Kendasampige: ಸುಮನಾ ಕುಟುಂಬಕ್ಕೆ ಮತ್ತೊಂದು ಆಘಾತ, ಮೂವರು ಮಕ್ಕಳ ತಂದೆ ಮೃತರಾದರಾ?

ಕೆಂಡಸಂಪಿಗೆ

ಕೆಂಡಸಂಪಿಗೆ

ಕಾಲೋನಿಯ ಮಹಿಳೆಯೊಬ್ಬಳು ಸುಮನಾಗೆ ಕರೆ ಮಾಡಿ, ನಿಮ್ಮ ತಂದೆ ಸೀರಿಯಸ್ ಆಗಿ ಆಸ್ಪತ್ರೆಗೆ ಸೇರಿದ್ದಾರೆ ಎಂದು ಕರೆ ಮಾಡಿ ತಿಳಿಸುತ್ತಾರೆ. ಆಗ ಸುಮಿ, ರಾಜಿ, ರಾಜೇಶ್ ಎಲ್ಲರೂ ಆಸ್ಪತ್ರೆಗೆ ಬರುತ್ತಾರೆ. ಅವರ ತಂದೆಯನ್ನು ಹುಡುಕುತ್ತಾ ಇರುತ್ತಾರೆ.

 • Share this:

  ಕೆಂಡಸಂಪಿಗೆ (Kendasampige) ಅನ್ನೋ ಹೊಸ ಧಾರಾವಾಹಿ (New Serial) ಕಲರ್ಸ್ ಕನ್ನಡದಲ್ಲಿ (Colors Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6.30ಕ್ಕೆ ಪ್ರಸಾರವಾಗುತ್ತಿದೆ. ಶುರುವಾದ ಹೊಸದರಲ್ಲೇ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗುತ್ತಿದೆ. ಈ ಕಥೆಯ ನಾಯಕಿ ಸುಮನಾ. ಅಪ್ಪನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಹೂವನ್ನು ಮಾರಿ ಸಂಸಾರ ಸಾಗಿಸುತ್ತಿದ್ದಾಳೆ. ಅಮ್ಮ ಬೇರೆ ಇಲ್ಲ. ತಮ್ಮ, ತಂಗಿಗೆ ಅಮ್ಮನ ಸ್ಥಾನದಲ್ಲಿ ನಿಂತಿದ್ದಾಳೆ. ತನ್ನ ತಮ್ಮ ಪರೀಕ್ಷೆಯಲ್ಲಿ ಪಾಸಾಗಲಿಲ್ಲ ಅಂತ ಅವನ ಜೊತೆ ಮಾತು ಬಿಟ್ಟಿದ್ದಾಳೆ. ತಮ್ಮನ ಪಾತ್ರದಲ್ಲಿ ಶನಿ ಖ್ಯಾತಿಯ ಸುನೀಲ್ ಅಭಿನಯಿಸುತ್ತಿದ್ದಾರೆ. ಇನ್ನು ಕಥೆಯ ನಾಯಕ ತಿರ್ಥಂಕರ್  ಪ್ರಸಾದ್. ಈ ಧಾರಾವಾಹಿಯಲ್ಲಿ ಕಾರ್ಪೊರೇಟರ್  ಪಾತ್ರ. ಇನ್ನು ಸುಮಿ ತಂದೆ, ಯಾವುದೋ ಗುಂಡಿ ಅಗೆಯಲು ಹೋಗಿ ವಿಷ ಅನಿಲದಿಂದ ಸಾವನ್ನಪ್ಪಿದ್ದಾರೆ ಎನ್ನೋ ಸುದ್ದಿ ಬಂದಿದೆ.


  ಆಸ್ಪತ್ರೆಗೆ ಓಡಿ ಬಂದ ಮಕ್ಕಳು


  ಈ ಧಾರಾವಾಹಿಯಲ್ಲಿ ಸುಮನಾ ತಂದೆಯಾಗಿ ನಾಗರಾಜ್ ಕೋಟೆ ಅವರು ಅಭಿನಯಿಸುತ್ತಿದ್ದಾರೆ. ಆರೋಗ್ಯ ಸರಿ ಇಲ್ಲದ ಕಾರಣ ಯಾವುದೇ ಕೆಲಸಕ್ಕೆ ಹೋಗುತ್ತಿಲ್ಲ. ಆದ್ರೆ ಬಡ್ಡಿಗೆ ದುಡ್ಡು ಕೊಡುವ ವಿಜಯಕ್ಕ ಬಂದು ಏನೇನೋ ಮಾತನಾಡಿದ ಕಾರಣ, ಮಗಳಿಗೆ ಸಹಾಯ ಮಾಡೋಣ ಎಂದು ಗೆಳೆಯರ ಜೊತೆ ಗುಂಡಿ ಅಗೆಯುವ ಕೆಲಸಕ್ಕೆ ಹೋಗಿರುತ್ತಾರೆ. ಆಗ ಅಲ್ಲಿನ ವಿಷ ಅನಿಲ ಸೇವನೆಯಿಂದ ಸೀರಿಯಸ್ ಆಗಿ ಆಸ್ಪತ್ರೆಗೆ ಸೇರಿರುತ್ತಾರೆ.


  ಅಪ್ಪ ಸಾವನ್ನಪ್ಪಿದ್ದಾರೆ ಎನ್ನೋ ಸುದ್ದಿ
  ಕಾಲೋನಿಯ ಮಹಿಳೆಯೊಬ್ಬಳು ಸುಮನಾಗೆ ಕರೆ ಮಾಡಿ, ನಿಮ್ಮ ತಂದೆ ಸೀರಿಯಸ್ ಆಗಿ ಆಸ್ಪತ್ರೆಗೆ ಸೇರಿದ್ದಾರೆ ಎಂದು ಕರೆ ಮಾಡಿ ತಿಳಿಸುತ್ತಾರೆ. ಆಗ ಸುಮಿ, ರಾಜಿ, ರಾಜೇಶ್ ಎಲ್ಲರೂ ಆಸ್ಪತ್ರೆಗೆ ಬರುತ್ತಾರೆ. ಅವರ ತಂದೆಯನ್ನು ಹುಡುಕುತ್ತಾ ಇರುತ್ತಾರೆ. ಆಗ ಡಾಕ್ಟರ್ ಆ ವಿಷ ಅನಿಲದ ಗಾಳಿ ಸೇವಿಸಿದವರು ಸಾವನ್ನಪ್ಪಿದ್ದಾರೆ ಎಂದು ತಿಳಿಸುತ್ತಾರೆ. ಇದರಿಂದ ಮೂವರು ಮಕ್ಕಳಿಗೆ ಆಘಾತವಾಗಿದೆ.


  ಇದನ್ನೂ ಓದಿ: Jote Joteyali Anirudh: ದೊಡ್ಡ ಆಫರ್ ಕಳೆದುಕೊಂಡ ಅನಿರುದ್ಧ್! ಆ ಕಿರಿಕ್ಕೇ ಕಾರಣ


  ಅಪ್ಪ-ಅಮ್ಮ ಇಲ್ಲದ ಅನಾಥರಾದ್ರಾ ಮೂವರು?
  ಇಷ್ಟು ದಿನ ಸುಮಿಗೆ ತಾಯಿ ಇರಲಿಲ್ಲ. ತಂದೆಯಾದ್ರೂ ಇದ್ದಾರೆ ಎನ್ನುವ ಸಮಾಧಾನವಿತ್ತು. ಮನೆಯಲ್ಲಿ ದೊಡ್ಡವರು ಇದ್ರೆ ಒಂದು ಭದ್ರತೆಯ ಭಾವನೆ ಇತ್ತು. ಈಗ ಅದಕ್ಕೂ ಆ ದೇವರು ಕಲ್ಲು ಹಾಕಿದ್ದಾನೆ. ಸುಮನಾಳ ತಂದೆಯನ್ನು ಕಿತ್ತುಕೊಂಡಿದ್ದಾನೆ. ಅಪ್ಪನೂ ಇಲ್ಲದೇ ಮೂವರು ಮಕ್ಕಳು ಅನಾಥರಾಗಿದ್ದಾರೆ.


  ನಾಯಕ ತಿರ್ಥಂಕರ್ ಕುಟುಂಬ


  ತಂಗಿ-ತಮ್ಮನಿಗೆ ಅಪ್ಪ ಆಗ್ತಾಳಾ ಸುಮಿ?
  ಈಗಾಗಲೇ ತಂದೆ ಇದ್ರೂ ಸುಮನಾ ಮನೆ ಜವಾಬ್ದಾರಿಯನ್ನು ಹೊತ್ತಿದ್ಲು. ಆದ್ರು ಅಪ್ಪ ಇದ್ದಾರೆ ಎಂದು ನೆಮ್ಮದಿಯಿಂದ ಇದ್ರು. ಈಗ ಅವರು ಇಲ್ಲದಂತಾಗಿದೆ. ಅದಕ್ಕೆ ಸುಮಿ ಮೇಲೆ ಇನ್ನೂ ಜವಾಬ್ದಾರಿ ಹೆಚ್ಚಾಗಿದೆ. ತಮ್ಮ-ತಂಗಿ ಜೀವನ ನೋಡಿಕೊಳ್ಳಬೇಕು. ಇಬ್ಬರಿಗೆ ಅಪ್ಪನ ಸ್ಥಾನದಲ್ಲಿ ನಿಲ್ಲಬೇಕು. ಇಬ್ಬರಿಗೂ ಒಳ್ಳೆ ಬದುಕು ಕಟ್ಟಿಕೊಡಬೇಕಾಗಿದೆ.


  ಇದನ್ನೂ ಓದಿ: Dance Karnataka Dance: ಅಬ್ಬಬ್ಬಾ ಏನ್ ಗುರು ಶಿವಣ್ಣನ ಡ್ಯಾನ್ಸ್! ಜೋಗಿ ಕುಣಿದ್ರೆ ಅಲ್ಲಿ ಸೃಷ್ಟಿಯಾಗೋದು ಜಾತ್ರೆನೆ ಅಲ್ವಾ?


  ಇತ್ತ ಸುಮಿ ಮೇಲೆ ಕಣ್ಣಾಕಿದ ವಿಜಯಕ್ಕ
  ವಿಜಯಕ್ಕ ಕಾಲೋನಿಯ ಮಹಿಳೆ. ಬಡ್ಡಿಗೆ ದುಡ್ಡು ಕೊಟ್ಟು ದುಡ್ಡಿನ ವ್ಯವಹಾರ ಮಾಡ್ತಾಳೆ. ಇವಳಿಗೆ ಸುಮಿ ಮೇಲೆ ಕಣ್ಣು ಬಿದ್ದಿದೆ. ಹೇಗಾದ್ರೂ ತನ್ನ ಮಗನಿಗೆ ಮದುವೆ ಮಾಡಿಕೊಳ್ಳಬೇಕು ಎಂದು ಕಾಯ್ತಾ ಇದ್ದಾಳೆ. ಅದಕ್ಕೆ ಬಡ್ಡಿ ಇಲ್ಲದೇ ಸುಮಿಗೆ 25 ಸಾವಿರ ಕೊಟ್ಟಿದ್ದಾಳೆ. ಅದನ್ನೇ ನೆಪ ಮಾಡಿಕೊಂಡು ಬಂದು ಸುಮಿ ಅಪ್ಪನ ಬಳಿ ಹೆಣ್ಣು ಕೇಳಿದ್ದಾಳೆ. ಅವರ ಅಪ್ಪ ಆಗಲ್ಲ ಎಂದಾಗ, ದುಡ್ಡು ಕೊಡಿ ಎಂದಿದ್ದಕ್ಕೆ, ಕೆಲಸ ಮಾಡಲು ಹೋಗಿ ಈ ರೀತಿ ಆಗಿ ಹೋಗಿದ್ದಾರೆ. ಮುಂದೇನಾಗುತ್ತೆ ಅಂತ ನೋಡೋದಕ್ಕೆ ಕೆಂಡಸಂಪಿಗೆ ಸಂಚಿಯನ್ನು ನೋಡಬೇಕು.

  Published by:Savitha Savitha
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು