• Home
  • »
  • News
  • »
  • entertainment
  • »
  • Kannadathi: ಅಮ್ಮಮ್ಮನ ಅಂತ್ಯಸಂಸ್ಕಾರ, ಹರ್ಷನ ಕಣ್ಣೀರು! ಆಸ್ತಿ ಬಗ್ಗೆ ನಿಜ ಹೇಳ್ತಾಳಾ ವರು?

Kannadathi: ಅಮ್ಮಮ್ಮನ ಅಂತ್ಯಸಂಸ್ಕಾರ, ಹರ್ಷನ ಕಣ್ಣೀರು! ಆಸ್ತಿ ಬಗ್ಗೆ ನಿಜ ಹೇಳ್ತಾಳಾ ವರು?

ಅಮ್ಮಮ್ಮ ಇಲ್ಲ ಎಂದು ಮನೆಯವರು ಕಣ್ಣೀರು

ಅಮ್ಮಮ್ಮ ಇಲ್ಲ ಎಂದು ಮನೆಯವರು ಕಣ್ಣೀರು

ಪ್ರೀತಿಯ ಅಮ್ಮಮ್ಮ ಇನ್ನಿಲ್ಲ ಎನ್ನುವುದನ್ನು ಕೇಳಿ ಮನೆಯವರೆಲ್ಲಾ ಕಣ್ಣೀರು ಹಾಕಿದ್ದಾರೆ. ಹರ್ಷ-ಭುವಿಗೆ ದಿಕ್ಕೇ ತೋಚದಂತಾಗಿದೆ. ಅಮ್ಮಮ್ಮ ಇಲ್ಲ ಎನ್ನುವುದನ್ನು ಕೇಳಿ ಎಲ್ಲರೂ ಆಘಾತಕ್ಕೆ ಒಳಗಾಗಿದ್ದಾರೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಧಾರಾವಾಹಿ (Serial) ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ಧಾರಾವಾಹಿಯಲ್ಲಿ ಅಮ್ಮಮ್ಮನ ಅಧ್ಯಾಯ ಮುಕ್ತಾಯವಾಗಿದೆ. ಮನೆಯಲ್ಲಿ ಎಲ್ಲರೂ ಕಣ್ಣೀರಿಡುತ್ತಿದ್ದಾರೆ. ಅಂತ್ಯಸಂಸ್ಕಾರದ (Funeral) ಸಂದರ್ಭದಲ್ಲಿ ಹರ್ಷನ (Harsha) ಮನಸ್ಸು ಕಲ್ಲಾಗಿದೆ.


    ರತ್ನಮಾಲಾ ಅಧ್ಯಾಯ ಮುಕ್ತಾಯ


    ಕನ್ನಡತಿ ಧಾರಾವಾಹಿಯಲ್ಲಿ ಅಮ್ಮಮ್ಮ ಅಂದ್ರೆ ರತ್ನಮಾಲಾ ಅವರ ಪಾತ್ರವು ಚೆನ್ನಾಗಿ ಮೂಡಿ ಬಂದಿತ್ತು. ಆ ಪಾತ್ರಕ್ಕೆ ಜೀವ ತುಂಬಿದ್ದರು. ಮಗನನ್ನು ಸಾಕಿದ ರೀತಿ, ಮನೆಯವರಿಗೆ ಹೇಳಿ ಕೊಟ್ಟ ಸಂಸ್ಕಾರ ಎಲ್ಲವೂ ಇಷ್ಟ ಆಗಿತ್ತು. ಆದ್ರೆ ಅನಾರೋಗ್ಯದಿಂದ ಬಳಲುತ್ತಿದ್ದ ಅಮ್ಮಮ್ಮ ತಮ್ಮ ಪಾತ್ರ ಮುಗಿಸಿದ್ದಾರೆ. ಭುವಿ ಕೈಗೆ ಎಲ್ಲಾ ಜವಾಬ್ದಾರಿ ಕೊಟ್ಟು ಎಲ್ಲರನ್ನು ಬಿಟ್ಟು ಹೋಗಿದ್ದಾರೆ. ರತ್ನಾಮಾಲಾ ಅಧ್ಯಾಯ ಮುಕ್ತಾಯವಾಗಿದೆ.


    ಮನೆಯಲ್ಲಿ ಕಣ್ಣೀರು, ಮೌನ


    ಪ್ರೀತಿಯ ಅಮ್ಮಮ್ಮ ಇನ್ನಿಲ್ಲ ಎನ್ನುವುದನ್ನು ಕೇಳಿ ಮನೆಯವರೆಲ್ಲಾ ಕಣ್ಣೀರು ಹಾಕಿದ್ದಾರೆ. ಹರ್ಷ-ಭುವಿಗೆ ದಿಕ್ಕೇ ತೋಚದಂತಾಗಿದೆ. ದೊಡ್ಡಮ್ಮ ಇಲ್ಲ ಎನ್ನುವುದನ್ನು ಕೇಳಿ ಎಲ್ಲರೂ ಆಘಾತಕ್ಕೆ ಒಳಗಾಗಿದ್ದಾರೆ. ಹರ್ಷ, ಅಮ್ಮಮ್ಮ ಇಲ್ಲ ಎನ್ನುವುದನ್ನು ಒಪ್ಪುತ್ತಲೇ ಇಲ್ಲ. ಅವರು ಇದ್ದಾರೆ ಎನ್ನುತ್ತಿದ್ದಾನೆ. ಮನೆಯಲ್ಲಿ ಎಲ್ಲರಿಗೂ ಅಳುವೊಂದೆ ಕಾಣ್ತಿದೆ. ಎಲ್ಲರೂ ಮೌನವಾಗಿದ್ದಾರೆ. ಆಧಾರ ಸ್ತಂಭವಾಗಿದ್ದ ರತ್ನಮಾಲಾ ಕಳೆದುಕೊಂಡು ಕಂಗಾಲಾಗಿದ್ದಾರೆ.


    colors kannada serial, kannada serial, kannadathi serial, harsha mother in death, rathnamala funeral ceremony, ಕನ್ನಡತಿ ಧಾರಾವಾಹಿ, ಪ್ರೀತಿಯ ಅಮ್ಮಮ್ಮನ ಅಂತ್ಯಸಂಸ್ಕಾರ, ಹರ್ಷನ ಗೋಳಾಟ, ಆಸ್ತಿ ಬಗ್ಗೆ ನಿಜ ಹೇಳ್ತಾಳಾ ವರು?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ರತ್ನಮಾಲಾ ಅಧ್ಯಾಯ ಮುಕ್ತಾಯ


    ಇದನ್ನೂ ಓದಿ: Kendasampige: ಬೇಕಂತಲೇ ಗೆಸ್ಟ್ ಮುಂದೆ ಸುಮನಾಗೆ ಅವಮಾನ, ಕಣ್ಣೀರಿಟ್ಟ ಸುಮಿ


    ರತ್ನಮಾಲಾ ಅಂತ್ಯಸಂಸ್ಕಾರ
    ಹರ್ಷನೇ ಮುಂದೆ ನಿಂತು ತನ್ನ ಅಮ್ಮಮ್ಮನ ಅಂತ್ಯಸಂಸ್ಕಾರ ಮಾಡಬೇಕಿದೆ. ಆದ್ರೆ ಆತನಿಗೆ ಅದನ್ನು ಒಪ್ಪಿಕೊಳ್ಳಲು ಆಗ್ತಾ ಇಲ್ಲ. ಅದಕ್ಕೆ ಅವನ ಮನಸ್ಸು ಕಲ್ಲಾಗಿ ಹೋಗಿದೆ. ಏನು ನಡೆಯುತ್ತಿದೆ, ಏನು ಮಾಡಬೇಕು ಎಂಬ ಗೊಂದಲದಲ್ಲಿದ್ದಾನೆ. ಎಲ್ಲರು ಮುಂದೆ ನಿಂತು ಹರ್ಷನ ಕೈಯಲ್ಲಿ ವಿಧಿ ವಿಧಾನಗಳನ್ನು ಮಾಡಿಸುತ್ತಿದ್ದಾರೆ.


    colors kannada serial, kannada serial, kannadathi serial, harsha mother in death, rathnamala funeral ceremony, ಕನ್ನಡತಿ ಧಾರಾವಾಹಿ, ಪ್ರೀತಿಯ ಅಮ್ಮಮ್ಮನ ಅಂತ್ಯಸಂಸ್ಕಾರ, ಹರ್ಷನ ಗೋಳಾಟ, ಆಸ್ತಿ ಬಗ್ಗೆ ನಿಜ ಹೇಳ್ತಾಳಾ ವರು?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಹರ್ಷನ ಕೈಯಲ್ಲಿ ವಿಧಿ ವಿಧಾನ


    ಸಾವಿನ ನೋವಲ್ಲೂ ವರು ಡ್ರಾಮಾ
    ವರುಧಿನಿಗೆ ಅಮ್ಮಮ್ಮ ಎಲ್ಲಾ ಆಸ್ತಿಯನ್ನು ಭುವಿ ಹೆಸರಿಗೆ ಬರೆದಿರೋದು ಗೊತ್ತಾಗಿದೆ. ಅದಕ್ಕೆ ಅವಳು ಚಡಪಡಿಸುತ್ತಿದ್ದಾಳೆ. ತನ್ನ ಹೀರೋಗೆ ಸೇರಬೇಕಾದ ಆಸ್ತಿ ಇವಳ ಪಾಲಾಗಿದೆ ಎಂದು ಆತಂಕಗೊಂಡಿದ್ದಾಳೆ. ಹೇಗಾದ್ರೂ ಹರ್ಷನನ್ನು ಪಡೆಯಬೇಕು. ನನಗೆ ಹರ್ಷ ಬೇಕು. ಹರ್ಷನಿಗೆ ಆಸ್ತಿ ಬೇಕು. ಇದಕ್ಕೆ ಏನಾದ್ರೂ ಮಾಡಬೇಕು ಎಂದು ಭುವಿ ಮುಂದೆ ಡ್ರಾಮಾ ಮಾಡ್ತಿದ್ದಾಳೆ.


    colors kannada serial, kannada serial, kannadathi serial, harsha mother in death, rathnamala funeral ceremony, ಕನ್ನಡತಿ ಧಾರಾವಾಹಿ, ಪ್ರೀತಿಯ ಅಮ್ಮಮ್ಮನ ಅಂತ್ಯಸಂಸ್ಕಾರ, ಹರ್ಷನ ಗೋಳಾಟ, ಆಸ್ತಿ ಬಗ್ಗೆ ನಿಜ ಹೇಳ್ತಾಳಾ ವರು?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ವರು ಡ್ರಾಮಾ


    ಭುವಿ ಜೊತೆ ಮಾಡತನಾಬೇಕು ಎಂದ ವರು
    ಎಲ್ಲರೂ ಅಮ್ಮಮ್ಮನ ಅಂತ್ಯಸಂಸ್ಕಾರದ ಮಾಡುವ ಕೆಲಸ ಮಾಡ್ತಾ ಇದ್ರೆ, ವರು, ಭುವಿ ಬಳಿ ಬಂದು ಈಗಲೇ ನಿನ್ನ ಬಳಿ ಮಾತನಾಡಬೇಕು ಎಂದಿದ್ದಾಳೆ. ಏನದು, ಆಮೇಲೆ ಮಾತನಾಡೋಣ ಎಂದ್ರೂ ಬಿಡುತ್ತಿಲ್ಲ. ಹಾಗಾದ್ರೆ, ವಿಲ್ ವಿಚಾರ ಭುವಿ ಮುಂದೆ ಮಾಡತನಾಡೋ ಸಾಧ್ಯತೆ ಇದೆ. ಇಲ್ಲ, ಅದನ್ನು ಮುಚ್ಚಿಟ್ಟು ಬೇರೆ ಏನಾದ್ರೂ ಮಾತನಾಡುತ್ತಾಳಾ ನೋಡಬೇಕು.


    ಇದನ್ನೂ ಓದಿ: Lucky Man: ಟಿವಿಯಲ್ಲಿ ಬರ್ತಿದೆ 'ಲಕ್ಕಿಮ್ಯಾನ್'! ಮನೆಯಲ್ಲೇ ದೇವರ ದರ್ಶನ ಮಾಡಿ


    ಹರ್ಷನಿಗೆ ಅಮ್ಮಮ್ಮನ ಚಿಂತೆ, ವರುಗೆ ಹರ್ಷನ ಚಿಂತೆ, ಸಾನಿಯಾಗೆ ಆಸ್ತಿ ಚಿಂತೆ, ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.

    Published by:Savitha Savitha
    First published: