Kannadathi: ಕನ್ನಡ ಟೀಚರ್​ಗೆ ಒಗಟು ಕೇಳಿದ ವರೂಧಿನಿ? ಉತ್ತರ ಹೇಳ್ತಾರಾ ಭುವನೇಶ್ವರಿ?

ವರೂಧಿನಿ ಧೈರ್ಯ ಮಾಡಿ ಕನ್ನಡ ಟೀಚರ್ ಗೆ  ಒಗಟು ಕೇಳಿದ್ದಾರಂತೆ. ಅದು ಹೀಗಿದೆ. ಹರನ ಹಾರ, ಹಾರದ ಆಹಾರ, ಆಹಾರದ ಪುತ್ರ, ಪುತ್ರನ ಮಿತ್ರ, ಮಿತ್ರನ ಶತ್ರುವಿನ ಹೆಂಡತಿ ಹೆಸರೇನು? ಭುವಿಗೆ ಈ ಒಗಟು ಬಿಡಿಸಲು ತಲೆ ಕೆಟ್ಟು ಹೋಗುತ್ತೆ. ನಂತರ ವರೂಧಿನಿ ಸಹಾಯದಿಂದ ಒಗಟನ್ನು ಬಿಡಿಸುತ್ತಾಳೆ.

ವರೂಧಿನಿ, ಭುವಿ

ವರೂಧಿನಿ, ಭುವಿ

 • Share this:
  ಕನ್ನಡತಿ (Kannadathi), ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುವ ಹೆಸರಾಂತ ಧಾರಾವಾಹಿ (Serial). ಈ ಧಾರವಾಹಿಯ ಫೇಮಸ್ ನಟಿ ಕನ್ನಡತಿ ಭುವಿ ಅಂದ್ರೆ, ರಂಜನಿ ರಾಘವನ್ (Ranjani Raghavan) ಅವರು ಸೀರಿಯಲ್ ಮಾಡ್ತಾ ಜೊತೆ ಸಾಕಷ್ಟು ಎಂಜಾಯ್ ಮಾಡುತ್ತಾರೆ. ಶೂಟಿಂಗ್ ಸೆಟ್‍ನಲ್ಲಿ ಬಿಡುವಿದ್ದಾಗ ಸಹ ಕಲಾವಿದರ ಜೊತೆ ಒಗಟುಗಳನ್ನು ಕೇಳುತ್ತಾ, ಅವರಿಗೆ ಉತ್ತರ ಹೇಳುತ್ತಾ ಖುಷಿಯಾಗಿ ಇರ್ತಾರೆ. ಈ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಇಷ್ಟು ದಿನ ಕನ್ನಡ ಟೀಚರ್ ಎಲ್ಲರಿಗೂ ಒಗಟು (Puzzle) ಕೇಳಿ ತಲೆಗೆ ಹುಳ ಬಿಡ್ತದ್ರು. ಈಗ ಭುವಿ ಪ್ರಾಣ ಸ್ನೇಹಿತೆ ವರೂಧಿನಿ, ಭುವಿಗೆ ಒಗಟು ಕೇಳಿ ತಲೆಗೆ ಹುಳು ಬಿಟ್ಟಿದ್ದಾಳೆ. ಭುವಿಗೆ ಉತ್ತರ ಗೊತ್ತಾಗುತ್ತಿಲ್ಲ. ಒಗಟೇ ಒಗಟಾಗಿ ಹೋಗಿದೆ. ನಿಮಗೆ ಗೊತ್ತಾದ್ರೆ, ನೀವೂ ಒಗಟು ಬಿಡಿಸಿ.

  ವರೂಧಿನಿ ಕೇಳಿದ ಒಗಟು ಏನು?
  ವರೂಧಿನಿ ಧೈರ್ಯ ಮಾಡಿ ಕನ್ನಡ ಟೀಚರ್ ಗೆ  ಒಗಟು ಕೇಳಿದ್ದಾರಂತೆ. ಅದು ಹೀಗಿದೆ. ಹರನ ಹಾರ, ಹಾರದ ಆಹಾರ, ಆಹಾರದ ಪುತ್ರ, ಪುತ್ರನ ಮಿತ್ರ, ಮಿತ್ರನ ಶತ್ರುವಿನ ಹೆಂಡತಿ ಹೆಸರೇನು? ಭುವಿಗೆ ಈ ಒಗಟು ಬಿಡಿಸಲು ತಲೆ ಕೆಟ್ಟು ಹೋಗುತ್ತೆ. ನಂತರ ವರೂಧಿನಿ ಸಹಾಯದಿಂದ ಒಗಟನ್ನು ಬಿಡಿಸುತ್ತಾಳೆ.

  ಈ ಒಗಟಿನ ಉತ್ತರ ಏನು ಗೊತ್ತಾ?
  ಹರನ ಹಾರ ಹಾವು. ದೇವರು ಏನು ತಿನ್ನುವುದಿಲ್ಲ ಎಂದು ಗಾಳಿಯನ್ನು ಕುಡುಯಿತ್ತಾನೆ. ಗಾಳಿ ಪುತ್ರ ಅಂದ್ರೆ ಹನುಮಂತ. ಹನುಮಂತನ ಮಿತ್ರ ರಾಮ. ರಾಮನ ಶತ್ರು ರಾವಣ. ರಾವಣನ ಹೆಂಡತಿ ಮಂಡೋದರೆ. ಈ ಒಗಟಿಗೆ ಉತ್ತರ ಮಂಡೋದರಿ. ಕೊನೆಗೆ ವರೂಧಿನ ಸಹಾಯದಿಂದ, ಕನ್ನಡತಿಯ ಭುವಿ ಒಗಟು ಬಿಡಿಸಿದ್ದಾರೆ. ಇದನ್ನು ವರೂಧಿನಿ ಅಂದ್ರೆ ಸಾರಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.


  ಇದನ್ನೂ ಓದಿ: Jote Joteyali: ರಾಜವರ್ಧನ್ ಸಾವಿನ ಹಿಂದೆ ಇರೋ ಸತ್ಯ ಬಯಲು! ಅನು ಈ ಮಾತನ್ನೆಲ್ಲಾ ನಂಬ್ತಾಳಾ?

  ಗೂಡಲ್ಲಿರುವ ಪಕ್ಷಿ ಊರೆಲ್ಲಾ ನೋಡುತ್ತೆ!
  ಒಗಟು ಬಿಡಿಸೋಣ ಬನ್ನೊ ಎಂದು ಅತಿಥಿಗಳ ಜೊತೆ ಒಗಟು ಬಿಡಿಸೋ ರಂಜನಿ ರಾಘವನ್ ಅವರ ಈ ವಿಡಿಯೋಗಳು ನೆಟ್ಟಿಗರಿಗೂ ಭಾರೀ ಇಷ್ಟವಾಗುತ್ತಿದೆ. ವಿಡಿಯೋದಲ್ಲಿ ನಟಿ ಮೋನಿಕಾ ಅವರನ್ನು ಗೂಡಲ್ಲಿರುವ ಪಕ್ಷಿ ಊರೆಲ್ಲಾ ನೋಡುತ್ತೆ ಏನದು ಎಂದು ರಂಜನಿ ರಾಘವನ್ ಅವರು ಮೋನಿಕಾ ಅವರನ್ನು ಪ್ರಶ್ನಿಸಿದ್ದಾರೆ.


  ಬಿಂದು ಪಾತ್ರದಲ್ಲಿ ಕಾಣಿಸಿಕೊಳ್ಳೋ ಮೋನಿಕಾ ಅವರಲ್ಲಿ ಒಗಟು ಕೇಳಿದ್ದು ನಟಿಗೆ ಆರಂಭದಲ್ಲಿ ಉತ್ತರ ಏನೆಂಬುದೇ ಅರ್ಥವಾಗಿಲ್ಲ. ಆದರೆ ನಂತರದಲ್ಲಿ ನಟಿ ಸರಿಯಾಗಿ ಉತ್ತರವನ್ನು ಹೇಳಿದ್ದಾರೆ. ಈ ಒಗಟಿನ ಉತ್ತರ ಕಣ್ಣು.

  ಇದನ್ನೂ ಓದಿ: Kannadathi: ಮನೆಮಂದಿ ಮಲಗಿದ ಮೇಲೆ ಕಳ್ಳಿಯಾದ ಸಾನಿಯಾ! ಅಮ್ಮಮ್ಮನ ಮೇಲೆ ವರೂಧಿನಿ ವಕ್ರ ಕಣ್ಣು! 

  ಹಸಿರು ಕೋಟೆ, ಕೆಂಪು ಅರಮನೆ, ಕಪ್ಪು ಸೈನಿಕರು, ಏನು ಹೇಳಿ ನೋಡೋಣ
  ಇದರ ನಂತರ ಹರ್ಷನ ತಂಗಿಯ ಪಾತ್ರದಲ್ಲಿ ನಟಿಸೋ ಅಮೃತ ಮೂರ್ತಿ ಜೊತೆಗೂ ಒಗಟುಗಳನ್ನು ಕೇಳಿದ್ದಾರೆ. ಹಸಿರು ಕೋಟೆ, ಕೆಂಪು ಅರಮನೆ, ಕಪ್ಪು ಸೈನಿಕರು ಎನ್ನುವ ಒಗಟನ್ನು ರಂಜನಿ ರಾಘವನ್ ಕೇಳಿದ್ದು ಅಮೃತಾ ಮೂರ್ತಿ ಇದಕ್ಕೆ ಉತ್ತರ ಹೇಳಲು ಪರದಾಡಿದ್ದಾರೆ. ಆರಂಭದಲ್ಲಿ ಸಿಕ್ಕ ಸಿಕ್ಕ ತರಕಾರಿಗಳ ಹೆಸರನ್ನು ಹೇಳಿದ ಅಮೃತಾ ಅವರು ಕೊನೆಗೆ ರಂಜನಿ ಅವರಲ್ಲಿ ಕ್ಲೂ ಕೂಡಾ ಕೇಳಿದ್ದಾರೆ.


  ಆದರೆ ರಂಜನಿ ಕ್ಲೂ ಕೊಡುವುದಕ್ಕೆ ನಿರಾಕರಿಸಿದ್ದಾರೆ. ನಂತರ ಅಮೃತಾ ಮೂರ್ತಿ ಅವರೇ ಚೆನ್ನಾಗಿ ಆಲೋಚಿಸಿ ಕಲ್ಲಂಗಡಿ ಎಂದು ಉತ್ತರ ಹೇಳಿದ್ದಾರೆ. ಹೊರಭಾಗದಿಂದ ಹಸಿರಾಗಿರುವ ಕಲ್ಲಂಗಡಿ ಒಳಗೆ ಕೆಂಬಣ್ಣ ತುಂಬಿರುತ್ತದೆ. ಅದರ ಮಧ್ಯೆ ಕಡುಕಪ್ಪು ಬೀಜಗಳು ಸೈನಿಕರಂತೆ ಸಾಲು ಸಾಲಾಗಿ ಇರುತ್ತದೆ.
  Published by:Savitha Savitha
  First published: