Kannadathi: ಹಬ್ಬದ ದಿನವೇ ಸಾನಿಯಾ ಪೊಲೀಸ್ ಠಾಣೆಯಲ್ಲಿ! ಎಲ್ಲ ಸತ್ಯ ಹೇಳ್ತಾರಾ ಅಮ್ಮಮ್ಮ?

ಮನೆಯಲ್ಲಿ ಎಲ್ಲರು ಸಂಭ್ರಮದಿಂದ ಗಣೇಶ ಹಬ್ಬವನ್ನು ಮಾಡ್ತಾ ಇದ್ದಾರೆ. ಆದ್ರೆ ಸಾನಿಯಾ ಪೊಲೀಸ್ ಠಾಣೆಯಲ್ಲಿ ಇದ್ದಾಳೆ. ಹಾಗಾದ್ರೆ ಹಬ್ಬದ ದಿನವೇ ಸಾನಿಯಾ ಅರೆಸ್ಟ್ ಆಗ್ತಾಳಾ? ಅಮ್ಮಮ್ಮ ಎಲ್ಲಾ ಸತ್ಯವನ್ನು ಪೊಲೀಸರ ಮುಂದೆ ಸತ್ಯ ಹೇಳ್ತಾಳಾ? ತಾನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾಳಾ ಕಾದು ನೋಡಬೇಕು.

ಸಾನಿಯಾ-ಅಮ್ಮಮ್ಮ

ಸಾನಿಯಾ-ಅಮ್ಮಮ್ಮ

 • Share this:
  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ (Serials) ಕನ್ನಡತಿ (Kannadathi) ಧಾರಾವಾಹಿ ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಹರ್ಷ-ಭುವಿ ಮದುವೆ ಸಮಯದಲ್ಲಿ ಅಮ್ಮಮ್ಮನಿಗೆ ಹುಷಾರಿಲ್ಲದೇ ಹೆಚ್ಚಿನ ಚಿಕಿತ್ಸೆಗೆ ವಿದೇಶಕ್ಕೆ ಹೋಗಿದ್ದರು. ಅಮ್ಮಮ್ಮ ಗುಣಮುಖರಾಗಿ ವಿದೇಶದಿಂದ ಮನೆಗೆ ಬಂದಿದ್ದಾರೆ. ಮನೆಯವರೆಲ್ಲಾ ಖುಷಿಯಾಗಿದ್ದಾರೆ. ಅಮ್ಮಮ್ಮಗೆ ಸಾನಿಯಾ ದೊಡ್ಡವರು ಎನ್ನುವುದನ್ನು ನೋಡದೇ ಬಾಯಿಗೆ ಬಂದಂತೆ ಬೈದಿರುತ್ತಾಳೆ. ಅಲ್ಲದೇ ಸಾಯಿಸುವ ಧಮ್ಕಿ ಹಾಕಿರುತ್ತಾಳೆ. ಅದಕ್ಕೆ ಈಗ ಪೊಲೀಸ್ ಠಾಣೆಯಲ್ಲಿ (Police Station) ಸಾನಿಯಾ (Saniya) ಇದ್ದಾಳೆ

  ಅಮ್ಮಮ್ಮ ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ
  ರತ್ನಾಮಾಲಾ ಮನೆಯಲ್ಲಿ ಎಲ್ಲರು ಸಂಭ್ರಮದಿಂದ ಗಣೇಶ ಹಬ್ಬವನ್ನು ಮಾಡುತ್ತಿದ್ದಾರೆ. ಹಬ್ಬ ಎಂದು ಖುಷಿಯಾಗಿದ್ದಾರೆ. ಮನೆಗೆ ನೆಂಟರು ಸಹ ಬಂದಿದ್ದಾರೆ. ಆದ್ರೆ ಸಾನಿಯಾ ಮಾತ್ರ ಎಲ್ಲೋ ಹೊರಟಿದ್ದಾಳೆ. ಗಂಡ ಆದಿ ಕೇಳಿದ್ರೆ ಏನೂ ಹೇಳದೇ ಹೋಗುತ್ತಿದ್ದಾಳೆ. ಸಾನಿಯಾ ಅಮ್ಮನಿಗೂ ಸಹ ಏನೂ ಹೇಳದೇ ಹೋಗುತ್ತಿದ್ದಾಳೆ.

  ಪೊಲೀಸ್ ಠಾಣೆಯಲ್ಲಿರುವ ಸಾನಿಯಾ
  ಅಮ್ಮಮ್ಮ ಈ ಹಿಂದೆ ಮನೆಗೆ ಪೊಲೀಸರನ್ನು ಕರೆಸಿ, ನನಗೆ ಜೀವ ಬೆದರಿಕೆ ಇದೆ ಎಂದು ದೂರು ಕೊಟ್ಟಿರುತ್ತಾಳೆ. ಆದ್ರೆ ಪೊಲೀಸರಿಗೆ ಸಾಕ್ಷಿಯನ್ನು ಕೊಟ್ಟಿರುವುದಿಲ್ಲ. ಅದೇ ಸಂಬಂಧ ಈಗ ಸಾನಿಯಾ ಪೊಲೀಸ್ ಠಾಣೆಗೆ ಹೋಗಿದ್ದಾಳೆ. ಸಾನಿಯಾ ಹೋಗುತ್ತಿದ್ದಂತೆ, ಠಾಣೆ ಪೊಲೀಸರಿಗೆ ಅಮ್ಮಮ್ಮ ಕರೆ ಮಾಡಿದ್ದಾಳೆ. ಅವತ್ತು ದೂರು ಮಾತ್ರ ನೀಡಿದ್ದೆ. ಸಾಕ್ಷಿ ಕೊಟ್ಟಿರಲಿಲ್ಲ. ಈಗ ಸಾನಿಯಾ ನಿಮಗೆ ಸಾಕ್ಷಿ ಕೊಡುತ್ತಾಳೆ ಎನ್ನುತ್ತಾರೆ.

  ಇದನ್ನೂ ಓದಿ: Jothe Jotheyali: ಸಂಚಲನ ಮೂಡಿಸಿದ ವಿಶ್ವಾಸ್ ದೇಸಾಯಿ! ಹರೀಶ್ ರಾಜ್ ಪಾತ್ರದ ಗುಟ್ಟೇನು?

  ಸಾನಿಯಾಗೆ ಢವ-ಢವ
  ಪೊಲೀಸ್ ಠಾಣೆಗೆ ಹೋಗಿರುವ ಸಾನಿಯಾಗೆ ಭಯ ಶುರುವಾಗಿದೆ. ಅಮ್ಮಮ್ಮ ಬೇರೆ ಸಾಕ್ಷಿ ಕೊಟ್ಟು ಬಾ ಎನ್ನುತ್ತಿದ್ದಾರೆ. ಅಮ್ಮಮ್ಮನಿಗೆ ಜೀವ ಬೆದರಿಕೆ ಹಾಕಿದ್ದೇ ಸಾನಿಯಾ. ಆ ಸಾಕ್ಷಿಗಳನ್ನು ನೋಡಿದ್ರೆ ಪೊಲೀಸರು ಆಕೆಯನ್ನು ಅರೆಸ್ಟ್ ಮಾಡ ಬೇಕಾಗುತ್ತೆ. ಅದಕ್ಕೆ ಆಕೆಗೆ ಢವ ಢವ ಶುರುವಾಗಿದೆ.

  Colors Kannada serial, Kannada serial, Kannadathi Serial, Kannadathi serial today episode, Saniya in police station, ಕನ್ನಡತಿ ಧಾರಾವಾಹಿ, ಹಬ್ಬದ ದಿನವೇ ಸಾನಿಯಾ ಪೊಲೀಸ್ ಠಾಣೆಯಲ್ಲಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
  ಕನ್ನಡತಿ ಧಾರಾವಾಹಿ


  ಹಬ್ಬದ ದಿನವೇ ಅರೆಸ್ಟ್ ಆಗ್ತಾಳಾ ಸಾನಿಯಾ
  ಮನೆಯಲ್ಲಿ ಎಲ್ಲರು ಸಂಭ್ರಮದಿಂದ ಗಣೇಶ ಹಬ್ಬವನ್ನು ಮಾಡ್ತಾ ಇದ್ದಾರೆ. ಆದ್ರೆ ಸಾನಿಯಾ ಪೊಲೀಸ್ ಠಾಣೆಯಲ್ಲಿ ಇದ್ದಾಳೆ. ಹಾಗಾದ್ರೆ ಹಬ್ಬದ ದಿನವೇ ಸಾನಿಯಾ ಅರೆಸ್ಟ್ ಆಗ್ತಾಳಾ? ಅಮ್ಮಮ್ಮ ಎಲ್ಲಾ ಸತ್ಯವನ್ನು ಪೊಲೀಸರ ಮುಂದೆ ಸತ್ಯ ಹೇಳ್ತಾಳಾ? ತಾನು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಾಳಾ ಕಾದು ನೋಡಬೇಕು.

  ಹಾಗಾದ್ರೆ ವಿಡಿಯೋದಲ್ಲಿ ಏನಿದೆ?
  ಅಮ್ಮಮ್ಮನಿಗೆ ಹುಷಾರಿಲ್ಲದಾಗ ಆಂಬುಲೆನ್ಸ್ ನಲ್ಲಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾ ಇರುತ್ತಾರೆ. ಆಗ ಸಾನಿಯಾ ಅಮ್ಮಮ್ಮ ಇನ್ನು ಬದುಕುವುದಿಲ್ಲ ಎಂದು ಕೊಂಡು ಏನೇನು ಮಾತನಾಡುತ್ತಾ ಇರುತ್ತಾಳೆ. ಈಗ ಅಧಿಕಾರದಿಂದ ಹೇಗೆ ತೆಗೆಯುತ್ತೀರಾ? ಆಸ್ಪತ್ರೆಗೆ ಹೋದ್ರೆ ವಾಪಸ್ ಬದುಕಿ ಬರಲ್ಲ ಎಂದು ನಗುತ್ತಾ, ಗರ್ವದಿಂದ ಹೇಳಿರುತ್ತಾಳೆ. ಅದು ಅಮ್ಮಮ್ಮ ನೋಡುತ್ತಾ ಇದ್ದರೂ ಹಾಗೇ ಮಾಡಿರುತ್ತಾಳೆ. ಅದನ್ನು ರತ್ನಮಾಲಾ ಅವರು ವಿಡಿಯೋ ಮಾಡಿಕೊಂಡಿದ್ದಾರೆ. ಆ ವಿಡಿಯೋವನ್ನೇ ಈಗ ಸಾನಿಯಾಗೆ ಕಳಿಸಿರುತ್ತಾರೆ.

  ಇದನ್ನೂ ಓದಿ: Ramachari: ಪೊಲೀಸ್ ಮಗಳನ್ನೇ ಕಿಡ್ನ್ಯಾಪ್ ಮಾಡಿಸಿದ ರಾಮಾಚಾರಿ, ಅವರ ದಾರಿಯಲ್ಲೇ ಹೋಗಿ ನ್ಯಾಯಕ್ಕಾಗಿ ಹೋರಾಟ!

  ಮುಂದೇನಾಗುತ್ತೆ? ಸಾನಿಯಾ ಜೈಲು ಸೇರ್ತಾಳಾ? ಅಮ್ಮಮ್ಮ ಸತ್ಯ ಹೇಳ್ತಾರಾ? ಎಲ್ಲವನ್ನು ನೋಡಲು ಕನ್ನಡತಿ ಸೀರಿಯಲ್ ನೋಡಬೇಕು.
  Published by:Savitha Savitha
  First published: