Kannadathi: ಮನೆಮಂದಿ ಮಲಗಿದ ಮೇಲೆ ಕಳ್ಳಿಯಾದ ಸಾನಿಯಾ! ಅಮ್ಮಮ್ಮನ ಮೇಲೆ ವರೂಧಿನಿ ವಕ್ರ ಕಣ್ಣು!

ಅಮ್ಮಮ್ಮನ ಮೊಬೈಲ್ ಕದಿಯಲು ಸಾನಿಯಾ ಮನೆಯವರೆಲ್ಲಾ ಮಲಗುವುದನ್ನು ಕಾದು. ಮಲಗಿದ ಮೇಲೆ ಕಳ್ಳತನಕ್ಕೆ ಇಳಿದಿದ್ದಾಳೆ. ಆದ್ರೆ ಹರ್ಷ-ಭುವಿ ಎದ್ದಿದ್ದು, ಮನೆಯಲ್ಲಿ ಯಾರೂ ಓಡಾಡುತ್ತಿರುವ ಅನುಭವ ಆಗಿದೆ. ಅದಕ್ಕೆ ಯಾರೂ ಎಂದು ಹುಡುಕುತ್ತಿದ್ದಾರೆ. ಹರ್ಷನ ಕೈಗೆ ಸಾನಿಯಾ ಸಿಕ್ಕಿ ಬೀಳ್ತಾಳಾ. ಇಲ್ಲ ಅಮ್ಮಮ್ಮನ ಮೊಬೈಲ್ ಕದ್ದು ಸಾಕ್ಷಿ ನಾಶ ಮಾಡ್ತಾಳಾ ಅಂತ ನೋಡಬೇಕು.

ಕನ್ನಡತಿ ಧಾರಾವಾಹಿ

ಕನ್ನಡತಿ ಧಾರಾವಾಹಿ

  • Share this:
    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಧಾರಾವಾಹಿ (Serial) ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್  (Fans)ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ (Super hit) ಆಗಿ ಓಡುತ್ತಿದೆ. ಸಾನಿಯಾ ಜುಟ್ಟು ಈಗ ಅಮ್ಮಮ್ಮನ ಕೈಯಲ್ಲಿದ್ದು, ಅದನ್ನು ಬಿಡಿಸಿಕೊಳ್ಳಲು ಒದ್ದಾಡುತ್ತಿದ್ದಾಳೆ. ಇತ್ತ ವರೂಧಿನಿ ಹರ್ಷ-ಭುವಿ ಮದುವೆ ಮುರಿಯಲು ಡಿವೋರ್ಸ್ (Divorce) ಪೇಪರ್ ತಂದಿಟ್ಟಿದ್ದಾಳೆ.

    ಸಾನಿಯಾ ಜುಟ್ಟು ಅಮ್ಮಮ್ಮನ ಕೈಯಲ್ಲಿ
    ಅಮ್ಮಮ್ಮನ ಆರೋಗ್ಯ ಸರಿ ಇಲ್ಲದೇ ವಿದೇಶಕ್ಕೆ ತೆರಳಬೇಕಾಗುತ್ತೆ. ಏರ್‍ಪೋರ್ಟ್‍ಗೆ ಆಂಬ್ಯುಲೆನ್ಸ್ ನಲ್ಲಿ ಹೋಗುತ್ತಿರುವಾಗ, ಸಾನಿಯಾ ದೊಡ್ಡತ್ತೆಯನ್ನು ಏಕ ವಚನದಲ್ಲಿ ಮಾತನಾಡಿಸಿರುತ್ತಾಳೆ. ನಿನ್ನ ಕೈಯಲ್ಲಿ ಏನು ಮಾಡಲು ಆಗುತ್ತೆ? ಈ ಆಸ್ತಿಯೆಲ್ಲಾ ನಂದು, ನೀನು ಬದುಕಿ ಬರಲ್ಲ ಎಂದು ಹೇಳಿ ಕೆಟ್ಟದಾಗಿ ಮಾತನಾಡಿರುತ್ತಾಳೆ. ಅದು ಅಮ್ಮಮ್ಮನ ಮೊಬೈಲ್‍ನಲ್ಲಿ ರೆಕಾರ್ಡ್ ಆಗಿದ್ದು. ಈ ವಿಡಿಯೋದಿಂದ ಸಾನಿಯಾ ಅಲ್ಲಾಡಿ ಹೋಗಿದ್ದಾಳೆ.

    ಅಮ್ಮಮ್ಮನ ಮೊಬೈಲ್ ಕಳ್ಳತನಕ್ಕಿಳಿದ ಸಾನಿಯಾ
    ಸಾನಿಯಾ ಕುತಂತ್ರದ ವಿಡಿಯೋವನ್ನು ಅಮ್ಮಮ್ಮ ಸಾನಿಯಾಗೆ ಮಾತ್ರ ಕಳಿಸಿದ್ದಾರೆ. ಅಲ್ಲದೇ ಪೊಲೀಸರನ್ನು ಕರೆಸಿ, ನನಗೆ ಜೀವ ಬೆದರಿಗೆ ಇದೆ ಎಂದು ದೂರು ಸಹ ನೀಡಿದ್ದಾರೆ. ಅದಕ್ಕೆ ಸಾನಿಯಾಗೆ ಢವ-ಢವ ಶುರುವಾಗಿದೆ. ಇನ್ನೆಲ್ಲಿ ನನ್ನನ್ನು ಪೊಲೀಸರು ಅರೆಸ್ಟ್ ಮಾಡ್ತಾರೋ ಅನ್ನು ಭಯ ಕಾಡ್ತಿದೆ. ಅದಕ್ಕೆ ಮೊಬೈಲ್‍ನಲ್ಲಿರುವ ವಿಡಿಯೋ ಡಿಲೀಟ್ ಮಾಡಲು ಪ್ಲ್ಯಾನ್ ಮಾಡುತ್ತಿದ್ದಾಳೆ. ಹೇಗಾದ್ರೂ ಮೊಬೈಲ್ ಕದಿಯಬೇಕು ಎಂದು ಕಾಯುತ್ತಿದ್ದಾಳೆ.

    Colors Kannada serial, Kannada serial, Kannadathi Serial, Kannadathi serial today episode, interesting episode in serial, Saniya searching Mobile in home, ಕನ್ನಡತಿ ಧಾರಾವಾಹಿ, ಕಲರ್ಸ್ ಕನ್ನಡದ ಧಾರಾವಾಹಿಗಳು, Kannada news, Karnataka news,
    ಅಮ್ಮಮ್ಮ


    ಎಲ್ಲರು ಮಲಗಿದ ಮೇಲೆ ಸಾನಿಯಾ ಓಡಾಟ
    ಅಮ್ಮಮ್ಮನ ಮೊಬೈಲ್ ಕದಿಯಲು ಸಾನಿಯಾ ಮನೆಯವರೆಲ್ಲಾ ಮಲಗುವುದನ್ನು ಕಾದು. ಮಲಗಿದ ಮೇಲೆ ಕಳ್ಳತನಕ್ಕೆ ಇಳಿದಿದ್ದಾಳೆ. ಆದ್ರೆ ಹರ್ಷ-ಭುವಿ ಎದ್ದಿದ್ದು, ಮನೆಯಲ್ಲಿ ಯಾರೂ ಓಡಾಡುತ್ತಿರುವ ಅನುಭವ ಆಗಿದೆ. ಅದಕ್ಕೆ ಯಾರೂ ಎಂದು ಹುಡುಕುತ್ತಿದ್ದಾರೆ. ಹರ್ಷನ ಕೈಗೆ ಸಾನಿಯಾ ಸಿಕ್ಕಿ ಬೀಳ್ತಾಳಾ ಇಲ್ಲ ಅಮ್ಮಮ್ಮನ ಮೊಬೈಲ್ ಕದ್ದು ಸಾಕ್ಷಿ ನಾಶ ಮಾಡ್ತಾಳಾ ಅಂತ ನೋಡಬೇಕು.

    ಇದನ್ನೂ ಓದಿ: Doresani: ಸತ್ಯವತಿಗೆ ಆನಂದ್ ತನ್ನ ಮಗ ಎಂದು ಗೊತ್ತಾಯ್ತಾ? ಎದುರಿಗೇ ಇದ್ದರೂ ಮಾತನಾಡಿಸುತ್ತಿಲ್ಲ ಏಕೆ? 

    ವರುಗೆ ನಿನ್ನ ಕೆಲಸ ನೀನು ಮಾಡು ಎಂದ ರತ್ನಮಾಲಾ
    ರತ್ನಮಾಲಾ ವಿದೇಶದಲ್ಲಿ ಇದ್ದಾಗಲೇ ವರೂಧಿನಿಗೆ ಕರೆ ಮಾಡಿ ಸಾನಿಯಾಗೆ ಸಂಬಂಧಿಸಿದ ದಾಖಲೆಗಳನ್ನು ರೆಡಿ ಮಾಡುವಂತೆ ಹೇಳಿರುತ್ತಾಳೆ. ಅಂತೆಯೇ ವರೂಧಿನಿ ಸಹ ಎಲ್ಲವನ್ನು ತಂದಿರುತ್ತಾಳೆ. ಅಮ್ಮಮ್ಮ ಒಂದು ನಂಬರ್ ಕೊಟ್ಟು. ಲಾಯರ್ ಬಳಿ ಅಪಾಯಂಟ್‍ಮೆಂಟ್ ಕೇಳು ಅನ್ನುತ್ತಾರೆ. ಅದಕ್ಕೆ ವರೂಧಿನಿ ಲಾಯರ್ ನ ಚೇಂಜ್ ಮಾಡಿದ್ರಾ? ಇವರು ನಿಮ್ಮ ಕಚೇರಿ ವಿಷಯ ನೋಡಿಕೊಳ್ಳೋರ ಅಂತೆಲ್ಲಾ ಕೇಳ್ತಾಳೆ. ಅದಕ್ಕೆ ಅಮ್ಮಮ್ಮ ನಿನ್ನ ಕೆಲಸ ನೀನು ಮಾಡು. ಬೇರೆ ವಿಷಯಕ್ಕೆ ತಲೆ ಹಾಕಬೇಡ ಎನ್ನುತ್ತಾಳೆ. ಅದಕ್ಕೆ ವರೂಧಿನಿಯೂ ಅಮ್ಮಮ್ಮನ ಮೇಲೆ ಕೋಪ ಮಾಡಿಕೊಂಡಿದ್ದಾಳೆ.

    ಇದನ್ನೂ ಓದಿ: Olavina Nildana: ತಾರಿಣಿಗೆ ಇರೋ ಸಮಸ್ಯೆಯ ಹೆಸರೇ ಸಿದ್ಧಾಂತ್, ಮೊಮ್ಮಗಳ ಅಳು ಕಂಡು ತಾತಾ ಕಂಗಾಲು!

    ಹರ್ಷ-ಭುವಿಯನ್ನು ದೂರ ಮಾಡಲು ವರೂಧಿನಿ ಅವರಿಗೆ ಗೊತ್ತಿಲ್ಲದಂತೆ ಡಿವೋರ್ಸ್ ಪೇಪರ್ ತಂದಿಟ್ಟಿದ್ದಾಳೆ. ಇಬ್ಬರನ್ನೂ ಹೇಗಾದ್ರೂ ದೂರ ಮಾಡಬೇಕು ಅಂತ ಕಾಯ್ತಾ ಇದ್ದಾಳೆ. ಧಾರಾವಾಹಿ ತೀವ್ರ ಕುತೂಹಲ ಮೂಡಿಸುತ್ತಿದ್ದು, ಏನಾಗುತ್ತೋ ಏನೋ ಎಂದು ಪ್ರೇಕ್ಷಕರು ಕಾಯುತ್ತಿದ್ದಾರೆ. ಎಲ್ಲದಕ್ಕೂ ಕನ್ನಡತಿ ಸಂಚಿಕೆ ನೋಡಬೇಕು.
    Published by:Savitha Savitha
    First published: