Kannadathi: ಹರ್ಷ-ಭುವಿಯ ಮೊದಲ ರಾತ್ರಿ! ಈಳಿಗೆ ಮಣೆ ಹಿಡಿದು ನಿಂತ ವರೂಧಿನಿ

ಮನೆಯಲ್ಲಿ ಎಲ್ಲರೂ ಸಂಭ್ರಮದಿಂದ ಇದ್ದಾರೆ. ಹರ್ಷ-ಭುವಿಗೆ ರೇಗಿಸಿ ಬೇಗನೇ ಮಗು ಕೊಡಿ ಎಂದು ಕಾಡಿಸುತ್ತಿದ್ದಾರೆ. ಭುವಿ ನಾಚಿ ನೀರಾಗಿದ್ದಾರೆ. ಆದ್ರೆ ವರೂಧಿನಿ ಈಗ ಕೋಣೆಯಲ್ಲೇ ಈಳಿಗೆ ಮಣೆ ಹಿಡಿದು ನಿಂತಿದ್ದಾಳೆ. ಯಾರಿಗೆ ಈಳಿಗೆ ಮಣೆ ಬೀಸ್ತಾಳೋ ಗೊತ್ತಿಲ್ಲ.

ಹರ್ಷ-ವರು-ಭುವಿ

ಹರ್ಷ-ವರು-ಭುವಿ

 • Share this:
  ಕನ್ನಡತಿ (Kannadathi) ಸೀರಿಯಲ್ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7.30ಕ್ಕೆ ಪ್ರಸಾರವಾಗುವ ಕನ್ನಡತಿಗೆ ಅದೆಷ್ಟೋ ಅಭಿಮಾನಿಗಳ (Fans) ಬಳಗವೇ ಇದೆ. ಅದ್ರಲ್ಲೂ ಹೀರೋ ಹರ್ಷ (Harsha). ಹಿರೋಹಿನ್ ಭುವಿ ಜೋಡಿ ನೋಡೋಕೆ ಕಾಯ್ತಾ ಇರ್ತಾರೆ. ಹಾಗೇ ವಿಲನ್ ಸಾನಿಯಾ ಭುವಿಗೆ ಇನ್ನೇನು ಕಷ್ಟ ಕೊಡ್ತಾಳಪ್ಪಾ ಅಂತ ಮಿಸ್ ಮಾಡ್ದೇ ಧಾರಾವಾಹಿ ನೋಡ್ತಾರೆ. ಕನ್ನಡತಿ ಸೀರಿಯಲ್ ನಲ್ಲಿ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಹರ್ಷ-ಭುವಿ ಮದುವೆಯಾಗಿದೆ. ಹರ್ಷ ಹಾಗೂ ಅಮ್ಮಮ್ಮನ ಮನಸು ಗೆದ್ದ ಅವರ ಮನೆ ಸೊಸೆಯಾಗಿದ್ದಾಳೆ. ಭುವಿಯನ್ನು ಹರ್ಷ ಮದುವೆಯಾಗಿರೋದು ವಿಲನ್ ಸಾನಿಯಾ, ವರೂಧಿನಿಗೆ ಇಷ್ಟ ಇಲ್ಲ. ಹರ್ಷ-ಭುವಿ ಮೊದಲ ರಾತ್ರಿಯಲ್ಲಿ (First Night) ವರೂಧಿನಿ ಈಳಿಗೆ ಮಣೆ ಹಿಡಿದು ನಿಂತಿದ್ದಾಳೆ.

  ಸಂಸಾರ ಶುರು ಮಾಡುಲು ಸಂತೋಷದಿಂದ ಇರುವ ಹರ್ಷ-ಭುವಿ
  ಹರ್ಷ-ಭುವಿ ಮದುವೆ ಸಮಯದಲ್ಲೇ ಅಮ್ಮಮ್ಮನಿಗೆ ಆರೋಗ್ಯ ಸರಿ ಇರಲಿಲ್ಲ. ಅದಕ್ಕೆ ಅವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಕಳಿಸಲಾಗಿತ್ತು. ಆದ ಕಾರಣ ಹರ್ಷ-ಭುವಿ ತಮ್ಮ ಸಂಸಾರ ಶುರು ಮಾಡಿರಲಿಲ್ಲ. ಈಗ ಅಮ್ಮಮ್ಮ ಗುಣಮುಖರಾಗಿ ಬಂದಿದ್ದು, ಇಬ್ಬರ ಮೊದಲ ರಾತ್ರಿಗೆ ಎಲ್ಲಾ ತಯಾರಿ ನಡೆಸಿದ್ದಾರೆ. ಇಬ್ಬರು ತಮ್ಮ ಮುಂದಿನ ಜೀವನ ಶುರು ಮಾಡಲು ಖುಷಿಯಾಗಿದ್ದಾರೆ.

  ಅಲಂಕಾರಗೊಂಡ ಕೋಣೆಯಲ್ಲಿ ಈಳಿಗೆ ಮಣೆ ಹಿಡಿದು ನಿಂತ ವರು
  ಕನ್ನಡತಿ ಧಾರಾವಾಹಿಯಲ್ಲಿ ವರೂಧಿನಿಗೆ ಮೊದಲಿನಿಂದಲೂ ಹರ್ಷನನ್ನು ಕಂಡ್ರೆ ತುಂಬಾ ಇಷ್ಟ ಇತ್ತು. ನಮ್ಮ ಹೀರೋ ಎಂದುಕೊಂಡು ಎಲ್ಲ ಕಡೆ ತಿರುಗಾಡುತ್ತಿದ್ದಳು. ಹರ್ಷನಿಗೂ ವರು ಒಳ್ಳೆ ಗೆಳತಿ ಆಗಿದ್ದಳು. ಆದ್ರೆ ಹರ್ಷನಿಗೆ ಆಕೆ ಮೇಲೆ ಯಾವುದೇ ಪ್ರೀತಿಯ ಭಾವನೆ ಇರಲಿಲ್ಲ. ಹೇಗಾದ್ರೂ ಹೀರೋ ಪ್ರೀತಿ ಪಡೆಯಬೇಕು ಎಂದು ತುಂಬಾ ಆಸೆ ಪಟ್ಟಿದ್ದಳು. ಆದ್ರೆ ಹರ್ಷನಿಗೆ ಭುವಿ ಇಷ್ಟ ಆಗುತ್ತಾಳೆ. ಈಗ ಅವರಿಬ್ಬರು ಚೆನ್ನಾಗಿರಲು ಬಿಡಲ್ಲ ಎಂದು ಮೊದಲ ರಾತ್ರಿ ಹಾಳು ಮಾಡಲು ಈಳಿಗೆ ಮಣೆ ಹಿಡಿದು ನಿಂತಿದ್ದಾಳೆ.

  ಇದನ್ನೂ ಓದಿ:  Kendasampige: ಕೆಂಡಸಂಪಿಗೆ ಪರಿಮಳ ಹರಡಲು ನಾಲ್ಕೇ ದಿನ ಬಾಕಿ! ಖಡಕ್ ಹೀರೋ ಇವರೇ!

  ಸಂಭ್ರಮದ ಮನೆಯಲ್ಲಿ ರಕ್ತ ಹರಿಯುತ್ತಾ?
  ಮನೆಯಲ್ಲಿ ಎಲ್ಲರೂ ಸಂಭ್ರಮದಿಂದ ಇದ್ದಾರೆ. ಹರ್ಷ-ಭುವಿಗೆ ರೇಗಿಸಿ ಬೇಗನೇ ಮಗು ಕೊಡಿ ಎಂದು ಕಾಡಿಸುತ್ತಿದ್ದಾರೆ. ಭುವಿ ನಾಚಿ ನೀರಾಗಿದ್ದಾರೆ. ಆದ್ರೆ ವರೂಧಿನಿ ಈಗ ಕೋಣೆಯಲ್ಲೇ ಈಳಿಗೆ ಮಣೆ ಹಿಡಿದು ನಿಂತಿದ್ದಾಳೆ. ಯಾರಿಗೆ ಈಳಿಗೆ ಮಣೆ ಬೀಸ್ತಾಳೋ ಗೊತ್ತಿಲ್ಲ. ಮದುವೆ ದಿನವೂ ಚಾಕುವಿನಿಂದ ಕೈ ಕುಯ್ದುಕೊಂಡು ಡ್ರಾಮಾ ಸೃಷ್ಟಿಸಿದ್ದಳು. ಅವಳಿಂದ ಆಸ್ಪತ್ರೆಯಲ್ಲಿ ಹರ್ಷ- ಭುವಿ ಮದುವೆ ಆಗೋ ಪರಿಸ್ಥಿತಿ ಬಂತು. ಈಗ ಏನ್ ಮಾಡ್ತಾಳೋ ಈ ಸೈಕೋ ವರೂಧಿನಿ ಗೊತ್ತಿಲ್ಲ. ಸಂಭ್ರಮದ ಮನೆಯಲ್ಲಿ ರಕ್ತ ಹರಿಯುತ್ತಾ ಎಂಬ ಆತಂಕ ಸೃಷ್ಟಿಯಾಗಿದೆ.

  ಈ ಮೊದಲೇ ವರುಗೆ ವಾರ್ನ್ ಮಾಡಿದ್ದ ಹರ್ಷ
  ಕನ್ನಡತಿ ಸೀರಿಯಲ್ ನಲ್ಲಿ ಭುವಿ ಮತ್ತು ವರೂಧಿನಿ ಇಬ್ಬರು ತುಂಬಾ ಕ್ಲೋಸ್ ಫ್ರೆಂಡ್ಸ್. ಹರ್ಷ ಭೂವಿಯನ್ನು ಇಷ್ಟ ಪಟ್ಟು ಮದುವೆಯಾಗಗುತ್ತಾನೆ. ಮದುವೆಯಾದ್ರೂ ಬಿಡದ ವರೂಧಿನಿ, ಹರ್ಷ ಭುವಿಯನ್ನು ದೂರ ಮಾಡೋ ಪ್ರಯತ್ನದಲ್ಲೇ ಇದ್ದಾಳೆ. ಈ ಮೊದಲೇ ಹರ್ಷ ವರುಗೆ ವಾರ್ನ್ ಮಾಡಿರುತ್ತಾನೆ. ಹರ್ಷನಿಗೆ ವರೂಧಿನಿ ಕಿತಾಪತಿ ಅರ್ಥ ಆಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇದೇ ಕೊನೆಯ ಬಾರಿ ನಮ್ಮಿಬ್ಬರ ಮಧ್ಯ ಬಂದ್ರೆ , ನಾನ್ ಏನ್ ಮಾಡ್ತೀನೋ ಗೊತ್ತಿಲ್ಲ ಎಂದು ಎಚ್ಚರಿಕೆ ಕೊಟ್ಟಿದ್ದರು. ಆದ್ರೂ ಮತ್ತೆ ಅವರನ್ನು ದೂರ ಮಾಡೋ ಪ್ರಯತ್ನದಲ್ಲಿ ಇದ್ದಾಳೆ.

  ಇದನ್ನೂ ಓದಿ: Ramachari: ಚಾರುವಿನ 1 ಕೋಟಿ ಆಫರ್​​ ಒಪ್ಪಿಕೊಂಡನಾ ರಾಮಾಚಾರಿ? ಸತ್ಯದ ಮುಂದೆ ಹಣವೇ ಗೆದ್ದಿತಾ? 

  ಮತ್ತೆ ಹೀರೋ ಕೋಪಕ್ಕೆ ಗುರಿಯಾಗ್ತಾಳಾ ವರು?
  ಹರ್ಷನಿಗೆ, ಭುವಿ ಮತ್ತು ತನ್ನ ಮಧ್ಯೆ ಬೇರೆ ಯಾರೋ ಬರುವುದು ಇಷ್ಟ ಇಲ್ಲ. ಮೊದಲೇ ಹರ್ಷ ಮುಂಗೋಪಿ, ಈಗ ವರು ಈಳಿಗೆ ಮಣೆ ಹಿಡಿದು ನಿಂತಿರುವುದನ್ನು ನೋಡಿದ್ರೆ ಏನ್ ಮಾಡ್ತಾನೋ ಗೊತ್ತಿಲ್ಲ. ಇಷ್ಟು ದಿನ ಸ್ನೇಹನಾದ್ರೂ ಇತ್ತು. ಇನ್ಮುಂದೆ ಹರ್ಷ ವರೋಧಿನಿಯನ್ನು ದ್ವೇಷ ಮಾಡಿದ್ರೂ ಸಂಶಯ ಇಲ್ಲ. ಎಲ್ಲವನ್ನೂ ನೋಡಲು ಸಂಚಿಕೆ ನೋಡಬೇಕು.
  Published by:Savitha Savitha
  First published: