Kendasampige: ಕೆಂಡಸಂಪಿಗೆಯ ನಟಿ ಸುಮನಾ ರಿಯಲ್ ತಮ್ಮನಿಂದ ಚಿನ್ನದ ಗಿಫ್ಟ್!

ಕೆಂಡಸಂಪಿಗೆಯಲ್ಲಿ ಸುಮನಾ ಆಗಿ ನಟಿಸುತ್ತಿರುವವ ನಟಿಯ ನಿಜವಾದ ಹೆಸರು ಕಾವ್ಯ. ಆಕೆಯ ತಮ್ಮನ ಹೆಸರು ಕಾರ್ತಿಕ್. ಈ ಬಾರಿಯ ಕಲರ್ಸ್ ಕನ್ನಡ ಗಣೇಶೋತ್ಸವದಲ್ಲಿ, ಕಾವ್ಯ ತಮ್ಮ ಕಾರ್ತಿಕ್‍ನನ್ನು ಕರೆಸಿದ್ದಾರೆ. ಸುನೀಲ್ ರೀಲ್ ತಮ್ಮನಾದ್ರೆ, ಕಾರ್ತಿಕ್ ರಿಯಲ್ ತಮ್ಮ.

ತಿರ್ಥಂಕರ್, ಸುಮನಾ, ರಾಜೇಶ್
(ಕೃಪೆ: ಇನ್‍ಸ್ಟಾಗ್ರಾಂ)

ತಿರ್ಥಂಕರ್, ಸುಮನಾ, ರಾಜೇಶ್ (ಕೃಪೆ: ಇನ್‍ಸ್ಟಾಗ್ರಾಂ)

  • Share this:
    ಕೆಂಡಸಂಪಿಗೆ (Kendasampige) ಅನ್ನೋ ಹೊಸ ಧಾರಾವಾಹಿ (New Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದ ಹೊಸದರಲ್ಲೇ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಈ ಕಥೆಯ ನಾಯಕಿ ಸುಮನಾ (Sumana). ಅಪ್ಪನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಹೂವನ್ನು ಮಾರಿ ಸಂಸಾರ ಸಾಗಿಸುತ್ತಿದ್ದಾಳೆ. ಅಮ್ಮ ಬೇರೆ ಇಲ್ಲ. ತಮ್ಮ, ತಂಗಿಗೆ ಅಮ್ಮನ ಸ್ಥಾನದಲ್ಲಿ ನಿಂತಿದ್ದಾಳೆ. ಇನ್ನು ಕಥೆಯ ನಾಯಕ ತೀರ್ಥಂಕರ್ ಪ್ರಸಾದ್. ಈ ಧಾರಾವಾಹಿಯಲ್ಲಿ ಕಾರ್ಪೊರೇಟರ್ ಪಾತ್ರ. ತನ್ನ ತಮ್ಮ ಪರೀಕ್ಷೆಯಲ್ಲಿ ಪಾಸಾಗಲಿಲ್ಲ ಅಂತ ಅವನ ಜೊತೆ ಮಾತು ಬಿಟ್ಟಿದ್ದಾಳೆ. ತಮ್ಮನ ಪಾತ್ರದಲ್ಲಿ ಶನಿ ಖ್ಯಾತಿಯ ಸುನೀಲ್ ಅಭಿನಯಿಸುತ್ತಿದ್ದಾರೆ. ಸುನೀಲ್ (Sunil) ರೀಲ್ ತಮ್ಮ. ರಿಯಲ್ ತಮ್ಮನ (Brother) ಬಗ್ಗೆ ನಿಮಗೆ ಗೊತ್ತಾ?

    ಧಾರಾವಾಹಿಯಲ್ಲಿ ತಮ್ಮನಾಗಿರುವ ಶನಿ ಖ್ಯಾತಿಯ ಸುನೀಲ್
    ಕೆಂಡಸಂಪಿಗೆ ಧಾರಾವಾಹಿಯಲ್ಲಿ ತಮ್ಮನಾಗಿ ನಟಿಸುತ್ತಿರುವವನು ಸುನೀಲ್. ಶನಿ ಧಾರಾವಾಹಿಯಲ್ಲಿ ಶನಿ ಪಾತ್ರದಲ್ಲಿ ಅಭಿನಯಿಸಿದ್ದವ. ತನ್ನ ಅಮೋಘ ನಟನೆ ಮೂಲಕ ಜನರ ಮನಸ್ಸಿನಲ್ಲಿ ಶನಿ ಪಾತ್ರಧಾರಿಯಾಗಿ ಉಳಿದುಕೊಂಡಿದ್ದಾನೆ. ಈಗ ತಮ್ಮ ರಾಜೇಶ್ ಪಾತ್ರದಲ್ಲಿ  ರಫ್ ಅಂಡ್  ಟಫ್ ಮೂಲಕ ಬಂದಿದ್ದು, ಎಷ್ಟರ ಮಟ್ಟಿಗೆ ಕನ್ನಡಿಗರ ಮನದಲ್ಲಿ ಮನೆ ಮಾಡ್ತಾರೆ ನೋಡಬೇಕು.

    ಚಿಕ್ಕಿಂದಿನಿಂದಲೇ ನಟನೆ ಮಾಡೋ ಆಸೆ
    ಸುನೀಲ್‍ಗೆ ಚಿಕ್ಕ ಹುಡುಗನಿಂದಲೇ ನಟನೆ ಮಾಡೋ ಆಸಕ್ತಿಯಿತ್ತಂತೆ. ಶನಿ ಧಾರಾವಾಹಿಗೆ, ಶನಿ ಪಾತ್ರಕ್ಕೆ ನಿರ್ದೇಶಕರು 500 ಮಂದಿಯನ್ನು ಆಡಿಷನ್ ಮಾಡಿದ್ರಂತೆ. ಅದರಲ್ಲಿ ಸುನೀಲ್ ಆಯ್ಕೆಯಾಗಿದ್ದರಂತೆ. ಅದರಂತೆಯೇ ಧಾರಾವಾಹಿ ಮಾಡಿ ಕನ್ನಡಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

    ಇದನ್ನೂ ಓದಿ: Harish Raj: ಜೊತೆ ಜೊತೆಯಲಿ ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್ ಬರೋದು ಪಕ್ಕಾ! ಬಲ್ಲ ಮೂಲಗಳಿಂದ ಮಾಹಿತಿ

    ಅಕ್ಕನ ಜೊತೆ ಮಾತು ಬಿಟ್ಟಿರುವ ರಾಜೇಶ್
    ಸುಮನಾಗೆ ತನ್ನ ತಮ್ಮ ರಾಜೇಶ್ ಅಂದ್ರೆ ತುಂಬಾ ಇಷ್ಟ. ಆದ್ರೆ ತಮ್ಮ ಓದುವುದನ್ನು ಬಿಟ್ಟು, ರಾಜಕೀಯ ಮಾಡಲು ಓಡಾಡುತ್ತಿದ್ದಾನೆ ಎಂದು ಬೇಸರ. ಒಮ್ಮೆ ತಮ್ಮ ರಾಜೇಶ್ ಅಕ್ಕ ನಾನು ಈ ಬಾರಿ ಪರೀಕ್ಷೆ ಪಾಸ್ ಮಾಡೇ ಮಾಡುತ್ತೇನೆ. ಇಲ್ಲ ಅಂದ್ರೆ ನೀನು ಮಾತನಾಡಿಸಬೇಡ ನನ್ನ ಮೇಲೆ ಆಣೆ ಎಂದಿರುತ್ತಾನೆ. ಪರೀಕ್ಷೆ ಪಾಸ್ ಆಗುವುದಿಲ್ಲ. ಅದಕ್ಕೆ ಸುಮನಾ, ರಾಜೇಶ್‍ನನ್ನು ಮಾತನಾಡಿಸುವುದನ್ನು ಬಿಟ್ಟಿದ್ದಾಳೆ.

    ರಿಯಲ್ ತಮ್ಮನ ಹೆಸರು ಏನು ಗೊತ್ತಾ?
    ಕೆಂಡಸಂಪಿಗೆಯಲ್ಲಿ ಸುಮನಾ ಆಗಿ ನಟಿಸುತ್ತಿರುವವ ನಟಿಯ ನಿಜವಾದ ಹೆಸರು ಕಾವ್ಯ. ಆಕೆಯ ತಮ್ಮನ ಹೆಸರು ಕಾರ್ತಿಕ್. ಈ ಬಾರಿಯ ಕಲರ್ಸ್ ಕನ್ನಡ ಗಣೇಶೋತ್ಸವದಲ್ಲಿ, ಕಾವ್ಯ ತಮ್ಮ ಕಾರ್ತಿಕ್‍ನನ್ನು ಕರೆಸಿದ್ದಾರೆ. ಸುನೀಲ್ ರೀಲ್ ತಮ್ಮನಾದ್ರೆ, ಕಾರ್ತಿಕ್ ರಿಯಲ್ ತಮ್ಮ.

    ಇದನ್ನೂ ಓದಿ: Lakshana Serial: ಮೌರ್ಯನ ಭೇಟಿ ಮಾಡಲು ಹೋದ ಚಂದ್ರಶೇಖರ್​ಗೆ ಆಪತ್ತು! ಅಪ್ಪನ ಪ್ರಾಣ ಉಳಿಸಿಕೊಳ್ತಾಳಾ ನಕ್ಷತ್ರಾ?

    ಅಕ್ಕನಿಗೆ ಹಬ್ಬಕ್ಕೆ ಕೊಟ್ಟ ಉಡುಗೊರೆ ಏನು?
    ಕಲರ್ಸ್ ಕನ್ನಡ ಗಣೇಶೋತ್ಸವಕ್ಕೆ ಬಂದಿರುವ ಕಾವ್ಯ ತಮ್ಮ ಕಾರ್ತಿಕ್, ಅಕ್ಕನಿಗೆ ಉಡುಗೊರೆಯನ್ನು ತಂದಿದ್ದಾನೆ. ತನ್ನ ಪ್ರೀತಿಯ ಅಕ್ಕನಿಗೆ ಗೌರಿ ಹಬ್ಬದ ಪ್ರಯುಕ್ತ ಸೀರೆ, ಬಳೆ, ಹೂವನ್ನು ಕೊಟ್ಟಿದ್ದಾನೆ. ಅಲ್ಲದೇ ಚಿನ್ನದ ಬ್ರೆಸ್​ಲೈಟ್​ ಉಡುಗೊರೆ ಆಗಿ ನೀಡಿದ್ದಾನೆ. ಸುಮನಾ ಇದು ನನ್ನ ಜೀವನದ ಮರೆಯಲಾಗದ ದಿನ ಎಂದು ಹೇಳಿದ್ದಾರೆ.

    ರಿಯಲ್ ತಮ್ಮ ಇರುವುದರಿಂದ ಅಭಿನಯಿಸಲು ಸುಲಭ
    ಸುಮನಾಗೆ ರಿಯಲ್ ಆಗಿ ತಮ್ಮ ಕಾರ್ತಿಕ್ ಇರುವ ಕಾರಣ, ಧಾರಾವಾಹಿಯಲ್ಲಿ ಅಭಿನಯಿಸಲು ಸುಲಭವಾಗಿದೆ. ರಿಯಲ್ ತಮ್ಮನಂತೆ ಸುನಿಲ್ ಜೊತೆ ಅಭಿನಯ ಮಾಡುತ್ತಿದ್ದಾರೆ. ರೀಲ್, ರಿಯಲ್‍ಗೂ ತುಂಬಾ ವ್ಯತ್ಯಾಸ ಇರುತ್ತೆ. ಆದ್ರೆ ಸುಮನಾಗೆ ಅಷ್ಟೇ ನೂ ಕಷ್ಟ ಆಗುತ್ತಿಲ್ಲವಂತೆ.
    Published by:Savitha Savitha
    First published: