Kendasampige: ಕೆಂಡಸಂಪಿಗೆ ಪರಿಮಳ ಹರಡಲು ನಾಲ್ಕೇ ದಿನ ಬಾಕಿ! ಖಡಕ್ ಹೀರೋ ಇವರೇ!

ಇನ್ನು ನಾಲ್ಕೇ ನಾಲ್ಕು ದಿನದಲ್ಲಿ ಕೆಂಡಸಂಪಿಗೆ ಧಾರಾವಾಹಿ ಪ್ರಸಾರವಾಗಲಿದೆ. ತನ್ನ ಭರ್ಜರಿ ಘಮದೊಂದಿಗೆ ಎಂಟ್ರಿ ಕೊಡಲು ತಂಡ ರೆಡಿಯಾಗಿದೆ. ದಿನ ಒಂದೊಂದು ಪ್ರೋಮಗಳನ್ನು ಧಾರಾವಾಹಿ ತಂಡವು ಬಿಡುತ್ತಿದೆ.

ಕೆಂಡಸಂಪಿಗೆ

ಕೆಂಡಸಂಪಿಗೆ

  • Share this:
    ಕಲರ್ಸ್ ಕನ್ನಡ (Colors Kannada) ವಾಹಿನಿಯೂ ಹೀಗಾಗಲೇ ಜನಪ್ರಿಯ ಧಾರಾವಾಹಿಗಳನ್ನು (Serials) ನೀಡುತ್ತಲೇ ಬಂದಿದೆ. ಸಂಜೆ 6 ಗಂಟೆಯಿಂದ ಕನ್ನಡ (Kannada) ಅಭಿಮಾನಿಗಳನ್ನು ರಂಜಿಸುತ್ತಲೇ ಬಂದಿದೆ. ವೀಕೆಂಡ್‍ನಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ. ಈ ಮೂಲಕ ಕಲರ್ಸ್ ಕನ್ನಡ ವಾಹಿನಿಯೂ ಅಭಿಮಾನಿಗಳನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ಒಲವಿನ ನಿಲ್ದಾಣ, ದೊರೆಸಾನಿ, ಮಂಗಳಗೌರಿ ಮದುವೆ, ಕನ್ನಡತಿ, ಗೀತಾ, ಗಿಣಿರಾಮ, ರಾಮಾಚಾರಿ, ನಕ್ಷತ್ರ, ನನ್ನರಸಿ ರಾಧೆಯಂತಹ ಜನಪ್ರಿಯ ಧಾರಾವಾಹಿಗಳು ಈಗಾಗಲೇ ಪ್ರಸಾರವಾಗುತ್ತಿವೆ. ಆಗಸ್ಟ್ 22ರಿಂದ ಕೆಂಡಸಂಪಿಗೆ ಅನ್ನೋ ಹೊಸ ಧಾರಾವಾಹಿ ಮೂಡಿ ಬರಲಿದೆ. ಸಂಜೆ 6.30ಕ್ಕೆ ಕೆಂಡಸಂಪಿಗೆ (Kendasampige) ತನ್ನ ಘಮ ಹರಡಲು ಸಿದ್ಧವಾಗಿದೆ. ಅಕ್ಕ-ತಮ್ಮನ ವಾತ್ಸಲ್ಯದ ಕಥೆಯಾಗಿದ್ದು, ತಮ್ಮನಿಗೆ ಶನಿ  (Shani) ಧಾರಾವಾಹಿಯಲ್ಲಿ ಶನಿ ಪಾತ್ರ ಮಾಡಿದ್ದ ಸುನೀಲ್ ಅಭಿನಯಿಸುತ್ತಿದ್ದಾರೆ.

    ಕೆಂಡಸಂಪಿಗೆ ಘಮ ಹರಡಲು ನಾಲ್ಕೇ ನಾಲ್ಕು ದಿನ
    ಸದ್ಯ ಕಲರ್ಸ್ ಕನ್ನಡದಲ್ಲಿ ಸಂಜೆ 6.30ಕ್ಕೆ ದೊರೆಸಾನಿ ಧಾರಾವಾಹಿ ಪ್ರಸಾರವಾಗುತ್ತಿದೆ. ಇನ್ನು ನಾಲ್ಕೇ ನಾಲ್ಕು ದಿನದಲ್ಲಿ ಕೆಂಡಸಂಪಿಗೆ ಧಾರಾವಾಹಿ ಪ್ರಸಾರವಾಗಲಿದೆ. ತನ್ನ ಭರ್ಜರಿ ಘಮದೊಂದಿಗೆ ಎಂಟ್ರಿ ಕೊಡಲು ತಂಡ ರೆಡಿಯಾಗಿದೆ. ದಿನ ಒಂದೊಂದು ಪ್ರೋಮೊಗಳನ್ನು ಧಾರಾವಾಹಿ ತಂಡವು ಬಿಡುತ್ತಿದೆ. ನಮ್ಮ ಮನೆಯಲ್ಲಿರೋದು ನಾಲ್ಕೇ ಮೂಲೆ, ನಾಲ್ಕೇ ತಲೆ. ಆದ್ರೆ ಪ್ರೀತಿಗೆ ಏನೂ ಕಮ್ಮಿ ಇಲ್ಲ ಎಂದು ಹೇಳುತ್ತಿದ್ದಾರೆ.

    ಕಾರ್ಪೊರೇಟರ್ ತೀರ್ಥಂಕರ್ ಪ್ರಸಾದ್
    ಈ ಧಾರಾವಾಹಿಯಲ್ಲಿ ನಾಯಕ ಕಾರ್ಪೊರೇಟರ್ ತೀರ್ಥಂಕರ್ ಪ್ರಸಾದ್, ನಾಯಕನ ಅಪ್ಪನಾಗಿ ದೊಡ್ಡಣ್ಣನವರು ಪಾತ್ರ ಮಾಡುತ್ತಿದ್ದಾರೆ. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ಅಂತಾನೇ ನನ್ನ ಮಗ. ಆದ್ರೆ ಮಗನಿಗೆ ಹಾಸಿಗೆ ಕಿಂಗ್ ಸೈಜ್ ಇರಬೇಕೆಂತೆ. 6 ಅಡಿಗಿಂತ ಸ್ವಲ್ಪ ಕಡಿಮೆ ಅಂತೆ. ಆದ್ರೆ ಎತ್ತರ ಎಲ್ಲರಿಗಿಂತ ಜಾಸ್ತಿಯಂತೆ. ಹೀರೋಗೆ ಇಷ್ಟ ಆಗೋ ಮೂರು ವಿಷಯ ಅಂದ್ರೆ. ಒಂದನೆಯದ್ದು ಅವನೇ, ಎರಡನೆಯದ್ದು ಅವನೇ, ಮೂರನೆಯದು ಅವನೇ. ಅವನಿಗೆ ಅವನೇ ಮುಖ್ಯ. ಮನೆಗಿಂತ ಜನರ ಜೊತೆ ಜಾಸ್ತಿ ಬೆರೆಯುತ್ತಾನಂತೆ.

    ಇದನ್ನೂ ಓದಿ: Ramachari: ಚಾರುವಿನ 1 ಕೋಟಿ ಆಫರ್​​ ಒಪ್ಪಿಕೊಂಡನಾ ರಾಮಾಚಾರಿ? ಸತ್ಯದ ಮುಂದೆ ಹಣವೇ ಗೆದ್ದಿತಾ?

    ಕೆಂಡಸಂಪಿಗೆಯಲ್ಲಿ ಕೆಂಡದಂತಹ ಅಕ್ಕ
    ಈ ಹೊಸ ಕಥೆಯೂ ಕೆಂಡಸಂಪಿಗೆ ಎಂದು ಹೆಸರಿದ್ದರೂ, ಅಕ್ಕ ಸುಮನಾ ಕೆಂಡದಂತಹ ಕೋಪದವಳು. ತಮ್ಮನ ಮೇಲೆ ಬೆಟ್ಟದಷ್ಟು ಪ್ರೀತಿ ಇದ್ದರೂ, ಅದನ್ನು ತೋರಿಸದೇ ಅವನ ಜೊತೆ ಮಾತನಾಡಲ್ಲ. ಅವನು ಒಂದು ಒಳ್ಳೆ ಭವಿಷ್ಯ ರೂಪಿಸಿಕೊಳ್ಳಲಿ ಎನ್ನುವುದೇ ಅಕ್ಕನ ಆಸೆ ಅದಕ್ಕೆ ಅವಳು ಅವನ ಜೊತೆ ಮಾತು ಬಿಟ್ಟಿದ್ದಾಳೆ.

    ತಮ್ಮನಾಗಿರುವ ಶನಿ ಖ್ಯಾತಿಯ ಸುನೀಲ್
    ಇನ್ನು ಈ ಧಾರಾವಾಹಿಯಲ್ಲಿ ತಮ್ಮನಾಗಿ ನಟಿಸುತ್ತಿರುವವನು ಸುನೀಲ್. ಶನಿ ಧಾರಾವಾಹಿಯಲ್ಲಿ ಶನಿ ಪಾತ್ರದಲ್ಲಿ ಅಭಿನಯಿಸಿದ್ದವ. ತನ್ನ ಅಮೋಘ ನಟನೆ ಮೂಲಕ ಜನರ ಮನಸ್ಸಿನಲ್ಲಿ ಶನಿ ಪಾತ್ರಧಾರಿಯಾಗಿ ಉಳಿದುಕೊಂಡಿದ್ದಾನೆ. ಈಗ ತಮ್ಮನ ಪಾತ್ರದಲ್ಲಿ ರಪ್ ಅಂಡ್ ಟಪ್ ಮೂಲಕ ಬಂದಿದ್ದು, ಎಷ್ಟರ ಮಟ್ಟಿಗೆ ಕನ್ನಡಿಗರ ಮನದಲ್ಲಿ ಮನೆ ಮಾಡ್ತಾರೆ ನೋಡಬೇಕು.

    ದೊರೆಸಾನಿ ಧಾರಾವಾಹಿ ಬಗ್ಗೆ ಜನರ ಕುತೂಹಲ
    ಕಲರ್ಸ್ ಕನ್ನಡದಲ್ಲಿ ಸದ್ಯ 6.30ಕ್ಕೆ ದೊರೆಸಾನಿ ಧಾರಾವಾಹಿ ಪ್ರಸಾರವಾಗುತ್ತಿದೆ. ಅದು ಜನ ಜನರಿಗೆ ಇಷ್ಟವಾಗಿದೆ. ದೀಪಿಕಾ, ಆನಂದ್ ಜೊತೆಯಾಗುತ್ತಿಲ್ಲ. ಅವರು ಮದುವೆ ಆಗಿದ್ದರೆ ಚೆನ್ನಾಗಿ ಇರುತ್ತಿತ್ತು ಎಂದು ಅಭಿಮಾನಿಗಳು ಅಂದುಕೊಳ್ಳುತ್ತಿದ್ದಾರೆ. ಆದ್ರೆ ದೀಪಿಕಾ ಬೇರೆ ಹುಡುಗನ ಜೊತೆ ಮದುವೆಯಾಗುತ್ತಿದ್ದಾಳೆ. ಆನಂದ್ ಸಹ ಬೇರೆ ಹುಡುಗಿಯೊಂದಿಗೆ ಮದುವೆ ಆಗಲು ಒಪ್ಪಿದ್ದಾನೆ. ಧಾರಾವಾಹಿ ತುಂಬಾ ಚೆನ್ನಾಗಿದೆ. ಈಗ ಆ ಜಾಗಕ್ಕೆ ಕೆಂಡಸಂಪಿಗೆ ಬರುತ್ತಿದೆ. ದೊರೆಸಾನಿ ಯಾವಾಗ ಬರುತ್ತೆ ಅಂತ ಗೊಂದಲದಲ್ಲಿ ಇದ್ದಾರೆ.

    ಇದನ್ನೂ ಓದಿ: Jote Joteyali: ಅನು ಅಮ್ಮನಾಗ್ತಿರೋ ವಿಷಯ ಆರ್ಯವರ್ಧನ್‍ಗೆ ಗೊತ್ತಾಯ್ತು! ಆಸ್ಪತ್ರೆಗೆ ಓಡೋಡಿ ಬಂದ ಆರ್ಯ

    ಆಗಸ್ಟ್ 22ರಿಂದ ಸಂಜೆ 6.30ಕ್ಕೆ ಧಾರಾವಾಹಿ ಶುರುವಾಗಲಿದೆ. ಹೊಸ ಧಾರಾವಾಹಿ ನೋಡಿ ಪ್ರೋತ್ಸಾಹಿಸಿ. ಕೆಂಡಸಂಪಿಗೆ ನೋಡಲು ರೆಡಿಯಾಗಿ!
    Published by:Savitha Savitha
    First published: