• Home
 • »
 • News
 • »
 • entertainment
 • »
 • Kannadathi: ಹರ್ಷನ ಕೋಪವೆಲ್ಲ ಇಳಿಸಿತು ಅಮ್ಮಮ್ಮನ ಸಾವು!

Kannadathi: ಹರ್ಷನ ಕೋಪವೆಲ್ಲ ಇಳಿಸಿತು ಅಮ್ಮಮ್ಮನ ಸಾವು!

ಸಾನಿಯಾ ಕೂಗಾಡಿದ್ರು ಹರ್ಷ ಸೈಲೆಂಟ್

ಸಾನಿಯಾ ಕೂಗಾಡಿದ್ರು ಹರ್ಷ ಸೈಲೆಂಟ್

ಹರ್ಷನ ಮೂಗಿನ ಮೇಲಿನ ಕೋಪ ನೋಡಿ, ಭುವಿ ಮತ್ತು ರತ್ನಮಾಲಾ ಅವರಿಗೆ ಬೇಸರ ಆಗುತ್ತಿತ್ತು. ಆದ್ರೆ ಈಗ ಹರ್ಷ ಬದಲಾಗಿದ್ದಾನೆ. ಅದನ್ನು ನೋಡಿ ಭುವಿ ತುಂಬಾ ಖುಷಿ ಪಟ್ಟಿದ್ದಾಳೆ. ರತ್ನಮಾಲಾ ಆಸೆ ಕೂಡ ಇದೇ ಆಗಿತ್ತು.

 • News18 Kannada
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ ಧಾರಾವಾಹಿ (Serial) ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ಧಾರಾವಾಹಿಯಲ್ಲಿ ಅಮ್ಮಮ್ಮನ ಅಧ್ಯಾಯ ಮುಕ್ತಾಯವಾಗಿದೆ. ಅಮ್ಮಮ್ಮ ಇಲ್ಲದ ಹರ್ಷ (Harsh) ಶಾಂತ ಮೂರ್ತಿ ಆಗಿದ್ದಾನೆ. ಕೂಗಾಡದೇ ಸಮಾಧಾನದಿಂದ ಉತ್ತರ (Answer) ನೀಡುತ್ತಿದ್ದಾನೆ.


  ರತ್ನಮಾಲಾ ಅಧ್ಯಾಯ ಮುಕ್ತಾಯ


  ಕನ್ನಡತಿ ಧಾರಾವಾಹಿಯಲ್ಲಿ ನಟಿಸುವವರು ಆ ಪಾತ್ರಕ್ಕೆ ಜೀವ ತುಂಬಿದ್ದರು. ಅಮ್ಮಮ್ಮ ಅಂದ್ರೆ ರತ್ನಮಾಲಾ ಅವರ ಪಾತ್ರವು ಚೆನ್ನಾಗಿ ಮೂಡಿ ಬಂದಿತ್ತು. ಮಗನನ್ನು ಸಾಕಿದ ರೀತಿ, ಮನೆಯವರಿಗೆ ಹೇಳಿ ಕೊಟ್ಟ ಸಂಸ್ಕಾರ ಎಲ್ಲವೂ ಇಷ್ಟ ಆಗಿತ್ತು. ರತ್ನಮಾಲಾ ಇನ್ಮುಂದೆ ಧಾರಾವಾಹಿಯಲ್ಲಿ ಇರಲ್ಲ ಎನ್ನುವುದನ್ನೇ ಅಭಿಮಾನಿಗಳು ಒಪ್ತಾ ಇಲ್ಲ. ಯಾಕಂದ್ರೆ ಪಾತ್ರ ಅಷ್ಟು ಮನಸ್ಸಿನಲ್ಲಿ ಉಳಿದು ಬಿಟ್ಟಿತ್ತು. ಆದ್ರೆ ಇನ್ಮುಂದೆ ಆ ಅಭಿನಯ ಇರಲ್ಲ.


  ಮನೆಯವರನ್ನು ಸೇರಿಸಿದ ಹರ್ಷ


  ಹರ್ಷ ನೋವಿನಿಂದ ಇದ್ದಾನೆ. ಅಮ್ಮಮ್ಮ ಇಲ್ಲ ಎನ್ನೋ ಚಿಂತೆಯಲ್ಲಿ ಮುಳುಗಿದ್ದಾನೆ. ಆದ್ರೂ ಕೆಲವೊಂದು ಜವಾಬ್ದಾರಿ ನಿಭಾಯಿಸಲೇ ಬೇಕಿದೆ. ಅದಕ್ಕೆ ಸುಚಿ ಬಳಿ, ಮನೆಯವರನ್ನು ಸೇರಿಸು. ನಾನು ಮಾತನಾಡಬೇಕು ಎಂದಿದ್ದಾನೆ. ಸುಚಿ ಎಲ್ಲರೂ ಇರುವಂತೆ ಹೇಳಿದ್ದಾಳೆ. ಹಾಗಾದ್ರೆ ಹರ್ಷ ಏನ್ ಮಾತನಾಡುತ್ತಾನೆ ಎಂಬ ಕುತೂಹಲ ಹೆಚ್ಚಾಗಿತ್ತು.


  ಇದನ್ನೂ ಓದಿ: Mahesh Babu’s Father Krishna Death: ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ನಿಧನ: ಅಮ್ಮನ ಸಾವಿನ ಬೆನ್ನಲ್ಲೇ ನಟನಿಗೆ ಶಾಕ್ 


  ಸಾನಿಯಾ ಕೂಗಾಡಿದ್ರು ಹರ್ಷ ಸೈಲೆಂಟ್


  ಸಾನಿಯಾ ಟಿವಿಯಲ್ಲಿ ನನ್ನ ಬಗ್ಗೆ ಏನೇನೋ ತೋರಿಸುತ್ತಿದ್ದಾರೆ ಎಂದು ಕೂಗಾಡಿದ್ರೂ, ಹರ್ಷ ಸಮಾಧಾನವಾಗಿದ್ದಾನೆ. ಅವಳು ಎಷ್ಟೇ ರೇಗಾಡಿದ್ರು ಹರ್ಷ ಸೈಲೆಂಟ್ ಆಗಿ ಉತ್ತರ ನೀಡ್ತಾ ಇದ್ದಾನೆ. ಇದನ್ನು ನಾವು ಕೂತುಕೊಂಡು ಬಗೆಹರಿಸೋಣ ಎಂದು ಹೇಳುತ್ತಿದ್ದಾನೆ. ಮಾತು ಶುರುವಾದ್ರೆ ಸಾಕು ಜಗಳಕ್ಕೆ ಬರುತ್ತಿದ್ದ ಹರ್ಷ ಶಾಂತ ಮೂರ್ತಿ ಆಗಿದ್ದಾನೆ. ಇದನ್ನು ನೋಡಿ ಮನೆಯವರೆಲ್ಲಾ ಶಾಕ್ ಆಗಿದ್ದಾರೆ.


  ಭುವಿ ಮತ್ತು ರತ್ನಮಾಲಾ ಆಸೆ ಕೂಡ ಇದೇ ಆಗಿತ್ತು


  ಹರ್ಷನ ಮೂಗಿನ ಮೇಲಿನ ಕೋಪ ನೋಡಿ, ಭುವಿ ಮತ್ತು ರತ್ನಮಾಲಾ ಅವರಿಗೆ ಬೇಸರ ಆಗುತ್ತಿತ್ತು. ಆದ್ರೆ ಈಗ ಹರ್ಷ ಬದಲಾಗಿದ್ದಾನೆ. ಅದನ್ನು ನೋಡಿ ಭುವಿ ತುಂಬಾ ಖುಷಿ ಪಟ್ಟಿದ್ದಾಳೆ. ರತ್ನಮಾಲಾ ಆಸೆ ಕೂಡ ಇದೇ ಆಗಿತ್ತು. ತನ್ನ ಮಗ ಮಾತಿಗೆ ಮುಂಚೆ ಜಗಳ ಆಡಬಾರದು. ಎಲ್ಲರ ಜೊತೆ ಶಾಂತವಾಗಿ ಉತ್ತರ ನೀಡಬೇಕು. ಸಮಾಧಾನದಿಂದ ನಿಭಾಯಿಸಬೇಕು ಎಂದು. ಅದೇ ರೀತಿ ಆಗಿದ್ದಾನೆ ಹರ್ಷ. ಹರ್ಷನೂ ಸಹ ಅಮ್ಮಮ್ಮನ ರೀತಿ ಸಮಾಧಾನದಿಂದ ಇರಲು ಪ್ರಯತ್ನ ಪಡ್ತಾ ಇದ್ದಾನೆ.


  colors kannada serial, kannada serial, kannadathi serial, hero harsh full silent bhuvi happy, harsha mother death, ಕನ್ನಡತಿ ಧಾರಾವಾಹಿ, ಶಾಂತಮೂರ್ತಿಯಾದ ಅಮ್ಮಮ್ಮನಿಲ್ಲದ ಹರ್ಷ, ಭುವಿ ಮತ್ತು ರತ್ನಮಾಲಾ ಆಸೆ ಕೂಡ ಇದೇ ಆಗಿತ್ತು, ಅಮ್ಮಮ್ಮ ಇಲ್ಲ ಅಂದ್ರೂ ನೆನಪುಗಳು ಸಾವಿರಾರು, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ಭುವಿ


  ವರು ಮುಂದಿನ ಪ್ಲ್ಯಾನ್ ಏನು?
  ವರುಗೆ ಹರ್ಷ ಎಂದ್ರೆ ತುಂಬಾ ಇಷ್ಟ. ಹೇಗಾದ್ರೂ ಭುವಿಯಿಂದ ದೂರ ಮಾಡಿ ತಾನು ಮದುವೆ ಆಗಬೇಕು ಎಂದುಕೊಳ್ತಿದ್ದಾಳೆ. ಅದಕ್ಕೆ ಅಮ್ಮಮ್ಮ ಸಾವಿನ ನೋವು ಬಳಸಿಕೊಂಡು ಹರ್ಷನ ಜೊತೆ ಕ್ಲೋಸ್ ಆಗಲು ಪ್ರಯತ್ನ ಪಡ್ತಾ ಇದ್ದಾಳೆ.


  colors kannada serial, kannada serial, kannadathi serial, hero harsh full silent bhuvi happy, harsha mother death, ಕನ್ನಡತಿ ಧಾರಾವಾಹಿ, ಶಾಂತಮೂರ್ತಿಯಾದ ಅಮ್ಮಮ್ಮನಿಲ್ಲದ ಹರ್ಷ, ಭುವಿ ಮತ್ತು ರತ್ನಮಾಲಾ ಆಸೆ ಕೂಡ ಇದೇ ಆಗಿತ್ತು, ಅಮ್ಮಮ್ಮ ಇಲ್ಲ ಅಂದ್ರೂ ನೆನಪುಗಳು ಸಾವಿರಾರು, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ವರು


  ಆದ್ರೆ ಹರ್ಷ ಮನೆಯವರೊಂದಿಗೆ ಮಾತನಾಡುವಾಗ, ಇದು ನಮ್ಮ ಕುಟಂಬದ ವಿಷ್ಯ ಹೊರಗೆ ಹೋಗಿ ಎಂದು ಹೇಳಿದ್ದಾನೆ. ಅದಕ್ಕೆ ಕೋಪಗೊಂದ ವರು, ಆಚೆ ಹೋಗಿದ್ದಾಳೆ. ಮತ್ತೆ ಹೀರೋ ಪಡೆಯಲು ಏನಾದ್ರೂ ಪ್ಲ್ಯಾನ್ ಮಾಡಬಹುದು.


  ಇದನ್ನೂ ಓದಿ: Bigg Boss Kannada: ಕಾವ್ಯಶ್ರೀ ಹಿಂದೆನೇ ಓಡಾತ್ತಿದ್ದಾನಾ ರಾಕೇಶ್? ಗುರೂಜಿ ಹೊಸ ಆರೋಪ ಇದು


  ಹರ್ಷ ಶಾಂತನಾಗಲು ಕಾರಣ ಏನು? ಸಾನಿಯಾಗೆ ಎಂಡಿ ಪಟ್ಟ ಮತ್ತೆ ಸಿಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಕನ್ನಡತಿ ಸೀರಿಯಲ್ ನೋಡಬೇಕು.

  Published by:Savitha Savitha
  First published: