Kannadathi: ಮನೆಗೆ ಪೊಲೀಸರನ್ನು ಕರೆಸಿದ್ದಾಳೆ ಅಮ್ಮಮ್ಮ, ಸಾನಿಯಾ ವಿರುದ್ಧ ದೂರು ನೀಡ್ತಾರಾ ರತ್ನಮಾಲಾ?

ಈಗಾಗಲೇ ಅಮ್ಮಮ್ಮ ಸಾನಿಯಾಗೆ ಅವಳು ಮಾಡಿದ ಕುತಂತ್ರದ ವಿಡಿಯೋ ಕಳಿಸಿದ್ದಾರೆ. ಈಗ ಮನೆಗೆ ಪೊಲೀಸರನ್ನು ಕರೆಸಿದ್ದಾರೆ. ಅಲ್ಲದೇ ಪೊಲೀಸರ ಮುಂದೆ, ನಾನು ದೂರು ನೀಡಬೇಕು ಎನ್ನುತ್ತಾರೆ. ಪೊಲೀಸರು ಏನ್ ದೂರು ಎಂದಾಗ, ಅಮ್ಮಮ್ಮ ನನಗೆ ಜೀವ ಬೆದರಿಕೆ ಇದೆ. ಧಮ್ಕಿ ಹಾಕಿದ್ದಾರೆ. ಆ ಬಗ್ಗೆ ದೂರು ನೀಡಬೇಕು ಎನ್ನುತ್ತಾರೆ.

ಕನ್ನಡತಿ ಧಾರಾವಾಹಿ

ಕನ್ನಡತಿ ಧಾರಾವಾಹಿ

 • Share this:
  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಧಾರಾವಾಹಿ (Serial) ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ (Fans) ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಹರ್ಷ ಮತ್ತು ಭುವಿ ಮದುವೆಯಾಗಿದ್ದಾರೆ. ಆದ್ರೆ ಮದುವೆ ದಿನವೇ ಅಮ್ಮಮ್ಮನಿಗೆ ಆರೋಗ್ಯ ಸರಿಯಿಲ್ಲದೇ ಹೆಚ್ಚಿನ ಚಿಕಿತ್ಸೆಗೆ ವಿದೇಶಕ್ಕೆ ಕಳಿಸಲಾಗಿತ್ತು. ಈಗ ಆರೋಗ್ಯ ಸರಿ ಹೋಗಿ ಮನೆಗೆ ವಾಪಸ್ ಬಂದಿದ್ದಾರೆ. ಬರುತ್ತಿದ್ದಂತೆ ಸಾನಿಯಾಗೆ ಶಾಕ್ (Shock) ನೀಡಿದ್ದಾರೆ. ಅಮ್ಮಮ್ಮನಿಗೆ ಸಾನಿಯಾ ಏಕವಚನದಲ್ಲಿ ಮಾತನಾಡಿಸಿದ್ದು, ಅವರಿಗೆ ಧಮ್ಕಿ ಹಾಕಿದ್ದ ವಿಡಿಯೋವನ್ನು ಸಾನಿಯಾಗೆ, ಅಮ್ಮಮ್ಮ ಕಳಿಸಿದ್ದಾರೆ. ಅಲ್ಲದೇ ಈಗ ಮನೆಗೆ ಪೊಲೀಸ್ (Police) ಕರೆಸಿದ್ದಾರೆ.

  ಮನೆಗೆ ಪೊಲೀಸರು ಬಂದಿದ್ಯಾಕೆ?
  ಕನ್ನಡತಿ ಧಾರಾವಾಹಿಯಲ್ಲಿ ರತ್ನಾಮಾಲಾ ಮನೆಗೆ ಪೊಲೀಸರು ಬಂದಿದ್ದಾರೆ. ಮನೆಯವರು ಸಹ ಪೊಲೀಸರು ಹೀಗ್ಯಾಕೆ ಬಂದಿದ್ದಾರೆ ಎಂದು ಆತಂಕಗೊಂಡಿದ್ದಾರೆ. ಇನ್ನು ಸಾನಿಯಾ ತುಂಬಾ ಗಾಬರಿಯಲ್ಲಿದ್ದಾಳೆ. ದೊಡ್ಡತ್ತೆ ತನ್ನನ್ನು ಅರೆಸ್ಟ್ ಮಾಡಿಸಲು ಪೊಲೀಸರನ್ನು ಕರೆಸಿದ್ದಾರಾ ಎಂದು ಕೊಂಡಿದ್ದಾಳೆ. ಹೌದು ಪೊಲೀಸರು ತಾವಾಗೇ ಮನೆಗೆ ಬಂದಿಲ್ಲ. ರತ್ನಮಾಲಾ ಪೊಲೀಸರನ್ನು ಕರೆಸಿದ್ದಾರೆ.

  ಯಾರ ವಿರುದ್ಧ ದೂರು ನೀಡ್ತಾರೆ ಅಮ್ಮಮ್ಮ?
  ಈಗಾಗಲೇ ಅಮ್ಮಮ್ಮ ಸಾನಿಯಾಗೆ ಅವಳು ಮಾಡಿದ ಕುತಂತ್ರದ ವಿಡಿಯೋ ಕಳಿಸಿದ್ದಾರೆ. ಈಗ ಮನೆಗೆ ಪೊಲೀಸರನ್ನು ಕರೆಸಿದ್ದಾರೆ. ಅಲ್ಲದೇ ಪೊಲೀಸರ ಮುಂದೆ, ನಾನು ದೂರು ನೀಡಬೇಕು ಎನ್ನುತ್ತಾರೆ. ಪೊಲೀಸರು ಏನ್ ದೂರು ಎಂದಾಗ, ಅಮ್ಮಮ್ಮ ನನಗೆ ಜೀವ ಬೆದರಿಕೆ ಇದೆ. ಧಮ್ಕಿ ಹಾಕಿದ್ದಾರೆ. ಆ ಬಗ್ಗೆ ದೂರು ನೀಡಬೇಕು ಎನ್ನುತ್ತಾರೆ.

  ಇದನ್ನೂ ಓದಿ: Doresani: ಆನಂದ್‍ಗೆ ಸಿಕ್ಕಿದೆ ಅಮ್ಮನ ಸುಳಿವು, ಒಂದು ಗಂಟೆ ಮಹಾಸಂಚಿಕೆಯಲ್ಲಿ ಒಂದಾಗ್ತಾರಾ ತಾಯಿ-ಮಗ? 

  ಸಾನಿಯಾ ವಿರುದ್ಧ ದೂರು ಕೊಡ್ತಾರಾ ರತ್ನಮಾಲಾ?
  ಹಾಗಾದ್ರೆ ರತ್ನಾಮಾಲಾಗೆ ಜೀವ ಬೆದರಿಕೆ ಇರುವುದು ಯಾರಿಂದ? ಅದು ಸಾನಿಯಾಳಾ? ಸಾನಿಯಾ ವಿರುದ್ಧ ಪೊಲೀಸರಿಗೆ ದೂರು ನೀಡ್ತಾಳಾ ಅಮ್ಮಮ್ಮ. ಅವಳು, ರತ್ನಮಾಲಾಗೆ ಆರೋಗ್ಯ ಸರಿಯಿಲ್ಲದಾಗ ಮಾತಾನಾಡಿದ ವಿಡಿಯೋ ಇಟ್ಟುಕೊಂಡು ದೂರು ನೀಡೋ ಸಾಧ್ಯತೆ ಇದೆ.

  Colors Kannada Kannada serial Kanndathi serial today episode very interesting police entry to home
  ಕನ್ನಡತಿ ಧಾರಾವಾಹಿ


  ಹಾಗಾದ್ರೆ ಅಮ್ಮಮ್ಮ ಸಾನಿಯಾಗೆ ಕಳಿಸಿದ ವಿಡಿಯೋದಲ್ಲಿ ಏನಿದೆ?
  ಅಮ್ಮಮ್ಮನಿಗೆ ಹುಷಾರಿಲ್ಲದಾಗ ಆಂಬ್ಯುಲೆನ್ಸ್ ನಲ್ಲಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾ ಇರುತ್ತಾರೆ. ಆಗ ಸಾನಿಯಾ ಅಮ್ಮಮ್ಮ ಇನ್ನು ಬದುಕುವುದಿಲ್ಲ ಎಂದು ಕೊಂಡು ಏನೇನು ಮಾತನಾಡುತ್ತಾ ಇರುತ್ತಾಳೆ. ಈಗ ಅಧಿಕಾರದಿಂದ ಹೇಗೆ ತೆಗೆಯುತ್ತೀರಾ? ಆಸ್ಪತ್ರೆಗೆ ಹೋದ್ರೆ ವಾಪಸ್ ಬದುಕಿ ಬರಲ್ಲ ಎಂದು ನಗುತ್ತಾ, ಗರ್ವದಿಂದ ಹೇಳಿರುತ್ತಾಳೆ. ಅದು ಅಮ್ಮಮ್ಮ ನೋಡುತ್ತಾ ಇದ್ದರೂ ಹಾಗೇ ಮಾಡಿರುತ್ತಾಳೆ. ದೊಡ್ಡವರು ಎನ್ನುವುದನ್ನೂ ನೋಡದೇ ಏಕವಚನದಲ್ಲಿ ಮಾತನಾಡಿದ್ದಾಳೆ. ಅದನ್ನು ರತ್ನಮಾಲಾ ಅವರು ವಿಡಿಯೋ ಮಾಡಿಕೊಂಡಿದ್ದಾರೆ. ಆ ವಿಡಿಯೋವನ್ನೇ ಸಾನಿಯಾಗೆ ಕಳಿಸಿದ್ದಾರೆ.

  ಇದನ್ನೂ ಓದಿ: Thara Anuradha: ಕೇಸರಿ, ಬಿಳಿ, ಹಸಿರು ಉಡುಪಿನಲ್ಲಿ ಮಿಂಚಿದ ತಾರಾ; ಫೋಟೋ ಗ್ಯಾಲರಿ ಇಲ್ಲಿದೆ

  ಸಾನಿಯಾಗೆ ಢವ-ಢವ!
  ಸಾನಿಯಾ ಅಮ್ಮಮ್ಮ ಕಳಿಸಿದ ವಿಡಿಯೋ ನೋಡಿ ಶಾಕ್ ಆಗಿದ್ದಾಳೆ. ತಾನು ಮಾತನಾಡಿದ್ದೆಲ್ಲಾ ವಿಡಿಯೋ ಮಾಡಿದ್ದಾರೆ ಎಂದು ಗಾಬರಿಯಾಗಿದ್ದಾಳೆ. ಮೊದಲೇ ಅಧಿಕಾರದ ಅವಧಿ ಮುಗಿದಿತ್ತು. ಈಗ ಈ ರೀತಿ ಬೇರೆ ಮಾತನಾಡಿದ್ದಾಳೆ. ಎಲ್ಲವನ್ನೂ ಸೇರಿಸಿ ಅಮ್ಮಮ್ಮ ಇನ್ನೇನು ಮಾಡೋತ್ತಾರೋ ಅನ್ನೋ ಭಯ ಸಾನಿಯಾಗೆ ಶುರುವಾಗಿದೆ.

  ವರೂಧಿನಿಗೆ ಹೇಳಿ ಸಾನಿಯಾ ಮಾಹಿತಿ ತರಿಸುತ್ತಿರುವ ರತ್ನಮಾಲಾ
  ರತ್ನಮಾಲಾ ಅವರು ಹುಷಾರಾಗುತ್ತಿದ್ದಂತೆ, ವಿದೇಶದಿಂದಲೇ ವರೂಧಿನಿಗೆ ಕರೆ ಮಾಡಿರುತ್ತಾರೆ. ವರೂಧಿನಿಗೆ ಸಾನಿಯಾ ಬಗ್ಗೆ ಕೆಲವೊಂದು ಡಿಟೇಲ್ಸ್ ರೆಡಿ ಮಾಡಲು ಹೇಳಿದ್ದಾರೆ. ಅಲ್ಲದೇ ತಾವು ಕರೆ ಮಾಡಿದ್ದನ್ನು ಗುಟ್ಟಾಗಿ ಇಡಬೇಕು. ಯಾರಿಗೂ ಹೇಳಬಾರದು ಎಂದು ವರೂಧಿಗೆ ಹೇಳಿದ್ದಾರೆ.

  ಅಮ್ಮಮ್ಮ ಯಾರ ವಿರುದ್ಧ ದೂರು ನೀಡ್ತಾಳೆ ಅನ್ನೋದನ್ನ ನೋಡೋದಕ್ಕೆ ಇವತ್ತಿನ ಸಂಚಿಕೆ ನೋಡಬೇಕು.
  Published by:Savitha Savitha
  First published: