• Home
 • »
 • News
 • »
 • entertainment
 • »
 • Kannadathi: ಮನೆಮಂದಿಯನ್ನು ಸೇರಿಸಿದ ಹರ್ಷ, ಏನ್ ಮಾತನಾಡಬಹುದು ಎಂಬ ಕುತೂಹಲ!

Kannadathi: ಮನೆಮಂದಿಯನ್ನು ಸೇರಿಸಿದ ಹರ್ಷ, ಏನ್ ಮಾತನಾಡಬಹುದು ಎಂಬ ಕುತೂಹಲ!

ಮನೆಮಂದಿಯನ್ನು ಸೇರಿಸಿದ ಹರ್ಷ

ಮನೆಮಂದಿಯನ್ನು ಸೇರಿಸಿದ ಹರ್ಷ

ಹರ್ಷ ನೋವಿನಿಂದ ಇದ್ದಾನೆ. ಅಮ್ಮಮ್ಮ ಇಲ್ಲ ಎನ್ನೋ ಚಿಂತೆಯಲ್ಲಿ ಮುಳುಗಿದ್ದಾನೆ. ಆದ್ರೂ ಕೆಲವೊಂದು ಜವಾಬ್ದಾರಿ ನಿಭಾಯಿಸಲೇ ಬೇಕಿದೆ. ಅದಕ್ಕೆ ಸುಚಿ ಬಳಿ, ಮನೆಯವರನ್ನು ಸೇರಿಸು. ನಾನು ಮಾತನಾಡಬೇಕು ಎಂದಿದ್ದಾನೆ.

 • News18 Kannada
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಕನ್ನಡತಿ (Kannadathi) ಧಾರಾವಾಹಿ (Serial) ಹೆಚ್ಚು ಜನಪ್ರಿಯತೆಯನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಈ ಸೀರಿಯಲ್‍ಗೆ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಏನ್ ಮಿಸ್ ಮಾಡಿದ್ರೂ ಕನ್ನಡತಿ ಸೀರಿಯಲ್ ಮಾತ್ರ ತಪ್ಪದೇ ನೋಡುತ್ತಾರೆ. ಈ ಧಾರಾವಾಹಿಗೆ ಕೇವಲ ಹೆಣ್ಣು ಮಕ್ಕಳು ಮಾತ್ರ ಫ್ಯಾನ್ಸ್ ಅಲ್ಲ. ಗಂಡಸರು ಸಹ ಕನ್ನಡತಿ ಸೀರಿಯಲ್ ನೋಡ್ತಾರೆ. ಅಲ್ಲದೇ ಕನ್ನಡ ಅಭಿಮಾನಿಗಳು (Fans) ಸಹ ಈ ಧಾರಾವಾಹಿಯನ್ನು ನೋಡುತ್ತಾರೆ. ದಿನಕ್ಕೊಂದು ತಿರುವುಗಳ ಮೂಲಕ ಕನ್ನಡತಿ ಸೂಪರ್ ಹಿಟ್ ಆಗಿ ಓಡುತ್ತಿದೆ. ಧಾರಾವಾಹಿಯಲ್ಲಿ ಅಮ್ಮಮ್ಮನ ಅಧ್ಯಾಯ ಮುಕ್ತಾಯವಾಗಿದೆ. ಅಮ್ಮಮ್ಮನ ಅಂತ್ಯಕ್ರಿಯೆ ಆದ ಮೇಲೆ ಮನೆಯವರನ್ನು ಹರ್ಷ (Harsha) ಮಾತನಾಡಬೇಕು ಎಂದು ಸೇರಿಸಿದ್ದಾನೆ.


  ರತ್ನಮಾಲಾ ಅಧ್ಯಾಯ ಮುಕ್ತಾಯ
  ಕನ್ನಡತಿ ಧಾರಾವಾಹಿಯಲ್ಲಿ ನಟಿಸುವವರು ಆ ಪಾತ್ರಕ್ಕೆ ಜೀವ ತುಂಬಿದ್ದರು. ಅಮ್ಮಮ್ಮ ಅಂದ್ರೆ ರತ್ನಮಾಲಾ ಅವರ ಪಾತ್ರವು ಚೆನ್ನಾಗಿ ಮೂಡಿ ಬಂದಿತ್ತು. ಮಗನನ್ನು ಸಾಕಿದ ರೀತಿ, ಮನೆಯವರಿಗೆ ಹೇಳಿ ಕೊಟ್ಟ ಸಂಸ್ಕಾರ ಎಲ್ಲವೂ ಇಷ್ಟ ಆಗಿತ್ತು. ರತ್ನಮಾಲಾ ಇನ್ಮುಂದೆ ಧಾರಾವಾಹಿಯಲ್ಲಿ ಇರಲ್ಲ ಎನ್ನುವುದನ್ನೇ ಅಭಿಮಾನಿಗಳು ಒಪ್ತಾ ಇಲ್ಲ. ಯಾಕಂದ್ರೆ ಪಾತ್ರ ಅಷ್ಟು ಮನಸ್ಸಿನಲ್ಲಿ ಉಳಿದು ಬಿಟ್ಟಿತ್ತು. ಆದ್ರೆ ಇನ್ಮುಂದೆ ಆ ಅಭಿನಯ ಇರಲ್ಲ.


  ನೋವಿನಲ್ಲಿರುವ ಮನೆಯವರು
  ರತ್ನಮಾಲಾ ಅವರನ್ನು ಒಲ್ಲದ ಮನಸ್ಸಿನಿಂದ ಹರ್ಷ ಅಂತ್ಯಕ್ರಿಯೆ ಮಾಡಿದ. ಭುವಿ ಅಮ್ಮಮ್ಮನ ರೀತಿ ಕಾಣಿಸಿಕೊಮಡು ಹರ್ಷನಿಗೆ ಬುದ್ಧಿವಾದ ಹೇಳಿದಳು. ನನ್ನ ಪಯಣ ಮುಗಿಯಿತು ಮುಂದಿನದು ನೋಡು ಎಂದಳು. ಭಾರವಾದ ಮನಸ್ಸಿನಿಂದ ಎಲ್ಲಾ ಕ್ರಿಯೆಗಳನ್ನು ಮುಗಿಸಿ, ಹರ್ಷ ಮನೆಗೆ ಬಂದಿದ್ದಾನೆ. ಮನೆಯವರೆಲ್ಲಾ ನೋವಿನಿಂದಲೇ ಮನೆಗೆ ಬಂದಿದ್ದಾರೆ. ಮನೆಯಲ್ಲಿ ಅಮ್ಮಮ್ಮ ಇಲ್ಲದಿರುವುದು ಬೇಸರ ತಂದಿದೆ.


  colors kannada serial, kannada serial, kannadathi serial, harsha call all the home members for talk, harsha mother is death, ಕನ್ನಡತಿ ಧಾರಾವಾಹಿ, ಮನೆಮಂದಿಯನ್ನು ಸೇರಿಸಿದ ಹರ್ಷ, ಮಿಸ್ ಯು ಅಮ್ಮಮ್ಮ ಎಂದು ಪೋಸ್ಟ್ ಹಾಕಿಕೊಂಡ ಕಿರಣ್ ರಾಜ್, ರತ್ನಮಾಲಾ ಅಭಿನಯಕ್ಕೆ ಮೆಚ್ಚುಗೆ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ರತ್ನಮಾಲಾ ಅಧ್ಯಾಯ ಮುಕ್ತಾಯ


  ಇದನ್ನೂ ಓದಿ: Actress Anu Prabhakar: ಬರ್ತ್‍ಡೇ ದಿನ ಕಣ್ಣೀರಿಟ್ಟಿದ್ಯಾಕೆ ಅನು ಪ್ರಭಾಕರ್, ರಘು ಮುಖರ್ಜಿ ಅಂತದ್ದೇನು ಹೇಳಿದ್ರು? 


  ಟಿವಿಯಲ್ಲಿ ಆಸ್ತಿ ಗಲಾಟೆ
  ರತ್ನಮಾಲಾ ಅವರು ಸಾಯುತ್ತಿದ್ದಂತೆ, ಮಾಧ್ಯಮಗಳಲ್ಲಿ ಯಾರು ರತ್ನಮಾಲಾ ಒಡೆತನಕ್ಕೆ ಅಧಿಪತಿ ಎಂದೆಲ್ಲಾ ಬರುತ್ತಿದೆ. ಅಲ್ಲದೇ ಆಸ್ತಿಗಾಗಿ ರತ್ನಮಾಲಾ ಇದ್ದಾಗ ಹರ್ಷ-ಸಾನಿಯಾ ಜಗಳ ಎಂದೆಲ್ಲಾ ತೋರಿಸುತ್ತಿದ್ದಾರೆ. ಅದನ್ನು ನೋಡಿ ಸಾನಿಯಾ ಕೋಪ ಮಾಡಿಕೊಂಡಿದ್ದಾಳೆ. ನನ್ನ ಮರ್ಯಾದೆ ಹೋಗುತ್ತಿದೆ. ನಿಮಗೆಲ್ಲಾ ಖುಷಿನಾ ಎಂದು ಕೇಳ್ತಾಳೆ. ಎಲ್ಲರೂ ಈ ಸಮಯದಲ್ಲಿ ಮಾತನಾಡುವುದು ಬೇಡ ಎಂದು ಹೇಳ್ತಾರೆ. ಆದ್ರೆ ಸಾನಿಯಾ ಕೇಳಲ್ಲ.


  colors kannada serial, kannada serial, kannadathi serial, harsha call all the home members for talk, harsha mother is death, ಕನ್ನಡತಿ ಧಾರಾವಾಹಿ, ಮನೆಮಂದಿಯನ್ನು ಸೇರಿಸಿದ ಹರ್ಷ, ಮಿಸ್ ಯು ಅಮ್ಮಮ್ಮ ಎಂದು ಪೋಸ್ಟ್ ಹಾಕಿಕೊಂಡ ಕಿರಣ್ ರಾಜ್, ರತ್ನಮಾಲಾ ಅಭಿನಯಕ್ಕೆ ಮೆಚ್ಚುಗೆ, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
  ಸಾನಿಯಾ


  ಮನೆಯವರನ್ನು ಸೇರಿಸಿದ ಹರ್ಷ
  ಹರ್ಷ ನೋವಿನಿಂದ ಇದ್ದಾನೆ. ಅಮ್ಮಮ್ಮ ಇಲ್ಲ ಎನ್ನೋ ಚಿಂತೆಯಲ್ಲಿ ಮುಳುಗಿದ್ದಾನೆ. ಆದ್ರೂ ಕೆಲವೊಂದು ಜವಾಬ್ದಾರಿ ನಿಭಾಯಿಸಲೇ ಬೇಕಿದೆ. ಅದಕ್ಕೆ ಸುಚಿ ಬಳಿ, ಮನೆಯವರನ್ನು ಸೇರಿಸು. ನಾನು ಮಾತನಾಡಬೇಕು ಎಂದಿದ್ದಾನೆ. ಸುಚಿ ಎಲ್ಲರೂ ಇರುವಂತೆ ಹೇಳಿದ್ದಾಳೆ. ಹಾಗಾದ್ರೆ ಹರ್ಷ ಏನ್ ಮಾತನಾಡುತ್ತಾನೆ ಎಂಬ ಕುತೂಹಲ ಹೆಚ್ಚಾಗಿದೆ.


  ಇದನ್ನೂ ಓದಿ: Actress Megha Shetty: ಸೀರೆಯಾದ್ರೂ, ಮಾರ್ಡನ್ ಡ್ರೆಸ್ ಆದ್ರೂ ಅನು ಸಿರಿಮನೆ ಸೂಪರ್; ಮೇಘಾ ಶೆಟ್ಟಿಯ ಹೊಸ ಲುಕ್! 


  ವರು ಮೇಲೂ ಸಾನಿಯಾ ಕೋಪ
  ನಾನು, ಹರ್ಷ ಜಗಳ ಆಡಿದ್ರೆ ಯಾರಿಗೆ ಹೆಚ್ಚು ಲಾಭ ಗೊತ್ತಾ ಎಂದು ಮನೆಯವರನ್ನು ಸಾನಿಯಾ ಕೇಳಿದ್ದಾಳೆ. ಅದಕ್ಕೆ ಯಾರಿಗೆ ಎಂದು ಮನೆಯವರು ಕೇಳಿದಾಗ, ವರುಗೆ ಇದರಿಂದ ಲಾಭ ಎಂದು ಹೇಳಿದ್ದಾಳೆ. ಅದನ್ನು ಕೇಳಿ ಮನೆಯವರು ಶಾಕ್ ಆಗಿದ್ದಾರೆ.


  ಹರ್ಷ ಏನ್ ಮಾತನಾಡುತ್ತಾನೆ? ಆಸ್ತಿ ಬಗ್ಗೆ ಮಾತನಾಡುತ್ತಾನಾ? ಎಲ್ಲರ ಅಸಮಾಧಾನ ಸರಿ ಮಾಡ್ತಾನಾ ಮುಂದೇನಾಗುತ್ತೆ ಅಂತ ನೊಡೋಕೆ ಕನ್ನಡತಿ ಧಾರಾವಾಹಿ ನೊಡಬೇಕು.

  Published by:Savitha Savitha
  First published: