಅದಕ್ಕೆ ನಕ್ಷತ್ರಾ ಮತ್ತು ಅವರ ತಂದೆ ಚಂದ್ರಶೇಖರ್ (Chandrashekar) ಗೆ  ತೊಂದರೆ ಕೊಡುತ್ತಿದ್ದಾನೆ. ತನ್ನ ಅಮ್ಮ, ಅಣ್ಣನಿಗೆ ಬೆದರಿಸಿ ಸಿಎಸ್, ನಕ್ಷತ್ರಾಳನ್ನು ಮದುವೆ ಮಾಡಿಸಿದ್ದಾರೆ ಎಂದು ಸೇಡು ತೀರಿಸಿಕೊಳ್ಳುತ್ತಿದ್ದಾನೆ.

    ಮತ್ತೆ ನಕ್ಷತ್ರಾಳನ್ನು ಕಿಡ್ನ್ಯಾಪ್ ಮಾಡಿದ ಮೌರ್ಯ
    ನಕ್ಷತ್ರಾ ತನಗೆ ತೊಂದರೆ ಕೊಡುತ್ತಿರುವ ಕ್ರಿಮಿನಲ್ ಕಂಡು ಹಿಡಿಯಲು, ಶ್ವೇತಾಳನ್ನು ಮಿಲ್ಲಿ ಸಹಾಯದಿಂದ ಕಿಡ್ನ್ಯಾಪ್ ಮಾಡಿಸಿರುತ್ತಾಳೆ. ಆದ್ರೆ ಆ ಕಿಡ್ನ್ಯಾಪ್ ಪ್ಲ್ಯಾನ್ ಆಕೆಗೆ ಉಲ್ಟಾ ಹೊಡೆಯುತ್ತೆ. ಶ್ವೇತಾ, ನಕ್ಷತ್ರಾ ಇರುವ ಜಾಗಕ್ಕೆ ಮೌರ್ಯ ಬರುತ್ತಾನೆ. ನಕ್ಷತ್ರಾಳನ್ನು ಕಿಡ್ನ್ಯಾಪ್ ಮಾಡಿಕೊಂಡು ಹೋಗುತ್ತಾನೆ. ನಕ್ಷತ್ರಾ ತಂದೆಗೆ ಕರೆ ಮಾಡಿ, ನಿನಗೆ ನಿನ್ನ ಮಗಳು ಜೀವಂತವಾಗಿ ಬೇಕು ಎಂದ್ರೆ, ತಡ ಮಾಡದೇ ನಾನು ಹೇಳಿದ ಜಾಗಕ್ಕೆ ಬಾ. ನೀನು ತಡ ಮಾಡಿದಷ್ಟು ನಿನ್ನ ಮಗಳ ಪ್ರಾಣಕ್ಕೆ ಅಪಾಯ ಎಂದು ಹೇಳುತ್ತಾನೆ.

    Colors Kannada serial, Kannada serial, Lakshana Serial, serial today episode, Interesting episode, ಲಕ್ಷಣ ಧಾರಾವಾಹಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಮೌರ್ಯ-ಶ್ವೇತಾ


    ಆತಂಕದಲ್ಲಿರುವ ನಕ್ಷತ್ರ ಅಪ್ಪ ಚಂದ್ರಶೇಖರ್
    ತಮ್ಮ ಮಗಳು ಭೂಪತಿಯನ್ನು ಮದುವೆ ಆಗಿ ಖುಷಿಯಾಗಿಲ್ಲ. ಶಕುಂತಲಾ ಮನೆಯಲ್ಲಿ ಸಂತೋಷವಾಗಿಲ್ಲ. ನಮ್ಮ ಮನೆಗೆ ಬಾ ಎಂದರೂ ಬರುತ್ತಿಲ್ಲ ಎಂದು ಚಂದ್ರಶೇಖರ್, ಅವನ ಪತ್ನಿ ಚಿಂತೆ ಮಾಡುತ್ತಿದ್ದಾರೆ. ಆಗಲೇ ನಕ್ಷತ್ರಾ ನಂಬರ್‍ನಿಂದ ಸಿಎಸ್‍ಗೆ ಕಾಲ್ ಬರುತ್ತೆ. ಮಗಳು ಕಾಲ್ ಮಾಡಿದ್ದಾಳೆ ಎಂದು ಸಂತೋಷದಿಂದ ಕರೆ ಸ್ವೀಕರಿಸಿದ್ರೆ, ಮೌರ್ಯ ಮಾತನಾಡುತ್ತಾನೆ. ನಿನ್ನ ಮಗಳು ನನ್ನ ಬಳಿ ಇದಾಳೆ ಬೇಗ ಬಾ ಎನ್ನುತ್ತಾನೆ.

    ಇದನ್ನೂ ಓದಿ: Ramachari: ರಾಮಾಚಾರಿಗೆ 1 ಕೋಟಿ ಆಫರ್ ಮಾಡಿದ ಚಾರು, ದುಡ್ಡಿಗಾಗಿ ಚಾರು ಹೇಳಿದ್ದನ್ನು ಮಾಡ್ತಾನಾ?

    ನಕ್ಷತ್ರಾ ಕಾಣದೇ ಭೂಪತಿ ಕಂಗಾಲು
    ಇನ್ನು ಮನೆಯಲ್ಲಿ, ತನ್ನ ಹೆಂಡತಿ ನಕ್ಷತ್ರಾ ಇಲ್ಲದಿರುವುದು ಗೊತ್ತಾಗಿ ಭೂಪತಿ ಕಂಗಾಲಾಗಿದ್ದಾನೆ. ನಕ್ಷತ್ರಾಗಾಗಿ ಎಲ್ಲೆಡೆ ಹುಡುಕಾಟ ನಡೆಸುತ್ತಿದ್ದಾನೆ. ಏನು ತೊಂದರೆ ಆಯ್ತೋ ಅಂತ ಆತಂಕದಲ್ಲಿದ್ದಾನೆ. ಕಂಡ ಕಂಡಲ್ಲಿ ನಕ್ಷತ್ರಾಳನ್ನು ಹುಡುಕುತ್ತಿದ್ದಾನೆ.

    ನಕ್ಷತ್ರಾಳನ್ನು ಕಟ್ಟಿ ಹಾಕಿ ವಿಷ ಅನಿಲ ಬಿಟ್ಟ ಮೌರ್ಯ
    ಇನ್ನು ನಕ್ಷತ್ರಾ ಮೌರ್ಯನಿಗೆ ನನ್ನನ್ನು ಯಾಕೆ ಕಿಡ್ನ್ಯಾಪ್ ಮಾಡಿದೆ. ಏನು ಬೇಕು ನಿಂಗೆ ಎಂದು ಕೇಳಿದ್ರೆ, ನಿನ್ನ ಸಾವು ಅಂತಾನೆ. ಅದಕ್ಕೆ ಅವಳನ್ನು ಒಂದು ಕೋಣೆಯಲ್ಲಿ ಕಟ್ಟಿ ಹಾಕಿ, ವಿಷ ಅನಿಲ ಬಿಟ್ಟಿರುತ್ತಾನೆ. ಅಲ್ಲಿಗೆ ಚಂದ್ರಶೇಖರ್ ಬರುವಂತೆ ಮಾಡುತ್ತಾನೆ. ಚಂದ್ರಶೇಖರ್ ತನ್ನ ಮಗಳನ್ನು ಆ ಸ್ಥಿತಿಯಲ್ಲಿ ನೋಡಿ ಅಳುತ್ತಾನೆ. ಅಷ್ಟರಲ್ಲೇ ಅಲ್ಲಿಗೆ ಭೂಪತಿ ಬರುತ್ತಾನೆ. ಇಬ್ಬರು ಸೇರಿ ನಕ್ಷತ್ರಾಳನ್ನು ಆ ಕೋಣೆಯಿಂದ ಕರೆದುಕೊಂಡು ಬರುತ್ತಾರೆ.

    ಸಾವು-ಬದುಕಿನ ನಡುವೆ ನಕ್ಷತ್ರಾ
    ನಕ್ಷತ್ರಾಗೆ ಮೌರ್ಯ ವಿಷ ಅನಿಲ ಹಾಕಿದ್ದರಿಂದ, ಅವಳು ಎಚ್ಚರ ತಪ್ಪಿದ್ದಾಳೆ. ಎಷ್ಟೇ ಮಾತನಾಡಿಸಿದ್ರೂ ಕಣ್ಣು ಬಿಡುತ್ತಿಲ್ಲ. ಚಂದ್ರಶೇಖರ್, ಭೂಪತಿ ಇಬ್ಬರೂ ಗಾಬರಿಯಾಗಿದ್ದಾರೆ. ಸಾವು-ಬದುಕಿನ ನಡುವೆ ಹೋರಾಡುತ್ತಿರುವ ನಕ್ಷತ್ರಾಳನ್ನು ಇಬ್ಬರೂ ಕಾಪಾಡಿಕೊಳ್ತಾರಾ ನೋಡಬೇಕು.

    ಇದನ್ನೂ ಓದಿ: Kannadathi: ಮನೆಮಂದಿ ಮಲಗಿದ ಮೇಲೆ ಕಳ್ಳಿಯಾದ ಸಾನಿಯಾ! ಅಮ್ಮಮ್ಮನ ಮೇಲೆ ವರೂಧಿನಿ ವಕ್ರ ಕಣ್ಣು!

    ಚಂದ್ರಶೇಖರ್ ಮೇಲಿನ ಸೇಡಿಗೆ ಮೌರ್ಯ, ನಕ್ಷತ್ರಾ ಮೇಲೆ ಕೋಪ ತೀರಿಸಿಕೊಳ್ಳುತ್ತಿದ್ದಾನೆ. ಇದರಿಂದ ಚಂದ್ರಶೇಖರ್ ಮನಸ್ಸಿಗೆ ನೋವು ಕೊಡುವುದು ಅವನ ಉದ್ದೇಶ. ಅದಕ್ಕೆ ಈ ರೀತಿ ಮಾಡುತ್ತಿದ್ದಾನೆ. ಈಗ ನಕ್ಷತ್ರಾಗೆ ಏನ್ ಆಗುತ್ತೆ. ಅವಳು ಸರಿ ಹೋಗ್ತಾಳಾ? ಎಲ್ಲವನ್ನೂ ನೋಡಲು ಸಂಚಿಕೆ ನೋಡಬೇಕು.
    Published by:Savitha Savitha
    First published: